ಬ್ರೇಕಿಂಗ್ ನ್ಯೂಸ್
27-07-24 10:55 pm Mangalore Correspondent ಕರಾವಳಿ
ಮಂಗಳೂರು, ಜುಲೈ 27: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಕಾಳಿಂಗ ಸರ್ಪಗಳು ಮತ್ತಿತರ ಪ್ರಾಣಿಗಳಿಗೆ ಮೈಕ್ರೋ ಚಿಪ್ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ. ಪಕ್ಷಿಗಳು ಮತ್ತು ಸರೀಸೃಪಗಳು ಸೇರಿದಂತೆ 1,200ಕ್ಕೂ ಹೆಚ್ಚು ಕಾಡು ಪ್ರಾಣಿಗಳನ್ನು ಹೊಂದಿರುವ ದೇಶದ ಪ್ರಮುಖ ಪ್ರಾಣಿ ಸಂಗ್ರಹಾಲಯಗಳಲ್ಲಿ ಪಿಲಿಕುಳ ಜೈವಿಕ ಉದ್ಯಾನವನ ಒಂದಾಗಿದೆ.
ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಎಚ್.ಜೆ ಭಂಡಾರಿ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು ಒಂದು ವರ್ಗದ ಪ್ರಾಣಿಗಳು ಬರಿಗಣ್ಣಿಗೆ ಸಾಮಾನ್ಯವಾಗಿ ಒಂದೇ ರೀತಿ ಕಾಣಿಸುತ್ತವೆ. ಅವುಗಳನ್ನು ಸುಲಭವಾಗಿ ಪ್ರತ್ಯೇಕಿಸಲು ಸಾಧ್ಯವಾಗಿಸುವ ನಿಟ್ಟಿನಲ್ಲಿ ಚಿಪ್ ಆಳವಡಿಸಲಾಗುತ್ತಿದೆ. ಪಂಜರದಲ್ಲಿ ಪ್ರಾಣಿಗಳ ತಳಿ ಸಂವರ್ಧನೆ ಮಾಡುವ ಸಂದರ್ಭದಲ್ಲಿ ಒಂದೇ ವಂಶವಾಹಿಗಳಲ್ಲಿ ತಳಿ ಸಂವರ್ಧನೆಯಾಗುವುದನ್ನು ತಡೆಯಲು ಚಿಪ್ ಅಳವಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ವನ್ಯಪ್ರಾಣಿಗಳ ಅಧ್ಯಯನದ ಜೊತೆಗೆ ಪ್ರಾಣಿಸಂಕುಲದ ಸಂರಕ್ಷಣೆ ಪಿಲಿಕುಳ ಜೈವಿಕ ಉದ್ಯಾನದ ಉದ್ದೇಶವಾಗಿರುವುದರಿಂದ, ಪಂಜರದಲ್ಲಿಯೇ ಕಾಳಿಂಗಸರ್ಪ ಹಾಗೂ ಇತರ ಹಲವು ಪ್ರಾಣಿಗಳ ತಳಿ ಸಂವರ್ಧನೆಯನ್ನೂ ಮಾಡಲಾಗುತ್ತಿದೆ. ಹಾವುಗಳಷ್ಟೇ ಅಲ್ಲ, ಕಾಡು ಪ್ರಾಣಿಗಳಿಗೂ ಮೈಕ್ರೊಚಿಪ್ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಮೈಕ್ರೋಚಿಪ್ ಹೊಂದಿರುವ ಸಣ್ಣ ಎಲೆಕ್ಟ್ರಾನಿಕ್ ಉಪಕರಣವೊಂದನ್ನು ಪ್ರಾಣಿಯ ಚರ್ಮದಡಿಯಲ್ಲಿ ಅಳವಡಿಸಲಾಗುವುದು. ಇದಕ್ಕೆ ಸ್ಕ್ಯಾನರ್ ಸಹಿತವಾದ ಒಂದು ಸಣ್ಣ ರಿಸೀವರ್ ಇರುತ್ತದೆ. ಪ್ರತಿ ಪ್ರಾಣಿಯ ಹೆಸರು, ಟ್ರಾನ್ಸ್‌ಪಾಂಡರ್ ಸಂಖ್ಯೆ ಹಾಗೂ ವಂಶವಾಹಿಯು ಅದರಲ್ಲಿ ದಾಖಲಾಗಿರುತ್ತದೆ ಎಂದು ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ಮೃಗಾಲಯದಲ್ಲಿರುವ ಹುಲಿ, ಸಿಂಹ, ಚಿರತೆ ಹಾಗೂ ಇತರ ಪ್ರಾಣಿಗಳಿಗೂ ಮೈಕ್ರೋ ಚಿಪ್ ಅಳವಡಿಸುವ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಒಂದು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಪ್ರಾಣಿಗಳಲ್ಲಿ ಅಳವಡಿಸಲಾಗುವ ಮೈಕ್ರೊ ಚಿಪ್‌ಗಳನ್ನು ವಿದೇಶದಿಂದ ತರಿಸಲಾಗಿದೆ. ಹಾವುಗಳು ಮಾತ್ರವಲ್ಲದೇ ಕತ್ತೆ ಕಿರುಬ, ಕಾಡು ನಾಯಿ, ಭಾರತೀಯ ಬೂದು ತೋಳ, ಕರಡಿ, ಮೊಸಳೆ ಮುಂತಾದ ಆಯ್ದ ತಳಿಯ ಪ್ರಾಣಿಗಳಲ್ಲೂ ಚಿಪ್ ಅಳವಡಿಸಲಾಗುವುದು.
ಈ ಸಂದರ್ಭದಲ್ಲೇ ಲಿಂಗಪತ್ತೆ ಉಪಕರಣವನ್ನು ಬಳಸಿ ಆಯಾ ಪ್ರಾಣಿಯ ಲಿಂಗವನ್ನು ಗುರುತಿಸುವುದು, ಪ್ರಾಣಿಯ ನಿಖರವಾದ ಉದ್ದ, ಅಗಲ, ಎತ್ತರಗಳನ್ನು ದಾಖಲಿಸುವ ಕಾರ್ಯವೂ ನಡೆಯಲಿದೆ. ಹಕ್ಕಿಗಳ ಲಿಂಗ ಪತ್ತೆ ಮಾಡಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.
Pilikula Biological Park, one of the major zoos in India with more than 1,200 wild animals including mammals, birds and reptiles has undertaken captive conservation breeding of King Cobra and other animals. The main objectives of the zoo include conservation, education and scientific research of wild animals. Now the park has taken up the implanting of microchips in wild animals and reptiles.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
29-07-25 09:56 pm
Mangalore Correspondent
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
29-07-25 08:54 pm
HK News Desk
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm