ಬ್ರೇಕಿಂಗ್ ನ್ಯೂಸ್
04-03-25 10:41 pm Mangalore Correspondent ಕರಾವಳಿ
ಮಂಗಳೂರು, ಮಾ.4 : ನಗರದ ಎಮ್ಮೆಕೆರೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಅಂತರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದ ಈಜು ಪಟುಗಳಿಗೆ ದುಬಾರಿ ಶುಲ್ಕ ವಿಧಿಸಲಾಗುತ್ತದೆ ಎಂಬ ಆರೋಪದ ಬಗ್ಗೆ ಈಜುಕೊಳ ನಿರ್ವಹಣೆ ವಹಿಸಿಕೊಂಡಿರುವ ವಿ ವನ್ ಅಕ್ವಾ ಸೆಂಟರ್ ನಿರ್ದೇಶಕ ನವೀನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈಜು ಕೊಳದಲ್ಲಿ ಉತ್ತಮ ಸೌಕರ್ಯಗಳಿದ್ದು ಇಂತಹ ಸ್ವಿಮ್ಮಿಂಗ್ ಪೂಲ್ ಮತ್ತು ನುರಿತ ಕೋಚ್ ಗಳಿಂದ ತರಬೇತಿ ಪಡೆಯಲು ಬೆಂಗಳೂರಿನಂತಹ ನಗರದಲ್ಲಿ 15 ಸಾವಿರ ಕೊಡಬೇಕು. ಮಂಗಳೂರಿನ ಈ ಈಜುಕೊಳದಲ್ಲಿ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ತರಬೇತಿ ಸಿಗುತ್ತಿದ್ದು ಈಜುಕೇಂದ್ರಕ್ಕೆ ಖೇಲೊ ಇಂಡಿಯಾ ಕೇಂದ್ರ ಎಂಬ ಮಾನ್ಯತೆ ಲಭಿಸಿದರೆ ಇನ್ನಷ್ಟು ಸೌಲಭ್ಯ ಮತ್ತು ಉತ್ತಮ ತರಬೇತಿ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನವೀನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡುವಂತಹ ಈಜುಪಟುಗಳು ಮಂಗಳೂರಿನಲ್ಲಿದ್ದಾರೆ. ಅಂತಾರಾಷ್ಟ್ರೀಯ ಈಜು ಒಕ್ಕೂಟ (ಎಫ್‌ಐಎನ್‌ಎ) ನಿಗದಿಪಡಿಸಿದ ಮಾನದಂಡಗಳ ಪ್ರಕಾರ ನಿರ್ಮಾಣಗೊಂಡಿರುವ ಈಜುಕೊಳದ ಸದುಪಯೋಗ ಸಿಗಲಿ ಎಂಬ ಕಾರಣಕ್ಕೆ ಬೆಂಗಳೂರಿನಿಂದ ತರಬೇತುದಾರರನ್ನು ಕರೆಸಿ ಗುಣಮಟ್ಟದ ತರಬೇತಿ ಒದಗಿಸುತ್ತಿದ್ದೇವೆ. ಇಲ್ಲಿನ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಖೇಲೊ ಇಂಡಿಯಾ ಯೋಜನೆಗಳಲ್ಲಿ ಅವಕಾಶ ಪಡೆದಷ್ಟು ಮಂಗಳೂರು ಖೇಲೊ ಇಂಡಿಯಾ ಯೋಜನೆಗೆ ಆಯ್ಕೆ ಸುಲಭವಾಗುತ್ತದೆ ಎಂದರು.

ದೇಶದ 10 ಅಂತಾರಾಷ್ಟ್ರೀಯ ಈಜುಕೊಳಗಳಲ್ಲಿ ಎಮ್ಮೆಕೆರೆ ಈಜುಕೊಳ ಬೆಳಗ್ಗೆ 5.30ರಿಂದ ರಾತ್ರಿ 9.45ರ ವರೆಗೆ ತೆರೆದಿರುತ್ತದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ಈಜುಕೊಳ ನಿರ್ವಹಣೆ ಮತ್ತು ಶಾಲಾ ಮಕ್ಕಳ ತರಬೇತಿಗೆ ಅವಕಾಶವಿರುತ್ತದೆ. ನೀರಿನ ಪಿ.ಎಚ್ ಮಟ್ಟ 7.25 ರಿಂದ 7.50ರ ನಡುವೆ ಕಾಯ್ದುಕೊಂಡು ಬರಲಾಗುತ್ತಿದೆ. ತರಬೇತಿದಾರರು ಹಾಗೂ ಜೀವ ರಕ್ಷಕರು ಈಜುಕೊಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಶುಲ್ಕ ದುಬಾರಿ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, 50 ಲಕ್ಷ ರು. ಭದ್ರತಾ ಠೇವಣಿ ಹಾಗೂ ತಿಂಗಳಿಗೆ 2.61 ಲಕ್ಷ ರು. ಶುಲ್ಕ ನೀಡಿ ಮೂರು ತಿಂಗಳಿನಿಂದ ನಿರ್ವಹಣೆ ಮಾಡುತ್ತಿದ್ದೇವೆ. ಮೂರು ತಿಂಗಳುಗಳಲ್ಲಿ 3 ಸಾವಿರ ಮಂದಿ ತರಬೇತಿ ಪಡೆದಿದ್ದಾರೆ. 12 ವರ್ಷದೊಳಗಿನ ಮಕ್ಕಳಿಗೆ ಕೊಳದ ಶುಲ್ಕ ಸೇರಿ ತಿಂಗಳಿಗೆ 3500 ರೂ. ಪಡೆಯುತ್ತೇವೆ. ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಹಾಗೂ ರಾಜ್ಯ ಮಟ್ಟದಲ್ಲಿ ಪದಕ ಗೆದ್ದ ಈಜು ಪಟುಗಳಿಗೆ ರಿಯಾಯಿತಿ ಇದ್ದು ಒಂದು ಸಾವಿರ ಅಷ್ಟೇ ಶುಲ್ಕ ಪಡೆಯುತ್ತೇವೆ. ಇತರ ಸಾರ್ವಜನಿಕರಿಗೆ ತರಬೇತಿ ಸಹಿತ ನಾಲ್ಕು ಸಾವಿರ ಪಡೆಯುತ್ತೇವೆ. ಭದ್ರತಾ ಸಿಬ್ಬಂದಿ, ಮೇಲ್ವಿಚಾರಕರು ಹಾಗೂ ವ್ಯವಸ್ಥಾಪಕರ ವೇತನವನ್ನೂ ನೀಡಬೇಕು. ಎಲ್ಲ ಸೇರಿ ತಿಂಗಳಿಗೆ ನಮಗೆ 11 ಲಕ್ಷ ವೆಚ್ಚವಾಗುತ್ತದೆ. ಇದೇ ಗುಣಮಟ್ಟದ ತರಬೇತಿಯನ್ನು ಬೆಂಗಳೂರಿನಲ್ಲಿ ₹ 15 ಸಾವಿರದಷ್ಟು ಶುಲ್ಕ ನೀಡಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿ ವನ್ ಅಕ್ವಾ ಸೆಂಟರ್ ಅಧ್ಯಕ್ಷ ಮಧುರಾಜ್, ಗೌರವ ಅಧ್ಯಕ್ಷ ಡಾ.ನಾಗೇಂದ್ರ, ಆಡಳಿತ ಪಾಲುದಾರರಾದ ರೂಪಾ ಜಿ.ಪ್ರಭು, ಹಿರಿಯ ತರಬೇತುದಾರ ಲೋಕರಾಜ್ ವಿಟ್ಲ, ಶೆರ್ಲಿ ರೇಗೊ ಭಾಗವಹಿಸಿದ್ದರು.
National-level swimmers will get concession in user fees at the new Yemmekere swimming pool, which has been built using funds under the Mangaluru Smart City Limited. It will be similar to the concession they get at the Mangala swimming pool of Mangaluru City Corporation.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm