Missing, Mangalore, Konaje police: ಕೋಣಾಜೆಯ ಯುವಕ ನಾಪತ್ತೆ, ಶಿವಮೊಗ್ಗದಲ್ಲಿ ಲೊಕೇಶನ್ ಪತ್ತೆ ; ಫರಂಗಿಪೇಟೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕಾಣೆ ; ಪತ್ತೆಗಾಗಿ ಸಾರ್ವಜನಿಕರ ಸಹಾಯ ಕೇಳಿದ ಪೊಲೀಸರು 

26-02-25 10:15 pm       Mangalore Correspondent   ಕರಾವಳಿ

ಎರಡು ದಿನಗಳ ಹಿಂದೆ ಫೆ.24ರಂದು ಕುತ್ತಾರಿನಲ್ಲಿ ಕೆಲಸ ಇದೆಯೆಂದು ಹೇಳಿ ಕೋಣಾಜೆ ಗ್ರಾಮದ ತನ್ನ ಮನೆಯಿಂದ ತೆರಳಿದ್ದ ಮಹಮ್ಮದ್ ಆಸಿಫ್ (38) ಎಂಬವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಕೋಣಾಜೆ ಠಾಣೆಗೆ ದೂರು ನೀಡಲಾಗಿದೆ.

ಮಂಗಳೂರು, ಫೆ.26: ಎರಡು ದಿನಗಳ ಹಿಂದೆ ಫೆ.24ರಂದು ಕುತ್ತಾರಿನಲ್ಲಿ ಕೆಲಸ ಇದೆಯೆಂದು ಹೇಳಿ ಕೋಣಾಜೆ ಗ್ರಾಮದ ತನ್ನ ಮನೆಯಿಂದ ತೆರಳಿದ್ದ ಮಹಮ್ಮದ್ ಆಸಿಫ್ (38) ಎಂಬವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಕೋಣಾಜೆ ಠಾಣೆಗೆ ದೂರು ನೀಡಲಾಗಿದೆ.

ಮಹಮ್ಮದ್ ಆಸಿಫ್ ಈ ಹಿಂದೆ ಮೂರು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಸಿದ್ಲಿಪುರ ಎಂಬಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಎಂಟು ತಿಂಗಳ ಹಿಂದೆ ಇವರಿಗೆ ಮದುವೆಯಾಗಿತ್ತು. ಶಿವಮೊಗ್ಗದಲ್ಲಿ ಮಂಗಳೂರು ಮೂಲದ ಅಬ್ದುಲ್ ಅಜೀಜ್ ಎಂಬವರಿಗೆ ಸೇರಿದ ಕೆಐ ಕನೆಕ್ಷನ್ ಎಂಬವರ ಕಂಪನಿಯಲ್ಲಿ ಕಟ್ಟಡ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ಇವರಿಗೆ ಮದುವೆಯಾಗಿ ಅಲ್ಲಿ ಹೋಗಿ ಬರುವುದಕ್ಕೆ ಸಮಸ್ಯೆ ಆಗಿದ್ದರಿಂದ ಕುತ್ತಾರಿನಲ್ಲಿ ಇದೇ ಕಂಪನಿಯ ಕಟ್ಟಡ ಕೆಲಸ ಇದ್ದುದರಿಂದ ಅಲ್ಲಿ ದುಡಿಯುವುದಕ್ಕೆ ಸೂಚಿಸಲಾಗಿತ್ತು.

ಅದರಂತೆ, ಹತ್ತು ದಿನಗಳಿಂದ ಕುತ್ತಾರಿನಲ್ಲಿ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಆದರೆ ಫೆ.24ರಂದು ಬೆಳಗ್ಗೆ ಕುತ್ತಾರಿಗೆ ಕೆಲಸಕ್ಕೆಂದು ತೆರಳಿದವರು ಮರಳಿ ಬಂದಿಲ್ಲ. ಹೀಗಾಗಿ ಈತನ ತಮ್ಮ ಕೋಣಾಜೆ ಠಾಣೆಗೆ ಬಂದು ನಾಪತ್ತೆ ದೂರು ನೀಡಿದ್ದಾರೆ. ಪೊಲೀಸರು ಮೊಬೈಲ್ ಲೊಕೇಶನ್ ನೋಡಿದಾಗ, ಕೊನೆಯ ಬಾರಿಗೆ ಶಿವಮೊಗ್ಗದಲ್ಲಿ ಕಾಣಿಸಿದ್ದು ಆನಂತರ ಸ್ವಿಚ್ ಆಫ್ ಆಗಿದೆ. ಹೀಗಾಗಿ ಯಾರಾದರೂ ಮಹಮ್ಮದ್ ಆಸಿಫ್ ನನ್ನು ನೋಡಿದರೆ 0824-2220800, 220536 ಅಥವಾ 9480802350 ನಂಬರಿಗೆ ಕರೆ ಮಾಡಿ ತಿಳಿಸಲು ಕೋಣಾಜೆ ಪೊಲೀಸರು ತಿಳಿಸಿದ್ದಾರೆ. 

ದ್ವಿತೀಯ ಪಿಯುಸಿ ವಿದ್ಯಾರ್ಥಿ ನಾಪತ್ತೆ 

ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ (17) ನಾಪತ್ತೆಯಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಅವರ ಪುತ್ರ ದಿಗಂತ್(17) ನಾಪತ್ತೆಯಾದ ವಿದ್ಯಾರ್ಥಿ. ಫೆ.25ರಂದು ಸಂಜೆ ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿದ್ದು, ದೇವಸ್ಥಾನಕ್ಕೂ ಹೋಗದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದಾನೆ. ಬಳಿಕ ಹುಡುಕಾಡಿದಾಗ ಆತನ ಚಪ್ಪಲಿಗಳು ಹಾಗೂ ಮೊಬೈಲ್ ರೈಲ್ವೇ ಹಳಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ‌

The Mangalore Police are seeking public assistance in locating two missing individuals: Mohammad Asif (38 years old) - Last seen in Konaje. Diganth (17 years old) - A student pursuing his PUC, last seen in Farangipete.
If you have any information regarding their whereabouts, please contact the authorities.