ಬ್ರೇಕಿಂಗ್ ನ್ಯೂಸ್
09-07-24 10:12 pm Mangalore Correspondent ಕರಾವಳಿ
ಮಂಗಳೂರು, ಜುಲೈ.9: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯು ಪ್ರಕರಣಗಳು ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪಾಲಿಕೆಯ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪಾಲಿಕೆಯ ಸದಸ್ಯರ ವಿಶೇಷ ಸಭೆ ಕರೆದಿದ್ದರು. ಇಲಾಖೆ ಅಧಿಕಾರಿಗಳು ಡೆಂಗ್ಯು ನಿಯಂತ್ರಣದ ಬಗ್ಗೆ ಸರಿಯಾದ ಮುಂಜಾಗ್ರತೆ ವಹಿಸಿರದೇ ಇದ್ದುದನ್ನು ಕೇಳಿ ಸಂಸದರು ಗರಂ ಆಗಿದ್ದಾರೆ.
ಡೆಂಗ್ಯು ನಿಯಂತ್ರಣಕ್ಕೆ ಸಂಬಂಧಿಸಿ ಪಾಲಿಕೆಯೇ ಗೊಂದಲದಲ್ಲಿ ಇರುವಂತೆ ತೋರುತ್ತಿದೆ. ರೋಗದ ಬಗ್ಗೆ ಮಾಹಿತಿ ಪಡೆಯಲು ಅಥವಾ ಅದನ್ನು ಸಂಗ್ರಹಿಸುವ ಬಗ್ಗೆ ನಿಮ್ಮಲ್ಲಿ ಮುಂದಾಲೋಚನೆಯೇ ಇಲ್ಲ. ಡೆಂಗ್ಯು ರೋಗ ಎಲ್ಲ ಕಡೆ ಹಬ್ಬುತ್ತಿದ್ದರೆ, ನೀವು ಏನೂ ಆಗಿಯೇ ಇಲ್ಲ ಎಂಬಂತೆ ಇದ್ದೀರಿ. ಡೆಂಗ್ಯು ರೋಗ ನಿಯಂತ್ರಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಮತ್ತು ನಿರ್ದಿಷ್ಟ ಯೋಜನೆಯ ಅಗತ್ಯವಿದೆ. ಕನಿಷ್ಠ ಒಂದು ಕಂಟ್ರೋಲ್ ರೂಮ್ ಅನ್ನಾದರೂ ಇಟ್ಟುಕೊಳ್ಳಬೇಕಲ್ವಾ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಪಾಲಿಕೆಯ ಮೇಯರ್ ಅವರಲ್ಲಿ ಸಂಸದ ಚೌಟ ಪ್ರಶ್ನೆ ಮಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ 118 ಪ್ರಕರಣ ಪತ್ತೆಯಾಗಿದ್ದು, ಬಿಜೈ ಹಾಗೂ ಬಂದರು ವಾರ್ಡ್‍ನಲ್ಲಿ ಡೆಂಗ್ಯು ಹೆಚ್ಚು ಕಂಡುಬಂದಿದೆ ಎಂಬ ವಿಚಾರ ಪಾಲಿಕೆಯ ಸದಸ್ಯರ ಆತಂಕಕ್ಕೆ ಕಾರಣವಾಯಿತು. ಪಾಲಿಕೆ ಸದಸ್ಯ ಎ.ಸಿ.ವಿನಯರಾಜ್ ಮಾತನಾಡಿ, 2014ರಲ್ಲಿ ಮಲೇರಿಯಾ ಉಲ್ಬಣಿಸಿದಾಗ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದಲ್ಲದೆ, ಆ್ಯಪ್ ಮೂಲಕ ಕಾರ್ಯಾಚರಣೆ ನಡೆಸಿದ್ದನ್ನು ನೆನಪಿಸಿಕೊಂಡರು. ಮತ್ತೆ ಆ್ಯಪ್ ಬಳಕೆಗೆ ತರಬೇಕು. ಸ್ಮಾರ್ಟ್ ಸಿಟಿಯಿಂದ 60 ಕೋಟಿ ರೂ. ಖರ್ಚು ಮಾಡಿ ಕಮಾಂಡ್ ಕಂಟ್ರೋಲ್ ರೂಂ ತೆರೆಯಲಾಗಿದೆ. ಅದನ್ನು ಡೆಂಗ್ಯು ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಸಲಹೆ ಮಾಡಿದರು.
ಸಭೆಯಲ್ಲಿ ಕೇಳಿಬಂದ ಸಲಹೆ, ಅಭಿಪ್ರಾಯಗಳನ್ನು ಆಲಿಸಿದ ಮೇಯರ್ ಸುಧೀರ್ ಶೆಟ್ಟಿ, ಕೂಡಲೇ ತಜ್ಞ ವೈದ್ಯರ ಸಮಿತಿ ರಚಿಸುವುದಲ್ಲದೆ, ಆ್ಯಪ್ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. ಆರೋಗ್ಯ ಇಲಾಖೆಯ ಅಧಿಕಾರಿ ಡಾ.ನವೀನಚಂದ್ರ ಕುಲಾಲ್ ನೇತೃತ್ವದಲ್ಲಿ ತಜ್ಞ ವೈದ್ಯರು, ವೈದ್ಯಕೀಯ ಕಾಲೇಜು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ಸಮಿತಿ ರಚಿಸುವುದು ಹಾಗೂ ಹಿಂದೆ ಇದ್ದ ಮಲೇರಿಯಾ ಆ್ಯಪ್ ಮತ್ತೆ ಚಾಲ್ತಿಗೆ ತರಲಾಗುವುದು ಎಂದರು.
ಸರ್ಕಿಟ್ ಹೌಸ್‍ನಲ್ಲೇ ಸೊಳ್ಳೆ ಉತ್ಪತ್ತಿ
ವಲಸೆ ಕಾರ್ಮಿಕರು ನೆಲೆಸಿರುವ ಕಡೆ ಡೆಂಗ್ಯು ವ್ಯಾಪಕವಾಗಿದ್ದು, ಬಡ ಕಾರ್ಮಿಕರ ತಪಾಸಣೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸದಸ್ಯ ಅನಿಲ್ ಕುಮಾರ್ ಆಗ್ರಹಿಸಿದರು. ಪಾಲಿಕೆಯ ಆರೋಗ್ಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ವಿಐಪಿಗಳು ತಂಗುವ ಸರ್ಕಿಟ್ ಹೌಸ್ ಕೂಡಾ ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ ಎಂದು ನವೀನ್ ಡಿಸೋಜ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿ, ಹಿಂದೆ ಇದ್ದ ಆ್ಯಪ್ ಅಭಿವೃದ್ಧಿ ಪಡಿಸುವ ಜತೆಗೆ ಸಾರ್ವಜನಿಕರಿಗೆ ಲಭ್ಯವಾಗುವ ರೀತಿಯಲ್ಲಿ ಕಂಟ್ರೋಲ್ ರೂಂ ಕಾರ್ಯಾಚರಣೆ ಆಗಬೇಕು ಎಂದರು. ಸಭೆಯಲ್ಲಿ ಉಪ ಮೇಯರ್ ಸುನೀತಾ, ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮನಪಾ ಆಯುಕ್ತ ಆನಂದ್ ಸಿ.ಎಲ್ ಉಪಸ್ಥಿತರಿದ್ದರು. ಸಭೆ ಮುಗಿದ ಬಳಿಕ ಪಾಲಿಕೆಯ ಕಟ್ಟಡದಲ್ಲಿರುವ ಸ್ಮಾರ್ಟ್ ಸಿಟಿ ಕಚೇರಿಗೆ ತೆರಳಿದ ಸಂಸದ ಬ್ರಿಜೇಶ್ ಚೌಟ ಅಲ್ಲಿಯೇ ಡೆಂಗ್ಯು ನಿಯಂತ್ರಣ ಕೊಠಡಿ ಸ್ಥಾಪಿಸುವಂತೆ ಸೂಚನೆ ನೀಡಿದರು.
Mangalore Dengue precautions, highest case from bejai and bunder area, Mp Brijesh Chowta Angry on officers negligence. The Mangaluru City Corporation (MCC), in collaboration with the health department, convened at Mangala Auditorium, MCC office, Mangaluru, on Tuesday, July 9, to discuss dengue prevention and awareness measures
21-01-25 10:59 pm
HK News Desk
BJP MLA BP Harish, B. Y. Vijayendra, Yatnal:...
20-01-25 07:00 pm
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
21-01-25 11:02 pm
HK News Desk
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
21-01-25 11:51 pm
Mangalore Correspondent
Mangalore Praveen Nettaru murder case, NIA ar...
21-01-25 09:43 pm
Mangalore University, Phd courses: ಪಿಎಚ್ ಡಿ ಪ...
21-01-25 08:11 pm
Mangalore Kotekar bank robbery, president: 15...
21-01-25 07:43 pm
Mangalore Kotekar Bank Robbery, Accused Photo...
21-01-25 12:21 pm
21-01-25 06:00 pm
Mangaluru Correspondent
Hubballi Bank Robbery, Kotekar, Bidar: ಬೀದರ್...
20-01-25 10:18 pm
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm