Belthangady Harish Poonja, Case: ಯುವಮೋರ್ಚಾ ಮುಖಂಡ ಬೆಳ್ತಂಗಡಿಯಲ್ಲಿ ರೌಡಿಶೀಟರ್ ; ಕಲ್ಲುಕೋರೆಯಲ್ಲಿ ಅಕ್ರಮ ಸ್ಫೋಟಕ ಬಳಕೆ, ಜಾಮೀನು ರಹಿತ ಕೇಸು ದಾಖಲು, ಇನ್ನೊಬ್ಬ ಆರೋಪಿ ಪರಾರಿ

19-05-24 08:36 pm       Mangalore Correspondent   ಕರಾವಳಿ

ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದಲ್ಲಿಗೆ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಒಂದು ಹಿಟಾಚಿ, ಟ್ರಾಕ್ಟರ್ ಒಂದು, ಜೀವಂತ ಮದ್ದುಗುಂಡು 4, ಬಳಕೆಯಾಗಿರುವ 4 ಮದ್ದುಗುಂಡುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಬೆಳ್ತಂಗಡಿ, ಮೇ 19: ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದಲ್ಲಿಗೆ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಒಂದು ಹಿಟಾಚಿ, ಟ್ರಾಕ್ಟರ್ ಒಂದು, ಜೀವಂತ ಮದ್ದುಗುಂಡು 4, ಬಳಕೆಯಾಗಿರುವ 4 ಮದ್ದುಗುಂಡುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಸ್ಥಳದಲ್ಲಿದ್ದ ಕಾರ್ಮಿಕರನ್ನು ವಿಚಾರಿಸಿದಾಗ, ಅಕ್ರಮ ಗಣಿಗಾರಿಕೆಯನ್ನು ಆರೋಪಿಗಳಾದ ಪ್ರಮೋದ್ ಉಜಿರೆ ಹಾಗೂ ಶಶಿರಾಜ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿದ್ದ ಸ್ಫೋಟಕಗಳನ್ನು ವಶಕ್ಕೆ ಪಡೆದು ಆರೋಪಿಗಳಿಬ್ಬರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 9ಬಿ(1)ಬಿ ಸ್ಫೋಟಕ ಕಾಯ್ದೆ 1884ರ ಕಲಂ ಎಕ್ಸ್ ಪ್ಲೋಸಿವ್ ಸಬ್ ಸ್ಟೇನ್ಸ್ ಏಕ್ಟ್ -1908 ರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಫೋಟಕ ಹೊಂದಿದ್ದ ಪ್ರಕರಣ ಜಾಮೀನು ರಹಿತ ಕಾಯ್ದೆಯಾಗಿದ್ದರಿಂದ ಆರೋಪಿ ಯುವಮೋರ್ಚಾ ಮುಖಂಡ ಶಶಿರಾಜ್ ಗೆ ಜಾಮೀನು ಲಭಿಸಿರಲಿಲ್ಲ. ತಹಸೀಲ್ದಾರ್ ಪೃಥ್ವಿ ಸಾನಿಕಂ ನೀಡಿರುವ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪೈಕಿ ಶಶಿರಾಜ್ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಆತನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಪ್ರಮೋದ್ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಶಶಿರಾಜ್ ನನ್ನು ಆತನ ಮನೆಗೆ ತೆರಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಹೀಗಾಗಿ ಶಾಸಕ ಹರೀಶ್ ಪೂಂಜಾ ಠಾಣೆಯಲ್ಲಿ ಪೊಲೀಸರ ವಿರುದ್ಧ ಆವಾಜ್ ಹಾಕಿದ್ದಲ್ಲದೆ, ರಂಪಾಟ ನಡೆಸಿದ್ದರು. ನಡುರಾತ್ರಿಯಲ್ಲಿ ಧರಣಿ ಹೈಡ್ರಾಮಾ ನಡೆಸಿದರೂ ಪೊಲೀಸರು ಕೇರ್ ಮಾಡಿರಲಿಲ್ಲ.

Mangalore, MLA Harish poonja, Belthangady video: ಅಕ್ರಮ ಕಲ್ಲುಕೋರೆ ನೆಪದಲ್ಲಿ ಯುವಮೋರ್ಚಾ ಮುಖಂಡನ ಬಂಧನ ; ಬೆಳ್ತಂಗಡಿ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜ ದರ್ಪ, ಪೊಲೀಸ್ ಠಾಣೆ ನಿಮ್ಮ ಅಪ್ಪನ ಮನೆ ಆಸ್ತಿಯಾ ಎಂದು ಧಮ್ಕಿ! 

Belthangady Harish poonja case, explosives found in quarry of BJP yuva morcha president, non bailable case filed. Commotion prevailed at the Belthangady police station after MLA Harish Poonja staged a protest against the police for arresting a man in connection with illegal quarrying at Moodala in the Melanthabettu village of Belthangady Taluk on Saturday night. The police had arrested Belthangady BJP Yuva Morcha Mandal President Shashiraj