ಚಾರ್ಮಾಡಿಯಲ್ಲಿ ಭಾರೀ ಮಳೆ ; ಕೊಳಂಬೆ ಪ್ರದೇಶದಲ್ಲಿ ಮತ್ತೆ ಆತಂಕ

07-08-20 12:05 pm       Mangalore Reporter   ಕರಾವಳಿ

ಚಾರ್ಮಾಡಿ ಘಾಟ್ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು ಕಳೆದ ವರ್ಷದ ಆತಂಕ ಮತ್ತೆ ಎದುರಾಗಿದೆ. ಚಾರ್ಮಾಡಿಯ ಕೊಳಂಬೆ ಪ್ರದೇಶದಲ್ಲಿ ನೆರೆ ಕಾಣಿಸಿಕೊಂಡಿದ್ದು ಮನೆಗಳು ಅಪಾಯದ ಸ್ಥಿತಿಯಲ್ಲಿವೆ.

ಪುತ್ತೂರು, ಆಗಸ್ಟ್ 7: ಚಾರ್ಮಾಡಿ ಘಾಟ್ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು ಕಳೆದ ವರ್ಷದ ಆತಂಕ ಮತ್ತೆ ಎದುರಾಗಿದೆ. ಈ ಭಾಗದಲ್ಲಿ ಮೃತ್ಯುಂಜಯ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಕೃಷಿ ಭೂಮಿ ಮತ್ತು ಹಲವು ಮನೆಗಳಿಗೆ ನೀರು ನುಗ್ಗಿದೆ. 

ಚಾರ್ಮಾಡಿಯ ಕೊಳಂಬೆ ಪ್ರದೇಶದಲ್ಲಿ ನೆರೆ ಕಾಣಿಸಿಕೊಂಡಿದ್ದು 15 ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಕಳೆದ ಬಾರಿಯೂ ಕೊಳಂಬೆ ಪ್ರದೇಶದಲ್ಲಿ ಹಲವು‌ ಮನೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಘಟನೆ ನಡೆದಿತ್ತು.

ಮೃತ್ಯುಂಜಯ ನದಿಯಲ್ಲಿ ಪ್ರವಾಹ ಉಂಟಾಗಿ ನೂರಾರು ಮನೆಗಳಿಗೆ ಹಾನಿಯಾಗಿತ್ತು. ಈಗ ಮತ್ತೆ ಅಂಥದ್ದೇ ಆತಂಕ ಅಲ್ಲಿನ ಜನರಲ್ಲಿ ಉಂಟಾಗಿದೆ.