Mangalore rain, Heat wave: ಮಂಗಳೂರು ನಗರಕ್ಕೆ ಸಿಡಿಲಿನ ಆರ್ಭಟದಲ್ಲೇ ಕಾಲಿಟ್ಟ ಮಳೆರಾಯ ! ಚೆಂಡೆ ಮದ್ದಲೆಯ ಬಳಿಕ ಧೋ ಎಂದು ಸುರಿದು ಬಿಟ್ಟ ! 

12-03-25 11:10 pm       Mangalore Correspondent   ಕರಾವಳಿ

ಸುಡು ಬಿಸಿಲಿನ ಬೇಗೆಯಲ್ಲಿ ಬೇಸತ್ತಿದ್ದ ಮಂಗಳೂರು ನಗರದಲ್ಲಿ ಬೇಸಗೆಯ ನಡುವಿನಲ್ಲೇ ಮಳೆರಾಯ ಆರ್ಭಟದ ಎಂಟ್ರಿ ಕೊಟ್ಟಿದ್ದಾನೆ. ಮಾ.12ರ ಸಂಜೆಯಿಂದಲೆ ಸಿಡಿಲು ಮಿಂಚು ಆರ್ಭಟಿಸಿದ್ದು ರಾತ್ರಿ 9.30ರ ಬಳಿಕ ಧೋ ಎಂದು ಮಳೆರಾಯ ಸುರಿದು ಬಿಟ್ಟಿದ್ದಾನೆ. 

ಮಂಗಳೂರು, ಮಾ.12 : ಸುಡು ಬಿಸಿಲಿನ ಬೇಗೆಯಲ್ಲಿ ಬೇಸತ್ತಿದ್ದ ಮಂಗಳೂರು ನಗರದಲ್ಲಿ ಬೇಸಗೆಯ ನಡುವಿನಲ್ಲೇ ಮಳೆರಾಯ ಆರ್ಭಟದ ಎಂಟ್ರಿ ಕೊಟ್ಟಿದ್ದಾನೆ. ಮಾ.12ರ ಸಂಜೆಯಿಂದಲೆ ಸಿಡಿಲು ಮಿಂಚು ಆರ್ಭಟಿಸಿದ್ದು ರಾತ್ರಿ 9.30ರ ಬಳಿಕ ಧೋ ಎಂದು ಮಳೆರಾಯ ಸುರಿದು ಬಿಟ್ಟಿದ್ದಾನೆ. 

ಸುಡು ಬಿಸಿಲು ಬಂದರೆ ಮಳೆಯೂ ಅದೇ ರೀತಿಯ ವರ್ತನೆ ತೋರುವುದಂತೆ. ಪ್ರಕೃತಿಯ ಮುನಿಸಿನ ಉತ್ತರವೇ ಇದು. ಮಾನವನ ಅತಿದಾಹಕ್ಕೆ ಪ್ರತಿಯಾಗಿ ಬಿಸಿಲಿನ ತಾಪವೂ ಏರುತ್ತಿದೆ. ಹಿಂದೆಂದೂ ಕಂಡರಿಯದ ರೀತಿ ಈ ಬಾರಿ ಬಿಸಿಲು ಆವರಿಸಿತ್ತು. ಉತ್ತರ ಕರ್ನಾಟಕದ ಬಿಸಿಲಿನ ಝಳದ ರೀತಿ ಇದೇ ಮೊದಲ ಬಾರಿಗೆ 40 ಡಿಗ್ರಿ ದಾಟಿದ ಬಿಸಿಲು ಬಂದಿತ್ತು. ಕರಾವಳಿಯಲ್ಲಿ ಇಷ್ಟೊಂದು ಬಿಸಿಲು ಏರಿದರೆ ಪಕ್ಕದ ಸಮುದ್ರದ ನೀರು ಆವಿಯಾಗಿ ಮೋಡವಾಗಲೇಬೇಕಷ್ಟೆ. ಅದರ ಪ್ರತಾಪ ಈಗ ಕಾಣಿಸುತ್ತಿದೆ. 

ಸಂಜೆ ನಾಲ್ಕರಿಂದ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿಗೆ ಸೀಮಿತವಾಗಿದ್ದ ಮಳೆ ರಾತ್ರಿಯಾಗುತ್ತಿದ್ದಂತೆ ಕರಾವಳಿಗೂ ಮುಖ ಮಾಡಿತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗಿದ್ದು ಬಳಲಿ ಬೆಂಡಾಗಿದ್ದ ಇಳೆ ಚೂರು ಉಸಿರು ಎಳಕೊಂಡಿದೆ. ಆದರೆ ಮಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಎಷ್ಟು ಮಳೆ ಬಂದರೂ ಅಷ್ಟೇ. ಮಳೆ ಬಂದ ವೇಗದಲ್ಲೇ ಇಳಿದು ಹೋಗುತ್ತದೆ. ‌ಮಳೆಯಾದರೆ ಮಳೆ, ಇಲ್ಲದಿದ್ದರೆ ಖಾಲಿ ಖಾಲಿ.

Mangalore city has been hit by severe thunderstorms and heavy rainfall, providing a stark contrast to the ongoing heat wave conditions that have gripped the region.