ಬ್ರೇಕಿಂಗ್ ನ್ಯೂಸ್
17-05-24 04:32 pm Mangalore Correspondent ಕರಾವಳಿ
ಪುತ್ತೂರು, ಮೇ.17: ಬಿಜೆಪಿಯನ್ನೇ ತೊರೆದು ಹಿಂದುತ್ವ, ಬಿಜೆಪಿ ಭದ್ರಕೋಟೆ ಎನಿಸಿದ್ದ ಪುತ್ತೂರಿನಲ್ಲಿ ಕಾಂಗ್ರೆಸಿನಲ್ಲಿ ಸ್ಪರ್ಧಿಸಿ ಅನಿರೀಕ್ಷಿತವಾಗಿ ಶಾಸಕರಾದವರು ಅಶೋಕ್ ರೈ. ಬಿಜೆಪಿ ಒಳಗಿನ ಜಟಾಪಟಿಯನ್ನೇ ಗುರಾಣಿಯನ್ನಾಗಿಸಿ ಅದರ ಲಾಭ ಪಡೆದು ಅದೃಷ್ಟದಿಂದ ಗೆದ್ದವರು. ಆದರೆ, ಶಾಸಕರಾಗಿ ಒಂದು ವರ್ಷದಲ್ಲಿಯೇ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡು ಪುತ್ತೂರು ತಾಲೂಕು ಮಾತ್ರವಲ್ಲದೆ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಸಕರಿಗೆ ತಾನೇ ಮಾದರಿ ಎನ್ನುವಂತೆ ತನ್ನ ನಡೆ ನುಡಿಗಳಿಂದ ನಿರೂಪಿಸಿದ್ದಾರೆ. ಆಮೂಲಕ ಹೊಸತನ ಇಲ್ಲದ ಕಾಂಗ್ರೆಸಿಗೆ ಅಶೋಕ್ ರೈ ಹೊಸ ಟಾನಿಕ್ ನೀಡಿದ್ದಾರೆ.
ಶಾಸಕನಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಶೋಕ್ ರೈ, ಪುತ್ತೂರಿನಲ್ಲಿ ಬಿಜೆಪಿ- ಕಾಂಗ್ರೆಸ್ ಸೇರಿದಂತೆ ಪ್ರಮುಖ ನಾಯಕರು, ಉದ್ಯಮಿಗಳು, ಪ್ರಗತಿಪರ ಕೃಷಿಕರು, ಜನಸಾಮಾನ್ಯರ ಬಳಿ ತೆರಳಿ ತನ್ನ ಕೆಲಸಗಳ ಬಗ್ಗೆಯೇ ರಿಪೋರ್ಟ್ ಕಾರ್ಡ್ ಪಡೆದಿದ್ದಾರೆ. ಸಾಮಾನ್ಯವಾಗಿ ಶಾಸಕರು ತಾವು ಹೇಳಿದ್ದೇ ಸಾಧನೆ ಎನ್ನುವಂತೆ ತೋರಿಸುತ್ತಿರುವ ಈಗಿನ ಕಾಲದಲ್ಲಿ ಅಶೋಕ್ ರೈ ಜನರ ಬಳಿಗೇ ತೆರಳಿ ವಿಭಿನ್ನ ಹಾದಿ ತುಳಿದಿದ್ದಾರೆ. ತನ್ನ ಕೆಲಸ ಸರಿ ಇದೆಯೇ ಎನ್ನುವ ಬಗ್ಗೆ ಜನರಿಂದಲೇ ಕೇಳಿಕೊಂಡು ಹೊಸತನ ಹೆಜ್ಜೆ ಇಟ್ಟಿದ್ದಾರೆ.
ಪುತ್ತೂರಿಗೆ ಹೆಲಿಪ್ಯಾಡ್ ಅಗತ್ಯ ಇದೆ
ಪುತ್ತೂರಿನ ಮಾಡಿದೆ ದೇವುಸ್ ಚರ್ಚ್ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ಬಳಿ ತೆರಳಿದಾಗ, ಎಲ್ಲಾ ಜಾತಿ, ಧರ್ಮದವರನ್ನು ಒಂದೇ ರೀತಿಯಾಗಿ ಕಾಣುವ ನಿಮ್ಮ ಶೈಲಿ ಮೆಚ್ಚುಗೆಯಾಗಿದೆ. ನಿಮ್ಮ ಬಳಿಗೆ ಸಹಾಯ ಕೇಳಿ ಬರುವ ಬಡವರಿಗೆ ಸ್ಥಳದಲ್ಲೇ ಸ್ಪಂದನೆ ನೀಡುವುದನ್ನು ಮುಂದುವರೆಸಿ, ನಿಮ್ಮಲ್ಲಿ ನಾಯಕತ್ವ ಗುಣವಿದ್ದ ಕಾರಣಕ್ಕೆ ನೀವು ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಿದ್ದೀರಿ, ಪುತ್ತೂರಿಗೆ ಒಂದು ಹೆಲಿಪ್ಯಾಡ್‌ನ ಅಗತ್ಯವಿದೆ. ಅದು ನಿಮ್ಮ ಅವಧಿಯಲ್ಲಿ ನಿರ್ಮಾಣವಾಗಬೇಕು. ಪುತ್ತೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟರು.
ಮನೆ ಇಲ್ಲದವರಿಗೆ ಸೂರು ಕಲ್ಪಿಸುವುದು ಉತ್ತಮ
ಪ್ರಗತಿಪರ ಕೃಷಿಕ, ಜನಾರ್ಧನ ಭಟ್ ಸೇಡಿಯಾಪು ಅವರ ಬಳಿ ಶಾಸಕರು ತೆರಳಿದಾಗಲೂ ಮೆಚ್ಚುಗೆಯ ಮಾತು ಕೇಳಿಬಂತು. ನೀವು ಶಾಸಕರಾದ ಬಳಿಕ ನಿಮ್ಮ ಕೊರತೆಯನ್ನು ಯಾರೂ ಹೇಳುತ್ತಿಲ್ಲ. ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ. ಮನೆ ಇಲ್ಲದವರಿಗೆ ಗ್ರಾಮದಲ್ಲಿ ಜಾಗ ಗುರುತಿಸಿ, ಅವರಿಗೆ ಸೂರು ಕಲ್ಪಿಸುವುದು ಉತ್ತಮ ಯೋಜನೆ. ನೀವು ಎಂದೂ ಕಾರ್ಯಕರ್ತರನ್ನು ಕಡೆಗಣಿಸಬೇಡಿ, ಕಾರ್ಯಕರ್ತರನ್ನು ಕಡೆಗಣಿಸಿದರೆ ಮುಂದೆ ಬರಲು ಯಾರಿಗೂ ಸಾಧ್ಯವಿಲ್ಲ. ತಿಂಗಳಿಗೊಮ್ಮೆ ಒಂದೊಂದು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಅರಿತುಕೊಳ್ಳಲು ಪ್ರಯತ್ನಿಸಿ. ಮೆಡಿಕಲ್ ಕಾಲೇಜು ನಿಮ್ಮ ಅವಧಿಯಲ್ಲಿ ಆಗಿಯೇ ಆಗ್ತದೆ ಎಂಬ ನಂಬಿಕೆ ಇದೆ. ಎಸ್ಸಿ- ಎಸ್ಟಿ ಸಮುದಾಯದವರು ಜಾಗವನ್ನು ಇತರರಿಗೆ ಮಾರಾಟ ಮಾಡಬಾರದು ಎಂಬ ಕಾನೂನಿನಲ್ಲಿ ಬದಲಾವಣೆ ಮಾಡಬೇಕು. ಅವರೂ ಅಭಿವೃದ್ಧಿ ಜೊತೆಗೆ ಬರಬೇಕು ಎಂದು ಹೇಳಿದರು.
ಪುತ್ತೂರಿಗೆ ಮೆಡಿಕಲ್ ಕಾಲೇಜು ತರುತ್ತೀರಿ
ಪುತ್ತೂರಿನ ಟಿಂಬರ್ ಉದ್ಯಮಿ ಮಹಮ್ಮದ್ ಹಾಜಿ ಬಳಿ ಅಶೋಕ್ ರೈ ತೆರಳಿದಾಗಲೂ ಒಳ್ಳೆಯ ಪ್ರತಿಕ್ರಿಯೆ ಬಂತು. ನೀವು ಶಾಸಕರಾದ ಬಳಿಕ ಪುತ್ತೂರಿನಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆದಿದೆ. ನಿಮ್ಮಲ್ಲಿ ವಿಶನ್ ಇದೆ, ಕರ್ನಾಟಕದ ಮುಖ್ಯಮಂತ್ರಿಯಾಗಲು ಯೋಗ್ಯತೆಯನ್ನು ಹೊಂದಿದ್ದೀರಿ. ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕು, ಮಾಣಿಯಿಂದ ಚತುಷ್ಪಥ ರಸ್ತೆ ನಿರ್ಮಾಣವಾಗಬೇಕು, ಪುತ್ತೂರಿನಲ್ಲಿ ಉದ್ಯಮಗಳು ಬೆಳೆಯುವಲ್ಲಿ ನೀವು ಮುತುವರ್ಜಿ ವಹಿಸಬೇಕು. ನಿಮ್ಮ ಬಗ್ಗೆ ಎಲ್ಲಾ ಸಮುದಾಯದವರಿಗೂ ಒಳ್ಳೆಯ ಅಭಿಪ್ರಾಯವಿದೆ. ನಿಮ್ಮ ಈಗಿನ ನಡೆ ಚೆನ್ನಾಗಿಯೇ ಇದೆ ಎಂದರು.
ದೈವ ಬಲ ಇದೆ, ಬಿಜೆಪಿ ಭದ್ರಕೋಟೆ ಭೇದಿಸಿದ್ದೀರಿ
ಬಿಜೆಪಿ ಮುಖಂಡ, ಕೃಷಿಕ ವಿಶ್ವೇಶ್ವರ ಭಟ್ ಬಂಗಾರಡ್ಕ ಅವರ ಬಳಿಗೆ ಶಾಸಕ ಅಶೋಕ್ ರೈ ತೆರಳಿದಾಗ, ತುಂಬ ಆಪ್ತವಾಗಿಯೇ ಸ್ವಾಗತಿಸಿದರು. ತನ್ನ ಕೆಲಸಗಳ ಬಗ್ಗೆ ಕೇಳಿದಾಗ, ಹಿಂದೆ ಸದಾನಂದ ಗೌಡರು ಮೊದಲ ಬಾರಿಗೆ ಶಾಸಕರಾದಾಗ ನಿಮ್ಮ ಹಾಗೆ ಪಕ್ಷ ಭೇದವಿಲ್ಲದೆ ಎಲ್ಲರ ಮನೆಗೂ ಭೇಟಿ ನೀಡುತ್ತಿದ್ದರು. ಬಿಜೆಪಿಯವರು ಸ್ವಲ್ಪ ತಲೆ ಖರ್ಚು ಮಾಡುತ್ತಿದ್ದರೆ ನೀವು ನಮ್ಮ ಜೊತೆ ಇರುತ್ತಿದ್ರಿ. ಕಾಲ ಮಿಂಚಿ ಹೋಗಿದೆ. ನೀವು ಶಾಸಕನಾಗಿದ್ದೇ ದೊಡ್ಡ ಸಾಧನೆ, ಪುತ್ತಿಲ ವೋಟಿಗೆ ನಿಂತ ಕಾರಣ ನೀವು ಗೆದ್ದಿದ್ದಲ್ಲ. ನಿಮಗೆ ದೈವ ಬಲವಿದೆ. ಬಿಜೆಪಿ ಭದ್ರಕೋಟೆಯನ್ನು ಭೇದಿಸಿದ್ದೀರಿ, ನಿಮ್ಮ ನಾಯಕತ್ವ ಚೆನ್ನಾಗಿಯೇ ನಡೆಯುತ್ತಿದೆ. ಅಡಿಕೆ ಬೋರ್ಡು ಸ್ಥಾಪನೆ ಮಾಡುವಲ್ಲಿ ಮುತುವರ್ಜಿ ವಹಿಸಿ, ಸಬ್ಸಿಡಿ ಕೃಷಿ ಮೆಕ್ಯಾನಿಸಂ ಆರಂಭವಾಗಬೇಕು, ಸಿಪಿಸಿಆರ್‌ಐ ಊಟಕ್ಕಿಲ್ಲದ ಉಪ್ಪಿನಕಾಯಿ ಅನ್ನುವಂತಿದೆ. ಅದನ್ನು ಕೃಷಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಮಾಡಬೇಕು ಎಂದು ಬಂಗಾರಡ್ಕ ಹೇಳಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೀರಿ
ಪುತ್ತೂರಿನ ಜುವೆಲ್ಲರಿ ಉದ್ಯಮಿ ಜಿಎಲ್ ಬಲರಾಮ ಆಚಾರ್ಯ ಅವರ ಬಳಿಯೂ ಶಾಸಕ ಅಶೋಕ್ ರೈ ತೆರಳಿದ್ದು, ಕೆಲಸ ಕಾರ್ಯಗಳ ಬಗ್ಗೆ ಅಭಿಪ್ರಾಯ ಕೇಳಿದರು. ನಿಮ್ಮ ಗುರಿ ಚೆನ್ನಾಗಿಯೇ ಇದೆ, ಅದನ್ನು ಮುಂದುವರೆಸಿ. ಶಾಸಕರಾಗಿ ಉತ್ತಮ ಕೆಲಸ ಮಾಡುತ್ತಿದ್ದೀರಿ, ಪುತ್ತೂರಿನಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೀರಿ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ನಿಮ್ಮ ಅವಧಿಯಲ್ಲೇ ಆಗಲಿದೆ ಎಂಬ ವಿಶ್ವಾಸ ಇದೆ. ಪುತ್ತೂರಿನಲ್ಲಿ ವಿದ್ಯುತ್ ಸಮಸ್ಯೆ ಸರಿಯಾಗಬೇಕಿದೆ, ನಗರಸಭೆಯಲ್ಲಿ ಉತ್ತಮ ಸೇವೆ ಸಿಗುವಂತೆ ನೋಡಿಕೊಳ್ಳಬೇಕು. ಪುತ್ತೂರಿನಲ್ಲಿ ಟೂರಿಸಂ ಸೃಷ್ಟಿಯಾಗಬೇಕು. ಟೂರಿಸಂ ಅಭಿವೃದ್ದಿಯಾದರೆ ಪುತ್ತೂರು ತನ್ನಿಂತಾನೆ ಅಭಿವೃದ್ದಿಯಾಗುತ್ತದೆ ಎಂದು ಹೇಳಿದರು.
ನಿಮ್ಮ ಸ್ಪೀಡ್ ಸ್ವಲ್ಪ ಕಮ್ಮಿಯಾಯ್ತು ಅನಿಸತ್ತೆ
ಬಿಜೆಪಿ ಮುಖಂಡ, ಹೊಟೇಲ್ ಉದ್ಯಮಿ ಗೋಪಾಲಕೃಷ್ಣ ಹೇರಳೆ ಬಳಿಯೂ ಶಾಸಕ ಅಶೋಕ್ ರೈ ತೆರಳಿ ತನ್ನ ಬಗ್ಗೆ ರಿಪೋರ್ಟ್ ಕಾರ್ಡ್ ಕೇಳಿಕೊಂಡರು. ನೀವು ಶಾಸಕರಾಗಿ ಆರಂಭದಲ್ಲಿ ಇದ್ದ ಸ್ಪೀಡ್ ಈಗ ಕಮ್ಮಿಯಾಗಿದೆ ಎಂಬ ಭಾವನೆ ನನ್ನದು. ಶಾಸಕರಾಗಿ ನಿಮ್ಮ ಬಗ್ಗೆ ಯಾರೂ ಕೆಟ್ಟದಾಗಿ ಹೇಳಿದ್ದನ್ನು ನಾನು ಕೇಳಿಲ್ಲ. ನೀವು ಶಾಸಕರಾದ ಬಳಿಕ ಅದ್ಬುತ ನಿರೀಕ್ಷೆ ಇತ್ತು. ಎಲ್ಲೋ ಎಡವಿದ ಹಾಗೆ ಕಾಣುತ್ತಿದೆ. ಪುತ್ತೂರು ನಗರಸಭೆಯಲ್ಲಿ ವ್ಯವಸ್ಥಿತ ಆಡಳಿತವಿಲ್ಲ, ನಗರಸಭಾ ವ್ಯಾಪ್ತಿಯ ಅನೇಕ ಕಾಮಗಾರಿಗಳು ಪೆಂಡಿಂಗ್ ಇದೆ. ಜಲಸಿರಿ ಯೋಜನೆಯ ಕೆಲಸಗಳು ವ್ಯವಸ್ಥಿತವಾಗಿ ಆಗುತ್ತಿಲ್ಲ. ನಿಮ್ಮ ತಾಳ್ಮೆಗೆ ನಾನು ಮೆಚ್ಚಿದ್ದೇನೆ, ಸಮಾಧಾನದಿಂದ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೀರಿ, ಪುತ್ತೂರಿನಲ್ಲಿ ಭೃಷ್ಟಾಚಾರಗಳು ಸ್ಥಗಿತವಾಗಿದೆ, ಅಧಿಕಾರಿಗಳಿಗೆ ಭಯವಿದೆ, ನೀವು ಭ್ರಷ್ಟಾಚಾರಿಯಲ್ಲ ಎಂದು ಪುತ್ತೂರಿನ ಪ್ರತಿ ನಾಗರಿಕನೂ ಹೇಳುತ್ತಿದ್ದಾನೆ ಎಂದರು.
ಸಹಾಯ ಕೇಳಿ ಬಂದವರಿಗೆ ಸ್ಪಂದಿಸುವುದೇ ಗ್ರೇಟ್
ನರಿಮೊಗರಿನ ಬಿಂದು ಫ್ಯಾಕ್ಟರಿಗೆ ತೆರಳಿ, ವ್ಯವಸ್ಥಾಪಕ ನಿರ್ದೇಶಕ ಸತ್ಯಶಂಕರ್ ಕೆ. ಅವರನ್ನು ಶಾಸಕರು ಭೇಟಿಯಾದರು. ನಿಮ್ಮ ಒಂದು ವರ್ಷದ ಶಾಸಕ ಅವಧಿ ಕಳಂಕ ರಹಿತವಾಗಿದೆ. ಸಹಾಯ ಕೇಳಿ ಬರುವ ಜನರಿಗೆ ನೀವು ಕೊಡುವ ಸ್ಪಂದನೆ ಗ್ರೇಟ್. ಸಹಾಯ ಕೇಳಿ ಯಾರೇ ಬಂದರೂ ಅವರನ್ನು ಸಮಾಧಾನ ಮಾಡಿ ಕಳುಹಿಸುತ್ತೀರಿ. ಅದು ಪ್ಲಸ್ ಪಾಯಿಂಟ್. ಯಾರನ್ನೂ ಬಯ್ಯಬಾರದು, ಬಯ್ಯುವುದು ರಾಜಕೀಯದಲ್ಲಿ ಇರಬಾರದು. ನೀವು ಈಗ ಪಾಲಿಸಿಕೊಂಡು ಬರುತ್ತಿರುವ ನಡೆಯನ್ನೇ ಮುಂದುವರೆಸಿದರೆ ಅದುವೇ ನಿಮ್ಮ ಗೆಲುವಿಗೆ ಹಾದಿಯಾಗಲಿದೆ. ಪುತ್ತೂರಿನಲ್ಲಿ ಉದ್ಯಮ ಬೆಳೆಯಬೇಕು, ಕೆಎಂಎಫ್ ತಂದಿರುವುದು ಉತ್ತಮ. ಪುತ್ತೂರಿನಲ್ಲಿ ಇಂಡಸ್ಟ್ರೀಯಲ್ ಎಸ್ಟೇಟ್ ಆರಂಭಿಸಿ ಜನರಿಗೆ ಉದ್ಯೋಗ ಕೊಡಿಸಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.
Puttur MLA Ashok Rai visits house to house to ask his performance being a MLA for a year as of now. He visited houses of leaders of both Congress and BJP and asked for the report card about his performance
21-09-25 10:23 pm
HK News Desk
ಅಳಂದ ವಿಧಾನಸಭೆ ಕ್ಷೇತ್ರದಲ್ಲಿ ಮತ ಕಳ್ಳತನ ; ತನಿಖೆಗ...
21-09-25 01:28 pm
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm