ಬ್ರೇಕಿಂಗ್ ನ್ಯೂಸ್
21-02-25 08:22 pm Giridhar Shetty, Mangaluru ಕರಾವಳಿ
ಮಂಗಳೂರು, ಫೆ.21: ಸಿಂಗಾರಿ ಬೀಡಿ ಉದ್ಯಮಿ ಬೋಳಂತೂರಿನ ಸುಲೇಮಾನ್ ಹಾಜಿ ಮನೆಯಿಂದ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೈದ ಪ್ರಕರಣದಲ್ಲಿ ವಿಟ್ಲ ಪೊಲೀಸರು ಮತ್ತೊಬ್ಬ ನಟೋರಿಯಸ್ ಆಸಾಮಿಯನ್ನು ಬಂಧಿಸಿದ್ದಾರೆ. ಮೂಲತಃ ಕೇರಳದ ಕಣ್ಣೂರು ನಿವಾಸಿಯಾಗಿರುವ, ಕೇರಳ- ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಗಳ ಪಾಲಿನ ಖಾಸಾ ದೋಸ್ತ್ ಮತ್ತು ಖಬರಿಯಾಗಿದ್ದ ಅಬ್ದುಲ್ ನಾಸಿರ್ (52) ಎಂಬಾತನನ್ನು ರಹಸ್ಯ ಕಾರ್ಯಾಚರಣೆಯಲ್ಲಿ ಬಂಧಿಸಿದ್ದು ಬಂಟ್ವಾಳದ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಂಗಳೂರಿನ ಜೈಲಿಗೆ ಅಟ್ಟಿದ್ದಾರೆ.
ಸುಲೇಮಾನ್ ಹಾಜಿಯ ನಗದು ವ್ಯವಹಾರ, ಮನೆಯಲ್ಲೇ ಕೋಟಿಗಟ್ಟಲೆ ನಗದು ಇಟ್ಟುಕೊಂಡು ಮಾಡುತ್ತಿದ್ದ ವಹಿವಾಟು ಬಗ್ಗೆ ಗೊತ್ತಿದ್ದವರೇ ಈತನಿಗೆ ದರೋಡೆ ನಡೆಸುವಂತೆ ಮಾಹಿತಿ ನೀಡಿದ್ದರು. ಅಬ್ದುಲ್ ನಾಸಿರ್, ಐಪಿಎಸ್ ಅಧಿಕಾರಿಗಳ ಲೆವಲಲ್ಲಿ ಮಾಹಿತಿದಾರನಾಗಿದ್ದು, ಐಟಿ- ಇಡಿ ಇಲಾಖೆಯವರಿಗೆ ಮಾಹಿತಿ ಕೊಟ್ಟು ಉದ್ಯಮಿಗಳ ಮೇಲೆ ದಾಳಿಗಳನ್ನು ಮಾಡಿಸುತ್ತಿದ್ದ. ಈತ ಕಣ್ಣೂರು ನಿವಾಸಿಯಾದರೂ, ಮಂಗಳೂರು, ಕಾಸರಗೋಡಿನಲ್ಲಿಯೇ ಹೆಚ್ಚಾಗಿ ನೆಲೆಸಿರುತ್ತಿದ್ದ. ಕೇರಳ ಮತ್ತು ಕರ್ನಾಟಕದಲ್ಲಿ ಉನ್ನತ ಮಟ್ಟದ ಅಧಿಕಾರಿಗಳಿಗೆ ಖಬರಿಯಾಗಿದ್ದುಕೊಂಡು ಮಾಹಿತಿಗಳನ್ನು ರವಾನಿಸುತ್ತಿದ್ದ. ಈತ ಕೆಲವು ಅಧಿಕಾರಿಗಳಿಗೆ ಎಷ್ಟರ ಮಟ್ಟಿಗೆ ದೋಸ್ತ್ ಆಗಿದ್ದ ಎಂದರೆ, ಕೆಲವೊಮ್ಮೆ ದಾಳಿ ನಡೆಯುವಾಗ ತಾನೂ ಅಧಿಕಾರಿಯ ಸೋಗಿನಲ್ಲಿ ಜೊತೆಗೆ ತೆರಳುತ್ತಿದ್ದ ಎನ್ನಲಾಗುತ್ತಿದೆ.
ಕೃತ್ಯದಲ್ಲಿ ನೇರ ಭಾಗಿಯಾಗಿರಲಿಲ್ಲ
ಸುಲೇಮಾನ್ ಹಾಜಿಯ ಮನೆಗೆ ಏಳು ಮಂದಿ ಎರ್ಟಿಕಾ ಕಾರಿನಲ್ಲಿ ಬಂದಿದ್ದರು. ಇವರಲ್ಲಿ ಅಬ್ದುಲ್ ನಾಸಿರ್ ಇರಲಿಲ್ಲ. ಅನಿಲ್ ಫೆರ್ನಾಂಡಿಸ್ ಕಾರು ಚಾಲಕನಾಗಿದ್ದು ಸುಲೇಮಾನ್ ಹಾಜಿಗೆ ಹಿಂದಿ ಬರುವುದಿಲ್ಲ ಎಂದಾಗ ಅವರ ಜೊತೆಗೆ ಕನ್ನಡದಲ್ಲಿ ಮಾತನಾಡುತ್ತಿದ್ದ. ಅಧಿಕಾರಿಗಳ ಸೋಗಿನಲ್ಲಿದ್ದ ಇತರರು ಹಿಂದಿ, ಇಂಗ್ಲಿಷ್ ಮಾತನಾಡುತ್ತಿದ್ದರು. ಉಳಿದಂತೆ, ಅನಿಲ್ ಜೊತೆಗೆ ಕೊಲ್ಲಂನಲ್ಲಿ ಬಂಧನವಾಗಿದ್ದ ಶಬಿನ್ ಮತ್ತು ಸಚಿನ್ ಕೂಡ ದರೋಡೆ ತಂಡದಲ್ಲಿ ಬಂದಿದ್ದರು. ಕೊಡುಂಗಲ್ಲೂರು ಠಾಣೆಯಲ್ಲಿ ಎಎಸ್ಐ ಆಗಿದ್ದ ಶಫೀರ್ ಬಾಬು ದರೋಡೆ ತಂಡಕ್ಕೆ ನೇತೃತ್ವ ನೀಡಿದ್ದ. ಬಿಸಿ ರೋಡಿನ ನಟೋರಿಯಸ್ ರೌಡಿ ಮಟನ್ ಇಕ್ಬಾಲ್ ಮತ್ತು ಪಡೀಲ್ ಅಳಪೆ ನಿವಾಸಿ ಮಹಮ್ಮದ್ ಅನ್ಸಾರ್ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದು, ತಮ್ಮ ರಫ್ ಅಂಡ್ ಟಫ್ ದೇಹದ ಚಹರೆ ಮತ್ತು ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ಐಪಿಎಸ್ ಅಧಿಕಾರಿಗಳ ರೀತಿ ಸೋಗು ಹಾಕಿದ್ದರು. ಘಟನೆ ಸಂದರ್ಭದಲ್ಲಿ ಹಿಂದಿಯಲ್ಲಿ ಮಾತನಾಡುತ್ತಿದ್ದವರೂ ಇವರೇ ಎನ್ನುವುದನ್ನು ಪೊಲೀಸರು ತನಿಖೆಯಲ್ಲಿ ದೃಢಪಡಿಸಿದ್ದಾರೆ.
ದಿನದ ಮೂರು ಹೊತ್ತಿಗೂ ತಿನ್ನುವುದಕ್ಕೆ ಮಟನ್ ಆಗಲೇಬೇಕಿದ್ದ ಮೊಹಮ್ಮದ್ ಇಕ್ಬಾಲ್, ಬಿ.ಸಿ.ರೋಡ್, ಬಂಟ್ವಾಳದಲ್ಲಿ ಮಟನ್ ಇಕ್ಬಾಲ್ ಎಂದೇ ಹೆಸರು ಗಳಿಸಿದ್ದಾನೆ. ಈತನ ವಿರುದ್ಧ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ ಹನ್ನೊಂದು ಪ್ರಕರಣಗಳಿದ್ದರೆ, ಮಂಗಳೂರು, ಕೇರಳ ಸೇರಿ ಒಟ್ಟು 21 ಕೇಸುಗಳಿವೆ. ದರೋಡೆ, ಕಿಡ್ನಾಪ್, ಹಲ್ಲೆ, ಕೊಲೆಯತ್ನ, ಸುಲಿಗೆ, ಕಳ್ಳತನ ಇತ್ಯಾದಿ ಕೇಸುಗಳಲ್ಲಿ ಈತನ ಭಾಗೀದಾರಿಕೆ ಇದೆ. ಪ್ರಕರಣದಲ್ಲಿ ಇನ್ನಿಬ್ಬರು ಸ್ಥಳೀಯರಿದ್ದು, ಕೇರಳದವರು ಸೇರಿ ಇನ್ನೂ 9 ಜನರ ಬಂಧನ ಬಾಕಿಯಿದೆ. ಅಬ್ದುಲ್ ನಾಸೀರ್ ಬಂಧನದೊಂದಿಗೆ ಪ್ರಕರಣದಲ್ಲಿ ಈವರೆಗೆ ಎಂಟು ಮಂದಿ ಬಂಧನಕ್ಕೀಡಾಗಿದ್ದಾರೆ. ಬಂಧಿತರಲ್ಲಿ ಕೃತ್ಯದಲ್ಲಿ ನೇರ ಭಾಗಿಯಾದವರು 5 ಮಂದಿಯಿದ್ದರೆ, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ಸ್ವತಃ ಪೊಲೀಸ್ ಅಧಿಕಾರಿಯಾಗಿದ್ದ ಶಫೀರ್ ಬಾಬುಗೆ ದಾಳಿ ಕಾರ್ಯಾಚರಣೆ ಶೈಲಿ ಗೊತ್ತಿದ್ದುದರಿಂದ ಸಿವಿಲ್ ಡ್ರೆಸ್ಸಲ್ಲಿ ಬಂದು ಐಟಿ ಅಧಿಕಾರಿಗಳ ರೀತಿ ಹೇಗೆ ಪೋಸು ಕೊಡಬೇಕು, ಏನೆಲ್ಲಾ ಮಾಹಿತಿ ಕೇಳಬೇಕು, ಮನೆಯಲ್ಲಿ ಸರ್ಚಿಂಗ್ ಆಪರೇಶನ್ ಹೇಗಿರಬೇಕು ಎನ್ನುವ ಬಗ್ಗೆ ತರಬೇತಿಯನ್ನೂ ನೀಡಿದ್ದ. ಆದರೆ, ಈ ಶಫೀರ್ ಬಾಬುವನ್ನು ಐಟಿ ಅಧಿಕಾರಿಯೆಂದು ಬಂಟ್ವಾಳದ ರೌಡಿಗಳ ತಂಡಕ್ಕೆ ಪರಿಚಯ ಮಾಡಿದ್ದೇ ಅಬ್ದುಲ್ ನಾಸೀರ್. ಸುಲೇಮಾನ್ ಹಾಜಿ ಶ್ರೀಮಂತನಾಗಿದ್ದರೂ ಸ್ಥಳೀಯವಾಗಿ ಮುಸ್ಲಿಮರಿಗೂ ಸಂಬಂಧ ಚೆನ್ನಾಗಿರಲಿಲ್ಲ. ಕೆಲವರು ಇವರ ಕಳ್ಳಾಟದ ಬಗ್ಗೆ ಐಟಿ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಿದೆ. ಕೆಲವೊಮ್ಮೆ ಐಟಿಯವರು ಮನೆಗೆ ಬಂದರೂ, ಹಾಜಿಯವರ ಆತಿಥ್ಯ ಪಡೆದು ಹಿಂತಿರುಗಿದ್ದೂ ಇದೆಯಂತೆ. ಹೀಗಾಗಿ ಇವರ ಮೇಲೆ ಕೇರಳ, ಕರ್ನಾಟಕದ ಅತಿದೊಡ್ಡ ಐಟಿ ದಾಳಿ ಮಾಡಿಸಬೇಕೆಂದು ಹವಣಿಕೆ ಮಾಡುತ್ತಿದ್ದವರೂ ಇದ್ದರು.
ಐಪಿಎಸ್ ದೋಸ್ತಿ ಆಗಿದ್ದ ನಾಸಿರ್
ರೌಡಿ ಮಟನ್ ಇಕ್ಬಾಲ್ ತಂಡಕ್ಕೆ ಅಧಿಕಾರಿ ಸೋಗಿನ ಅಬ್ದುಲ್ ನಾಸಿರ್ ಜೊತೆಗೆ ಅದ್ಹೇಗೋ ಸಂಪರ್ಕ ಆಗಿತ್ತು. ಆದರೆ ತ್ರಿಶ್ಶೂರು ಜಿಲ್ಲೆಯ ಶಫೀರ್ ಬಾಬು ಕನೆಕ್ಷನ್ ಇರಲಿಲ್ಲ. ಒಮ್ಮೆ ಮನೆ ಹೊಕ್ಕರೆ, ಇಂತಿಷ್ಟು ಕೋಟಿ ಗ್ಯಾರಂಟಿ ಎಂಬುದನ್ನು ಲೆಕ್ಕಹಾಕಿದ್ದ ತಂಡಕ್ಕೆ ಅಬ್ದುಲ್ ನಾಸಿರ್, ತನ್ನ ಆಪ್ತ ಶಫೀರ್ ಬಾಬುವನ್ನು ಐಟಿ ಅಧಿಕಾರಿಯೆಂದು ಪರಿಚಯಿಸಿ ದರೋಡೆಗೆ ಸ್ಕೆಚ್ ಹಾಕಿಸಿದ್ದ. 20 ವರ್ಷಗಳಿಂದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿದಾರನಾಗಿ, ಕೇಂದ್ರ ತನಿಖಾ ಏಜನ್ಸಿಯ ವರೆಗೂ ಕನೆಕ್ಷನ್ ಇಟ್ಟುಕೊಂಡಿದ್ದ ಅಬ್ದುಲ್ ನಾಸಿರ್ ಮಾತನ್ನು ಮಟನ್ ಇಕ್ಬಾಲ್ ಖಚಿತವಾಗಿಯೇ ನಂಬಿದ್ದ. ಇದಕ್ಕಾಗಿ ಶಫೀರ್ ಬಾಬು ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ನಡೆಸುವುದಕ್ಕಾಗಿ ಮಂಗಳೂರಿಗೆ ಬಂದು ತಂಡ ರೆಡಿ ಮಾಡಿಸಿ, ತರಬೇತಿಯನ್ನೂ ಕೊಟ್ಟಿದ್ದ. ಶಫೀರ್ ಬಾಬು ಅರೆಸ್ಟ್ ಆಗುತ್ತಲೇ ಅಬ್ದುಲ್ ನಾಸಿರ್ ಮಾಹಿತಿ ಪಡೆದ ಪೊಲೀಸರು ಕಣ್ಣೂರಿನಲ್ಲಿ ನಾಲ್ಕೈದು ದಿನಗಳ ಕಾಲ ನಿದ್ದೆಯಿಲ್ಲದೆ ಕಾರ್ಯಾಚರಣೆ ನಡೆಸಿದ್ದರು. ಕೈಗೆ ಸಿಗುತ್ತಲೇ ಮಂಗಳೂರು ಎಸ್ಪಿ ಯತೀಶ್ ಸೂಚನೆಯಂತೆ ನೇರವಾಗಿ ಎತ್ತಾಕ್ಕೊಂಡು ಬಂದಿದ್ದರು.
ದರೋಡೆ ಹೇಗೆ ನಡೆಸಬೇಕು ಎನ್ನುವ ಬಗ್ಗೆ ಅಬ್ದುಲ್ ನಾಸೀರ್ ಸೂತ್ರಧಾರನಾಗಿದ್ದರೆ, ಆರು ಜನರನ್ನು ಸೆಲೆಕ್ಟ್ ಮಾಡಿ ಐಟಿ ಸೋಗಿನ ತಂಡ ಕಟ್ಟಿದ್ದು ಶಫೀರ್ ಬಾಬು. ಈತ ಈ ಹಿಂದೆಯೂ ಇದೇ ರೀತಿ ಕೇರಳದಲ್ಲಿ ದರೋಡೆ ಕೃತ್ಯಗಳನ್ನು ನಡೆಸಿ ಪಳಗಿದ್ದ ಎನ್ನುವ ಮಾಹಿತಿಗಳೂ ಹರಿದಾಡುತ್ತಿವೆ. ಸದ್ಯಕ್ಕೆ ಎಲ್ಲ ಆರೋಪಿಗಳ ಬ್ಯಾಂಕ್ ಖಾತೆಯನ್ನೂ ಪೊಲೀಸರು ಜಪ್ತಿ ಮಾಡಿದ್ದು, ಅಲ್ಲಿದ್ದ ಹಣವನ್ನು ಜಪ್ತಿ ಮಾಡಿದ್ದಾರೆ. ಹೊತ್ತೊಯ್ದಿದ್ದ ಐದಾರು ಕೋಟಿ ಪೈಕಿ ಒಂದಷ್ಟು ಮೊತ್ತ ಪೊಲೀಸರ ಕೈಸೇರಿದೆ ಎನ್ನುವ ಮಾಹಿತಿಯಿದೆ. ಒರಿಜಿನಲ್ ಐಟಿ ಇಲಾಖೆಯ ಭಯದಲ್ಲಿ ಕೋಟಿಗಟ್ಟಲೆ ದರೋಡೆಯಾಗಿದ್ದರೂ, ಸುಲೇಮಾನ್ ಹಾಜಿ ಕೇವಲ 30 ಲಕ್ಷದ ಲೆಕ್ಕ ಕೊಟ್ಟಿದ್ದರಿಂದ ಪೊಲೀಸರು ಸಿಕ್ಕಿದಷ್ಟು ಸಿಗಲಿ ಎಂದು ರಿಕವರಿ ಮಾಡುತ್ತಿದ್ದಾರೆ.
ಕ್ಲೂ ಇಲ್ಲದೇ ಇದ್ರೂ ಸಿಕ್ಕಿಬಿದ್ದಿದ್ದು ಹೇಗೆ ?
ರಮಾನಾಥ ರೈ, ಯುಟಿ ಖಾದರ್ ಅವರಂಥ ದೊಡ್ಡ ಮನುಷ್ಯರ ಜೊತೆಗೆ ಮಾತ್ರ ಸಂಪರ್ಕ ಇಟ್ಟುಕೊಂಡಿದ್ದ ಸುಲೇಮಾನ್ ಹಾಜಿ ಚುನಾವಣೆಗೂ ಫಂಡ್ ಕೊಡಿಸುತ್ತಿದ್ದರು. ಸ್ಥಳೀಯವಾಗಿ ಮಾತ್ರ ಕಂಜೂಸ್ ತೋರಿಸುತ್ತಿದ್ದರು. ಆದರೆ, ಮನೆಗೆ ಬಂದು ಸಹಾಯ ಬೇಡಿದವರಿಗೆ ಇಲ್ಲ ಎನ್ನುತ್ತಿರಲಿಲ್ಲ. ಚಿಕ್ಕಮಗಳೂರಿನಲ್ಲಿ ತನ್ನ ಸಿಂಗಾರಿ ಬೀಡಿಗೆ ದೊಡ್ಡ ಮಾರುಕಟ್ಟೆ ಇದ್ದುದರಿಂದ ಅಲ್ಲಿ ಧರ್ಮ- ಭೇದ ಇಲ್ಲದೆ ನೆರವು ನೀಡುತ್ತಿದ್ದರು. ಚಿಕ್ಕಮಗಳೂರು ಪೇಟೆಯಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವಕ್ಕೆ ಪ್ರತಿ ವರ್ಷ 5 ಲಕ್ಷ ರೂ. ದೇಣಿಗೆ ಕೊಡುತ್ತಿದ್ದರು. ಮೂರು ತಿಂಗಳ ಹಿಂದೆ, ಸುಲೇಮಾನ್ ಹಾಜಿಯ ಆಪ್ತ ಸಿರಾಜುದ್ದೀನ್ ಗೆ ಕರೆ ಮಾಡಿದ್ದ ಮಟನ್ ಇಕ್ಬಾಲ್, ನಿಮ್ಮ ಹಾಜಿಯವರ ಮನೆಗೆ ಬರಲಿಕ್ಕಿದೆ, ಕೇರಳದ ಪಾಪದ ಕುಟುಂಬಕ್ಕೊಂದು ಸಹಾಯ ಆಗಬೇಕಿದೆ, ಕರ್ಕೊಂಡು ಬರುತ್ತೇನೆ, ಅಲ್ಲಿನ ಲೊಕೇಶನ್ ಹಾಕು ಎಂದು ಹೇಳಿದ್ದ. ಅದರಂತೆ, ಸಿರಾಜುದ್ದೀನ್ ವಾಟ್ಸಪ್ ನಲ್ಲಿ ಹಾಜಿಯವರ ಮನೆಯ ಹತ್ತಿರ ಹೋಗಿ ಲೊಕೇಶನ್ ಶೇರ್ ಮಾಡಿದ್ದ.
ನಾಲ್ಕೈದು ಬಾರಿ ಬಂದಿದ್ದ ದರೋಡೆ ತಂಡ
ಲೊಕೇಶನ್ ಷೇರ್ ಮಾಡಿದ ಬಳಿಕ ಮಟನ್ ಇಕ್ಬಾಲ್ ಮತ್ತು ಶಫೀರ್ ಬಾಬು ಅವರ ತಂಡವು ಆ ಜಾಗಕ್ಕೆ ನಾಲ್ಕೈದು ಬಾರಿ ಬಂದು ಹೋಗಿದ್ದಾರೆ. ಆಸುಪಾಸಿನ ಒಳರಸ್ತೆಗಳ ಬಗ್ಗೆಯೂ ಸ್ಟಡಿ ಮಾಡಿದ್ದು, ಅಲ್ಲಿಂದ ಒಳದಾರಿಯಿಂದ ಕೇರಳಕ್ಕೆ ಪರಾರಿಯಾಗೋದು ಹೇಗೆ ಎನ್ನುವುದನ್ನೂ ಪತ್ತೆ ಮಾಡಿದ್ದರು. ಸಿಂಗಾರಿ ಬೀಡಿ ಮಾಲೀಕನ ದರೋಡೆ ಬಳಿಕ ಪೊಲೀಸರು ಎಲ್ಲ ಕೋನಗಳಲ್ಲಿ ತನಿಖೆ ನಡೆಸಿದರೂ, ಸರಿಯಾದ ಕ್ಲೂ ಸಿಕ್ಕಿರಲಿಲ್ಲ. ಜನವರಿ 3ರಂದು ದರೋಡೆಯಾದ ರಾತ್ರಿ ಕೇರಳಕ್ಕೆ ಒಂದೇ ಸಮಯಕ್ಕೆ ಮೂರು ಎರ್ಟಿಕಾ ಕಾರು ಪಾಸ್ ಆಗಿದ್ದು ಮತ್ತು ಎಲ್ಲಿಯೂ ಸಿಸಿಟಿವಿಯಲ್ಲಿ ಸ್ಪಷ್ಟ ಚಿತ್ರಣ ಇಲ್ಲದಿರುವುದು ಪೊಲೀಸರ ಚಿಂತೆಗೆ ಕಾರಣವಾಗಿತ್ತು. ಇದೇ ವೇಳೆ, ಪೊಲೀಸರು ಕಾಲ್ ಡಿಟೈಲ್ಸ್ ತಿಳಿಯುವುದಕ್ಕೂ ಮುಂದಾಗಿದ್ದರು. ಕಾಕತಾಳೀಯ ಎನ್ನುವಂತೆ, ಎರ್ಟಿಕಾ ಕಾರೊಂದು ಪಾಸ್ ಆಗುತ್ತಿದ್ದಾಗಲೇ ಅದೇ ದಿನ ಒಂದು ಕಡೆ ರಸ್ತೆ ಬದಿ ನಿಂತುಕೊಂಡಿದ್ದ ಸಿರಾಜುದ್ದೀನ್, ಬಿಸಿರೋಡಿನ ನಟೋರಿಯಸ್ ಆಸಾಮಿ ಮಟನ್ ಇಕ್ಬಾಲ್ ಗೆ ಕರೆ ಮಾಡಿದ್ದು ಪತ್ತೆಯಾಗಿದೆ.
ಮಟನ್ ಇಕ್ಬಾಲ್ ಮೊದಲೇ ನಟೋರಿಯಸ್ ಆಗಿದ್ದರಿಂದ ಪೊಲೀಸರು ಸಿರಾಜುದ್ದೀನ್ ಬದಲಿಗೆ ಇಕ್ಬಾಲ್ ವಶಕ್ಕೆ ಪಡೆದು ವಿಚಾರಣೆಗೆ ಇಳಿದಿದ್ದಾರೆ. ಮೊಬೈಲ್ ಕೇಳಿ ಚೆಕ್ ಮಾಡಿದಾಗ, ವಾಟ್ಸಪ್ ಡಿಲೀಟ್ ಆಗಿತ್ತು. ದರೋಡೆ ಕೃತ್ಯದ ವಾರದ ನಂತರವೂ ಕರೆ ಮಾಡಿದ್ದ ಸಿರಾಜುದ್ದೀನ್, ನಾನು ನಿನಗೆ ಕಳಿಸಿದ್ದ ಲೊಕೇಶನ್ ಏನಾದ್ರೂ ದರೋಡೆ ತಂಡಕ್ಕೆ ಹೋಗಿದ್ಯಾ ಎಂದು ಸಂಶಯ ವ್ಯಕ್ತಪಡಿಸಿದ್ದ. ಇಲ್ಲಪ್ಪಾ, ಹಾಗೇನೂ ಇಲ್ಲ ಎಂದೇ ಇಕ್ಬಾಲ್ ಹೇಳಿದ್ನಂತೆ. ಆದರೆ ವಾಟ್ಸಪ್ ಡಿಲೀಟ್ ಆಗಿದ್ದರಿಂದ ಸಂಶಯಗೊಂಡ ಪೊಲೀಸರು ಆತನ ಕಾಲ್ ಡಿಟೈಲ್ಸ್ ಮತ್ತು ವಾಟ್ಸಪ್ ರಿಟ್ರೀವ್ ಮಾಡಿದ್ದರು. ಸುಲೇಮಾನ್ ಹಾಜಿಯ ಮನೆಯಿರುವ ಸ್ಥಳದ ಲೊಕೇಶನ್ ಕಳಿಸಿದ್ದು ಸೇರಿದಂತೆ, ಶಫೀರ್ ಬಾಬು ಇನ್ನಿತರ ಆರೋಪಿಗಳ ಸಂಪರ್ಕ ಆಗಿರುವುದೂ ಅಲ್ಲಿಂದಲೇ ಪತ್ತೆಯಾಗಿತ್ತು.
ಪತ್ನಿ ಬಂಗಾರ ಬಿಡಿಸಲು ಹೋಗಿ ಸಿಕ್ಕಿಬಿದ್ದ
ಮಟನ್ ಇಕ್ಬಾಲ್ ನನ್ನ ಪೊಲೀಸರು ಸೆರೆಹಿಡಿದ ಬೆನ್ನಲ್ಲೇ ಸುಲೇಮಾನ್ ಆಪ್ತ ಸಿರಾಜುದ್ದೀನನ್ನು ಆತನಿಂದಲೇ ಕರೆ ಮಾಡಿಸಿ ಕಲ್ಲಡ್ಕಕ್ಕೆ ಪೊಲೀಸರು ಬರುವಂತೆ ಮಾಡಿದ್ದರು. ಕೋಶಮಟ್ಟಂ ಜುವೆಲ್ಲರಿಯಲ್ಲಿ ಅಡವಿಟ್ಟಿದ್ದ ಪತ್ನಿಯ ಬಂಗಾರ ಬಿಡಿಸಲೆಂದು ವಿಟ್ಲಕ್ಕೆ 80 ಸಾವಿರ ಹಣದೊಂದಿಗೆ ಬಂದಿದ್ದ ಸಿರಾಜ್ ನೇರವಾಗಿ ಕಲ್ಲಡ್ಕಕ್ಕೆ ಬಂದಿದ್ದ. ಆತನ ಕೈಯಲ್ಲಿದ್ದ ಹಣದ ಸಮೇತ ಬಂಧಿಸಿದ್ದ ಪೊಲೀಸರು ಈಗ ಆ ಹಣವನ್ನೂ ರಿಕವರಿ ತೋರಿಸುವ ಯತ್ನದಲ್ಲಿದ್ದಾರಂತೆ. ಒಟ್ಟಿನಲ್ಲಿ ಹೆಚ್ಚು ಓದಿಲ್ಲದಿದ್ದರೂ ಬಡವರು ಸೇದುವ ಬೀಡಿಯನ್ನೇ ಮಾರಿ ಆಗರ್ಭ ಶ್ರೀಮಂತನಾಗಿದ್ದ ಸುಲೇಮಾನ್ ಹಾಜಿಯೂ, ಆತನ ಹಿಂದೆ ಬಿದ್ದವರೂ ಈಗ ಪೊಲೀಸರ ಬಲೆಯೊಳಗೆ ಬಿದ್ದಿದ್ದು ಕೇಸಿನ ಸಿಕ್ಕು ಬಿಡಿಸಬೇಕಿದ್ದರೆ ಒರಿಜಿನಲ್ ಐಟಿ ಅಧಿಕಾರಿಗಳು ಎಂಟ್ರಿ ಆಗಲೇಬೇಕಷ್ಟೆ.
In a major breakthrough, the Mangalore DK Police have apprehended a close aide of IPS officers Abdul Nasir in connection with a daring robbery that took place in the Vitla Singari Beedi owners house. The incident occurred when a group of criminals, disguised as officers from the Enforcement Directorate (ED), stormed the residence of a local businessman in the Narsh area near Bolanthuru, making off with approximately crores of rupees
21-02-25 10:47 pm
Bangalore Correspondent
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
Siddaramaiah, MUDA case, Vijayendra: ಮುಡಾ ಹಗರ...
20-02-25 10:06 pm
21-02-25 01:23 pm
HK News Desk
Tesla Musk-Modi meeting: ಮೋದಿ- ಎಲಾನ್ ಮಸ್ಕ್ ಭೇ...
21-02-25 12:17 pm
ವಿಶ್ವದ ಪ್ರಬಲ ತನಿಖಾ ಸಂಸ್ಥೆ ಎಫ್ಬಿಐಗೆ ಕಾಶ್ ಪಟೇ...
21-02-25 10:36 am
MLA Rekha Gupta, Delhi Chief Minister: ದೆಹಲಿ...
19-02-25 11:00 pm
ಬಾಲಕನಿದ್ದಾಗ ನುಂಗಿದ್ದ ಪೆನ್ ಕ್ಯಾಪ್ ; 21 ವರ್ಷ ಕಳ...
19-02-25 06:41 pm
21-02-25 08:22 pm
Giridhar Shetty, Mangaluru
Thumbay Group, Fergana College, Uzbekistan: ಉ...
21-02-25 07:54 pm
Mangalore, Ullal, B R Rao, Kannada literary c...
21-02-25 07:21 pm
Mangalore Congress, Satish Jarkiholi; ಗಾಂಧಿ-...
21-02-25 12:40 am
Protest Mangalore, 400 KV, Catholic sabha: ಉಡ...
20-02-25 06:48 pm
20-02-25 01:22 pm
Mangalore Correspondent
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm
Madikeri police, Fake Scheme, Mangalore crime...
18-02-25 06:04 pm
Mangalore Crime, Surathkal, Car: ಮದುವೆ ಸಮಾರಂಭ...
18-02-25 12:11 pm