ಬ್ರೇಕಿಂಗ್ ನ್ಯೂಸ್
06-03-25 02:58 pm Udupi Correspondent ಕರಾವಳಿ
ಉಡುಪಿ, ಮಾ 06: ಕ್ರಿಮಿನಲ್ನ ಹೆಡೆಮುರಿ ಕಟ್ಟಲು ನೆಲಮಂಗಲ ಪೊಲೀಸರು ಉಡುಪಿಗೆ ಬಂದಿದ್ದರು. ಅಂದುಕೊಂಡಂತೆ ಆ ನಟೋರಿಯಸ್ ಪೊಲೀಸರ ಕಣ್ಣಿಗೆ ಬಿದ್ದ. ಇನ್ನೇನು ಹಿಡಿದೇ ಬಿಟ್ರು ಅನ್ನುವಷ್ಟರಲ್ಲಿ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ನಂತರ ಆಗಿದ್ದು ಸಿನಿಮಾವನ್ನೂ ಮೀರಿಸೋ ರೋಚಕ ಚೇಸಿಂಗ್. ಈ ವೇಳೆ ಕಿರಾತಕ ಮಾಡಿದ ಅನಾಹುತಗಳು ಅಷ್ಟಿಷ್ಟಲ್ಲ!
ಪ್ರಕರಣ ಒಂದಕ್ಕೆ ಸಂಬಂಧಿಸಿ ಬೆಂಗಳೂರಿನಿಂದ ಬಂದಿದ್ದ ಪೊಲೀಸರು, ಮಣಿಪಾಲದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲು ಮುಂದಾಗಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಕ್ರಿಮಿನಲ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಮನಬಂದಂತೆ ಕಾರು ಓಡಿಸಿದ್ದಾರೆ. ಬೇತಾಳದಂತೆ ಕಾಡಿದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸುತ್ತಾನೆ. ಕೂಡಲೇ ಅಲರ್ಟ್ ಆದ ನೆಲಮಂಗಲ ಪೊಲೀಸರು, ಸ್ಥಳೀಯ ಮಣಿಪಾಲ ಪೊಲೀಸರಿಗೆ ವಿಷಯ ತಿಳಿಸುತ್ತಾರೆ. ಅಲ್ಲಿಗೆ ಎಂಟ್ರಿಯಾಗಿದ್ದೇ, ಇನ್ಸ್ಪೆಕ್ಟರ್ ದೇವರಾಜ್ ಅಂಡ್ ಟೀಮ್.
ಪೊಲೀಸರು ಬೆನ್ನು ಬಿದ್ದಿರೋದು ಗೊತ್ತಾಗುತ್ತಿದ್ದಂತೆಯೇ ಮನಸೋ ಇಚ್ಛೆ ನಟೋರಿಯಸ್ ತನ್ನ ಕಾರನ್ನು ಓಡಿಸಿದ್ದಾನೆ. ಎದುರಿಗೆ ಸಿಕ್ಕ, ಸಿಕ್ಕ ವಾಹನಗಳಿಗೆ ಬೇಕು ಅಂತಲೇ ಅಪಘಾತ ಮಾಡಿದ್ದಾನೆ. ಸರಣಿ ಅಪಘಾತ ಮಾಡಿ ಪರಾರಿ ಆಗಲು ಯತ್ನಿಸಿದ್ದಾನೆ. ನಾಲ್ಕು ಕಾರು ಹಾಗು ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಕೊನೆಗೂ ಪೊಲೀಸರು, ಮಣಿಪಾಲದ ಮಣ್ಣ ಪಳ್ಳದ ಬಳಿ ಕುಖ್ಯಾತ ವ್ಯಕ್ತಿಯನ್ನ ಬಂಧಿಸಿದ್ದಾರೆ.
ಯಾರು ಆತ..?
ಪೊಲೀಸರು ಬಂಧಿಸಿದ ಆರೋಪಿ ಹೆಸರು ಇಸ್ಸಾಕ್. ಈತ ಬೇರೆ ಯಾರೂ ಅಲ್ಲ. ಕುಖ್ಯಾತ ಗರುಡ ಗ್ಯಾಂಗ್ನ ಸದಸ್ಯ. ಈ ಗರುಡ ಗ್ಯಾಂಗ್ ಕರಾವಳಿಯ ನಟೋರಿಯಸ್ ಗ್ಯಾಂಗ್. ಡ್ರಗ್ಸ್, ರೌಡಿಸಂ, ಗ್ಯಾಂಗ್ ವಾರ್ ಮೂಲಕ ಪಾತಕ ಲೋಕದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಕಳೆದ ವರ್ಷ ಉಡುಪಿಯಲ್ಲಿ ನಡೆದಿದ್ದ ತಲ್ವಾರ್ ಕಾಳಗದಲ್ಲೂ ಇದೇ ಗ್ಯಾಂಗ್ ಭಾಗಿಯಾಗಿತ್ತು. ಉಡುಪಿಯ ಕುಂಜಿಬೆಟ್ಟುವಿನ ನಡು ರಸ್ತೆಯಲ್ಲಿ ತಲ್ವಾರ್ ಬೀಸಿ ಅಟ್ಟಹಾಸ ಮೆರೆದಿತ್ತು. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಅಂದು ಮಿಸ್ ಆಗಿದ್ದ ಇಸ್ಸಾಕ್ ಇಂದು ಪತ್ತೆಯಾಗಿದ್ದಾನೆ. ತಲ್ವಾರ್ ಪ್ರಕರಣದಲ್ಲಿ ಇಸ್ಸಾಕ್ಗಾಗಿ ಉಡುಪಿ ಮತ್ತು ಮಣಿಪಾಲ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಸಿಕ್ಕಿರಲಿಲ್ಲ. ಈಗ ನೆಲಮಂಗಲ ಪೊಲೀಸರ ಕಾರ್ಯಾಚರಣೆ ವೇಳೆ ಇಸ್ಸಾಕ್ ಬಂಧನ ಆಗಿದೆ. ಇಸ್ಸಾಕ್ ಇದ್ದ ಕಾರಿನಲ್ಲಿ ಓರ್ವ ಯುವತಿ ಕೂಡ ಇದ್ಲು ಎಂಬ ವಿಚಾರ ಬೆಳಕಿಗೆ ಬಂದಿದೆ. ಚೇಸಿಂಗ್ ವೇಳೆ ಎರಡು ಪೊಲೀಸ್ ವಾಹನಗಳು ಜಖಂ ಆಗಿವೆ.
ಒಟ್ಟಾರೆಯಾಗಿ ಹಿಂದೆಂದೂ ಕಾಣದ ರೀತಿಯಲ್ಲಿ ರಣರೋಚಕ ಪೊಲೀಸ್ ಕ್ರಿಮಿನಲ್ ಚೇಸಿಂಗ್ ಕಂಡು ಮಣಿಪಾಲದ ಜನ ದಂಗಾಗಿದ್ದಾರೆ. ಈಗಾಗಲೇ ನಟೋರಿಯಸ್ ಕ್ರಿಮಿನಲ್ ಹಾಗೂ ಆತನ ಸ್ನೇಹಿತೆ ಪೋಲೀಸರ ವಶದಲ್ಲಿದ್ದು ವಿಚಾರಣೆ ಮುಂದುವರೆದಿದೆ.
In a dramatic turn of events late Tuesday night, a member of the Garuda Gang, identified as Isaac, managed to escape after a high-speed police chase in Manipal. While he fled on foot after abandoning his car, police have taken his girlfriend into custody for questioning and have registered an FIR in connection with the incident. The chase took place when the Nelamangala Rural Police, who had registered multiple cases against Isaac, received a tip-off about his presence in Manipal. A team of officers reached the town and alerted the Manipal Police, who joined the operation.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm