MRPL Mangalore, death: ಎಂಆರ್ ಪಿಎಲ್ ಒಳಗಡೆ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದು ಕಾರ್ಮಿಕ ಸಾವು, ಕಂಪನಿಯ ನಿರ್ಲಕ್ಷ್ಯಕ್ಕೆ ಬಲಿಯೆಂದು ಡಿವೈಎಫ್ಐ ಆಕ್ರೋಶ  

28-05-24 06:42 pm       Mangalore Correspondent   ಕರಾವಳಿ

ಎಂಆರ್ ಪಿಎಲ್ ಕೈಗಾರಿಕಾ ಸಂಕೀರ್ಣದ ಒಳಗಡೆ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಗುತ್ತಿಗೆ ಕಾರ್ಮಿಕನೊಬ್ಬ ನಿನ್ನೆ ರಾತ್ರಿ ರಿಪೇರಿ ಕೆಲಸ ಮಾಡುತ್ತಿದ್ದಾಗ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು, ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಮೇ 28: ಎಂಆರ್ ಪಿಎಲ್ ಕೈಗಾರಿಕಾ ಸಂಕೀರ್ಣದ ಒಳಗಡೆ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಗುತ್ತಿಗೆ ಕಾರ್ಮಿಕನೊಬ್ಬ ನಿನ್ನೆ ರಾತ್ರಿ ರಿಪೇರಿ ಕೆಲಸ ಮಾಡುತ್ತಿದ್ದಾಗ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು, ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾರ್ಖಂಡ್ ರಾಜಧಾನಿ ರಾಂಚಿ ಜಿಲ್ಲೆಯ ಮೂಲದ ಕಾರ್ಮಿಕ ಮಾಂಗ್ರ ಒರಾನ್(38) ಮೃತ ಯುವಕ. ಈತ ಎಂಆರ್ ಪಿಎಲ್ ಒಳಗಡೆ ಜೆ.ಸಿ ಇಂಜಿನಿಯರಿಂಗ್ ಕಂಪನಿಯಲ್ಲಿ ಹತ್ತು ವರ್ಷಗಳಿಂದ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ನಿನ್ನೆ ರಾತ್ರಿ 9 ಗಂಟೆಯಿಂದ ರಾತ್ರಿ ಶಿಫ್ಟ್ ಕೆಲಸಕ್ಕೆ ಆಗಮಿಸಿದ್ದು, ತಡರಾತ್ರಿ 2.15ರ ವೇಳೆಗೆ ಹೈಡ್ರೋ ಕ್ರೇಕರ್ ಪ್ಲಾಂಟ್ ನಲ್ಲಿ ರಿಪೇರಿ ಕೆಲಸ ಮಾಡುತ್ತಿದ್ದಾಗ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಸುರತ್ಕಲ್ ಮುಕ್ಕದಲ್ಲಿರುವ ಶ್ರೀನಿವಾಸ ಹಾಸ್ಪಿಟಲ್ ಗೆ ಕರೆದೊಯ್ದಿದ್ದು ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ.

ಘಟನೆ ಸಂಬಂಧಿಸಿ ಸುರತ್ಕಲ್ ಠಾಣೆಯಲ್ಲಿ 304 ಎ ಅಡಿ ನಿರ್ಲಕ್ಷ್ಯದ ಸಾವು ಎಂದು ಕೇಸು ದಾಖಲಾಗಿದೆ. ಜೆಸಿ ಇಂಜಿನಿಯರಿಂಗ್ ಕಂಪನಿ, ಎಂಆರ್ ಪಿಎಲ್ ಭದ್ರತಾ ಅಧಿಕಾರಿ ಮತ್ತು ಜೆಸಿ ಇಂಜಿನಿಯರಿಂಗ್ ಕಂಪನಿಯ ಸುಪರ್ ವೈಸರ್ ಸಾಯಿನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ.

Mangalore Mrpl staff dies falling from third floor, DYFI slams MRPL for negligence. The deceased has been identified as Mangra Oran from Jharkhand.