MP Govinda Karajola, Mangalore, Honey Trap: ಸಿದ್ದರಾಮಯ್ಯ ಸರ್ಕಾರ ಲೈಂಗಿಕ ಹಗರಣದಲ್ಲಿ ಸಿಲುಕಿದೆ ; ಅಧಿಕಾರ ಇದೆಯೆಂದು ಜನಪ್ರತಿನಿಧಿಗಳನ್ನು ಪರ್ಮನೆಂಟ್ ಸಸ್ಪೆಂಡ್ ಮಾಡುವುದೇ ? ಸಂಸದ ಗೋವಿಂದ ಕಾರಜೋಳ ಟೀಕೆ

22-03-25 06:48 pm       Mangalore Correspondent   ಕರಾವಳಿ

ವಿಧಾನಸಭೆ ಅಧಿವೇಶನದಲ್ಲಿ ಒಬ್ಬರು ಸಚಿವರೇ ತನ್ನ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ಹೇಳುತ್ತಿದ್ದಾರೆ. ಇನ್ನೊಬ್ಬರು 48 ಜನಪ್ರತಿನಿಧಿಗಳ ಹನಿಟ್ರ್ಯಾಪ್ ಆಗಿದೆ ಎಂದಿದ್ದಾರೆ. ಇದು ಸಿದ್ದರಾಮಯ್ಯ ಸರಕಾರ ಲೈಂಗಿಕ ಹಗರಣದಲ್ಲಿ ಸಿಲುಕಿರುವುದಕ್ಕೆ ಸಾಕ್ಷಿ ಎಂದು ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಮಂಗಳೂರು, ಮಾ.22 : ವಿಧಾನಸಭೆ ಅಧಿವೇಶನದಲ್ಲಿ ಒಬ್ಬರು ಸಚಿವರೇ ತನ್ನ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ಹೇಳುತ್ತಿದ್ದಾರೆ. ಇನ್ನೊಬ್ಬರು 48 ಜನಪ್ರತಿನಿಧಿಗಳ ಹನಿಟ್ರ್ಯಾಪ್ ಆಗಿದೆ ಎಂದಿದ್ದಾರೆ. ಇದು ಸಿದ್ದರಾಮಯ್ಯ ಸರಕಾರ ಲೈಂಗಿಕ ಹಗರಣದಲ್ಲಿ ಸಿಲುಕಿರುವುದಕ್ಕೆ ಸಾಕ್ಷಿ ಎಂದು ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿದ್ದು ತಪ್ಪು. ಅಧಿಕಾರ ಇದೆಯೆಂದು ಜನಪ್ರತಿನಿಧಿಗಳಾದವರನ್ನು ಪರ್ಮನೆಂಟಾಗಿ ಅನರ್ಹತೆ ಮಾಡುವುದು, ದೀರ್ಘ ಕಾಲಕ್ಕೆ ಅಮಾನತು ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರೇ ತಮ್ಮ ಹಳೆ ವಿಡಿಯೋಗಳನ್ನು ನೋಡಿಕೊಳ್ಳಬೇಕು. ಅವರೇ ವಿಧಾನಸೌಧದ ಬಾಗಿಲು ಒಡೆದು ಸ್ಪೀಕರ್ ಪೀಠದ ಮೇಲೆ ಹತ್ತಿ ನಿಂತದ್ದಿದೆ. ಈ ಹಿಂದೆ ಚಿಕ್ಕಮಗಳೂರಿನ ಸ್ಪೀಕರನ್ನು ಕಾಂಗ್ರೆಸಿಗರು ಪೀಠದಿಂದ ಎಳೆದಾಡಿ ಹಲ್ಲೆಗೆ ಯತ್ನಿಸಿದ್ದೂ ಆಗಿತ್ತು. ಹಾಗಂತ, ನಾವು ಅಧಿಕಾರದಲ್ಲಿದ್ದಾಗ ದ್ವೇಷದ ಕ್ರಮ ಕೈಗೊಂಡಿಲ್ಲ. ಒಂದೆರಡು ದಿನ ಅಥವಾ ಅಧಿವೇಶನ ಮಟ್ಟಿಗೆ ಸಸ್ಪೆಂಡ್ ಮಾಡಿದ್ದೆವು. ಅದಕ್ಕಿಂತ ಹೆಚ್ಚಿನ ಕ್ರಮ ಕೈಗೊಂಡಿಲ್ಲ ಎಂದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಎರಡು ವರ್ಷವಾಗಿದ್ದು ಅಭಿವೃದ್ಧಿ ಶೂನ್ಯ, ಅಸಮರ್ಥ ಸರಕಾರ ನೀಡಿದ್ದಾರೆ. ದಲಿತರಿಗೆ ಮೀಸಲಿಟ್ಟ ಹಣವನ್ನೂ ಗ್ಯಾರಂಟಿಗೆ ಕೊಟ್ಟು ಜನರ ಜೀವನಕ್ಕೆ ತೊಂದರೆ ಮಾಡಿದ್ದಾರೆ. ಈ ಸಲದ ಬಜೆಟ್ ನಲ್ಲಿ 42 ಸಾವಿರ ಎಸ್ಸಿ- ಎಸ್ಟಿಗೆಂದು ಇಟ್ಟಿದ್ದರೂ, ಆ ಪೈಕಿ ಏಳು ಸಾವಿರ ಕೋಟಿಯೂ ಜನರಿಗೆ ತಲುಪಲ್ಲ. ಹೆಚ್ಚಿನವು ಗ್ಯಾರಂಟಿ ಯೋಜನೆಗೆ ಹೋಗುತ್ತದೆ.

ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ 3400 ರೈತರು ಆತ್ಮಹತ್ಯೆ ಮಾಡಿದ್ದರೆ, 1300 ಬಾಣಂತಿಯರು ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ. 12 ಜನ ಗುತ್ತಿಗೆದಾರರು, 10 ಮಂದಿ ಸರಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 22 ಜನರು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ತುತ್ತಾಗಿ ಸಾವಿಗೆ ಶರಣಾಗಿದ್ದಾರೆ. ಇದೆಲ್ಲ ಸಿದ್ದರಾಮಯ್ಯ ಸರಕಾರದ ಕೆಟ್ಟ ಆಡಳಿತ ಪ್ರತಿಫಲ ಎಂದು ಕಾರಜೋಳ ಹೇಳಿದರು. ಅಲ್ಲದೆ, ಈ ಸಲದ ಬಜೆಟ್ ನಲ್ಲಿ ಮುಸ್ಲಿಂ ಹೆಣ್ಮಕ್ಕಳಿಗೆ ಪ್ರತ್ಯೇಕ ಶಾಲೆ ಕಟ್ಟಿಸುವ ಪ್ರಸ್ತಾಪ ಮಾಡಿದ್ದಾರೆ. ಪ್ರತ್ಯೇಕ ಶಾಲೆ ಕಟ್ಟಿದರೆ ಮುಸ್ಲಿಂ ಹೆಮ್ಮಕ್ಕಳನ್ನು ಸಮಾಜದಿಂದ ಪ್ರತ್ಯೇಕಿಸಿ ಅಸ್ಪೃಶ್ಯರಾಗಿಸಿದಂತೆ ಆಗುತ್ತದೆ. ನಿಮ್ಮ ಓಟ್ ಬ್ಯಾಂಕಿಗಾಗಿ ಅವರನ್ನು ಪ್ರತ್ಯೇಕಿಸಬೇಡಿ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕ ವೇದವ್ಯಾಸ ಕಾಮತ್, ಎಂಎಲ್ಸಿ ಭಾರತಿ ಶೆಟ್ಟಿ, ಎಂಎಲ್ಸಿ ಕಿಶೋರ್ ಕುಮಾರ್, ಮಾಜಿ ಎಂಎಲ್ಸಿ ಪ್ರತಾಪಸಿಂಹ ನಾಯಕ್ ಮತ್ತಿತರರು ಇದ್ದರು.

MP Govinda Karajola Alleges Siddaramaiah Government Misusing Power in Ongoing Sex Scandal. Siddaramaiah government finds itself at the center of a heated controversy following allegations of a sex scandal that has sent shockwaves through the political landscape. MP Govinda Karajola has publicly criticized the government, claiming that it is misusing its authority to silence dissent and potentially suspend representatives amid the fallout of the scandal.