ಬ್ರೇಕಿಂಗ್ ನ್ಯೂಸ್
16-03-25 10:55 pm Mangalore Correspondent ಕರಾವಳಿ
ಮಂಗಳೂರು, ಮಾ.16: ನಾವು ನಿರಂತರವಾಗಿ ತುಳು ಭಾಷೆಯಲ್ಲೇ ಮಾತನಾಡುವುದರಿಂದ ತುಳು ಭಾಷೆ ಇಷ್ಟೊಂದು ಬೇರೂರಲು ಕಾರಣವಾಗಿದೆ. ಬೇರೆ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಹೇಳುವಾಗ ಹೆಮ್ಮೆ ಎನಿಸುತ್ತದೆ. ತುಳು ಭಾಷೆಯನ್ನು ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಂಪನಿಗಳಲ್ಲಿ ಕೆಲಸಕ್ಕಾಗಿ ಮೀಸಲಾತಿ ಕಲ್ಪಿಸಬೇಕೆಂದು ಸರಕಾರದ ಗಮನಕ್ಕೆ ತಂದಿದ್ದೇನೆ ಎಂದು ವಿಧಾನಸಭೆ ಅಧ್ಯಕ್ಷ ಯುಟಿ ಖಾದರ್ ಹೇಳಿದ್ದಾರೆ.
ಉರ್ವಾ ಸ್ಟೋರಿನ ತುಳು ಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ನಡೆದ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ, ತುಳು ಅಕಾಡೆಮಿ ಮೂಲಕ ಇನ್ನಷ್ಟು ತುಳು ಸಾಹಿತ್ಯ ಸಾಧಕರನ್ನು ಗುರುತಿಸುವ ಕೆಲಸ ಆಗಬೇಕು ಎಂದು ಹೇಳಿದರು.
ತುಳುವಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ದಿಕ್ಸೂಚಿ ಮಾತನಾಡಿ, ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯವಾಗದ್ದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣವಾಗಿದೆ. 2004ರಲ್ಲಿ ವಾಜಪೇಯಿ ಸರಕಾರ ಇದ್ದಾಗ ಪರಿಚ್ಛೇದಕ್ಕೆ ಸೇರಿಸುವ ಪಟ್ಟಿಯಲ್ಲಿದ್ದ ಐದು ಭಾಷೆಗಳಲ್ಲಿ ತುಳು ಹೊರತುಪಡಿಸಿ ನಾಲ್ಕನ್ನು ಸೇರಿಸಲಾಗಿತ್ತು. ಈಗ ಆ ಪಟ್ಟಿ 125ಕ್ಕೆ ಮುಟ್ಟಿದೆ. ಅಷ್ಟೂ ಭಾಷೆಗಳ ನಡುವೆ ತುಳು ಹೋರಾಟ ಮಾಡಬೇಕಾಗಿದೆ ಎಂದರು. ಪ್ರಾದೇಶಿಕ ಭಾಷೆಗಳ ಅಸ್ತಿತ್ವವೇ ಅಲುಗಾಡುತ್ತಿದೆ. ಇನ್ನು 30 ವರ್ಷಗಳಲ್ಲಿ ಜಗತ್ತಿನಲ್ಲಿ ಅಮೆರಿಕನ್ ಇಂಗ್ಲಿಷ್, ಜರ್ಮನ್, ಚೈನೀಸ್ ಸೇರಿ ಐದು ಭಾಷೆಗಳಷ್ಟೇ ಸಾರ್ವಕಾಲಿಕ ಅನ್ನುವಂತೆ ಆಗಲಿದೆ. ಉಳಿದೆಲ್ಲ ಮಾತನಾಡುವ ಭಾಷೆಗಳ ಹಂತದಿಂದ ದೂರವಾಗಲಿವೆ ಎಂದರು.
2022ನೇ ಸಾಲಿನ ಸಂಶೋಧನೆ ಹಾಗೂ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಯನ್ನು ಸಂಶೋಧಕ ಡಾ.ರಘುಪತಿ ಕೆಮ್ತೂರು, ತುಳು ನಾಟಕ ಸಿನಿಮಾ ಪ್ರಶಸ್ತಿಯನ್ನು ಪಣಂಬೂರಿನಲ್ಲಿ ಹುಟ್ಟಿ ಬೆಳೆದು ಕೆಎನ್ ಟೇಲರ್ ಕಾಲದಲ್ಲಿ ನಾಟಕದಲ್ಲಿ ಹೆಸರು ಮಾಡಿ ಬೆಂಗಳೂರಿನಲ್ಲಿ ಗಾಯಕಿಯಾಗಿ ಬೆಳೆದಿದ್ದ ರತ್ನಮಾಲ ಪುರಂದರ ಅವರಿಗೆ ಪ್ರದಾನಿಸಲಾಯಿತು. ಜಾನಪದ ಕ್ಷೇತ್ರದ ಪ್ರಶಸ್ತಿಯನ್ನು ಪ್ರಭಾಕರ ಶೇರಿಗಾರ ಉಡುಪಿ ಅವರಿಗೆ ಪ್ರದಾನ ಮಾಡಲಾಯಿತು. 2023ನೇ ಸಾಲಿನ ತುಳು ಸಾಹಿತ್ಯ ಕ್ಷೇತ್ರದ ಪ್ರಶಸ್ತಿಯನ್ನು ಶಿಮಂತೂರು ಚಂದ್ರಹಾಸ ಸುವರ್ಣ ಮುಂಬೈ, ನಾಟಕ ಕ್ಷೇತ್ರದ ಪ್ರಶಸ್ತಿಯನ್ನು ನೆಕ್ಕಿದಪುಣಿ ಗೋಪಾಲಕೃಷ್ಣ ಬೆಂಗಳೂರು, ಜಾನಪದ ಕ್ಷೇತ್ರದ ಪ್ರಶಸ್ತಿಯನ್ನು ಲಕ್ಷ್ಮಣ ಕಾಂತ ಕಣಂತೂರು ಅವರಿಗೆ ಪ್ರದಾನಿಸಲಾಯಿತು.
2024ನೇ ಸಾಲಿನ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಯನ್ನು ಯಶವಂತ ಬೋಳೂರು, ನಾಟಕ- ಸಿನಿಮಾ ಕ್ಷೇತ್ರದ ಪ್ರಶಸ್ತಿಯನ್ನು ಸರೋಜಿನಿ ಎಸ್. ಶೆಟ್ಟಿ, ಕೃಷಿ ಜಾನಪದ ಪ್ರಶಸ್ತಿಯನ್ನು ಬೆಳ್ತಂಗಡಿಯ 80 ವರ್ಷದ ಬಿಕೆ ದೇವರಾವ್ ಅವರಿಗೆ ಪ್ರದಾನಿಸಲಾಯಿತು. ಪುಸ್ತಕ ಪ್ರಶಸ್ತಿಯನ್ನು ರಾಜೇಶ್ ಶೆಟ್ಟಿ ದೋಟ, ರಾಜಶ್ರೀ ರೈ ಪೆರ್ಲ, ರಘು ಇಡ್ಕಿದು, ಕುಶಾಲಾಕ್ಷಿ ವಿ.ಕುಲಾಲ್ ಅವರಿಗೆ ಪ್ರದಾನ ಮಾಡಲಾಯಿತು. ದತ್ತಿನಿಧಿ ಪುಸ್ತಕ ಪ್ರಶಸ್ತಿಯನ್ನು ಕಬ್ಬಿನಾಲೆ ವಸಂತ ಭಾರದ್ವಾಜ್, ಯಶೋಧ ಮೋಹನ್, ಶಾರದಾ ಅಂಚನ್, ಡಾ.ಚಿನ್ನಪ್ಪ ಗೌಡ, ಡಾ.ವಿ.ಕೆ. ಯಾದವ್, ರಘುನಾಥ ವರ್ಕಾಡಿ ಅವರಿಗೆ ನೀಡಲಾಯಿತು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಎಸ್. ಗಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ತುಳು ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ಹಿರಿಯ ಲೇಖಕಿ ಉಷಾ ಪಿ. ರೈ, ಡಾ.ಅಮರಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
Reservation for Students Learning Tulu, Speaker UT Khaders Remarks at Tulu Sahitya Academy Honor and Book Award Ceremony.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm