ಬ್ರೇಕಿಂಗ್ ನ್ಯೂಸ್
09-07-24 06:42 pm Mangalore Correspondent ಕರಾವಳಿ
ಮಂಗಳೂರು, ಜುಲೈ 9: ಬಿಜೆಪಿ ಶಾಸಕರಿಗೆ ಹಿಂದೂ ಧರ್ಮದ ವಕಾಲತ್ತು ವಹಿಸಲು ಯಾರೂ ಅಧಿಕಾರ ಕೊಟ್ಟಿಲ್ಲ. ಬಿಜೆಪಿ ನಾಯಕರು ಹಾದಿಬೀದಿಯಲ್ಲಿ ಚಿಲ್ಲರೆ ರಾಜಕಾರಣ ಮಾಡಲು ಹೊರಟಿದ್ದಾರೆ. ರಾಹುಲ್ ಗಾಂಧಿಯ ಕೆನ್ನೆಗೆ ಬಾರಿಸಲು ನಿಮ್ಮ ನಾಯಕ ಮೋದಿಗೂ ಆಗಿಲ್ಲ. ಸಂಸತ್ತಿನಲ್ಲಿ ಸ್ಪಷ್ಟನೆ ನೀಡುವುದಕ್ಕೂ ಆಗಿಲ್ಲ. ಇನ್ನು ಈ ಚಿಲ್ಲರೆ ರಾಜಕಾರಣಿ ಭರತ್ ಶೆಟ್ಟಿಯಿಂದ ಏನು ಸಾಧ್ಯ ಎಂದು ಎಂಎಲ್ಸಿ ಐವಾನ್ ಡಿಸೋಜ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಶಾಸಕ ಭರತ್ ಶೆಟ್ಟಿ, ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಸುದ್ದಿಗೋಷ್ಟಿ ನಡೆಸಿದ್ದಾರೆ. ಭರತ್ ಶೆಟ್ಟಿ ಶಾಸಕ ಆಗೋದಕ್ಕೆ ಅನ್ ಫಿಟ್. ನಾಯಿಯನ್ನು ತೋರಿಸಿ ರಾಹುಲ್ ಗಾಂಧಿಗೆ ಹೋಲಿಕೆ ಮಾಡಿದ್ದಾರೆ. ನಾಯಿಗೆ ಇರುವಷ್ಟು ಮಾನ ಮರ್ಯಾದೆ ಈ ಭರತ್ ಶೆಟ್ಟಿಗೆ ಇಲ್ಲ ಎಂದು ಛೇಡಿಸಿದರು.
ಶಸ್ತ್ರಾಸ್ತ್ರ ತೆಗಿತೇವೆ ಎಂದು ಇವರು ಹೇಳಿದ್ದಾರೆ. ಈ ರೀತಿಯ ಪ್ರಚೋದನಕಾರಿ ಭಾಷಣದ ವಿರುದ್ಧ ಪೊಲೀಸರು ಸುಮೋಟೊ ಕೇಸ್ ದಾಖಲು ಮಾಡಬೇಕು. ತಕ್ಷಣ ಶಾಸಕ ಭರತ್ ಶೆಟ್ಟಿಯನ್ನು ಬಂಧಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಒತ್ತಾಯಿಸುತ್ತೇನೆ. ತಲವಾರು ಹಿಡಿದು ಇವರು ಪುಂಡಾಟಿಕೆ ಮಾಡಲು ಹೊರಟಿದ್ದಾರೆಯೇ..?ನಿಮ್ಮ ನಾಟಕ ಕಂಪೆನಿಗಳನ್ನೆಲ್ಲಾ ಬಂದ್ ಮಾಡಿ. ಕೇಂದ್ರ ಸರ್ಕಾರ ಇನ್ನು ಆರು ತಿಂಗಳ ಕಾಲವೂ ಬರಲ್ಲ. ಆನಂತರ, ನಿಮ್ಮೆಲ್ಲ ನಾಟಕವೂ ಬಂದ್ ಆಗತ್ತೆ. ಈ ಸರ್ಕಾರ ಬಿದ್ದು ಹೋಗುತ್ತೆ.
ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾದ ಮೇಲೆ ಬಿಜೆಪಿಯವರು ಕಂಗಲಾಗಿದ್ದಾರೆ. ಹತಾಶರಾಗಿ ಮಾತಾಡುತ್ತಿದ್ದಾರೆ. ಇವರಿಗೆ ತಾಕತ್ತು ಇದ್ರೆ ಹೊಡೆದು ನೋಡಲಿ. ನೀವು ಅಲ್ಲ ನರೇಂದ್ರ ಮೋದಿ ಬೇಕಾದರೂ ಮುಟ್ಟಿ ನೋಡಲಿ. ಪೊಲೀಸ್ ಕಮೀಷನರ್ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಶಾಸಕನಿಗೆ ಈ ಬಗ್ಗೆ ಯಾವುದೇ ಕ್ಷಮೆ ನೀಡಬಾರದು.
ಇವರು ಕತ್ತಿ ಹಿಡಿತೇವೆ, ಶಸ್ತ್ರಾಸ್ತ್ರ ತೆಗಿತೇವೆ ಎಂದು ಯಾರಿಗೆ ಹೇಳೋದು. ಇವರೇನೂ ಮಾಡೋದಿಲ್ಲ. ಯಾರೋ ಒಬ್ಬ ಕಾರ್ಯಕರ್ತನಿಗೆ ಪ್ರಚೋದನೆ ಮಾಡಿ ಇವರು ಲಾಭ ಪಡೆಯುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರ ಯಾವ ಹಿಂದುತ್ವ ?
ಕೆಪಿಸಿಸಿ ವಕ್ತಾರ ಎಂ.ಜಿ. ಹೆಗ್ಡೆ ಮಾತನಾಡಿ, ಬಿಜೆಪಿಯವರು ತಮ್ಮ ಹಿಂದುತ್ವದ ಗ್ರಂಥ ಯಾವುದೆಂದು ಹೇಳಬೇಕು. ಬಿಜೆಪಿ ಮತ ಹಾಕದವರು, ವಿರೋಧಿಗಳನ್ನೆಲ್ಲ ಹಿಂದು ವಿರೋಧಿಗಳೆಂದು ಮಾಡಿದ್ದೀರಿ. ಶಂಕರಪೀಠದ ಆಚಾರ್ಯರು ವಿರೋಧ ಮಾಡಿದ್ದಕ್ಕೆ ಅವರನ್ನು ಟ್ರೋಲ್ ಮಾಡಿದ್ರಿ, ಅಯೋಧ್ಯೆಯಲ್ಲಿ ಮತ ಕೊಟ್ಟಿಲ್ಲ ಅಂತ ಹಿಂದುಗಳ ಅಂಗಡಿಗೆ ಹೋಗಬೇಡಿ ಎಂದೂ ಹೇಳಿದ್ರಿ. ನೈಜ ಹಿಂದು ಧರ್ಮ ದ್ವೇಷ ಮಾಡಲ್ಲ ಎಂಬ ರಾಹುಲ್ ಗಾಂಧಿ ಮಾತನ್ನು ನೀವು ಸಾಬೀತು ಮಾಡಿದ್ದೀರಿ. ನಿಮ್ಮದು ನಕಲಿ ಹಿಂದುತ್ವ ಎಂದರು.
ನಿಮಗೆ ಓಟ್ ಹಾಕಿದ್ರೆ ಮಾತ್ರ ಹಿಂದು, ಇಲ್ಲದಿದ್ದರೆ ಹಿಂದುವಲ್ಲ. ಈ ರೀತಿಯ ಧೋರಣೆಯನ್ನು ಸಮಾಜ ಒಪ್ಪುತ್ತದಾ ಎಂದು ಕೇಳಬೇಕು. ನಿಮ್ಮ ಪಂಥ ಯಾವುದು, ನಿಮ್ಮ ಪ್ರಕಾರ ಹಿಂದು ಧರ್ಮ ಎಂದರೇನು ಎಂದು ಕೇಳಬೇಕಾಗಿದೆ. ಇವರಿಗೆ ಮುಂದಿನ ಚುನಾವಣೆಯಲ್ಲಿ ಸೀಟಿಲ್ಲ ಎಂಬುದು ಸ್ಪಷ್ಟ. ಹೀಗಾಗಿ ಈ ರೀತಿ ಮಾತಾಡ್ತಿದಾರೆ, ಶಾಂತ ಸಮಾಜದಲ್ಲಿ ಗಲಾಟೆ ಆಗಬೇಕೆಂದು ಮಾಡ್ತಿದಾರೆ ಎಂದು ಹೇಳಿದ ಎಂಜಿ ಹೆಗ್ಡೆ, ನೀವು ಸಂಘ ಪರಿವಾರದ ಇತಿಹಾಸ ಓದಿಕೊಳ್ಳಬೇಕು. ಜನಸಂಘದ ಸ್ಥಾಪಕರಲ್ಲಿ ಒಬ್ಬರಾದ ಬಲರಾಜ್ ಮುಧೋಕ್ ಅವರನ್ನು ಹೇಗೆ ಮೂಲೆಗುಂಪು ಮಾಡಿದ್ದರು. ಪ್ರವೀಣ್ ತೊಗಾಡಿಯಾ, ರಿತಂಬರಾ, ಉಮಾ ಭಾರತಿ ಎಲ್ಲಿ ಹೋದರು ಎಂಬುದನ್ನು ತಿಳ್ಕೋಬೇಕು. ಇಂಥವರಿಗೆಲ್ಲ. ಭವಿಷ್ಯ ಇರೋದಿಲ್ಲ. ಅನಂತ ಕುಮಾರ್ ಹೆಗಡೆಗಾದ ಗತಿಯೇ ನಿಮಗೆ ಆಗುತ್ತದೆ ಎಂದು ಹೇಳಿದರು.
Even Modi can't slap Rahul Gandhi slams Congress leader Ivan dsouza in Mangalore. As MLA Bharath shetty made controversial statement saying Rahul should be slapped Ivan slammed MLA for his statment.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm