ಬ್ರೇಕಿಂಗ್ ನ್ಯೂಸ್
13-03-25 08:46 pm Mangalore Correspondent ಕರಾವಳಿ
ಮಂಗಳೂರು, ಮಾ.13 : ದೇಶಾದ್ಯಂತ ನಿಷೇಧಗೊಂಡಿದ್ದ PFI ಸಂಘಟನೆ ಕರಾವಳಿಯಲ್ಲಿ ಮತ್ತೆ ಆ್ಯಕ್ಟಿವ್ ಆಗ್ತಿದೆಯಾ ಎನ್ನುವ ಅನುಮಾನ ಮೂಡಿದೆ. ಇದಕ್ಕೆ ಕಾರಣವಾಗಿರೋದು, ಮಂಗಳೂರಿನಲ್ಲಿ ಪಿಎಫ್ಐ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಮುಖಂಡರಿಗೆ ಪಿಸ್ತೂಲ್ ಪೂರೈಕೆ ಆಗುತ್ತಿರೋದು.
ಮಂಗಳೂರು ಪೊಲೀಸರು ಅಕ್ರಮ ಪಿಸ್ತೂಲ್ ಮಾರಾಟ ಜಾಲವನ್ನು ಭೇದಿಸಿದ್ದು ಪ್ರಕರಣದಲ್ಲಿ ನಿಷೇಧಿತ ಪಿಎಫ್ಐ ನಂಟು ಇರುವುದು ಬೆಳಕಿಗೆ ಬಂದಿದೆ. ಕೇರಳ ಮೂಲದ ನಟೋರಿಯಸ್ ವೆಪನ್ ಡೀಲರ್ ಸೇರಿದಂತೆ ಐವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಕತರ್ನಾಕ್ ಕ್ರಿಮಿನಲ್ ಗಳಾದ ಅಬ್ದುಲ್ ಲತೀಫ್, ಮನ್ಸೂರ್, ನೌಫಾಲ್, ಮಹಮ್ಮದ್ ಅಸ್ಗರ್, ಮಮಹಮ್ಮದ್ ಸಾಲಿ ಎಂಬವರನ್ನು ಬಂಧಿಸಿದ್ದು ಅವರಿಂದ ಮೂರು ಪಿಸ್ತೂಲ್ ಹಾಗೂ ಜೀವಂತ ಮದ್ದು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ತನಿಖೆ ಸಂದರ್ಭದಲ್ಲಿ ಆರೋಪಿಗಳು ಮುಂಬೈಯಿಂದ ಅಕ್ರಮ ಪಿಸ್ತೂಲ್ ಸರಬರಾಜು ನಡೆಸುತ್ತಿರುವುದು ಬಯಲಾಗಿದೆ. ಇದಲ್ಲದೆ, ಮಂಗಳೂರಿನಲ್ಲಿ ಸಮಾಜ ಘಾತುಕ ಶಕ್ತಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವ ವಿಚಾರವೂ ಪತ್ತೆಯಾಗಿದೆ. ಸದ್ಯದ ವಿಚಾರಣೆಯಲ್ಲಿ ಪ್ರಮುಖ ಆರೋಪಿ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ ಪಿಎಫ್ ಐ ಮುಖಂಡರಿಗೆ ಪಿಸ್ತೂಲ್ ನೀಡುತ್ತಿರುವುದು ದೃಢಪಟ್ಟಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಎರಡು ತಿಂಗಳ ಹಿಂದೆ ವಾಮಂಜೂರಿನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಬದ್ರುದ್ದೀನ್ ಮತ್ತು ಇಮ್ರಾನ್ ಎಂಬಿಬ್ಬರನ್ನು ಬಂಧಿಸಲಾಗಿತ್ತು. ಇವರಿಬ್ಬರೂ ನಿಷೇಧಿತ ಪಿಎಫ್ಐ ಸಂಘಟನೆ ಮುಖಂಡರಾಗಿದ್ದರು ಎನ್ನುವ ವಿಚಾರವೂ ತಿಳಿದುಬಂದಿತ್ತು. ಅಂದು ಕಂಕನಾಡಿ ಠಾಣೆಯ ರೌಡಿ ಶೀಟರ್ ಬದ್ರುದ್ದೀನ್ ಯಾನೆ ಅದ್ದು ಎಂಬಾತನ ಕೈಯಲ್ಲಿದ್ದ ಪಿಸ್ತೂಲ್ ನಿಂದ ಹಾರಿದ್ದ ಗುಂಡು ಮುಸ್ಲಿಂ ಧರ್ಮಗುರು ಸಫ್ವಾನ್ ಹೊಟ್ಟೆ ಸೇರಿತ್ತು. ತನಿಖೆ ನಡೆಸಿದಾಗ ರೌಡಿಶೀಟರ್ ಬದ್ರುದ್ದೀನ್ ಗೆ ಇಮ್ರಾನ್ ಎಂಬಾತ ಪಿಸ್ತೂಲ್ ನೀಡಿದ್ದ ಎಂಬುದು ಪತ್ತೆಯಾಗಿತ್ತು.
ಆತನನ್ನು ವಿಚಾರಣೆ ನಡೆಸಿದಾಗ, ಇಮ್ರಾನ್ ಗೆ ಪಿಸ್ತೂಲ್ ಸರಬರಾಜು ಮಾಡಿದ್ದೇ ಕೇರಳ ಮೂಲದ ಅಬ್ದುಲ್ ಲತೀಫ್ ಎಂಬ ವಿಚಾರ ತಿಳಿದುಬಂದಿತ್ತು. ಅದರಂತೆ, ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಇದೀಗ ಅಬ್ದುಲ್ ಲತೀಫ್ ನನ್ನು ತಲಪಾಡಿ ಗಡಿಯಲ್ಲಿ ಬಂಧಿಸಿದ್ದಾರೆ. ಶೂಟೌಟ್ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಸೀದಿ ಗುರು ಸಫ್ವಾನ್ (25) ಕೂಡ ಪಿಎಫ್ಐ ಸಂಘಟನೆ ಸದಸ್ಯನಾಗಿದ್ದ. ಹೀಗಾಗಿ ಅಬ್ದುಲ್ ಲತೀಫ್ ಮತ್ತಿತರರು ಮಂಗಳೂರಿನಲ್ಲಿ ಹಳೆಯ ಪಿಎಫ್ಐ ಪ್ರಮುಖರಿಗೆ ಸದ್ದಿಲ್ಲದೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.
ಕೇರಳದಲ್ಲಿ ಈ ಹಿಂದೆ ಪಿಎಫ್ಐ ಸಂಘಟನೆ ಬಲವಾಗಿ ಬೇರೂರಿತ್ತು. ಪಿಎಫ್ಐ ಮಾತೃ ಸಂಘಟನೆಯಾಗಿದ್ದರೆ, ಅದರ ರಾಜಕೀಯ ಭಾಗವೇ ಎಸ್ಡಿಪಿಐ ಆಗಿ ಅಲ್ಲಿ ಬೆಳೆದು ಬಂದಿತ್ತು. ಆನಂತರ, ಪಿಎಫ್ಐ ದೇಶ ವಿರೋಧಿ ಚಟುವಟಿಕೆ ಪತ್ತೆಯಾಗಿದ್ದರಿಂದ ಕೇಂದ್ರ ಸರ್ಕಾರ ಅದನ್ನು 2022ರ ಸೆಪ್ಟೆಂಬರ್ ನಲ್ಲಿ ನಿಷೇಧ ಮಾಡಿತ್ತು. ಇದೀಗ ಬಂಧಿತರಾದವರು ಕೇರಳದಲ್ಲಿ ಪಿಎಫ್ಐ ಜೊತೆಗೆ ನೇರ ಸಂಬಂಧ ಹೊಂದಿರುವ ಅನುಮಾನಗಳಿದ್ದು ಕರ್ನಾಟಕ ಕರಾವಳಿಯಲ್ಲು ಮತ್ತೆ ದೇಶ ವಿರೋಧಿ ಚಟುವಟಿಕೆಗೆ ನೀರೆರೆಯುತ್ತಿದ್ದಾರೆಯೇ ಎಂಬ ಶಂಕೆ ಮೂಡಿದೆ.
ಅಬ್ದುಲ್ ಲತೀಫ್ ಮಂಗಳೂರು ಸೇರಿದಂತೆ ಕರ್ನಾಟಕ ಕರಾವಳಿಯಲ್ಲಿ ಹಲವೆಡೆ ಪಿಸ್ತೂಲ್ ಸರಬರಾಜು ಮಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಪ್ರಕರಣದ ಬಗ್ಗೆ ಗಂಭೀರ ತನಿಖೆ ಆರಂಭಿಸಿದ್ದಾರೆ.
Police authorities in Mangalore are grappling with allegations surrounding the banned organization, the Popular Front of India (PFI). Reports have emerged of a potential resurgence of the group, particularly concerning illegal arms supply to its leaders in coastal areas.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm