ಬ್ರೇಕಿಂಗ್ ನ್ಯೂಸ್
12-02-25 06:05 pm Mangalore Correspondent ಕರಾವಳಿ
ಪುತ್ತೂರು, ಫೆ.12: ಕರ್ತವ್ಯ ನಿರತ ಮಹಿಳಾ ಎಸ್ಐಗೆ ದ್ವಿಚಕ್ರ ವಾಹನದ ಸವಾರನೊಬ್ಬ ಬೆದರಿಕೆ ಹಾಕಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಲು ಮುಂದಾದ ಘಟನೆ ಸಂಪ್ಯದಲ್ಲಿ ಪುತ್ತೂರು ಗ್ರಾಮಾಂತರ ಠಾಣೆ ಮುಂಭಾಗ ನಡೆದಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಎಸ್ಐ ಸುಷ್ಮಾ ಭಂಡಾರಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಸಂಪ್ಯ ಠಾಣೆ ಮುಂಭಾಗ ರಿಕ್ಷಾ ಚಾಲಕನಾಗಿ ವೃತ್ತಿ ನಡೆಸುವ, ಕಡಬ ತಾಲೂಕಿನ ಗೊಳಿತೊಟ್ಟು ಗ್ರಾಮದ ಸುಂದರ ಗೌಡ ಎಂಬವರ ಪುತ್ರ ಪ್ರತಾಪ್ ಗೌಡ (35) ಪ್ರಕರಣದ ಆರೋಪಿ. ಈತನ ವಿರುದ್ಧ ಈಗಾಗಲೇ ಮಂಗಳೂರಿನ ಕಾವೂರು ಠಾಣೆಯಲ್ಲಿ ಎರಡು ಪ್ರಕರಣ ಹಾಗೂ ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ತೊಡಗಿಸಿರುವ ಈತನಿಗೆ ಪುತ್ತೂರು ಮೂಲದ ಜನಪ್ರತಿನಿಧಿಯೊಬ್ಬರ ಕೃಪಕಟಾಕ್ಷ ಇದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಜನಪ್ರತಿನಿಧಿಯ ಬೆಂಬಲದಿಂದಲೇ ಈತ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು , ಉಪ ನಿರೀಕ್ಷಕರಿಗೆ ಆವಾಜ್ ಹಾಕುವ ಮಟ್ಟಕ್ಕೆ ಬೆಳೆದಿರುವುದಾಗಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಫೆ.9ರಂದು ಸಂಜೆ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕಿ ಸುಷ್ಮಾ ಜಿ ಭಂಡಾರಿ ತಮ್ಮ ಸಿಬ್ಬಂದಿಗಳ ಜತೆ, ಸಂಪ್ಯ ಠಾಣೆ ಮುಂಭಾಗದ ಮಾಣಿ - ಮೈಸೂರು ಹೆದ್ದಾರಿಯಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ದ್ವಿಚಕ್ರ ವಾಹನ ಬಂದಿದ್ದು, ಹಿಂಬದಿ ಸವಾರ ಹೆಲ್ಮೆಟ್ ಧರಿಸಿರಲಿಲ್ಲ. ವಾಹನ ನಿಲ್ಲಿಸಿ ದಂಡ ಪಾವತಿಸುವಂತೆ ಸವಾರನಲ್ಲಿ ಪೊಲೀಸರು ತಿಳಿಸಿದ್ದರು. ಇದರಿಂದ ಸಿಟ್ಟುಗೊಂಡ ಹಿಂಬದಿ ಸವಾರ ಪ್ರತಾಪ್ ಗೌಡ ಪೊಲೀಸರ ಮೇಲೆಯೇ ಏರಿ ಹೋಗಿದ್ದಾನೆ.
ಮಹಿಳಾ ಪೊಲೀಸ್ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ನೀವು ಜನರಿಗೆ ಹೇಗೆ ಕೇಸ್ ಹಾಕುತ್ತೀರಿ.. ನಿಮ್ಮನ್ನು ನೋಡಿಕೊಳ್ಳುವುದಾಗಿ ಸವಾಲು ಹಾಕಿದ್ದು ಮುಷ್ಟಿ ತೋರಿಸಿ ಹಲ್ಲೆ ಮಾಡಲು ಮುಂದಾಗಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ವಿರುದ್ದ ಬಿಎನ್ ಎಸ್ ಸೆಕ್ಷನ್ 132ರಂತೆ ಪ್ರಕರಣ ದಾಖಲಿಸಲಾಗಿದೆ.
Puttur Police Women PSI abused for stopping two wheeler, case filed. Case has been filed against Pratap Gowda for his indicent behaviour with the police personal.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
12-02-25 06:05 pm
Mangalore Correspondent
Ullal News, Dr Kalladka Prabhakar Bhat: ಸಾಕು...
11-02-25 07:44 pm
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
12-02-25 06:23 pm
Bangalore Correspondent
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm