ಬ್ರೇಕಿಂಗ್ ನ್ಯೂಸ್
18-03-25 10:09 pm Mangalore Correspondent ಕರಾವಳಿ
ಉಳ್ಳಾಲ, ಮಾ.18 : ಜೀವನದಲ್ಲಿ ಎಲ್ಲ ಇದ್ದರೂ ಸಂತಾನವಿಲ್ಲದೆ ಕೊರಗುವ ಅದೆಷ್ಟೋ ದಂಪತಿಗಳಿದ್ದಾರೆ. ಸಂತಾನ ಪ್ರಾಪ್ತಿಗಾಗಿ ಆಸ್ಪತ್ರೆಗಳಿಗೆ ಅಲೆದು ಲಕ್ಷಗಟ್ಟಲೆ ಹಣವನ್ನ ಸುರಿದವರಿದ್ದಾರೆ. ಇದರ ಹೊರತಾಗಿಯೂ ಮಕ್ಕಳಿಲ್ಲದ ಕೊರಗಿನಲ್ಲಿದ್ದ ಅದೆಷ್ಟೋ ದಂಪತಿಗಳಿಗೆ ವೈದ್ಯ ಲೋಕಕ್ಕೆ ಸವಾಲೆಂಬಂತೆ ದೈವೀ ಪವಾಡದಿಂದಲೂ ಸಂತಾನ ಪ್ರಾಪ್ತಿಯಾದ ಸಾಕಷ್ಟು ನಿದರ್ಶನಗಳು ನಮ್ಮಲ್ಲಿವೆ. ಅಂತಹ ಪವಾಡಕ್ಕೆ ಕರ್ನಾಟಕ- ಕೇರಳ ಗಡಿ ಪ್ರದೇಶ ತಲಪಾಡಿಯ ಇತಿಹಾಸ ಪ್ರಸಿದ್ಧ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರವೂ ಪ್ರತ್ಯಕ್ಷ ಸಾಕ್ಷಿಯಾಗಿ ನೆಲೆ ನಿಂತಿದೆ.
ಈ ಕ್ಷೇತ್ರಕ್ಕೆ ಶ್ರೀಗಂಧದ ತುಲಾಭಾರ ಸೇವೆಯ ಹರಕೆ ಹೊತ್ತರೆ ಸಂತಾನ ಪ್ರಾಪ್ತಿಯಾಗುವುದೆಂಬುದು ಪೂರ್ವ ಕಾಲದಿಂದ ಬಂದ ಧೃಢ ನಂಬಿಕೆಯಾಗಿದ್ದು, ನಿನ್ನೆ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮಹಾರಥೋತ್ಸವ ನಡೆದಿದ್ದು ಇಂದು ದುರ್ಗಾಪರಮೇಶ್ವರೀ ತಾಯಿಗೆ ಹರಕೆ ಹೊತ್ತಿದ್ದ ಭಕ್ತಾದಿಗಳು ತುಲಾಭಾರ ಸೇವೆ ಸಲ್ಲಿಸಿ ಕೃತಾರ್ಥರಾದರು.
ತಲಪಾಡಿ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಶ್ರೀಗಂಧದ ತುಲಾಭಾರವು ಸಂತಾನ ಪ್ರಾಪ್ತಿಗಾಗಿ ಅಥವಾ ಆಪತ್ಕಾಲದಲ್ಲಿ ಭಕ್ತರು ಹೊರುವ ಅತ್ಯಂತ ಶ್ರೇಷ್ಠವಾದ ಹರಕೆ ಸೇವೆಯಾಗಿದೆ. ಮಾರ್ಚ್ ತಿಂಗಳಲ್ಲಿ ನಡೆಯುವ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಮಹಾರಥೋತ್ಸವದ ಮಾರನೇ ದಿನ ದೇವಿಯ ಗರ್ಭಗುಡಿಯ ಮುಂದೆಯೇ ತುಲಾಭಾರ ಸೇವೆ ನಡೆಸಲಾಗುತ್ತದೆ. ಈಗಾಗಲೇ ಅನೇಕ ಗೃಹಿಣಿಯರು ಇಲ್ಲಿಗೆ ಹರಕೆ ಹೊತ್ತು ಸಂತಾನ ಪಡೆದು ಶ್ರೀಗಂಧದ ತುಲಾಭಾರ ಹರಕೆಯನ್ನ ಸಲ್ಲಿಸಿ ಕೃತಾರ್ಥರಾಗಿದ್ದಾರೆ.
ಇಲ್ಲಿ ಅನಾದಿ ಕಾಲದಿಂದಲೂ ಶ್ರೀಗಂಧದಿಂದಲೇ ತುಲಾಭಾರ ಮಾಡುವ ವಾಡಿಕೆ ನಡೆಯುತ್ತಲೇ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ಇಷ್ಟದ ವಸ್ತುಗಳಿಂದ ತುಲಾಭಾರ ಮಾಡುವ ಹರಕೆ ಹೊರುತ್ತಿದ್ದಾರೆ. ಹಾಗಾಗಿ ಅಷ್ಟಮಂಗಳ ಪ್ರಶ್ನಾ ಚಿಂತನೆಯ ಪ್ರಕಾರ ಭಕ್ತರು ಯಾವುದೇ ವಸ್ತುಗಳಿಂದ ತುಲಾಭಾರ ಮಾಡಿದರೂ ಅದರೊಟ್ಟಿಗೆ ಕ್ಷೇತ್ರದ ವತಿಯಿಂದ ಶ್ರೀಗಂಧದ ಕೊರಡುಗಳನ್ನು ಇರಿಸಲಾಗುತ್ತದೆ.
ತಲಪಾಡಿ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ತುಲಾಭಾರ ಸೇವೆಗೈದವರು ಬೇರೆ ಯಾವುದೇ ಕ್ಷೇತ್ರಗಳಲ್ಲಿ ತುಲಾಭಾರ ಸೇವೆ ಮಾಡಲಿಕ್ಕಿಲ್ಲ. ಹಾಗೆಯೇ ಇತರ ಕ್ಷೇತ್ರಗಳಲ್ಲಿ ತುಲಾಭಾರ ಸೇವೆಗೈದವರು ತಲಪಾಡಿ ಕ್ಷೇತ್ರದಲ್ಲಿ ತುಲಾಭಾರ ಮಾಡಲೂ ಅವಕಾಶವಿಲ್ಲ. ಒಮ್ಮೆ ತುಲಾಭಾರ ಸೇವೆ ಹರಕೆ ಸಲ್ಲಿಸಿದವರು ಎರಡನೇ ಬಾರೀ ಸೇವೆ ಸಲ್ಲಿಸಲಿಕ್ಕಿಲ್ಲ. ಇದು ಈ ಕ್ಷೇತ್ರದ ಧಾರ್ಮಿಕ ವಿಧಿಯ ವಿಶೇಷ.
ಶ್ರೀಗಂಧದ ತುಲಾಭಾರಕ್ಕೆ 1000 ರೂಪಾಯಿ ಶುಲ್ಕ
ಈಗಿನ ಕಾಲದಲ್ಲಿ ಎಲ್ಲಾ ಭಕ್ತರಿಗೆ ಲಕ್ಷಾಂತರ ರೂಪಾಯಿ ವ್ಯಯಿಸಿ ಶ್ರೀಗಂಧದ ತುಲಾಭಾರ ನಡೆಸಲು ಕಷ್ಟ ಸಾಧ್ಯ. ಅದಕ್ಕಾಗಿ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿರುವ ಶ್ರೀಗಂಧದ ಕೊರಡುಗಳಿಂದಲೇ ಸಾಂಕೇತಿಕವಾಗಿ ತುಲಾಭಾರ ಸೇವೆ ನಡೆಸಲಾಗುತ್ತಿದೆ. ತುಲಾಭಾರ ಸೇವೆಗೆ ಭಕ್ತರು ಒಂದು ಸಾವಿರ ರೂಪಾಯಿ ಶುಲ್ಕವನ್ನು ಮಾತ್ರ ಕ್ಷೇತ್ರಕ್ಕೆ ಕಟ್ಟಬೇಕಿದೆ. ತುಲಾಭಾರಕ್ಕೆ ಬಳಸಿದ ಶ್ರೀಗಂಧಕ್ಕೆ ಬೆಲೆ ಕಟ್ಟಲು ಅಸಾಧ್ಯ. ಹಾಗಾಗಿ ತುಲಾಭಾರ ಸೇವೆಗೈದವರು ಜೀವನ ಪರ್ಯಂತ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೆ ಬಂದಾಗಲೆಲ್ಲ ತುಲಾಭಾರದ ಕಾಣಿಕೆಯನ್ನ ದೇವಿಗೆ ಒಪ್ಪಿಸಿ ಋಣ ಸಂದಾಯ ಮಾಡುವ ಮೂಲಕ ಕ್ಷೇತ್ರದ ಜೊತೆ ಬಾಂಧವ್ಯ ಇರಿಸುವ ಕಟ್ಟಲೆಯನ್ನ ಮಾಡಲಾಗಿದೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ಮೋಹನ್ ದಾಸ್ ರೈ ಸಾಂತ್ಯಗುತ್ತು ಹೇಳುತ್ತಾರೆ.
ಬಂಜೆತನಕ್ಕೆ ಆಲೋಪಥಿ, ಹೋಮಿಯೋಪಥಿಯಲ್ಲಿ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿದೆ. ವೈದ್ಯರು ನೀಡುವ ಚಿಕಿತ್ಸೆಯ ಜೊತೆಗೆ ದೈವೀ ಶಕ್ತಿಯ ಆಶೀರ್ವಾದ, ಅನುಗ್ರಹವೂ ಅಗತ್ಯ. ವೈದ್ಯಕೀಯ ಕ್ಷೇತ್ರದಿಂದ ಗುಣಮುಖವಾಗದ ಕಾಯಿಲೆಗಳು ದೈವ, ದೇವರ ಸನ್ನಿಧಾನಗಳಲ್ಲಿ ಗುಣಮುಖವಾದಂತಹ ಅನೇಕ ನಿದರ್ಶನಗಳಿವೆ. ದೈವಾನುಗ್ರಹದಿಂದ ಅನೇಕರಿಗೆ ಸಂತಾನವೂ ಪ್ರಾಪ್ತಿಯಾಗಿದೆ. ವೈದ್ಯಕೀಯ ಸಲಹೆ, ಚಿಕಿತ್ಸೆಯೊಂದಿಗೆ ದೇವರ ಮೇಲಿನ ಭಕ್ತಿ, ಶ್ರದ್ಧೆಯೂ ಅಗತ್ಯ ಎಂದು ಹೋಮಿಯೋಪಥಿ ತಜ್ಞ ಡಾ.ಪ್ರವೀಣ್ ರಾಜ್ ಆಳ್ವ ಹೇಳುತ್ತಾರೆ.
Mangalore Talapadi Durgaparameshwari Temple Witnesses Miracles, Sandalwood weight Offering Promises Offspring, Annual Chariot Festival Culminates in Tulabharam.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 04:14 pm
Mangalore Correspondent
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
Mangalore Rain, School College Holiday: ಕರಾವಳ...
16-07-25 10:52 pm
17-07-25 02:30 pm
Mangalore Correspondent
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am