ಬ್ರೇಕಿಂಗ್ ನ್ಯೂಸ್
20-07-24 10:40 pm Mangalore Correspondent ಕರಾವಳಿ
ಮಂಗಳೂರು, ಜುಲೈ 20: ಅತ್ತ ಕರ್ನಾಟಕವೂ ಅಲ್ಲದ ಇತ್ತ ಕೇರಳವೂ ಅಲ್ಲದ ತ್ರಿಶಂಕು ಸ್ಥಿತಿಯಲ್ಲಿರುವ ಮಂಗಳೂರು ನಗರದ ಎರಡು ರೈಲು ನಿಲ್ದಾಣಗಳ ಅಭಿವೃದ್ಧಿ ಮತ್ತು ಕೊಂಕಣ ರೈಲ್ವೇ ನಿಗಮದ ಜೊತೆಗೆ ಸೇರಿಸಿ ಪ್ರತ್ಯೇಕ ವಿಭಾಗ ರಚಿಸುವ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ಶನಿವಾರ ಮಂಗಳೂರಿನಲ್ಲಿ ನಡೆದಿದೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ರೈಲ್ವೇ, ಮೈಸೂರು ವಿಭಾಗ ಮತ್ತು ಕೊಂಕಣ ರೈಲ್ವೇಯ ಮೂವರು ಡಿವಿಶನಲ್ ಮ್ಯಾನೇಜರುಗಳು ಪಾಲ್ಗೊಂಡಿದ್ದರು.
ಸಭೆಯ ಆರಂಭದಲ್ಲೇ ಪ್ರಸ್ತಾಪ ಮಾಡಿದ ಸಂಸದ ಬ್ರಿಜೇಶ್ ಚೌಟ, ಒಂದೇ ಬಾರಿಗೆ ಎಲ್ಲವೂ ಆಗಿಬಿಡುತ್ತದೆ ಎಂದುಕೊಳ್ಳುವುದು ಬೇಡ. ಇದು ಆರಂಭ ಅಷ್ಟೇ. ಮೂರು ರೈಲ್ವೇ ವಿಭಾಗದ ಪ್ರಮುಖರನ್ನು ತಂದು ಕೂರಿಸಿದ್ದೇವೆ. ಮಂಗಳೂರು ಭಾಗದ ರೈಲ್ವೇ ಬೇಡಿಕೆಯನ್ನು ಈಡೇರಿಸಲು ಕೋಆರ್ಡಿನೇಶನ್ ಕಮಿಟಿ ಮಾಡಿದ್ದೇವೆ. ಇನ್ನು ಪ್ರತಿ ತಿಂಗಳು ಸಭೆ ನಡೆಸುತ್ತೇವೆ. ಇದರ ಜೊತೆಗೆ, ಮೂರು ಡಿವಿಶನ್ಗಳ ಪ್ರಮುಖರ ಸಭೆಯೂ ಮೂರು ತಿಂಗಳಿಗೊಮ್ಮೆ ನಡೆಯಲಿದೆ. ಹಂತ ಹಂತವಾಗಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಹೆಜ್ಜೆ ಇಟ್ಟಿದ್ದೇವೆ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರತಿಕ್ರಿಯಿಸಿ, ಮೂರು ಡಿವಿಶನ್ ಮುಖ್ಯಸ್ಥರು, ಸಂಸದರು, ಮಂಗಳೂರು ಭಾಗದ ಮೂವರು ಶಾಸಕರು, ವಿಭಾಗಾಧಿಕಾರಿ, ಮಹಾನಗರ ಪಾಲಿಕೆಯ ಕಮಿಷನರ್ ಒಳಗೊಂಡ ಉನ್ನತ ಮಟ್ಟದ ಕಮಿಟಿ ಮಾಡಿದ್ದೇವೆ. ಮೂರು ವಿಭಾಗದ ಹಿರಿಯ ಅಧಿಕಾರಿಗಳು, ಕೆನರಾ ಚೇಂಬರ್ ಆಫ್ ಕಾಮರ್ಸ್ ಪ್ರಮುಖರು, ರೈಲ್ವೇ ಬಳಕೆದಾರರನ್ನು ಒಳಗೊಂಡ ಮತ್ತೊಂದು ಸಬ್ ಕಮಿಟಿ ಮಾಡಿದ್ದೇವೆ. ಡಿಆರ್ ಎಂ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಪ್ರತಿ ತಿಂಗಳು ಎಕ್ಸಿಕ್ಯುಟಿವ್ ಮೀಟಿಂಗ್ ಇರುತ್ತದೆ ಎಂದು ಮಾಹಿತಿ ಹಂಚಿಕೊಂಡರು.
ಮಂಗಳೂರು ರೈಲು ನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವಾಗಿಸುವ ಯೋಜನೆಯ ನೀಲನಕ್ಷೆಯ ಬಗ್ಗೆ ಪಾಲ್ಘಾಟ್ ವಿಭಾಗದ ಡಿಆರ್ ಎಂ ಅರುಣ್ ಕುಮಾರ್ ಚತುರ್ವೇದಿ ಅವರು ಸಭೆಯಲ್ಲಿ ವಿವರಣೆ ನೀಡಿದರು. ಒಟ್ಟು 56 ಎಕ್ರೆ ವ್ಯಾಪ್ತಿಯಲ್ಲಿ ಮಾಡಲಾಗುವ ಬೃಹತ್ ಯೋಜನೆ ಇದಾಗಿದ್ದು, 303.20 ಕೋಟಿ ಅಂದಾಜು ವ್ಯಯ ಮಾಡಲಾಗುವುದು. ಈಗ ಇರುವ ರೈಲು ನಿಲ್ದಾಣದ ಆಸುಪಾಸಿನ ಪಾರ್ಕಿಂಗ್ ಪ್ರದೇಶ ಸೇರಿದಂತೆ, ಮುಂಭಾಗದ ಕ್ವಾಟ್ರಸ್ ಏರಿಯಾದಲ್ಲೂ ಕಟ್ಟಡಗಳು ಬರಲಿವೆ. ಒಟ್ಟು 1200 ಕಾರು ಪಾರ್ಕಿಂಗ್ ಮಾಡುವಷ್ಟು ವಿಸ್ತಾರದ ಯೋಜನೆ ಇದಾಗಿದೆ ಎಂದರು.
ಮಲ್ಟಿ ಲೆವೆಲ್ ಪಾರ್ಕಿಂಗ್ ಇಲ್ಲದೆ 1200 ಕಾರು ಪಾರ್ಕಿಂಗ್ ಹೇಗೆ ಸಾಧ್ಯ ಎಂದು ಆರ್ಟಿಐ ಹೋರಾಟಗಾರ ಹನುಮಂತ ಕಾಮತ್ ರೈಲ್ವೇ ಅಧಿಕಾರಿಗಳನ್ನು ಪ್ರಶ್ನಿಸಿದರು. ಈಗ ಇರುವುದರಲ್ಲೇ ನೂರು ಕಾರು ಪಾರ್ಕಿಂಗ್ ಮಾಡಲು ಸಾಧ್ಯವಿಲ್ಲ. ಮತ್ತೆ ಹೇಗೆ ಅಷ್ಟು ಕಾರುಗಳನ್ನು ನಿಲ್ಲಿಸಲು ಸಾಧ್ಯ ಎಂದು ಕೇಳಿದರು. ಅದಕ್ಕುತ್ತರಿಸಿದ ಚತುರ್ವೇದಿ, ಒಟ್ಟು ವಿಸ್ತೀರ್ಣ ತುಂಬ ವಿಸ್ತಾರದಲ್ಲಿ ಬರುತ್ತದೆ. ಈಗಿನ ಕ್ವಾಟ್ರಸ್ ಕಟ್ಟಡಗಳನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗುವುದು. ಸುತ್ತಲೂ ಪಾರ್ಕಿಂಗ್ ಅವಕಾಶ ಇರುತ್ತದೆ ಎಂದರು. ಇದಕ್ಕೆ ಆಕ್ಷೇಪಿಸಿದ ರೈಲ್ವೇ ಸಲಹಾ ಮಂಡಳಿ ಸದಸ್ಯರೂ ಆದ ಹಿರಿಯ ಹೋರಾಟಗಾರ ಅಹ್ಮದ್ ಬಾವ, ನಾವು ಮಮತಾ ಬ್ಯಾನರ್ಜಿ ರೈಲ್ವೇ ಮಂತ್ರಿಯಾಗಿದ್ದಾಗಲೂ ವಿಶ್ವದರ್ಜೆಯ ರೈಲು ನಿಲ್ದಾಣಕ್ಕಾಗಿ ಅರ್ಜಿ ಕೊಟ್ಟಿದ್ದೆವು. ಆಗಿನಿಂದಲೂ ಈ ಮಾತು ಬರ್ತಾನೇ ಇದೆ. ಇದು ಯಾವಾಗ ಶುರುವಾಗುತ್ತದೆ ಮತ್ತು ಯಾವಾಗ ಅಂತ್ಯವಾಗುತ್ತದೆ ಎಂಬುದನ್ನು ಹೇಳಿ ಎಂದರು. 2025ರ ಮಾರ್ಚ್ ವೇಳೆಗೆ ಕೆಲಸ ಶುರುವಾಗುತ್ತದೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿಸುತ್ತೇವೆ ಎಂದರು ಚತುರ್ವೇದಿ.
ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿ, ಪಾಂಡೇಶ್ವರದಲ್ಲಿ ಗೂಡ್ಸ್ ಶೆಡ್ ಮಾಡಿದ್ದು ಅಲ್ಲಿನ ಜನರಿಗೆ ದೊಡ್ಡ ಸಂಕಷ್ಟ ತಂದಿದೆ. ದಿನದಲ್ಲಿ ಏಳೆಂಟು ಬಾರಿ ಗೂಡ್ಸ್ ಬರುವುದು, ಹೋಗುವುದು ಆಗ್ತಾನೇ ಇರ್ತದೆ. ಇದರಿಂದ ಸ್ಕೂಲ್ ವ್ಯಾನ್ಗಳು ಕೂಡ ಸಿಕ್ಕಾಕ್ಕೊಂಡು ಕಷ್ಟಕ್ಕೆ ಒಳಗಾಗುತ್ತವೆ. ಇದನ್ನು ಹೊಸ ರೈಲು ನಿಲ್ದಾಣದ ಒಳಗಡೆಯೇ ಬರುವಂತೆ ಮಾಡಿ ಎಂದು ಸಲಹೆಯಿತ್ತರು. ಮಾಜಿ ಮೇಯರ್ ಗಳಾದ ದಿವಾಕರ ಪಾಂಡೇಶ್ವರ ಮತ್ತು ಪ್ರೇಮಾನಂದ ಶೆಟ್ಟಿ ಅವರೂ ಪಾಂಡೇಶ್ವರ ರೈಲ್ವೇ ಗೇಟ್ ಮತ್ತು ಗೂಡ್ಸ್ ಶೆಡ್ ಸಮಸ್ಯೆ ಹೇಳಿಕೊಂಡರು. ಒಬ್ಬೊಬ್ಬರು ಸಮಸ್ಯೆ ಹೇಳಲು ಮುಂದಾದ ವೇಳೆ ಮಧ್ಯ ಪ್ರವೇಶ ಮಾಡಿದ ಜಿಲ್ಲಾಧಿಕಾರಿ, ಇದೇ ಮೊದಲ ಬಾರಿಗೆ ಮೂರು ರೈಲ್ವೇ ವಿಭಾಗದ ಡಿಆರ್ ಎಂ ಮಟ್ಟದ ಅಧಿಕಾರಿಗಳು ಬಂದು ಕೂತಿದ್ದಾರೆ. ಇದೊಂದು ಮಹತ್ವದ ಸಭೆಯಾಗಿದ್ದು, ಎಲ್ಲವೂ ಒಂದೇ ಬಾರಿಗೆ ಪರಿಹಾರ ಆಗಲ್ಲ. ಎಲ್ಲರೂ ಕುಳಿತು ಚರ್ಚೆ ಮಾಡುವ ಸ್ಥಿತಿ ಬಂದಿದೆ, ಸರಿಯಾಗತ್ತೆ ಎಂದು ಸಮಜಾಯಿಷಿ ನೀಡಿದರು.
ಮೋರ್ಗನ್ಸ್ ಗೇಟ್, ಕುಲಶೇಖರ ಖಂಡೇವು, ಬಜಾಲ್ ಅಂಡರ್ ಪಾಸ್, ಜೆಪ್ಪು ಕುದ್ಪಾಡಿ ಅಂಡರ್ ಪಾಸ್ ವಿಚಾರದಲ್ಲೂ ಚರ್ಚೆ ನಡೆಯಿತು. ಪಾಲ್ಘಾಟ್ ಡಿಆರ್ ಎಂ ಚತುರ್ವೇದಿ, ಈ ಸಮಸ್ಯೆ ಪರಿಹರಿಸಲು ತನ್ನ ಕೆಳಗಿನ ಅಧಿಕಾರಿ ಅಭಿಷೇಕ್ ಅವರಿಗೆ ಸೂಚಿಸಿ ಸ್ಥಳಕ್ಕೆ ತೆರಳಿ ವರದಿ ನೀಡುವಂತೆ ಹೇಳಿದರು. ಸಂಸದ ಚೌಟ ಪ್ರತಿಕ್ರಿಯಿಸಿ, ಜನಸಾಮಾನ್ಯರ ಬಹುದಿನಗಳ ಒತ್ತಾಯದಂತೆ ಮುಂಬೈಗೆ ತೆರಳುವ ಮತ್ಸ್ಯಗಂಧ ರೈಲಿನ ಸಮಯ ಬದಲಾವಣೆ ಮತ್ತು ಮಂಗಳೂರು ಜಂಕ್ಷನ್ ಬದಲು ಸೆಂಟ್ರಲ್ ನಿಲ್ದಾಣದಿಂದ ಹೊರಡುವಂತೆ ಮಾಡಬೇಕು ಎಂದು ಕೊಂಕಣ ರೈಲ್ವೇ ಡಿಆರ್ ಎಂ ಆರ್.ಎಂ. ಭದಾಂಗ್ ಅವರಿಗೆ ಕೇಳಿಕೊಂಡರು. ಅದಕ್ಕೊಪ್ಪಿದ ರೈಲ್ವೇ ಅಧಿಕಾರಿ, ಆ ಕೆಲಸ ಕೂಡಲೇ ಮಾಡಿಸುತ್ತೇನೆ ಎಂದರು. ಇದರ ಜೊತೆಗೆ, ಸುರತ್ಕಲ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳುವಂತೆ ಸಂಸದರು ಸೂಚಿಸಿದರು.
ಮಂಗಳೂರು- ಸುಬ್ರಹ್ಮಣ್ಯ ರೂಟಿನಲ್ಲಿ ವಿದ್ಯುದೀಕರಣ ಆಗಿದ್ದರೂ, ಯಾಕೆ ಹೊಸ ರೈಲು ಆರಂಭಿಸಿಲ್ಲ ಎಂದು ಹನುಮಂತ ಕಾಮತ್, ಮೈಸೂರು ವಿಭಾಗದ ಡಿಆರ್ ಎಂ ಶಿಲ್ಪಿ ಅಗರ್ವಾಲ್ ಅವರನ್ನು ಪ್ರಶ್ನಿಸಿದರು. ಕಬಕ- ಪುತ್ತೂರು – ಸುಬ್ರಹ್ಮಣ್ಯ ಹಳಿಯಲ್ಲಿ ಹೊಸ ರೈಲು ಆರಂಭಿಸುವಂತೆ ಸಂಸದ ಚೌಟ ಕೂಡ ಒತ್ತಾಯಿಸಿದರು. ಸದ್ಯದಲ್ಲೇ ಆ ರೂಟಿನಲ್ಲಿ ಹೊಸ ರೈಲು ಓಡಿಸುವುದಾಗಿ ರೈಲ್ವೇ ಅಧಿಕಾರಿಗಳು ಒಪ್ಪಿಗೆಯನ್ನೂ ಸೂಚಿಸಿದರು. ಬೈಕಂಪಾಡಿಯಲ್ಲಿ ಅಂಡರ್ ಪಾಸ್ ತೊಂದರೆ ಎದುರಾಗಿರುವ ಬಗ್ಗೆಯೂ ಚರ್ಚೆ ನಡೆಯಿತು. ಒಟ್ಟು ಸಭೆಯಲ್ಲಿ ಸಂಸದರು ಮತ್ತು ಶಾಸಕರು ಅಧಿಕಾರಿಗಳ ಜೊತೆಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲೇ ಮಾತುಕತೆ, ವ್ಯವಹರಿಸಿ ಸಲಹೆ, ಸೂಚನೆಗಳನ್ನು ನೀಡಿದರು. ಈ ಹಿಂದಿನ ಸಂಸದರಿಗೆ ಭಾಷೆಯ ತೊಂದರೆ ಇದ್ದುದರಿಂದಲೇ ರೈಲ್ವೇ ಅಧಿಕಾರಿಗಳ ಜೊತೆ ವ್ಯವಹರಿಸುವುದು ಕಷ್ಟವಾಗಿತ್ತು ಎನ್ನುವುದು ಅಲ್ಲಿದ್ದವರಿಗೆ ಮನದಟ್ಟಾಯಿತು. ಸಂಸದರು ಆರಂಭದಲ್ಲೇ ಮಂಗಳೂರಿನ ಮಟ್ಟಿಗೆ ದೊಡ್ಡ ಇಕ್ಕಟ್ಟಾಗಿದ್ದ ರೈಲ್ವೇ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಕ್ಕೆ ರೈಲ್ವೇ ಹೋರಾಟಗಾರರಿಂದ ಪ್ರಶಂಸೆಯೂ ಕೇಳಿಬಂತು.
Member of Parliament for Dakshina Kannada Capt Brijesh Chowta addressed railway issues on Saturday, July 20, at the Deputy Commissioner's office in Mangaluru. Speaking at the event, MP Capt. Brijesh Chowta stated, "A few days ago, V Somanna visited our district upon my request to resolve railway issues.
20-09-25 10:57 pm
HK News Desk
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm