ಬ್ರೇಕಿಂಗ್ ನ್ಯೂಸ್
05-07-24 06:04 pm Mangalore Correspondent ಕರಾವಳಿ
ಮಂಗಳೂರು, ಜುಲೈ 5: ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಸ್ತ್ರೀ ವೇಷಧಾರಿಯಾಗಿ ಖ್ಯಾತಿ ಗಳಿಸಿದ್ದ ಹಿರಿಯ ಕಲಾವಿದ, ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಒಂದರಲ್ಲೇ ನಾಲ್ಕು ದಶಕಕ್ಕೂ ಹೆಚ್ಚು ಕಾಲ ತಿರುಗಾಟ ನಡೆಸಿದ್ದ ಕುಂಬ್ಳೆ ಶ್ರೀಧರ ರಾವ್ (76) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಶ್ರೀಧರ ರಾವ್ ಅವರು ಮಾಲಿಂಗ ಮುಕಾರಿ ಮತ್ತು ಕಾವೇರಿ ದಂಪತಿಯ ಪುತ್ರನಾಗಿ 1948ರ ಜುಲೈ 23ರಂದು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪುವಿನಲ್ಲಿ ಜನಿಸಿದ್ದರು. 1962ರಲ್ಲಿ ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳಕ್ಕೆ ಬಾಲ ಕಲಾವಿದನಾಗಿ ಸೇರಿದ್ದರು. ಬಳಿಕ ಕೂಡ್ಲು ಮೇಳ, ಕರ್ನಾಟಕ ಮೇಳ, ಆನಂತರ ಧರ್ಮಸ್ಥಳ ಮೇಳ ಸೇರಿಕೊಂಡು ಸುದೀರ್ಘ ಕಾಲದಿಂದ ಅವಿರತ ಯಕ್ಷಗಾನ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕಲಾವಿದರಾಗಿ ಹೆಸರು ಗಳಿಸಿದ ನಂತರ ಶ್ರೀಧರ ರಾವ್ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನೆಕ್ಕಿಲಾಡಿ ಗ್ರಾಮದಲ್ಲಿ ನೆಲೆಸಿದ್ದರು. ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ತೆಂಕುತಿಟ್ಟು ಯಕ್ಷಗಾನದಲ್ಲಿ ಕೇವಲ ಸ್ತ್ರೀ ವೇಷಧಾರಿಯಾಗಿಯೇ ಸುದೀರ್ಘ ಕಲಾಸೇವೆ ಮಾಡಿರುವವರಲ್ಲಿ ಶ್ರೀಧರ ರಾವ್ ಒಬ್ಬರು. ಖ್ಯಾತ ಕಲಾವಿದರಾಗಿದ್ದ ಕುಂಬಳೆ ಸುಂದರ ರಾವ್ ಜೊತೆ ಜೊತೆಯಲ್ಲೇ ಧರ್ಮಸ್ಥಳ ಮೇಳದಲ್ಲಿ ಕಲಾವಿದರಾಗಿ ಹಲವು ಪಾತ್ರಗಳಿಗೆ ಜೀವ ತುಂಬಿದ್ದರು. 20 ವರ್ಷಗಳ ಹಿಂದೆ ಇವರ ಜೋಡಿ ರಂಗದಲ್ಲಿ ಯಕ್ಷಗಾನ ಪ್ರೇಮಿಗಳನ್ನು ಮೋಡಿ ಮಾಡಿತ್ತು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಶ್ರೀಧರ ರಾವ್ ಅಮ್ಮು ಬಳ್ಳಾಲ್ತಿಯ ಪಾತ್ರ ಮಾಡುತ್ತಿದ್ದರು. ತಮ್ಮ ಗಡಸು ಧ್ವನಿಯ ಕಂಠ ಮಾಧುರ್ಯವೇ ಅಮ್ಮು ಬಳ್ಳಾಲ್ತಿಯ ಪಾತ್ರ ವೈವಿಧ್ಯವನ್ನು ಕಟ್ಟಿಕೊಡುತ್ತಿತ್ತು.
ಯಕ್ಷಗಾನ ಪ್ರಸಂಗದ ಜೊತೆಗೆ ಆಗಿನ ಕಾಲದಲ್ಲಿ ತಾಳಮದ್ದಳೆ ಧ್ವನಿಮುದ್ರಣವೂ ಯಕ್ಷ ಪ್ರೇಮಿಗಳನ್ನು ಆಕರ್ಷಿಸುತ್ತಿತ್ತು. ಧರ್ಮದೈವ ಅಣ್ಣಪ್ಪ, ಅಮ್ಮು ಬಳ್ಳಾಲ್ತಿಯ ಸತ್ಯ ನಿಷ್ಠೆಯ ಮಾತುಗಳಿಗೆ, ಬಡತನದಲ್ಲೂ ನಿಷ್ಠೆ ಬಿಡದ ತಾಯಿಯ ವ್ಯಕ್ತಿತ್ವಕ್ಕೆ ಮನಸೋತು ಈ ಕ್ಷೇತ್ರದಲ್ಲಿ ಧರ್ಮ ಇದೆ, ನಾವು ಧರ್ಮ ದೈವಗಳು ಇಲ್ಲೇ ನೆಲೆ ನಿಲ್ಲುತ್ತೇವೆ ಎಂದು ಶಪಥ ಮಾಡುವ ಪ್ರಸಂಗವನ್ನು ಮನೋಜ್ಞವಾಗಿ ಕಟ್ಟಿಕೊಟ್ಟವರು ಶ್ರೀಧರ ರಾವ್ ಮತ್ತು ಬಳ್ಕೂರು ಕೃಷ್ಣಯಾಜಿ.
ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳ್ತಿ, ಲಕ್ಷ್ಮಿ, ಸುಭದ್ರೆ, ಸತ್ಯಭಾಮೆ, ಪ್ರಮೀಳೆ, ಶಶಿಪ್ರಭೆ ಹೀಗೆ ಮಹಾಭಾರತ, ರಾಮಾಯಣದ ಉಪಕತೆಗಳ ಪ್ರಸಂಗದಲ್ಲೆಲ್ಲ ಕಥಾ ನಾಯಕಿಯಾಗಿ ಕಾಣಿಸಿಕೊಂಡಿದ್ದವರು ಶ್ರೀಧರ ರಾವ್. 25-30 ವರ್ಷಗಳ ಹಿಂದೆ ಟೇಪ್ ರೆಕಾರ್ಡರ್ ನಲ್ಲಿ ಧ್ವನಿ ಮುದ್ರಣದ ಯಕ್ಷಗಾನ ಕೇಳುತ್ತಿದ್ದ ಸಮಯದಲ್ಲಿ ಶ್ರೀಧರ ರಾವ್ ಗಂಡೋ, ಹೆಣ್ಣೋ ಎಂದು ಸಂಶಯ ಬರುವಷ್ಟರ ಮಟ್ಟಿಗೆ ತಾದಾತ್ಮ್ಯ ಭಾವ ಅವರ ಪಾತ್ರಗಳಲ್ಲಿತ್ತು. ತಮ್ಮ ಜವನಿಕೆಯ ಸಮಯದಲ್ಲಿ ದುಃಖ, ಸಿಟ್ಟು, ಮಮತೆ, ಭಾವುಕ, ವೀರತ್ವ ಹೀಗೆ ನವರಸಗಳನ್ನೂ ತಮ್ಮ ಪಾತ್ರಗಳಲ್ಲಿ ತೋರಿಸಿಕೊಟ್ಟಿದ್ದು ಶ್ರೀಧರ ರಾವ್ ಅವರ ಹೆಗ್ಗಳಿಕೆ. ಅಂತಹ ಸ್ತ್ರೀ ವೇಷಧಾರಿ ಮತ್ತೊಬ್ಬರು ಸಿಗಲಿಕ್ಕಿಲ್ಲ ಎನ್ನುವಷ್ಟು ಅವರ ಪಾತ್ರಗಳು ಅಂದಿನ ಯಕ್ಷ ಪ್ರೇಮಿಗಳ ಹೃದಯಕ್ಕಿಳಿದಿತ್ತು. ಆಕಾಶವಾಣಿಯಲ್ಲಿ ಬರುತ್ತಿದ್ದ ಹೆಚ್ಚಿನ ಯಕ್ಷಗಾನ ಪ್ರಸಂಗಗಳಲ್ಲಿಯೂ ಶ್ರೀಧರ ರಾವ್ ಮತ್ತು ಸುಂದರ ರಾಯರ ಉಪಸ್ಥಿತಿ ಇರುತ್ತಿತ್ತು. ಇವರಿಬ್ಬರು ಕೂಡ ಮೂಲ ಕುಂಬಳೆಯವರೇ ಆಗಿದ್ದರೂ ಧರ್ಮಸ್ಥಳ ಮೇಳದಲ್ಲಿ ಕಲಾ ಸೇವೆ ಮಾಡಿ ಒಂದು ವರ್ಷದ ಅಂತರದಲ್ಲಿ ದೇವರ ಪಾದ ಸೇರಿದ್ದಾರೆ.
Dakshina kannada Kumble Shridhar Rao, Famous Yakshagana artist passes away, he Served more than 50 years in Sri Dharmasthala temple.
21-09-25 01:28 pm
Bangalore Correspondent
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm