ಬ್ರೇಕಿಂಗ್ ನ್ಯೂಸ್
12-03-25 09:54 pm Mangalore Correspondent ಕರಾವಳಿ
ಉಳ್ಳಾಲ, ಮಾ.12 : ದಿಗಂತ್ ನಾಪತ್ತೆ ಪ್ರಕರಣದಲ್ಲಿ ಸೌಹಾರ್ದ ಕೆಡಿಸಲು ಯತ್ನಿಸಿದ ಬಿಜೆಪಿ ಶಾಸಕರು, ಸಂಘ ಪರಿವಾರದ ಮುಖಂಡರು ಮತ್ತು ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಹಿಂದೂ ಯುವಕರು ಅನ್ಯ ಸಮಾಜದ ಯುವತಿಯರನ್ನ ಪ್ರೀತಿಸಿ ಎಂದು ಪ್ರಚೋದನಕಾರಿ ಹೇಳಿಕೆ ಕೊಟ್ಟ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಬಂಟ್ವಾಳ ಗ್ರಾಮಾಂತರ ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಸ್ ಡಿಪಿಐ ಮಂಗಳೂರು ವಿಧಾನಸಭೆ ಕ್ಷೇತ್ರದ ವತಿಯಿಂದ ದೂರು ದಾಖಲಿಸಲಾಗಿದೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯ ಮಾಡಿದ್ದೇವೆ ಎಂದು ಎಸ್ ಡಿಪಿಐ ಮುಖಂಡರು ಆಗ್ರಹಿಸಿದ್ದಾರೆ.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಅಡ್ಯಾರ್ ಗ್ರಾಪಂ ಅಧ್ಯಕ್ಷ ಹಾಗೂ ಎಸ್ಡಿಪಿಐ ಮುಖಂಡ ಯಾಸೀನ್ ಅರ್ಕುಳ ಮಾತನಾಡಿ, ವಿಧಾನಸಭೆ ಕಲಾಪದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯು ಸಂಜೆ 7 ಗಂಟೆಗೆ ಡೆಡ್ ಆಗುತ್ತಿದೆ ಎಂದದ್ದೇ ಮಂಗಳಾರತಿ ಎತ್ತಿದಂಗಿತ್ತು. ಆದರೆ ಇದೀಗ ಇಲ್ಲಿ ನಡೆಯುತ್ತಿರುವ ಮತೀಯವಾದ ಬೆಳವಣಿಗೆಯಲ್ಲಿ ಜಿಲ್ಲೆಯು 7 ಗಂಟೆಯಲ್ಲ, 5 ಗಂಟೆಗೆ ಡೆಡ್ ಆಗುವ ಎಲ್ಲ ಸೂಚನೆಗಳು ಎದ್ದು ಕಾಣುತ್ತಿವೆ. ಸ್ಪೀಕರ್ ಹಾಗೂ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕರ ಹೇಳಿಕೆ ಪಡೆದು, ಮುಖ್ಯಮಂತ್ರಿಗಳಿಗೆ ಸೂಚಿಸಿ ದಿಗಂತ್ ಪ್ರಕರಣ ಹಾಗೂ ಪ್ರಚೋದನಾತ್ಮಕ ಮಾತುಗಳನ್ನಾಡಿದವರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಂಘ ಪರಿವಾರ ಮತ್ತು ಬಿಜೆಪಿ ಶಾಸಕರು ಸಮಾಜವನ್ನ ಒಡೆಯಲು ಕಾಯುತ್ತಿರುತ್ತಾರೆ. ಇವರಿಗೆ ಕ್ಷೇತ್ರ ಅಥವಾ ಜಿಲ್ಲೆಯ ಯಾವುದೇ ಅಭಿವೃದ್ಧಿ ಅಗತ್ಯವಿಲ್ಲ. ಕೊಣಾಜೆಯಲ್ಲಿ ಈ ಹಿಂದೆ ನಡೆದಿದ್ದ ಕಾರ್ತಿಕ್ ಕೊಲೆಯಲ್ಲೂ ಮುಸಲ್ಮಾನರನ್ನ ಎತ್ತಿ ಕಟ್ಟುವ ಕೆಲಸಗಳು ನಡೆದಿತ್ತು. ಅಂದಿನ ಸಂಸದ ನಳಿನ್ ಕಟೀಲ್ ಜಿಲ್ಲೆಗೆ ಬೆಂಕಿ ಕೊಡುತ್ತೇವೆಂದು ಹೇಳಿಕೆ ನೀಡಿದ್ದರು. ಕೊನೆಗೆ ಕೌಟುಂಬಿಕ ಕಲಹದಿಂದ ಕಾರ್ತಿಕ್ ಕೊಲೆ ನಡೆದ ವಿಚಾರ ತಿಳಿದು ತೆಪ್ಪಗಾಗಿದ್ದರು.
ಎಲ್ಲಾ ಸಮುದಾಯದವರು ಗೌರವಿಸುವ ಕೊರಗಜ್ಜನ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಚಕ್ರವರ್ತಿ ಸೂಲಿಬೆಲೆಯಂತವರನ್ನ ವೇದಿಕೆ ಹತ್ತಲು ಬಿಡಬಾರದು. ಧಾರ್ಮಿಕ ಶ್ರದ್ಧಾಕೇಂದ್ರಕ್ಕೆ ಕಳಂಕ, ಅವಮಾನ ಉಂಟು ಮಾಡಿರುವ ಸೂಲಿಬೆಲೆ ಹೇಳಿಕೆಯನ್ನ ನಾವು ಖಂಡಿಸುತ್ತೇವೆ. ದೇವಸ್ಥಾನದ ವಿಚಾರಕ್ಕಾಗಿ ನಡೆದ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈ ಜೈಲಿನಿಂದ ಬಿಡುಗಡೆಯಾಗುವ ಸಂದರ್ಭ ಸೂಲಿಬೆಲೆ ಹೂಹಾರ ಹಾಕಿ ಸ್ವಾಗತ ಮಾಡುತ್ತಾರೆ. ಕೊಲೆಗಡುಕರ ಜೊತೆಗಿರುವ ವ್ಯಕ್ತಿಗೆ ಹಿಂದೂ ಧರ್ಮಕ್ಕೆ ಮಾರ್ಗದರ್ಶನ, ಬೋಧನೆ ನಡೆಸಲು ಯಾವ ನೈತಿಕತೆಯಿದೆಯೆಂದು ಪ್ರಶ್ನಿಸಿದರು.
ಎಸ್ಡಿಪಿಐ ಫರಂಗಿಪೇಟೆ ಬ್ಲಾಕ್ ಕಾರ್ಯದರ್ಶಿ, ಪುದು ಗ್ರಾಪಂ ಸದಸ್ಯ ಮಹಮ್ಮದ್ ಶಾಫಿ ಮಾತನಾಡಿ ಊರೊಳಗಿನ ಒಗ್ಗಟ್ಟನ್ನು ಮುರಿಯಲು ಹೊರಗಿನಿಂದ ಬಂದ ಸಂಘ ಪರಿವಾರ ಪ್ರೇರಿತ ಶಕ್ತಿಗಳು ಅಮ್ಮೆಮಾರ್ ಪ್ರದೇಶದ ಬಹುತೇಕ ಮುಸ್ಲಿಮರು ಗಾಂಜಾ ವ್ಯಸನಿಗಳೆಂದು ಆರೋಪಿಸಿದ್ದರು. ಸಂಘ ಪರಿವಾರದವರು ಕರೆ ಕೊಟ್ಟ ಫರಂಗಿಪೇಟೆ ಬಂದ್ ಗೆ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳು ಬೆಂಬಲ ಸೂಚಿಸಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕರು ಪೊಲೀಸ್ ಇಲಾಖೆಗೆ ಸವಾಲು ಎಂಬಂತೆ ಮಾತನಾಡುತ್ತಾರೆ. ಅಂತಹ ಶಾಸಕರ ವಿರುದ್ಧ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದರು.
ಎಸ್ ಡಿಪಿಐ ಕ್ಷೇತ್ರಾಧ್ಯಕ್ಷ ಬಶೀರ್ ಎಸ್.ಎಂ., ಉಪಾಧ್ಯಕ್ಷರಾದ ನಝೀರ್ ಫರಂಗಿಪೇಟೆ, ಪ್ರಮುಖರಾದ ಇಮ್ತಿಯಾಝ್ ಕೋಟೆಪುರ, ಪುದು ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಫರಂಗಿಫೇಟೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Mangalore SDPI files police complaint in Bantwal, Ullal against BJP MLAs who tried to spoil the harmony in Diganth missing case.
19-09-25 09:45 am
Bangalore Correspondent
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 11:11 pm
Mangalore Correspondent
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm