ಬ್ರೇಕಿಂಗ್ ನ್ಯೂಸ್
17-02-25 10:56 pm Mangalore Correspondent ಕರಾವಳಿ
ಮಂಗಳೂರು, ಫೆ.17: ಮಂಗಳೂರಿನಲ್ಲಿ ಉತ್ತುಂಗ ತಲುಪಿರುವ, ಸೇತುವೆ, ಡ್ಯಾಂಗಳನ್ನು ಅಪಾಯಕ್ಕೆ ಒಡ್ಡಿರುವ ಅಕ್ರಮ ಮರಳು ದಂಧೆಯ ಕುರಿತು ಜಿಲ್ಲಾ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು "ಗಣಿ ಮತ್ತು ಭೂ ವಿಜ್ಞಾನ ಇಲಾಖೆ" ಯ ಮಹಿಳಾ ಅಧಿಕಾರಿಯನ್ನು ಹೊಣೆಯಾಗಿಸಿ ತರಾಟೆಗೆ ತೆಗೆದುಕೊಂಡದ್ದನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಟೀಕಿಸಿದ್ದಾರೆ. ಸಚಿವರು ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುವಾಗ ಮಂಗಳೂರು ನಗರ ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಸಚಿವರಿಗೆ ಸಾಥ್ ನೀಡಿ ತಾವೂ ಒಂದಿಷ್ಟು ಆರೋಪಗಳನ್ನು ಹೊರಿಸಿದರು. ಒಟ್ಟು ಅನಿಷ್ಟಕ್ಕೆಲ್ಲ ಶನೀಶ್ವರನೆ ಕಾರಣ ಎಂಬಂತೆ ಎಲ್ಲರೂ ಸೇರಿ, ಗಣಿ ಇಲಾಖೆಯ ಅಧಿಕಾರಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ತಮ್ಮ ಕರ್ತವ್ಯ ಲೋಪವನ್ನು ಮರೆಮಾಚಲು ಯತ್ನಿಸಿದರು.
ಉಸ್ತುವಾರಿ ಸಚಿವರು ನಿಜಕ್ಕೂ, ಅಕ್ರಮ ಮರಳುಗಾರಿಕೆ ದಂಧೆಕೋರರ ಅಟ್ಟಹಾಸದಿಂದ ಆಕ್ರೋಶಿತರಾಗಿದ್ದರೆ, ಸಭೆಯಲ್ಲಿ ತನ್ನ ಜೊತಗೆ ವೇದಿಕೆಯ ಮೇಲಿದ್ದ ಐಪಿಎಸ್, ಐಎಎಸ್ ಅಧಿಕಾರಿಗಳನ್ನು ಹೊಣೆಯಾಗಿಸಬೇಕಿತ್ತು, ಪ್ರಶ್ನಿಸಬೇಕಿತ್ತೇ ಹೊರತು, ಅವರೊಂದಿಗೆ ಸೇರಿ ವೇದಿಕೆಯ ಕೆಳಗಿದ್ದ ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನಲ್ಲ. ಮಹಿಳಾ ಅಧಿಕಾರಿ ನೀಡಿದ ಸಮಜಾಯಿಷಿ ಸರಿ ಇತ್ತು. "ಪೊಲೀಸ್ ಇಲಾಖೆಯ ಸಹಕಾರ ಸಿಗುತ್ತಿಲ್ಲ, ತಮ್ಮಲ್ಲಿ ಸಿಬ್ದಂದಿ ಕೊರತೆ ಇದೆ, ನಾವು ಅಕ್ರಮ ಮರಳುಗಾರಿಕೆಯ ಸ್ಥಳಕ್ಕೆ ತೆರಳಿ ಗಂಟೆಗಳ ಕಾಲ ಕಾದರೂ, ಪೊಲೀಸರು ಸ್ಥಳಕ್ಕೆ ಬರುವುದಿಲ್ಲ..." ಎಂಬ ಅವರ ಆರೋಪ ನೂರಕ್ಕೆ ನೂರು ಸರಿ ಇದೆ ಎಂಬುದು ಅಕ್ರಮ ಮರಳು ದಂಧೆಯ ವಿರುಧ್ದ ದ್ವನಿ ಎತ್ತುತ್ತಿರುವ ಎಲ್ಲರ ಅನುಭವ. ಈ ಕುರಿತು ತಮ್ಮ ಪಕ್ಕದಲ್ಲಿ ಕೂತಿದ್ದ ಪೊಲೀಸ್ ಕಮೀಷನರ್ ಅವರನ್ನು ಸಚಿವರು ಯಾಕೆ ತರಾಟೆಗೆ ತೆಗೆದುಕೊಳ್ಳಲಿಲ್ಲ ?
ಪೊಲೀಸ್ ಇಲಾಖೆ ತೀರ್ಮಾನಿಸಿದರೆ, ಅಕ್ರಮ ಮರಳುಗಾರಿಕೆಯ ಒಂದು ದೋಣಿಯಾದರೂ ಮಂಗಳೂರಿನ ನದಿಗೆ ಇಳಿಯುವ ಧೈರ್ಯ ತೋರಿಸಲು ಸಾಧ್ಯವೇ.. ಅಕ್ರಮ ಮರಳು ಸಾಗಾಟದ ಒಂದೇ ಒಂದು ಟಿಪ್ಪರ್ ಆದರೂ ರಸ್ತೆಗೆ ಇಳಿಯಲು ಸಾಧ್ಯವೆ ? ಉಡುಪಿ ಜಿಲ್ಲೆಯಲ್ಲಿ ಯಾಕೆ ಅಕ್ರಮ ಮರಳುಗಾರಿಕೆ ಪೂರ್ತಿ ಸ್ಥಗಿತಗೊಂಡಿದೆ ! ಅಲ್ಲಿನ ನಿರ್ಬಂಧಿತ ಪ್ರದೇಶದಲ್ಲಿ ಒಂದು ಹಿಡಿ ಮರಳನ್ನು ತೆಗೆಯುವ ಧೈರ್ಯ ಮರಳು ಮಾಫಿಯಾಗೆ ಯಾಕೆ ಇಲ್ಲ ? ಉಡುಪಿ ಪೊಲೀಸ್ ವರಿಷ್ಟಾಧಿಕಾರಿ "ಗಣಿ ಇಲಾಖೆ ನೋಡಿಕೊಳ್ಳಲಿ" ಎಂದು ತಮ್ಮ ಜವಾಬ್ದಾರಿ ಮರೆತು ಕೂತಿದ್ದಾರೆಯೆ ? ಆಥವಾ ಇಡೀ ಪೊಲೀಸ್ ಇಲಾಖೆಯನ್ನು ಅಕ್ರಮ ಮರಳು ದಂಧೆಯ ವಿರುದ್ಧ ಸನ್ನದ್ದ ಸ್ಥಿತಿಯಲ್ಲಿ ಇರಿಸಿದ್ದಾರೆಯೆ ? ಉಡುಪಿಯ ಪೊಲೀಸ್ ವರಿಷ್ಟಾಧಿಕಾರಿಗೆ ಸಾಧ್ಯವಾಗಿದ್ದು, ಮಂಗಳೂರಿನ ಪೊಲೀಸ್ ಕಮೀಷನರ್ ಗೆ ಯಾಕೆ ಸಾಧ್ಯವಾಗುತ್ತಿಲ್ಲ ? ಇದು ಮಿಲಿಯನ್ ಡಾಲರ್ ಪ್ರಶ್ನೆ ಏನಲ್ಲವಲ್ಲ !
ಉಸ್ತುವಾರಿ ಸಚಿವರು ಮಂಗಳೂರಿನ ನದಿಗಳು, ಅದರ ಮೇಲಿನ ಸೇತುವೆಗಳು, ಅಡ್ಡಲಾಗಿರುವ ಡ್ಯಾಂಗಳ ಕುರಿತು ಕಾಳಜಿ ಹೊಂದಿದ್ದರೆ, ಅಕ್ರಮ ಮರಳುಗಾರಿಕೆಯ ಕುರಿತು ಆಕ್ರೋಶಿತರಾಗಿರುವುದು ನಿಜ ಆಗಿದ್ದರೆ, ಅಕ್ರಮ ಮರಳುಗಾರಿಕೆಗೆ ನದಿಗೆ ಇಳಿಯುವ ಪ್ರತಿ ಒಂದು ದೋಣಿಗಳು, ಅಕ್ರಮ ಮರಳು ಸಾಗಾಟ ಮಾಡುವ ಪ್ರತಿಯೊಂದು ಟಿಪ್ಪರ್ ಗಳು ಸಂಬಂಧ ಪಟ್ಟವರಿಗೆ (ಪ್ರಧಾನವಾಗಿ ಪೊಲೀಸ್ ಠಾಣೆಗಳಿಗೆ, ಟಿಪ್ಪರ್ ,ದೋಣಿ ಲೆಕ್ಕದಲ್ಲಿ) ಲಂಚ ನೀಡುತ್ತಿವೆ ಎಂಬ ಸಾರ್ವಜನಿಕ ವಲಯದ ಆರೋಪಗಳ ಕುರಿತು ತನಿಖೆ ನಡೆಸಲಿ. ಆಗ ಎಲ್ಲರ ಅಸಲಿಯತ್ತು ಬಹಿರಂಗಗೊಳ್ಳುತ್ತದೆ. ಅದಕ್ಕಿಂತಲೂ ಮೊದಲು, ಗ್ಯಾಂಬ್ಲಿಂಗು, ಅಕ್ರಮ ಮರಳುಗಾರಿಕೆ ಸೇರಿದಂತೆ ದಂಧೆಗಳ ಕುರಿತು ಮೃದುವಾಗಿದ್ದಾರೆ ಎಂಬ ವ್ಯಾಪಕ ಆರೋಪ ಹೊತ್ತಿರುವ ಮಂಗಳೂರು ನಗರ ಪೊಲೀಸ್ ಕಮೀಷರ್ ಕುರಿತು ಒಂದು ನಿಲುವಿಗೆ ಬರಲಿ. ಅದು ಬಿಟ್ಟು ಎಲ್ಲದ್ದಕ್ಕೂ ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ಹೊಣೆಯಾಗಿಸಿ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡು ಬಿಟ್ಟರೆ ನದಿಗಳೂ ಉಳಿಯುವುದಿಲ್ಲ, ಸೇತುವೆಗಳೂ ಉಳಿಯುವುದಿಲ್ಲ. ಎಡ ಬಲದಲ್ಲಿ ಇರುವವರ ಮೇಲೆ ಮೊದಲು ಕಣ್ಣಿಡಿ, ಅಥವಾ ಯೋಗ್ಯರನ್ನು ಎಡ ಬಲದಲ್ಲಿ ಇಟ್ಟುಕೊಳ್ಳಿ ಎಂದು ಮುನೀರ್ ಕಾಟಿಪಳ್ಳ ಉಸ್ತುವಾರಿ ಸಚಿವರಿಗೆ ಸಲಹೆ ಮಾಡಿದ್ದಾರೆ.
Why sand mafia cannot be controlled in Mangalore just like Udupi, Munner katipalla slams Dinesh Gundurao. Why to slam the mines and geology officer krishaveni when the police are directly involved in it he questioned.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm