ಬ್ರೇಕಿಂಗ್ ನ್ಯೂಸ್
08-02-25 10:46 pm Mangalore Correspondent ಕರಾವಳಿ
ಮಂಗಳೂರು, ಫೆ.8: ಐಟಿ ಸೊಲ್ಯುಶನ್ಸ್ ಸಂಸ್ಥೆ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರದಲ್ಲಿ ಉದ್ಯೋಗ ಕ್ರಾಂತಿಯನ್ನೇ ಸೃಷ್ಟಿಸಲು ಮುಂದಾಗಿದೆ. ಕರ್ನಾಟಕ ರಾಜ್ಯದಲ್ಲಿ ಪ್ರತಿ ತಾಲೂಕುವಾರು ನೆಲೆಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿಯನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಮುಂದಾಗಿದೆ.
2015ರಲ್ಲಿ ಕಂಪ್ಯೂಟರ್ ಸೇವೆಯೊಂದಿಗೆ ಆರಂಭಗೊಂಡು 2019ರಲ್ಲಿ ಕಾರ್ಪೋರೇಟ್ ಜಗತ್ತಿಗೆ ಕಾಲಿಟ್ಟಿದ್ದ ಯತಿಕಾರ್ಪ್ ಸಂಸ್ಥೆ ಹಲವಾರು ಸರ್ಕಾರಿ ಹಾಗೂ ಎಂಎನ್ ಸಿ ಕಂಪನಿಗಳಿಗೆ ಸೇವೆ ನೀಡಿದ್ದಲ್ಲದೆ, ಪ್ರತಿಷ್ಠಿತ ಇಂಡಿಯನ್ ನೇವಿ, ಕೈಗಾ ಅಣು ಸ್ಥಾವರ, ಎಂಆರ್ ಪಿಎಲ್ ನಂತಹ ಕಂಪೆನಿಗಳಲ್ಲಿಯೂ ತಂತ್ರಜ್ಞಾನದ ಸೇವೆಯನ್ನು ನೀಡಿರುವ ಅನುಭವ ಹೊಂದಿದೆ. ಕಳೆದ ಮೂರು ವರ್ಷಗಳಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಜನಸಾಮಾನ್ಯರಿಗೂ ಎಐ ತಂತ್ರಜ್ಞಾನ ತಲುಪಿಸಲು ಮುಂದಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯಮಿಗಳು ಸೇರಿದಂತೆ 33 ಕ್ಷೇತ್ರಗಳಲ್ಲಿ ಉಪಯೋಗ ಆಗುವಂತೆ ಎಐ ತಂತ್ರಜ್ಞಾನ ಪರಿಚಯಿಸುತ್ತಿದೆ.
ಸಾವಿರಕ್ಕೂ ಹೆಚ್ಚು ಉದ್ಯೋಗ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ರಾಜ್ಯದಾದ್ಯಂತ ಜನಸಾಮಾನ್ಯರಿಗೆ ಪರಿಚಯಿಸುವ ಅತೀ ದೊಡ್ಡ ಯೋಜನೆಯಲ್ಲಿ ಯತಿಕಾರ್ಪ್ ಸಂಸ್ಥೆಯು ಯುವಕ/ಯುವತಿಯರಿಗೆ ಸಾವಿರಕ್ಕೂ ಹೆಚ್ಚು ಉದ್ಯೋಗದ ಆಫರ್ ನೀಡಿದೆ. ಸದ್ಯಕ್ಕೆ ಪ್ರತಿ ತಾಲೂಕಿನಲ್ಲಿ ನಾಲ್ವರಂತೆ, ಒಟ್ಟು 1020 ಮಂದಿಗೆ ಉದ್ಯೋಗದ ಆಫರ್ ನೀಡಿದ್ದು, ಆಯ್ಕೆಗಾಗಿ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಆಯ್ಕೆ ಶಿಬಿರ ನಡೆಸಲಾಗುವುದು ಎಂದು ಸಂಸ್ಥೆಯ ಸಿಇಓ ಯತೀಶ್ ಕೆ.ಎಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉದ್ಯೋಗಾಂಕ್ಷಿಗಳಿಗೆ ತಿಂಗಳಿಗೆ ರೂ.25 ಸಾವಿರದಿಂದ 30 ಸಾವಿರದ ವರೆಗೆ ವೇತನ ಆಫರ್ ಮಾಡಲಾಗಿದೆ. ಆಸಕ್ತರಿಗೆ ಆಯಾ ತಾಲೂಕು ಕೇಂದ್ರದಿಂದಲೇ ಕೆಲಸ ಮಾಡಬಹುದಾಗಿದೆ. ಪ್ರತಿ ತಾಲೂಕಿನಿಂದ ನಾಲ್ವರನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಮೊದಲ 6 ತಿಂಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಫೀಲ್ಡ್ ಕಾರ್ಯ ಮಾಡಬೇಕಾಗುತ್ತದೆ. ಫೀಲ್ಡ್ ನಲ್ಲಿ ಕೆಲಸ ನಿರ್ವಹಿಸಿ ಅನುಭವ ಗಳಿಸಿದ ಬಳಿಕ ಅವರನ್ನು ಸಂಸ್ಥೆಯ ಖಾಯಂ ಉದ್ಯೋಗಿಯಾಗಿ ನೇಮಿಸಲಾಗುತ್ತದೆ.
ಪ್ರತಿ ಜಿಲ್ಲೆಯಲ್ಲಿ ಆಯ್ಕೆ ಶಿಬಿರ
ಆಯ್ಕೆ ಪ್ರಕ್ರಿಯೆ ನಾಲ್ಕು ಹಂತಗಳಲ್ಲಿ ನಡೆಯಲಿದೆ. Aptitude test, ಗ್ರೂಪ್ ಡಿಸ್ಕಶನ್, ಟೆಕ್ನಿಕಲ್ ರೌಂಡ್ ಮತ್ತು ಕೊನೆಯಲ್ಲಿ ಎಚ್ ಆರ್ ರೌಂಡ್ ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇಮಕಾತಿಗಾಗಿ ಇದೇ ಫೆ.12ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಆಯ್ಕೆ ಶಿಬಿರ ನಡೆಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಫೆ.13ರಂದು ಮಣಿಪಾಲ ಯೂನಿವರ್ಸಿಟಿ ಆವರಣದ ವಾಣಿಜ್ಯ ವಿಭಾಗದಲ್ಲಿ ನಡೆಸಲಾಗುವುದು. ಇದಲ್ಲದೆ, ರಾಜ್ಯದಾದ್ಯಂತ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಆಯ್ಕೆ ಶಿಬಿರಗಳನ್ನು ನಡೆಸಲಾಗುವುದು ಎಂದು ಯತೀಶ್ ತಿಳಿಸಿದ್ದಾರೆ.
ಅಭ್ಯರ್ಥಿಗಳು ಈ ಲಿಂಕ್ ಮೂಲಕ ನೋಂದಣಿ ಮಾಡಿಕೊಂಡು ವಾಟ್ಸಾಪ್ ಮೂಲಕ ಆಯಾ ಜಿಲ್ಲೆಗಳ ಸಂದರ್ಶನದ ಮಾಹಿತಿಗಳನ್ನು ಪಡೆದುಕೊಳ್ಳಬಹುದು. (ಲಿಂಕ್: https://forms.gle/hCAfYmRnH2rtjWUv6 ) ದೂರವಾಣಿ ಸಂಖ್ಯೆ: 7349740777, ಇಮೇಲ್: career@yaticorp.com, ವೆಬ್‌ಸೈಟ್: www.yaticorp.com
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಪ್ರಮುಖರಾದ ಪೃಥ್ವಿರಾಜ್, ಕೃಪಾ ಪ್ರಭು, ಭೂಮಿಕಾ ಪೂಜಾರಿ, ಕಿರಣ್ ಸಿ.ಸಿ ಉಪಸ್ಥಿತರಿದ್ದರು.
Job offer in AI field by YatiCorp company in Mangalore, apply now. More than thousand job opportunities have been listed by the company. Intrested candidates can apply online.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm