ಬ್ರೇಕಿಂಗ್ ನ್ಯೂಸ್
18-05-24 11:48 am Mangalore Correspondent ಕರಾವಳಿ
ಮಂಗಳೂರು, ಮೇ.18: ಮುಂಬೈ ಮಹಾನಗರದಲ್ಲಿ ಪ್ರಖ್ಯಾತ ನ್ಯಾಚುರಲ್ ಐಸ್ ಕ್ರೀಂ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಐಸ್ ಕ್ರೀಂ ಮ್ಯಾನ್ ಆಫ್ ಇಂಡಿಯಾ ಎಂದೇ ಗುರುತಿಸಲ್ಪಟ್ಟಿದ್ದ ಮಂಗಳೂರಿನ ಮುಲ್ಕಿ ಮೂಲದ ರಘುನಂದನ್ ಕಾಮತ್(70) ಇನ್ನಿಲ್ಲ. ಮುಂಬೈನಲ್ಲಿ ಅಲ್ಪಕಾಲದ ಅಸೌಖ್ಯದ ಬಳಿಕ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಂಗಳೂರಿನ ಮುಲ್ಕಿಯಿಂದ ಕೇವಲ 14ನೇ ವಯಸ್ಸಿನಲ್ಲಿ ಶಾಲೆಯನ್ನು ಅರ್ಧದಲ್ಲೇ ಬಿಟ್ಟು ಮುಂಬೈಗೆ ತೆರಳಿದ್ದ ಬಡ ಹಣ್ಣಿನ ವ್ಯಾಪಾರಿಯ ಮಗ ರಘುನಂದನ್ ಕಾಮತ್, ಇಡೀ ದೇಶದಲ್ಲೇ ಪ್ರಸಿದ್ಧಿ ಪಡೆದಿರುವ ನ್ಯಾಚುರಲ್ ಐಸ್ ಕ್ರೀಂ ಸಾಮ್ರಾಜ್ಯ ಕಟ್ಟಿದ್ದೇ ಪ್ರೇರಣಾದಾಯಿ ಕತೆ. ಮೊದಲಿಗೆ ಸೋದರ ಸಂಬಂಧಿಯ ಹೊಟೇಲಿನಲ್ಲಿ ಕೆಲಸಕ್ಕೆ ಸೇರಿದ್ದ ಕಾಮತ್, ಅಲ್ಲಿ ನೀಡುತ್ತಿದ್ದ ಐಸ್ ಕ್ರೀಂಗಳನ್ನು ನೋಡಿ ತಾವೇ ಹಣ್ಣಿನ ಫ್ಲೇವರ್ ಮಾದರಿಯ ಐಸ್ ಕ್ರೀಂ ಯಾಕೆ ಮಾಡಬಾರದು ಎಂದು ಚಿಂತಿಸಿ ಹೊಸ ಸಂಸ್ಥೆಯನ್ನು ಹುಟ್ಟು ಹಾಕಿದ್ದರು.
1984 ಫೆಬ್ರವರಿ 14ರಂದು ನಾಲ್ವರು ಕೆಲಸದಾಳುಗಳ ಜೊತೆಗೆ ಜುಹು ಬೀಚ್ ನಲ್ಲಿಯೇ ಹಣ್ಣು, ಹಾಲು ಮತ್ತು ಸಕ್ಕರೆ ಬಳಸಿ ಐಸ್ ಕ್ರೀಂ ಉತ್ಪಾದನೆಯನ್ನು ಆರಂಭಿಸಿದ್ದರು. ತಂದೆಯ ಜೊತೆಗೆ ಹಣ್ಣುಗಳ ಮಾರಾಟದ ಅನುಭವ ಪಡೆದಿದ್ದ ಕಾಮತರು, ಜನರ ಸ್ಪಂದನೆ ಹೆಚ್ಚುತ್ತಿದ್ದಂತೆ 12 ಬಗೆಯ ಹಣ್ಣಿನ ಫ್ಲೇವರ್ ಗಳನ್ನು ಬಳಸಿ ಐಸ್ ಕ್ರೀಂ ಉತ್ಪಾದನೆಯಲ್ಲಿ ತೊಡಗಿದ್ದರು. ಮೊದಲಿಗೆ ಮುಂಬೈಗರ ಫೇವರಿಟ್ ಆಗಿರುವ ಪಾವ್ ಬಾಜಿ ಜೊತೆಗೆ ಐಸ್ ಕ್ರೀಂಗಳನ್ನು ಕೊಡುತ್ತಿದ್ದರು. ಜುಹು ಬೀಚ್ ಸಮೀಪದಲ್ಲಿಯೇ ಆರಂಭಿಸಿದ್ದ ಮೊದಲ ಐಸ್ ಕ್ರೀಂ ಪಾರ್ಲರ್ ಒಂದೇ ವರ್ಷದಲ್ಲಿ 5 ಲಕ್ಷದಷ್ಟು ಆದಾಯ ತಂದುಕೊಟ್ಟಿತ್ತು. ಬರಬರುತ್ತಾ ಇವರು ಮಾಡುತ್ತಿದ್ದ ಹಣ್ಣಿನ ರುಚಿಯುಳ್ಳ ಐಸ್ ಕ್ರೀಂಗಳಿಗೆ ಹೆಚ್ಚು ಬೇಡಿಕೆ ಬರುತ್ತಿದ್ದಂತೆ ಪಾವ್ ಬಾಜಿಯನ್ನು ನಿಲ್ಲಿಸಿ, ಐಸ್ ಕ್ರೀಂನತ್ತಲೇ ಹೆಚ್ಚು ಗಮನ ಕೇಂದ್ರೀಕರಿಸಿದ್ದರು.
ಬೇಡಿಕೆ ಹೆಚ್ಚುತ್ತಿದ್ದಂತೆ ಮುಂಬೈನಲ್ಲಿ ಐಸ್ ಕ್ರೀಂ ಔಟ್ಲೆಟ್ ಗಳನ್ನು ಹೆಚ್ಚಿಸುತ್ತ ಬಂದಿದ್ದರು. 2020ರ ವೇಳೆಗೆ ಮುಂಬೈ ಬಿಟ್ಟು ಇಡೀ ದೇಶಕ್ಕೆ ನ್ಯಾಚುರಲ್ ಐಸ್ ಕ್ರೀಂ ಘಟಕಗಳ ವಿಸ್ತರಣೆಯಾಗಿದ್ದು, 135 ಸೆಂಟರ್ ಗಳನ್ನು ಸ್ಥಾಪನೆ ಮಾಡಿದ್ದರು. ಯಾವುದೇ ಕೃತಕ ಬಣ್ಣ, ಫ್ಲೇವರ್ ಬಳಸದೇ ಇದ್ದುದರಿಂದ ನ್ಯಾಚುರಲ್ ಆಗಿಯೇ ಐಸ್ ಕ್ರೀಂ ಮಾಡುತ್ತಿದ್ದುದರಿಂದ ಮುಂಬೈಗರ ಮನೆಮಾತಾಗಿತ್ತು. 2020ರಲ್ಲಿ ನ್ಯಾಚುರಲ್ ಐಸ್ ಕ್ರೀಂ ಸಂಸ್ಥೆಯ ಒಟ್ಟು ವಹಿವಾಟು 400 ಕೋಟಿಗೂ ಹೆಚ್ಚಿತ್ತು. ಅಲ್ಲದೆ, ಕೆಪಿಎಂಜಿ ಸರ್ವೆಯಲ್ಲಿ ಗ್ರಾಹಕರ ಸಂತುಷ್ಟಿಯ ವಿಚಾರದಲ್ಲಿ ಭಾರತದ ಟಾಪ್ ಟೆನ್ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿತ್ತು.
ಬಡತನದಿಂದಾಗಿ ಪ್ರಾಥಮಿಕ ಶಾಲೆಯಿಂದಲೇ ಡ್ರಾಪ್ ಔಟ್ ಆಗಿದ್ದ ಸಾಮಾನ್ಯ ಹಣ್ಣಿನ ವ್ಯಾಪಾರಿಯ ಮಗ ರಘುನಂದನ್ ಕಾಮತ್, ತಮ್ಮ ಕಠಿಣ ಪರಿಶ್ರಮ, ಸದಾ ಹೊಸತನದ ತುಡಿತ, ಧ್ಯೇಯ ನಿಷ್ಠೆಯಿಂದಾಗಿ ಕೇವಲ 40 ವರ್ಷಗಳಲ್ಲಿ ಇಡೀ ದೇಶದಲ್ಲೇ ಅತಿದೊಡ್ಡ ಐಸ್ ಕ್ರೀಂ ಸಾಮ್ರಾಜ್ಯವನ್ನು ಕಟ್ಟಿದ ಕೀರ್ತಿ ಹೊಂದಿದ್ದಲ್ಲದೆ, ಐಸ್ ಕ್ರೀಂ ಮ್ಯಾನ್ ಆಫ್ ಇಂಡಿಯಾ ಎಂಬ ಬಿರುದನ್ನು ಗಳಿಸಿದ್ದಾರೆ. ಹೊಸ ಉದ್ಯಮಕ್ಕಿಳಿಯುವ ಯುವಕರಿಗೆ ಇವರ ಕತೆ ಅತ್ಯಂತ ಪ್ರೇರಣಾದಾಯಿ. ಅಂದಹಾಗೆ, ರಘುನಂದನ್ ಕಾಮತ್ ಅಗಾಧ ಮಟ್ಟದ ಅಭಿಮಾನಿಗಳನ್ನು ಹಾಗೂ ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
Mulky Raghunandan Srinivas Kamath (70), founder of Natural Ice Cream located in Charkop, Kandivili West, passed away on the night of May 17 at H N Reliance Foundation Hospital on Cherny Road after a brief illness. Raghunandan Srinivas Kamath, born to a fruit vendor in Karnataka, experienced a childhood rooted in simplicity and hard work.
24-11-24 08:39 pm
Bangalore Correspondent
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 02:44 pm
Mangalore Correspondent
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
Naxal Vikram Gowda, Murdeshwar, Mangalore: ಪೊ...
24-11-24 03:21 pm
Mangalore, Someshwara Suicide; ಸೋಮೇಶ್ವರ ರುದ್ರ...
24-11-24 01:18 pm
24-11-24 04:33 pm
Bangalore Correspondent
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm