ಬ್ರೇಕಿಂಗ್ ನ್ಯೂಸ್
25-01-25 05:03 pm Mangalore Correspondent ಕರಾವಳಿ
ಉಳ್ಳಾಲ, ಜ.25: ಕೋಟೆಕಾರು ಬ್ಯಾಂಕ್ ದರೋಡೆಯ ಪ್ಲ್ಯಾನ್ ರೂಪಿಸಿದ್ದ ಪ್ರಮುಖ ಆರೋಪಿಗಳಿಬ್ಬರು ಇನ್ನೂ ಭೂಗತರಾಗಿದ್ದು, ಪ್ರಕರಣದ ನಾಲ್ವರು ಆರೋಪಿಗಳನ್ನ ಬಂಧಿಸಿ ದರೋಡೆಗೈದ 18.250 ಕೆ.ಜಿ ಚಿನ್ನಾಭರಣವನ್ನ ಜಪ್ತಿಗೊಳಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ದರೋಡೆ ಪ್ರಕರಣವನ್ನ ವಾರದೊಳಗೆ ಭೇದಿಸಿದ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್, ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ಮತ್ತು ಸಮರ್ಪಕ ತನಿಖೆಗೆ ಆದೇಶಿಸಿದ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯ ಮಾತ್ರವಲ್ಲದೆ ದೇಶದಲ್ಲೇ ಸುದ್ದಿಯಾಗಿದ್ದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣವು ಮಂಗಳೂರು ಪೊಲೀಸ್ ಆಯುಕ್ತರಿಗೆ ತೀರಾ ತಲೆನೋವು ತಂದಿತ್ತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಪ್ರವಾಸದಲ್ಲಿದ್ದ ವೇಳೆಯೇ ದರೋಡೆ ನಡೆದುದರಿಂದ ಪೊಲೀಸ್ ಕಮೀಷನರ್ ಮುಖ್ಯಮಂತ್ರಿಗಳಿಂದಲೇ ಮಂಗಳಾರತಿ ಎತ್ತಿಸಿಕೊಂಡಿದ್ದರು. ದರೋಡೆಗೈದ ಆರೋಪಿಗಳ ಸಣ್ಣ ಸುಳಿವೂ ಸಿಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಕರಣವನ್ನ ಬೆನ್ನಟ್ಟಿದ್ದ ಎಸಿಪಿಗಳಾದ ಮನೋಜ್ ಕುಮಾರ್ ಮತ್ತು ಧನ್ಯಾ ನಾಯಕ್ ಅವರ ನೇತೃತ್ವದ ತಂಡಗಳು ಹೊರ ರಾಜ್ಯಗಳಿಗೆ ತೆರಳಿ ನಿದ್ದೆಗೆಟ್ಟು ಕರ್ತವ್ಯ ನಿರ್ವಹಿಸಿದರ ಫಲವಾಗಿ ವಾರದ ಅಂತರದಲ್ಲೇ ನಾಲ್ಕು ಆರೋಪಿಗಳು ಬಂಧಿತರಾಗಿ ಕಳವಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಜಪ್ತಿಯಾಗಿವೆ.
ಆರಂಭದಲ್ಲಿ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಆರೋಪಿಗಳಾದ ಮುರುಗಂಡಿ ದೇವರ್, ಜೋಶುವಾ ರಾಜೇಂದ್ರನ್ ಮತ್ತು ಕಣ್ಣನ್ ಮಣಿಯನ್ನ ಮಂಗಳೂರು ಪೊಲೀಸರು ಬಂಧಿಸಿ ದರೋಡೆಗೈದ ಎರಡು ಕೆ.ಜಿ ಚಿನ್ನ, ಮಾರಕಾಯುಧಗಳನ್ನ ವಶಕ್ಕೆ ಪಡೆದಿದ್ದರು. ಇದೀಗ ಪ್ರಕರಣದ ಆರೋಪಿ ಮುರುಗಂಡಿ ದೇವರ್ ತಂದೆ ಷಣ್ಮುಗಂ ಸುಂದರಂ ಎಂಬಾತನನ್ನ ಮಂಗಳೂರು ಪೊಲೀಸರು ತಮಿಳುನಾಡಲ್ಲಿ ಬಂಧಿಸಿದ್ದು ಆತನ ಮನೆಯಲ್ಲಿ ಬಚ್ಚಿಟ್ಟಿದ್ದ 16.250 ಕೆ.ಜಿ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿ ಷಣ್ಮುಗ ಸುಂದರಂ ನನ್ನ ಪೊಲೀಸರು ತಮಿಳುನಾಡಿನಿಂದ ಮಂಗಳೂರಿಗೆ ಕರೆತರುತ್ತಿದ್ದಾರೆ.
ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳು ಭೂಗತ
ದರೋಡೆಯಲ್ಲಿ ಪಾಲ್ಗೊಂಡು ಕೃತ್ಯಕ್ಕೆ ಪ್ಲ್ಯಾನ್ ರೂಪಿಸಿದ್ದ ಮುಂಬೈನ ಇನ್ನಿಬ್ಬರು ತಮಿಳಿಗರ ಬಗ್ಗೆ ಪೊಲೀಸರಿಗೆ ಸ್ಪಷ್ಟ ಅರಿವಿದೆ. ಆದರೆ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಕೃತ್ಯದಲ್ಲಿ ಪಾಲ್ಗೊಂಡಿದ್ದ ಜೋಶುವಾ ರಾಜೇಂದ್ರನ್ ,ಕಣ್ಣನ್ ಮಣಿ, ಮುರುಗಂಡಿ ದೇವರ್ ನನ್ನ ಕೃತ್ಯ ನಡೆಸಲು ಕರೆತಂದಿದ್ದ ಆ ಇಬ್ಬರು ಪ್ರಮುಖ ಆರೋಪಿಗಳು ದರೋಡೆಯ ಬಳಿಕ ರೈಲಲ್ಲಿ ಪ್ರಯಾಣಿಸಿದ್ದು, ಅವರ ಸುಳಿವು ಇನ್ನೂ ಸಿಕ್ಕಿಲ್ಲ. ದರೋಡೆ ಕೃತ್ಯಕ್ಕೆ ಸ್ಥಳೀಯರ ಕೈವಾಡವೂ ಇದ್ದು ಪೊಲೀಸರ ಸಮರ್ಪಕ ತನಿಖೆಯಲ್ಲಷ್ಟೆ ಸತ್ಯಾಂಶ ಹೊರ ಬೀಳಲಿದೆ.
ಸ್ಪೀಕರ್ ಖಾದರ್, ಎಸಿಪಿಗಳಿಗೆ ಅಭಿನಂದನೆ
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣವನ್ನ ವಾರದ ಅಂತರದಲ್ಲೇ ಭೇದಿಸಿ ಪ್ರಮುಖ ಆರೋಪಿಗಳನ್ನ ಬಂಧಿಸಿದಲ್ಲದೆ, ದರೋಡೆಗೈದ ಚಿನ್ನಾಭರಣಗಳನ್ನ ವಶಕ್ಕೆ ಪಡೆದ ಎಸಿಪಿಗಳಾದ ಮನೋಜ್ ಕುಮಾರ್ ಮತ್ತು ಧನ್ಯಾ ನಾಯಕ್ ನೇತೃತ್ವದ ತಂಡ ಮತ್ತು ತನಿಖೆ ನಡೆಸಲು ಇಲಾಖೆಗೆ ಆದೇಶ ನೀಡಿ ಸಹಕರಿಸಿದ ಸ್ಪೀಕರ್ ಯು.ಟಿ.ಖಾದರ್, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನ ಕೋ.ವ್ಯ.ಸೇ.ಸ. ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕೋಟೆಕಾರು ಕೆಳಗಿನ ಗುತ್ತು ಮತ್ತು ನಿರ್ದೇಶಕರ ತಂಡವು ಶನಿವಾರ ಭೇಟಿ ಮಾಡಿ ಅಭಿನಂದಿಸಿದೆ.
Mangalore Kotekar bank robbery, Police commissioner, ACP and speaker khader felicitated by kotekar bank comittee members for solving the case and also for recovering the lost gold.
26-01-25 10:57 pm
HK News Desk
Actor Anant Nag award: ಹಿರಿಯ ನಟ ಅನಂತನಾಗ್ ಪದ್...
25-01-25 11:10 pm
ಕ್ಯಾಥೆಡ್ರಲ್ ಸೊಸೈಟಿಗೆ ಅಕ್ರಮ ಸೈಟ್ ಹಂಚಿಕೆ ; ಮುಡಾ...
25-01-25 11:00 pm
Padma Shri awards 2025, Karnataka: ಪದ್ಮಶ್ರೀ ಪ...
25-01-25 09:58 pm
Vijayendra, B L Santosh: ರಾಜ್ಯ ಬಿಜೆಪಿ ಬಣ ಸಂಘರ...
25-01-25 06:17 pm
26-01-25 09:37 pm
HK News Desk
ಅಕ್ಬರ್, ಔರಂಗಜೇಬ್ ಬಗ್ಗೆ ಓದುತ್ತೇವೆ, ನಮ್ಮದೇ ವೀರರ...
26-01-25 01:20 pm
ಧ್ವನಿವರ್ಧಕಗಳ ಬಳಕೆ ಯಾವುದೇ ಧರ್ಮದ ಅತ್ಯಗತ್ಯ ಭಾಗವಲ...
25-01-25 11:48 am
ಪರಾಟ ತಿಂದು ಸಿಕ್ಕಿಬಿದ್ದ ನಟ ಸೈಫ್ ಆಲಿ ಖಾನ್ ಹಲ್ಲೆ...
21-01-25 11:02 pm
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
26-01-25 08:18 pm
Mangalore Correspondent
Journalist Guruvappa Balepuni, Mangalore: 'ಬಡ...
26-01-25 07:51 pm
Mangalore, Crime, Court: 2016ರಲ್ಲಿ ವೃದ್ಧ ದಂಪತ...
25-01-25 07:00 pm
Anand Kateel, Yakshagana, Accident Mangalore:...
25-01-25 05:05 pm
Mangalore Kotekar bank robbery, News Update:...
25-01-25 05:03 pm
26-01-25 11:22 pm
Mangaluru Correspondent
Mysuru Prostitution, Crime: ಮೈಸೂರಿನಲ್ಲಿ ಥೈಲ್ಯ...
26-01-25 06:08 pm
Karwar Court, Rape, Crime: ಮದುವೆಯಾಗುವುದಾಗಿ ನಂ...
26-01-25 05:07 pm
St Joseph Vaz church Mudipu, Theft, Mangalore...
25-01-25 10:57 pm
Kotekar bank robbery, Gold recovery, Update:...
24-01-25 10:27 pm