ಬ್ರೇಕಿಂಗ್ ನ್ಯೂಸ್
01-03-25 08:49 pm Mangalore Correspondent ಕರಾವಳಿ
ಮಂಗಳೂರು, ಮಾ.1: ವಕ್ಪ್ ತಿದ್ದುಪಡಿ ಮಸೂದೆ ಎನ್ನುವುದು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿ. ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದು, ಕೇಂದ್ರ ಸರಕಾರವು ಕೂಡಲೇ ಈ ಮಸೂದೆಯನ್ನು ಹಿಂಪಡೆಯಲು ಆಗ್ರಹಿಸಲಾಗುವುದು. ಈಗಾಗಲೇ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿದ್ದು ಸುಪ್ರೀಂ ಕೋರ್ಟ್ ಕದ ತಟ್ಟುತ್ತೇವೆ ಎಂದು ದಕ್ಷಿಣ ಕನ್ನಡ ವಕ್ಫ್ ಸಲಹಾ ಸಮಿತಿ ಮತ್ತು ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳ ಮುಸ್ಲಿಮರ ಅತ್ಯುನ್ನತ ಧಾರ್ಮಿಕ ಗುರುಗಳಾದ ಖಾಜಿ ಅಹ್ಮದ್ ಮುಸ್ಲಿಯಾರ್ ಉಸ್ತಾದ್, ಖಾಜಿ ಝೈನುಲ್ ಉಲಮಾ ಉಸ್ತಾದ್ ತಿಳಿಸಿದ್ದಾರೆ.
ವಿವಿಧ ಭಾಗದಿಂದ ಬಂದಿದ್ದ 25ಕ್ಕೂ ಹೆಚ್ಚು ಧಾರ್ಮಿಕ ಮುಖಂಡರುಗಳ ಜೊತೆಗೆ ಸುದ್ದಿಗೋಷ್ಟಿ ನಡೆಸಿದ ಅವರು, ವಕ್ಫ್ ಎಂಬುದು ದೇವರ ಹೆಸರಿನಲ್ಲಿ ಸಮರ್ಪಿಸಲಾದ ದಾನವಾಗಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಕೆಲಸಗಳಿಗೆ ಮಾತ್ರ ಬಳಸಬಹುದಾಗಿದೆ. 1913 ರಲ್ಲಿ ವಕ್ಫ್ ಕಾಯಿದೆಯನ್ನು ರೂಪಿಸಲಾಗಿತ್ತು. 1955ರಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಗಾಗಿ ಭಾರತ ಸರಕಾರವು ವಕ್ಫ್ ಬೋರ್ಡ್ ಅಂಗೀಕರಿಸಿದ್ದು, 1995 ರಲ್ಲಿ ಹಾಗೂ 2013 ರಲ್ಲಿ ಅಗತ್ಯ ತಿದ್ದುಪಡಿಗಳನ್ನು ಬಲಗೊಳಿಸಲಾಗಿತ್ತು. ಸಂವಿಧಾನದ ಆರ್ಟಿಕಲ್ 26 ಪ್ರಕಾರ ಧಾರ್ಮಿಕ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಸಂಸ್ಥೆಗಳನ್ನು ಕಟ್ಟಿಕೊಳ್ಳುವ, ಸ್ಥಿರ ಹಾಗೂ ಚರಾಸ್ತಿಗಳನ್ನು ಹೊಂದುವ ಹಕ್ಕನ್ನು ಕೊಡುತ್ತದೆ. ಇದರಂತೆ ಹಿಂದೂ, ಮುಸ್ಲಿಂ, ಕ್ರೈಸ್ತ , ಸಿಖ್ ಸೇರಿದಂತೆ ಎಲ್ಲ ಧರ್ಮೀಯರು ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿಕೊಂಡು ದೇಣಿಗೆಗಳನ್ನು ಸ್ವೀಕರಿಸುತ್ತಿದ್ದಾರೆ. ಮುಸ್ಲಿ ಆಚಾರಗಳನ್ನು ಮುನ್ನಡೆಸಲು ವಕ್ಫ್ ಬೋರ್ಡ್ ಕಾಯಿದೆ ರೂಪಿಸಲಾಗಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಜಾರಿಗೆ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯಿದೆ, ವಕ್ಫ್ ಆಸ್ತಿಗಳನ್ನು ಕಬಳಿಸುವ ಮತ್ತು ಅಳಿದುಳಿದ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲೂ ಸಮುದಾಯದ ನಿಯಂತ್ರಣವನ್ನು ತಪ್ಪಿಸುವ ಉದ್ದೇಶ ಹೊಂದಿದೆ. ನೂತನ ತಿದ್ದುಪಡಿ ಪ್ರಕಾರ ಆರು ತಿಂಗಳಲ್ಲಿ ದಾಖಲೆ ಪತ್ರ ತೋರಿಸಿ ವಕ್ಫ್ ಆಸ್ತಿಯನ್ನು ಖಾತರಿಪಡಿಸಬೇಕು. ಈವರೆಗೆ ವಕ್ಫ್ ಆಸ್ತಿಯನ್ನು ನಿಗದಿಪಡಿಸಲು ಸರ್ಕಾರವು ಇಸ್ಲಾಮಿಕ್ ಕಾನೂನು ಮತ್ತು ವಕ್ಫ್ ವಿಷಯಗಳಲ್ಲಿ ಪರಿಣತಿ ಇರುವ ಸ್ವಾಯತ್ತ ಸರ್ವೆಯರ್ ಅನ್ನು ನೇಮಿಸುತ್ತಿತ್ತು. ನೂತನ ತಿದ್ದುಪಡಿ ಪ್ರಕಾರ ಆ ಎಲ್ಲಾ ಜವಾಬ್ದಾರಿಗಳನ್ನು ಜಿಲಾಧಿಕಾರಿಗೆ ನೀಡಲಾಗಿದೆ.
ವಕ್ಫ್ ವ್ಯಾಜ್ಯಗಳನ್ನು ಇತ್ಯರ್ಥ ಮಾಡುವ ವಕ್ಫ್ ಟ್ರಿಬ್ಯುನಲ್‌ಗೆ ನೇಮಕವಾಗುವ ಸರ್ಕಾರಿ ಅಧಿಕಾರಿ ಮುಸ್ಲಿಮನಾಗಿರಬೇಕೆಂಬ ಷರತ್ತನ್ನು ಮಸೂದೆ ತೆಗೆದು ಹಾಕಿದೆ. ಅಲ್ಲದೆ, ವಕ್ಫ್ ಬೋರ್ಡಿನಲ್ಲಿ ಇಬ್ಬರು ಮುಸ್ಲಿಮೇತರರನ್ನು ನೇಮಿಸಲು ಅವಕಾಶ ನೀಡಿದೆ. ಹೀಗಾಗಿ ದೇಶದ ಸಂವಿಧಾನ, ಜಾತ್ಯತೀತ ಸಿದ್ಧಾಂತ ಮತ್ತು ಬಹುತ್ವ ಸಂಸ್ಕೃತಿಯಲ್ಲಿ ನಂಬಿಕೆ ಇರುವ ಎಲ್ಲ ಭಾರತೀಯರು ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದಾರೆ.
ಯಾವ ರೀತಿಯ ಪ್ರತಿಭಟನೆ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ ಮಾಜಿ ವಕ್ಫ್ ಸಮಿತಿ ಅಧ್ಯಕ್ಷ ಮೌಲಾನ ಶಾಫಿ ಸಾಅದಿ, ಉಲೇಮಾಗಳು ಯುವಕರನ್ನು ಛೂಬಿಟ್ಟು ಪ್ರತಿಭಟನೆಗಿಳಿಸಿ ಅನ್ಯಾಯವಾಗಿ ರಕ್ತಪಾತ ಆಗುವುದನ್ನು ಇಚ್ಚಿಸುವುದಿಲ್ಲ. ಆದರೆ ನಾವು ಹಿಂಸೆ ಹೊರತಾದ ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧತೆ ನಡೆಸಿದ್ದೇವೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಮುಸ್ಲಿಮರು ಉಲೇಮಾಗಳ ನೇತೃತ್ವದಲ್ಲಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದರು. ವಕ್ಫ್ ಆಸ್ತಿ ಕಬಳಿಕೆ ಆಗಿರುವುದನ್ನು ಉಲೆಮಾಗಳು ಪ್ರಶ್ನೆ ಮಾಡಿಲ್ಲ, ಈಗ ಯಾಕೆ ಬಂದಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, ಆಯಾ ಸಂದರ್ಭದಲ್ಲಿ ಧರ್ಮದ ವಿಚಾರದಲ್ಲಿ ಪ್ರಶ್ನೆಗಳನ್ನು ಮಾಡುತ್ತಾರೆ. ಮಂಗಳೂರಿನಲ್ಲಿ ಕೆನರಾ ಸ್ಕೂಲಿನ ಒಂದೂವರೆ ಎಕ್ರೆ ಜಾಗ ಕಚ್ಚೀ ಮೆಮನ್ ಮಸೀದಿಗೆ ಸೇರಿದ್ದು, 12 ವರ್ಷಗಳ ಹಿಂದಿನ ವರೆಗೂ ವರ್ಷಕ್ಕೆ 12 ರೂ.ನಂತೆ ಬಾಡಿಗೆ ಕೊಡುತ್ತಿದ್ದರು. ಅದನ್ನು ನೂರು ವರ್ಷಗಳ ಹಿಂದೆ ಲೀಸಿಗೆ ಕೊಟ್ಟಿದ್ದರು. ಇಂಥ ಜಾಗ ಬಹಳಷ್ಟಿದೆ ಎಂದು ಹೇಳಿದರು.
ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಸಯ್ಯದ್ ಇಸ್ಮಾಯಿಲ್ ತಂಗಳ್, ಉಸ್ಮಾನುಲ್ ಫೈಜಿ ತೋಡಾರು, ಅಬ್ದುಲ್ ಅಜೀಜ್ ದಾರಿಮಿ ಮುಂತಾದವರಿದ್ದರು.
Muslim religious and community leaders have urged the government to respect constitutional values and withdraw the Wakf Amendment Bill 2024to uphold the religious rights of all citizens.Addressing media on Saturday March 1, they said, “The Wakf Amendment Bill 2024, introduced in parliament in August last year, has sparked widespread opposition, with critics labelling it an attack on the religious freedom of Muslims.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 04:03 am
Mangaluru Correspondent
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm