Mangalore, BJP, protest: ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದಾಳಿ ; ಮಂಗಳೂರಿನಲ್ಲಿ ಮಾನವ ಸರಪಳಿ, ಪ್ರತಿಭಟನೆ

12-08-24 10:53 pm       Mangalore Correspondent   ಕರಾವಳಿ

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿಯನ್ನು ಖಂಡಿಸಿ ಹಿಂದು ಸಂಘಟನೆಗಳ ವತಿಯಿಂದ ಮಂಗಳೂರಿನಲ್ಲಿ ಬೃಹತ್ ಮಾನವ ಸರಪಳಿ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಮಂಗಳೂರು, ಆಗಸ್ಟ್ 12: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿಯನ್ನು ಖಂಡಿಸಿ ಹಿಂದು ಸಂಘಟನೆಗಳ ವತಿಯಿಂದ ಮಂಗಳೂರಿನಲ್ಲಿ ಬೃಹತ್ ಮಾನವ ಸರಪಳಿ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಹಂಪನಕಟ್ಟೆಯ ಕ್ಲಾಕ್ ಟವರ್ ರಸ್ತೆಯ ಎರಡೂ ಬದಿಯಲ್ಲಿ ಬಿಜೆಪಿ ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ಲೇಕಾರ್ಡ್ ಹಿಡಿದು ನಿಂತು ಹಿಂದುಗಳ ಮೇಲಿನ ದಾಳಿಯನ್ನು ಖಂಡಿಸಿದರು. ಹಿಂದುಗಳ ಮೇಲೆ ದಾಳಿ ಮಾಡುವುದಾದರೆ, ದೇಶ ವಿಭಜನೆ ಯಾಕೆ ಬೇಕಿತ್ತು ಎಂದು ಪ್ರಶ್ನಿಸಿದರು.

ಮಹಿಳಾ ಕಾರ್ಯಕರ್ತರು ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು. ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸತೀಶ್ ಪ್ರಭು, ಜಗದೀಶ ಶೇಣವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶೇಖ್ ಹಸೀನಾ ಪದತ್ಯಾಗದ ಬಳಿಕ ಬಾಂಗ್ಲಾದಲ್ಲಿ ದೇಶಾದ್ಯಂತ ಹಿಂದುಗಳ ಮೇಲೆ ದಾಳಿ ನಡೆದಿದ್ದು, ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಹಿಂದುಗಳ ಉದ್ಯಮ ಸಂಸ್ಥೆಗಳು, ಕಟ್ಟಡಗಳ ಮೇಲೂ ದಾಳಿಯಾಗಿದೆ. ಶೇಖ್ ಹಸೀನಾ ಪಕ್ಷದ ಹಿಂದು ನಾಯಕರನ್ನು ಕೊಲ್ಲಲಾಗಿದೆ.

Attack on Hindus in Bangladesh condemned by BJP in mangalore. bjp supporters on Monday staged a silent demonstration here condemning the attack on Hindus in Bangladesh.