ಬ್ರೇಕಿಂಗ್ ನ್ಯೂಸ್
31-01-25 10:49 pm Mangalore Correspondent ಕರಾವಳಿ
ಮೈಸೂರು, ಜ.31: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಸೈಟ್ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಸ್ನೇಹಮಯಿ ಕೃಷ್ಣ ಪರವಾಗಿ ಶಕ್ತಿ ತುಂಬಲು ದುಷ್ಟಶಕ್ತಿ ಪೂಜೆ ನಡೆಸಿದ್ದಾರೆಂದು ಹೇಳಲಾದ ಮಂಗಳೂರಿನ ಪ್ರಸಾದ್ ಅತ್ತಾವರ ಬಗ್ಗೆ ಸ್ವತಃ ಸ್ನೇಹಮಯಿ ಕಿಡಿ ನುಡಿಯಾಡಿದ್ದಾರೆ. ಯಾರೋ ಇಬ್ಬರು ನನ್ನಲ್ಲಿಗೆ ಬಂದು ಸಿಬಿಐ ಕೇಸ್ ಹಿಂಪಡೆಯಲು ಹೇಳಿ ಕೋಟಿ ಕೋಟಿ ಆಮಿಷ ಒಡ್ಡಿದ್ದರು. ನಮ್ಮ ಬಾಸ್ ಮಂಗಳೂರಿನಲ್ಲಿದ್ದಾರೆ ಎಂದಿದ್ದರು. ಅದು ಈಗ ನಿಜವಾಗಿದೆ ಎಂದು ಸ್ನೇಹಮಯಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಇತ್ತೀಚೆಗೆ ಮಸಾಜ್ ಪಾರ್ಲರ್ ದಾಳಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರಾಮಸೇನೆಯ ಮುಖಂಡ ಪ್ರಸಾದ್ ಅತ್ತಾವರ ಎಂಬವರ ಫೋನ್ ಪರಿಶೀಲಿಸಿದಾಗ ವಾಮಾಚಾರದ ಬಗ್ಗೆ ಪತ್ತೆಯಾಗಿತ್ತು. ಸ್ನೇಹಮಯಿ ಮತ್ತು ಗಂಗರಾಜು ಫೋಟೊ ಇಟ್ಟು ರಕ್ತತರ್ಪಣ ಮಾಡಿರುವ ಫೋಟೊ, ವಿಡಿಯೋ ಇದ್ದುದರಿಂದ ಸ್ನೇಹಮಯಿ ಪರವಾಗಿ ವಾಮಾಚಾರ ನಡೆಸಲಾಗಿದೆ ಎಂದು ಪೊಲೀಸರು ಕೇಸು ದಾಖಲಿಸಿದ್ದರು. ಈ ವಿಷಯ ಸುದ್ದಿಯಾಗುತ್ತಿದ್ದಂತೆ ಸ್ನೇಹಮಯಿ ಹೇಳಿಕೆ ನೀಡಿದ್ದಾರೆ.

"ನನ್ನ ಮತ್ತು ಗಂಗರಾಜು ಅವರ ಫೋಟೋ ಇಟ್ಟು, ಪ್ರಾಣಿಗಳ ಬಲಿಕೊಟ್ಟು ವಾಮಾಚಾರ ಮಾಡಿರುವುದು ಕಂಡುಬಂದಿದೆ. ಇದರ ಜೊತೆ ನನ್ನನ್ನು ಭೇಟಿ ಮಾಡಿ ಆಮಿಷವೊಡ್ಡಿದ್ದ ಹರ್ಷ ಮತ್ತು ಶ್ರೀನಿಧಿ ಅವರ ಹೆಸರನ್ನು ಚೀಟಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೆಲ್ಲ ನೋಡಿದಾಗ ಇದರ ಹಿಂದೆ ಏನೋ ದೊಡ್ಡ ಸಂಚು ರೂಪಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಡಿ.9ರಂದು ಆ ಪೂಜೆಗಳು ನಡೆದಿವೆ, ಡಿ.13ರಂದು ಹರ್ಷ ಮತ್ತು ಶ್ರೀನಿಧಿ ಅವರು ನನ್ನನ್ನು ಭೇಟಿ ಮಾಡಿದ್ದರು. ಮುಡಾ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಬೇಕು ಎಂದು ಸಲ್ಲಿಸಿರುವ ಅರ್ಜಿಯನ್ನು ದಯವಿಟ್ಟು ವಾಪಸ್ ತೆಗೆದುಕೊಳ್ಳಿ. ನಿಮಗೆ ಎಷ್ಟು ದುಡ್ಡು ಬೇಕೋ ಅಷ್ಟು ಕೊಡುತ್ತೇವೆ ಎಂದು ಅವರು ಹೇಳಿದ್ದರು.
ಇದರ ಜೊತೆಗೆ ನನ್ನ ಮಗನ ಜೊತೆ ಮಾತನಾಡಿ, ನಮ್ಮ ಬಾಸ್ ಮಂಗಳೂರಿನಲ್ಲಿದ್ದಾರೆ ಎಂದು ಅತ್ತಾವರ ಅವರ ಫೋಟೋ ತೋರಿಸಿ, ಇವರು ಹೇಗೆ ಹೇಳುತ್ತಾರೋ ಹಾಗೆ ನಾವು ಕೇಳುತ್ತೇವೆ. ಅವರೇ ನೀವು ಹೋಗಿ ಕೆಲಸ ಆಗುತ್ತದೆ ಎಂದು ಹೇಳಿ ಕಳುಹಿಸಿದ್ದರು ಎಂದು ಹೇಳಿದ್ದರು. ಇದರಲ್ಲಿ ಸಾಕಷ್ಟು ಅನುಮಾನಾಸ್ಪದ ಸಂಗತಿಗಳು ಕಂಡು ಬಂದಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಇದರ ಹಿಂದೆ ಯಾರಿದ್ದಾರೆ, ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ.
ಘಟನೆ ಸಂಬಂಧ ಈಗಾಗಲೇ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ನನ್ನ ಬಳಿ ಇರುವ ಸಾಕ್ಷಿಗಳನ್ನು ಪೊಲೀಸರಿಗೆ ನೀಡುತ್ತೇನೆ ಎಂದು ಸ್ನೇಹಮಯಿ ತಿಳಿಸಿದ್ದಾರೆ.
Mangalore Prasad attavar blackmagic case, RTI Snehamayi Krishna alleges of offering crores of money to take back muda case. Speaking to the media persons at Mysuru Snehamayi said two of prasad attavar aides forced him to return the case back. Videos of animal sacrifice have been found on the mobile phone of Ram Sene leader Prasad Attavar, who was arrested in connection with the vandalism at a unisex salon near KSRTC bus stop, Bejai in the city.
25-11-25 09:49 pm
HK News Desk
DK Shivakumar: ಮುಖ್ಯಮಂತ್ರಿ ಬದಲಾವಣೆ ನಾಲ್ಕು ಜನರ...
25-11-25 07:58 pm
ವಿಂಜೋ ಗೇಮಿಂಗ್ ಸಂಸ್ಥೆ ಮೇಲೆ ಇಡಿ ದಾಳಿ ; 527 ಕೋಟಿ...
25-11-25 06:58 pm
ಮಂಗಳೂರಿನ ಧನಲಕ್ಷ್ಮಿ ಪೂಜಾರಿ ಪ್ರತಿನಿಧಿಸಿದ ಮಹಿಳಾ...
25-11-25 02:18 pm
ಕಾಶ್ಮೀರಿ ಪಂಡಿತರಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ...
25-11-25 12:19 pm
25-11-25 04:30 pm
HK News Desk
ಚೆನ್ನೈ ; ಎರಡು ಖಾಸಗಿ ಬಸ್ಗಳ ನಡುವೆ ಅಪಘಾತ, 6 ಮಂದ...
24-11-25 10:04 pm
ಬಾಲಿವುಡ್ ಚಿತ್ರರಂಗದ ದಂತಕಥೆ, 'ಹೀ ಮ್ಯಾನ್' ಖ್ಯಾತ...
24-11-25 03:37 pm
Explosives Gelatin Sticks, High Alert in Utta...
23-11-25 09:21 pm
ದುಬೈ ಏರ್ ಶೋನಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ಪತನ...
21-11-25 06:10 pm
25-11-25 10:51 pm
Udupi Correspondent
ಪುಸ್ತಕ ಮೇಳದಲ್ಲಿ ಸಾಹಿತಿಗಳ ಗೌರವಕ್ಕಾಗಿ 25 ಸಾವಿರದ...
25-11-25 10:07 pm
ಕ್ಯಾಂಪ್ಕೋ ಆಡಳಿತ ಮಂಡಳಿಗೆ ಚುನಾವಣೆ ; ಸಹಕಾರ ಭಾರತಿ...
25-11-25 09:53 pm
ಧರ್ಮಸ್ಥಳ ಪ್ರಕರಣ ; ಮೂರು ತಿಂಗಳ ಜೈಲುವಾಸದ ಬಳಿಕ ಚಿ...
24-11-25 10:08 pm
ಪುತ್ತೂರಿನಲ್ಲಿ ಜವಾಬ್ದಾರಿ ನೀಡಿದರೆ ಅಭ್ಯರ್ಥಿ ಯಾರಾ...
24-11-25 08:41 pm
25-11-25 05:03 pm
HK News Desk
ಆನ್ಲೈನ್ನಲ್ಲಿ ಅಧಿಕ ಲಾಭದ ಆಸೆಗೆ ಬಿದ್ದ ಹೊನ್ನಾವರ...
24-11-25 08:37 pm
Bajpe Yedapadavu Crime, Mangalore: ಎಡಪದವು ಬಳಿ...
24-11-25 08:37 pm
ಹೊಸಕೋಟೆ ಪಾಳುಬಿದ್ದ ಮನೆಯಲ್ಲಿ ಸಿಕ್ಕಿತ್ತು ಕೋಟಿ ಕೋ...
23-11-25 07:17 pm
Bangalore Atm Van Robbery, Arrest: ಮೆಗಾ ದರೋಡೆ...
22-11-25 07:55 pm