ಬ್ರೇಕಿಂಗ್ ನ್ಯೂಸ್
09-12-24 11:05 pm Udupi Correspondent ಕರಾವಳಿ
ಕುಂದಾಪುರ, ಡಿ.9: ಗೋವಾಕ್ಕೆ ಬೈಕ್ ರೈಡಿಂಗ್ ಹೋಗಿ ಹಿಂತಿರುಗುತ್ತಿದ್ದ ಮಂಗಳೂರಿನ ವ್ಯಕ್ತಿಯೊಬ್ಬರು ಟ್ಯಾಂಕರ್ ಡಿಕ್ಕಿಯಾಗಿ ಮೃತಪಟ್ಟ ಘಟನೆ ಗಂಗೊಳ್ಳಿ ಠಾಣೆ ವ್ಯಾಪ್ತಿಯ ಮುಳ್ಳಿಕಟ್ಟೆ ಎಂಬಲ್ಲಿನ ಆರಾಟೆ ಸೇತುವೆ ಬಳಿ ನಡೆದಿದೆ.
ಮಂಗಳೂರಿನ ಕೆಬಿ ಯುವರಾಜ್ ಬಳ್ಳಾಲ್ ಅವರ ಪುತ್ರ ರಂಜಿತ್ ಬಳ್ಳಾಲ್ (59) ಮೃತ ವ್ಯಕ್ತಿ. ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ರಂಜಿತ್ ಬಳ್ಳಾಲ್ ಬೈಕ್ ಮೇಲಿನ ಕ್ರೇಜಿನಿಂದಾಗಿ ಮಂಗಳೂರಿನಿಂದ ಹತ್ತು ದಿನಗಳ ಹಿಂದೆ ಗೋವಾಕ್ಕೆ ಬೈಕಿನಲ್ಲಿ ತೆರಳಿದ್ದರು. ಸೋಮವಾರ ಸಂಜೆ ತನ್ನ ಬಿಎಂಡಬ್ಲ್ಯು ಬೈಕಿನಲ್ಲಿ ಮಂಗಳೂರಿನತ್ತ ಮರಳುತ್ತಿದ್ದಾಗ, ಗಂಗೊಳ್ಳಿಯ ಆರಾಟೆ ಸೇತುವೆ ಬಳಿ ಅಪಘಾತ ನಡೆದಿದೆ. ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಒಂದೇ ರಸ್ತೆಯಲ್ಲಿ ಎರಡೂ ಕಡೆಯ ವಾಹನಗಳನ್ನು ಬಿಡಲಾಗುತ್ತಿದೆ. ಇದರ ಬಗ್ಗೆ ಅರಿವಿರದ ರಂಜಿತ್ ಅವರು ನೇರವಾಗಿ ಓವರ್ ಟೇಕ್ ಮಾಡಿಕೊಂಡು ಬರುತ್ತಿದ್ದಾಗ ಮುಂದಿನಿಂದ ಬಂದ ಗ್ಯಾಸ್ ತುಂಬಿದ ಟ್ಯಾಂಕರ್ ಡಿಕ್ಕಿಯಾಗಿದೆ.



ಆಧುನಿಕ ಮಾದರಿಯ ಹೆಲ್ಮೆಟ್ ಹಾಕಿದ್ದರೂ, ಡಿಕ್ಕಿಯ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ರಂಜಿತ್ ಬಳ್ಳಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರಾಟೆ ಸೇತುವೆಯಲ್ಲಿ ಎರಡು ವಾರದಿಂದ ಹೆದ್ದಾರಿ ಕಾಮಗಾರಿಯಿಂದಾಗಿ ಸರಣಿ ಅಪಘಾತಗಳು ನಡೆಯುತ್ತಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ನಿರ್ವಹಿಸುತ್ತಿರುವ ಐಆರ್ ಬಿ ಇನ್ ಫ್ರಾ ಸ್ಟ್ರಕ್ಚರ್ಸ್ ನವರ ನಿರ್ಲಕ್ಷ್ಯದಿಂದಾಗಿ ಅಪಘಾತ ಆಗಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರ ಅಪಘಾತ, ಸಾವು- ನೋವು ಆಗುತ್ತಿದ್ದರೂ ಅಧಿಕಾರಿಗಳು ಅಸಡ್ಡೆ ತೋರಿದ್ದಾರೆ.
A bike rider lost his life on the spot after colliding with a gas transport vehicle near Arate Bridge on National Highway 66 close to Mullikatte. The deceased has been identified as Ranjith Ballal, son of K B Yuvaraj Ballal, originally from Mangaluru and currently residing in Bengaluru.
10-06-26 10:40 pm
HK News Desk
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
10-06-26 10:03 pm
HK News Staffer
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
10-06-26 01:48 pm
HK News Staffer
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm