Mangalore Photographer Jitesh Prasad: ಮೂಡುಬಿದ್ರೆಯ ಫೋಟೊಗ್ರಾಫರ್ ಜಿನೇಶ್ ಪ್ರಸಾದ್ ಗೆ ಸಿಂಗಾಪುರದ "ಗೋಲ್ಡ್ ಆಫ್ ಗೋಲ್ಡನ್ ಮೆಡಲ್" ಪ್ರಶಸ್ತಿ ; ಜಗತ್ತಿನ ಟಾಪ್ ಟೆನ್ ಛಾಯಾಚಿತ್ರಗಾರರಲ್ಲಿ ಒಬ್ಬರು

12-05-24 10:45 am       Mangalore Correspondent   ಕರಾವಳಿ

ಸಿಂಗಾಪುರದಲ್ಲಿ ನಡೆದ ಏಷ್ಯನ್ ಫೋಟೋಗ್ರಾಫಿಕ್ ಯೂನಿಯನ್ ಹಾಗೂ ಗೋಲ್ಡನ್ ಪಿಕಾಕ್ ಅವಾರ್ಡ್ ಸಿಂಗಾಪುರ್ ಜಂಟಿ ಆಶ್ರಯದಲ್ಲಿ ನಡೆದ "ಗೋಲ್ಡ್ ಆಫ್ ಗೋಲ್ಡನ್ ಮೆಡಲ್" ಪ್ರಶಸ್ತಿಗೆ ಮೂಡುಬಿದ್ರೆಯ ಖ್ಯಾತ ಫೋಟೋಗ್ರಾಫರ್ ಜಿನೇಶ್ ಪ್ರಸಾದ್ ಆಯ್ಕೆಯಾಗಿದ್ದಾರೆ.

ಮಂಗಳೂರು, ಮೇ 12: ಸಿಂಗಾಪುರದಲ್ಲಿ ನಡೆದ ಏಷ್ಯನ್ ಫೋಟೋಗ್ರಾಫಿಕ್ ಯೂನಿಯನ್ ಹಾಗೂ ಗೋಲ್ಡನ್ ಪಿಕಾಕ್ ಅವಾರ್ಡ್ ಸಿಂಗಾಪುರ್ ಜಂಟಿ ಆಶ್ರಯದಲ್ಲಿ ನಡೆದ "ಗೋಲ್ಡ್ ಆಫ್ ಗೋಲ್ಡನ್ ಮೆಡಲ್" ಪ್ರಶಸ್ತಿಗೆ ಮೂಡುಬಿದ್ರೆಯ ಖ್ಯಾತ ಫೋಟೋಗ್ರಾಫರ್ ಜಿನೇಶ್ ಪ್ರಸಾದ್ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಗೆ ಆಯ್ಕೆಯಾಗುವ ವ್ಯಕ್ತಿ ವಿಶ್ವದ ವಾರ್ಷಿಕ ಟಾಪ್ ಟೆನ್ ಛಾಯಾಚಿತ್ರಗಾರ ಮತ್ತು ಪ್ರದರ್ಶನಕಾರ ಎಂಬ ಅರ್ಹತೆ ಹೊಂದಿರಬೇಕಾಗುತ್ತದೆ. ಜಿನೇಶ್ ಪ್ರಸಾದ್ ಅವರು ಸತತವಾಗಿ ಮೂರು ವರ್ಷಗಳಿಂದ ಜಗತ್ತಿನ ಟಾಪ್ ಟೆನ್ ಛಾಯಾಚಿತ್ರ ಪ್ರದರ್ಶನಗಾರರ ಪಟ್ಟಿಯಲ್ಲಿ ಆಯ್ಕೆಯಾಗಿದ್ದರು.

ಈ ಆಯ್ಕೆ ಪ್ರಕ್ರಿಯೆ ಪ್ರಕಾರ, ವರ್ಷದಲ್ಲಿ 12 ಸ್ಪರ್ಧೆಗಳಲ್ಲಿ ಸತತವಾಗಿ ಅತಿ ಹೆಚ್ಚಿನ ಸಂಖ್ಯೆಯ ಛಾಯಾಚಿತ್ರ ಅವಾರ್ಡ್ ವಿಜೇತರಾಗಿ ಛಾಯಾಚಿತ್ರಗಳು ಪ್ರದರ್ಶನಗೊಂಡಿರಬೇಕಿರುತ್ತದೆ. ಜಿನೇಶ್ ಪ್ರಸಾದ್ ಅವರು ಸತತ ಮೂರು ವರುಷಗಳಿಂದ ಈ ಎಲ್ಲಾ ಅರ್ಹತೆಗಳನ್ನು ಗಳಿಸಿದ್ದು ಈ ಬಾರಿ ಅಂದರೆ 2023ನೇ ಸಾಲಿನ ಗೋಲ್ಡನ್ ಆಫ್ ಗೋಲ್ಡನ್ ಮೆಡಲ್ ಅವಾರ್ಡ್ ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಹಿರಿಯ ಪತ್ರಕರ್ತ ತಾರನಾಥ್ ಗಟ್ಟಿ ಕಾಪಿಕಾಡ್ ಹೇಳಿದರು.

ಇವರ ಛಾಯಾಚಿತ್ರಗಳು ಸೈಪ್ರಸ್, ಸಿಂಗಾಪುರ್, ರಷ್ಯಾ, ಉಕ್ರೇನ್, ಬೋಸ್ನಿಯಾ. ಗ್ರೀಸ್ ಮಲೇಶಿಯಾ ರೊಮೇನಿಯಾ ಮುಂತಾದ ಹಲವು ದೇಶಗಳಲ್ಲಿ ಪ್ರದರ್ಶನಗೊಂಡಿದೆ. ಅಷ್ಟೇ ಅಲ್ಲದೆ ಭಾರತ ದೇಶದ ಇಂಡಿಯನ್ ಫೋಟೋಗ್ರಾಫಿಕ್ ಫೆಡರೇಶನ್ ಇಲ್ಲಿಯೂ ಸತತ ಎರಡು ವರ್ಷಗಳಿಂದ ಟಾಪ್ 5 ಬೆಸ್ಟ್ ಫೋಟೋಗ್ರಾಫರ್ ಆಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ನಡೆಸುವ 2023ರ ಚಿತ್ರಾಂಜಲಿ ಪ್ರಶಸ್ತಿ ಮತ್ತು ಒಂದು ಲಕ್ಷ ರೂಪಾಯಿ ಮೊತ್ತದ ವಿಜೇತರಾಗಿದ್ದರು. ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿ ಇದರ ಸದಸ್ಯರಾಗಿದ್ದು ದೇಶ ವಿದೇಶಗಳ ಹಲವು ಛಾಯಾಚಿತ್ರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಕಳೆದ 30 ವರ್ಷಗಳಿಂದ ಛಾಯಾಚಿತ್ರಕ್ಕಾಗಿ ದೇಶದ ಹೆಚ್ಚಿನ ಭಾಗಗಳಲ್ಲಿ ಸುತ್ತಾಡಿ ತೆಗೆದ ಅತ್ಯಪೂರ್ವ ಛಾಯಾಚಿತ್ರಗಳ ಬೃಹತ್ ಸಂಗ್ರಹವೇ ಇವರ ಬಳಿಯಲ್ಲಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶ ನೆಲ್ಲಿಕಾರ್ ನಿಂದ ವೃತ್ತಿ ಆರಂಭಿಸಿ ಛಾಯಾಚಿತ ಕ್ಷೇತ್ರಕ್ಕೆ ತನ್ನದೇ ಆದ ಅಪೂರ್ವ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ತಾರನಾಥ್ ತಿಳಿಸಿದರು. ಗೋಲ್ಡನ್ ಆಫ್ ಗೋಲ್ಡನ್ ಪದಕ ಅಪರೂಪದ್ದಾಗಿದ್ದು ಈ ಮೊದಲು ಭಾರತದ ಇತರೇ ಇಬ್ಬರು ಪಡೆದಿದ್ದರು. ಜಿನೇಶ್ ಪ್ರಸಾದ್ ಮೂರನೆಯವರಾಗಿದ್ದು ಕರ್ನಾಟಕದ ಏಕೈಕ ವ್ಯಕ್ತಿಯಾಗಿದ್ದಾರೆ.

Jitesh Prasad, a globally acclaimed photographer hailing from Moodbidri, commonly referred to as ‘Porlu’, has been chosen to receive the prestigious 'Gold of Golden Medal' award presented by the Asian Photographic Union and Golden Peacock Award Singapore in Singapore.