ಬ್ರೇಕಿಂಗ್ ನ್ಯೂಸ್
24-02-25 02:50 pm Mangalore Correspondent ಕರಾವಳಿ
ಪುತ್ತೂರು, ಫೆ.24: ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ನಿರ್ಲಕ್ಷ್ಯದಿಂದಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯ ಹೊಟ್ಟೆಯಲ್ಲಿ ಬಟ್ಟೆಯ ತುಂಡು ಉಳಿದುಕೊಂಡಿದ್ದಲ್ಲದೆ, ಮೂರು ತಿಂಗಳ ಕಾಲ ಮಹಿಳೆ ನರಕಯಾತನೆ ಅನುಭವಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಈ ಬಗ್ಗೆ ಪುತ್ತೂರಿನ ಸಿಟಿ ಆಸ್ಪತ್ರೆಯ ವೈದ್ಯ ಡಾ.ಅನಿಲ್ ಬೈಪಡಿತ್ತಾಯ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳೆಯ ಪತಿ ಬಂಗಾರಡ್ಕ ನಿವಾಸಿ ಗಗನ್ ದೀಪ್, ಪೊಲೀಸರಿಗೆ ದೂರು ನೀಡಿ ಆಗ್ರಹಿಸಿದ್ದಾರೆ.
2024ರ ನವೆಂಬರ್ 27ರಂದು ಗಗನ್ ದೀಪ್ ಅವರ ಪತ್ನಿ ಶರಣ್ಯಲಕ್ಷ್ಮಿ ಅವರಿಗೆ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಆಗಿತ್ತು. ಹೆರಿಗೆಯಾದ ಬಳಿಕ ಐದು ದಿನಕ್ಕೆ ಡಿಸ್ಚಾರ್ಜ್ ಆಗಿದ್ದ ಮಹಿಳೆಗೆ ಕೆಲವು ದಿನಗಳಲ್ಲಿ ಜ್ವರ ಬಂದಿದ್ದು, ಚಿಕಿತ್ಸೆ ಪಡೆದಿದ್ದರು. ಆದರೆ ಹೊಟ್ಟೆ ನೋವು ಮತ್ತು ಹೊಟ್ಟೆಯಲ್ಲಿ ಏನೋ ಅಸಹಜ ವಸ್ತು ಇದ್ದ ಅನುಭವ ಆಗುತ್ತಿದ್ದುದರಿಂದ ಆಪರೇಶನ್ ಮಾಡಿದ್ದ ವೈದ್ಯರಿಗೆ ತಿಳಿಸಿದ್ದರು. ಆದರೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದು, ಸ್ಕ್ಯಾನಿಂಗ್ ಮಾಡುವಂತೆ ಸೂಚಿಸಿದ್ದರು. ದರ್ಬೆಯ ಸ್ಕ್ಯಾನಿಂಗ್ ಸೆಂಟರಿನಲ್ಲಿ ಪರೀಕ್ಷೆ ನಡೆಸಿದಾಗ, ಹೊಟ್ಟೆಯಲ್ಲಿ ಅಸಹಜ ವಸ್ತು ಇರುವುದು ಪತ್ತೆಯಾಗಿತ್ತು.
ಆದರೆ ವೈದ್ಯರು ತಾನು ಅನುಭವಿ ವೈದ್ಯನಾಗಿದ್ದು, ಹೊಟ್ಟೆಯ ಒಳಗಡೆ ಯಾವುದೇ ಹೊರಗಿನ ವಸ್ತು ಉಳಿದಿರಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದಾರೆ. ಅದು ಹೆಮಟೋಮ ಆಗಿರಬಹುದು. ಕೆಲವು ದಿನಗಳಲ್ಲಿ ಸರಿ ಹೋಗುತ್ತದೆ, ಔಷಧಿ ಕೊಡುತ್ತೇನೆ ಎಂದಿದ್ದಾರೆ. ಆನಂತರ ಜ್ವರ ಕಡಿಮೆಯಾಗಿದ್ದರೂ, ಹೊಟ್ಟೆಯಲ್ಲಿ ನೋವು ಕಡಿಮೆಯಾಗಿರಲಿಲ್ಲ. ಆನಂತರ, ಕಾಲು, ತೊಡೆಗಳಲ್ಲಿ ನೋವು ಕಾಣಿಸಿಕೊಂಡಿತ್ತು. ಮಲಗಿದರೆ ಎದ್ದು ಕೂರಲಾಗದಷ್ಟು ನೋವು ಎದುರಾಗಿತ್ತು. ಮಗುವನ್ನು ಎತ್ತಿಕೊಳ್ಳುವುದಕ್ಕೂ ಸಾಧ್ಯವಾಗದೇ ಇದ್ದಾಗ ಅದೇ ವೈದ್ಯರಲ್ಲಿ ತೋರಿಸಲಾಯಿತು. ಇದು ಬೇರೇನೋ ಕಾಯಿಲೆ ಇರಬಹು, ರುಮಟೋಲಜಿ ತಜ್ಞರನ್ನು ಸಂಪರ್ಕಿಸಲು ಸೂಚಿಸಿದ್ದರು. ಸಿಟಿ ಆಸ್ಪತ್ರೆಗೆ ತಜ್ಞ ವೈದ್ಯರು ಬರುತ್ತಾರೆ ಎಂದು ಹೇಳಿದ್ದರೂ, ಆ ವೈದ್ಯರು ಸಿಕ್ಕಿರಲಿಲ್ಲ.
ಆನಂತರ, ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ಬಂದು ಪರೀಕ್ಷೆ ನಡೆಸಿದಾಗ, ಮೊದಲೇ ತೆಗೆಸಿದ್ದ ಸ್ಕ್ಯಾನಿಂಗ್ ನೋಡಿ ಯಾವುದೋ ಹೊರಗಿನ ವಸ್ತು ಹೊಟ್ಟೆಯಲ್ಲಿ ಉಳಿದುಕೊಂಡಿದೆ ಎಂದು ವೈದ್ಯರು ತಿಳಿಸಿದ್ದರು. ಅಲ್ಲಿಯೇ, ಸಿಟಿ ಸ್ಕ್ಯಾನ್ ಮಾಡಿಸಿದಾಗ, 10 ಸೆಂಟಿ ಮೀಟರ್ ಗಾತ್ರದಲ್ಲಿ ಯಾವುದೋ ವಸ್ತು ಇರುವುದು ದೃಢಪಟ್ಟಿತ್ತು. ಆಪರೇಶನ್ ಮಾಡಿ ಎರಡು ತಿಂಗಳು ಕಳೆದಿದ್ದರಿಂದ ಈಗಾಗಲೇ ಈ ವಸ್ತುವಿನಿಂದಾಗಿ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ, ಕೂಡಲೇ ಆಪರೇಶನ್ ಮಾಡುವಂತೆ ವೈದ್ಯರು ಸೂಚಿಸಿದ್ದರು. ಆನಂತರ ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ತೆರಳಿ ಮರುದಿನವೇ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಆಪರೇಶನ್ ಸಂದರ್ಭದಲ್ಲಿ ಬಳಸುವ ಬಟ್ಟೆಯ ತುಂಡನ್ನು ಹೊಟ್ಟೆಯ ಒಳಗಿನಿಂದ ತೆಗೆದಿದ್ದಾರೆ.
ಈ ಬಗ್ಗೆ ಸಿಸೇರಿಯನ್ ಮಾಡಿದ್ದ ವೈದ್ಯರನ್ನು ಪ್ರಶ್ನಿಸಿದಾಗ, ತನ್ನಿಂದಾದ ತಪ್ಪು ಅಲ್ಲ, ಯಾರು ನಿರ್ಲಕ್ಷಿಸಿದ್ದಾರೆಂದು ತಿಳಿದಿಲ್ಲ ಎಂದು ಹೇಳಿ ಜಾರಿಕೊಂಡಿದ್ದಾರೆ. ಘಟನೆ ಬಗ್ಗೆ ಇಂಡಿಯನ್ ಮೆಡಿಕಲ್ ಬೋರ್ಡ್ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲಿ ದೂರು ನೀಡಲಾಗಿದೆ. ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮೆಡಿಕಲ್ ಕೌನ್ಸಿಲ್ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸುತ್ತೇವೆಂದು ತಿಳಿಸಿದ್ದಾಗಿ ಗಗನ್ ದೀಪ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
Surgical mop left in womans stomach during C Section at puttur hospital, husband slams doctor Dr Anil Baipadithaya. A private hospital in Puttur has been accused by husband of medical negligence after a surgical mop was allegedly left in a woman's stomach during a Caesarean-section conducted on her last Nov.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
20-07-25 10:35 pm
Mangalore Correspondent
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
RCB Stampede, DySP Anupama Shenoy: ಕಾಲ್ತುಳಿತ...
19-07-25 06:51 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm