ಬ್ರೇಕಿಂಗ್ ನ್ಯೂಸ್
23-03-25 10:44 pm Mangalore Correspondent ಕರಾವಳಿ
ಮಂಗಳೂರು, ಮಾ.23 : ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಗುರುತಿಸಲ್ಪಟ್ಟ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರು ಭಾನುವಾರ ಬೆಳಗ್ಗೆ ಬಂಟ್ವಾಳ ಸಮೀಪದ ಕಾರಿಂಜೇಶ್ವರ ಬೆಟ್ಟವನ್ನು ಬರಿಗೈಯಲ್ಲಿ ಏರುವ ಮೂಲಕ ಗಮನ ಸೆಳೆದಿದ್ದಾರೆ.
ಜ್ಯೋತಿರಾಜ್ ಅವರು ನಿಗದಿಪಡಿಸಿದಂತೆ ಬೆಳಗ್ಗೆ 10 ಗಂಟೆಗೆ ಪುರಾಣ ಪ್ರಸಿದ್ಧ ಕಾರಿಂಜೇಶ್ವರನ ಬೆಟ್ಟದ ಮೇಲೆ ಹತ್ತಲು ಆರಂಭಿಸಿದರು. ಸುಡುವ ಬಿಸಿಲ ನಡುವೆಯೇ ಕೇವಲ ಅರ್ಧ ತಾಸಿನಲ್ಲೇ ಈಶ್ವರನ ದೇವಾಲಯದ ಮುಂದೆ ಬಂದು ದೇವರಿಗೆ ನಮಸ್ಕರಿಸಿದ್ದಾರೆ. ಸರ ಸರನೆ ಕಡಿದಾದ ಬೆಟ್ಟದ ಮೇಲಿನಿಂದ ಏರಿಯೇ ಬಿಟ್ಟ ಜ್ಯೋತಿರಾಜ್ ಸಾಧನೆ ನೋಡುಗರ ಮೈಜುಮ್ಮೆನಿಸಿತ್ತು.
ಜ್ಯೋತಿರಾಜ್ ಕಾರಿಂಜ ಬೆಟ್ಟದ 350 ಅಡಿ ಎತ್ತರದ ಬಂಡೆಯನ್ನು ಕೇವಲ ಅರ್ಧ ತಾಸಿನಲ್ಲಿ ಏರಿದ್ದು ಗಮನ ಸೆಳೆದಿದೆ. ಯೂಟ್ಯೂಬ್ ಮೂಲಕ ಶಿವರಾತ್ರಿ ವಿಡಿಯೋ ನೋಡುತ್ತಿದ್ದಾಗ ಕಾರಿಂಜ ಕ್ಷೇತ್ರದ ಕುರಿತು ತಿಳಿಯಿತು. ಸಾಕಷ್ಟು ಜನರ ಬೇಡಿಕೆಯಂತೆ ಬೆಟ್ಟ ಹತ್ತಲು ನಿರ್ಧರಿಸಿದ್ದೆ ಎಂದು ಅವರು ತಿಳಿಸಿದ್ದಾರೆ. ಶನಿವಾರ ಪ್ರಾಕ್ಟೀಸ್ ಮಾಡಿದ್ದು ಬಂಡೆ ಮೇಲೇರಲು ಒಂದು ತಾಸು ತೆಗೆದುಕೊಂಡಿದ್ದರು. ಭಾನುವಾರ ಅರ್ಧ ಗಂಟೆಯಲ್ಲೇ ಬೆಟ್ಟವನ್ನು ಕ್ರಮಿಸಿದರು.
ಯುವ ಜನಾಂಗ ದಾರಿ ತಪ್ಪುತ್ತಿದೆ. ಯುವಕರಿಗೆ ತರಬೇತಿ ನೀಡಿ ಅವರನ್ನು ಕ್ರೀಡೆಯಲ್ಲಿ ಸಾಧನೆ ಮಾಡಿಸಬೇಕು ಎಂಬ ಹಂಬಲವಿದೆ. ಅದಕ್ಕಾಗಿ ಎಲ್ಲಿಯಾದರೂ 2 ಎಕ್ರೆಯಷ್ಟು ಜಮೀನು ಖರೀದಿಸಿ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯನ್ನು ನಿರ್ಮಿಸಬೇಕೆಂಬ ಕನಸು ಹೊಂದಿದ್ದೇನೆ, ಇದಕ್ಕಾಗಿ ಅರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಅವರು ಇದೇ ಸಂದರ್ಭ ಹೇಳಿಕೊಂಡಿದ್ದಾರೆ.
ಸಾಯಲು ಹೋಗಿ ಸಾಧನೆ ಶಿಖರವೇರಿದ !
ಜ್ಯೋತಿರಾಜ್ ಮೂಲತಃ ತಮಿಳುನಾಡಿನವರು. ಮೂರನೇ ವಯಸ್ಸಿಗೆ ತಮಿಳುನಾಡಿನ ಜಾತ್ರೆಯಲ್ಲಿ ಪೋಷಕರ ಮಡಿಲಿನಿಂದ ಕಾಣೆಯಾಗಿದ್ದರು. ಬಳಿಕ ವ್ಯಕ್ತಿಯೊಬ್ಬರಿಗೆ ಸಿಕ್ಕಿದ್ದು ಮಗುವನ್ನು ಚಿತ್ರದುರ್ಗಕ್ಕೆ ತಂದು ಸಾಕುತ್ತಾರೆ. ಬೇಕರಿಯಲ್ಲಿ ಕೆಲಸ ಮಾಡುತ್ತಾ ಬೆಳೆದ ಇವರಿಗೆ ಶಿಕ್ಷಣ ಸಿಕ್ಕಿರಲಿಲ್ಲ. ತಂದೆ ತಾಯಿಯ ಕೊರಗಿನಲ್ಲಿ ಒಂದು ದಿನ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಚಿತ್ರದುರ್ಗದ ಬೆಟ್ಟವನ್ನು ಏರಿದ್ದರು. ಆದರೆ ಸರ ಸರನೆ ಬೆಟ್ಟವನ್ನು ಏರುವ ಶೈಲಿ ಜನರ ಗಮನ ಸೆಳೆದಿತ್ತು. ಚಪ್ಪಾಳೆ ತಟ್ಟಿದ ಜನರನ್ನು ನೋಡಿ ಜ್ಯೋತಿರಾಜ್ ಮನಸ್ಸು ಬದಲಾಗಿತ್ತು. ಅಂದು ಸಾಯಲು ಹೋದ ಯುವಕನೇ ಈಗ ಸಾಧನೆಯ ಶಿಖರವೇರಿದ್ದು ಇಡೀ ರಾಜ್ಯದಲ್ಲಿ ಮನೆ ಮಾತಾಗಿದ್ದಾನೆ.
11 ಬಾರಿ ಆಪರೇಷನ್, ಕೈ ಕಾಲಿಗೆ ರಾಡ್ !
ಶವಗಳನ್ನು ಹುಡುಕುವುದಕ್ಕಾಗಿ ಕೋತಿರಾಜ್ ಅನೇಕ ಬಾರಿ ವಿಶ್ವವಿಖ್ಯಾತ ಜೋಗ ಜಲಪಾತದ ಪ್ರಪಾತಕ್ಕೆ ಇಳಿದಿದ್ದಾರೆ. ಕಂದಕಕ್ಕೆ ಬಿದ್ದು, ಎರಡು ದಿನ ಕಾಣೆಯಾಗಿದ್ದೂ ಇದೆ. ಬೆಟ್ಟದಿಂದ ಬಿದ್ದು ಅವರಿಗೆ ಒಟ್ಟು 11 ಬಾರಿ ಆಪರೇಷನ್ ಆಗಿದೆ. ಕೈ, ಕಾಲಿಗೆ 4 ರಾಡ್ ಹಾಕಿಸಿಕೊಂಡಿದ್ದಾರೆ. ಆದರೂ ಬಂಡೆಗಳನ್ನು ಹತ್ತಿ ಸಾಧನೆ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಯಾಕಂದ್ರೆ ಬಂಡೆ ಹತ್ತಿ ಬಿದ್ದಿದ್ದು ಕಡಿಮೆಯಂತೆ. ಶವ ಪತ್ತೆಗೆ ಹೋಗಿ ಬಿದ್ದು ಗಾಯಕ್ಕೀಡಾರುವುದೇ ಹೆಚ್ಚು ಅನ್ನೋದು ಅವರ ಮಾತು.
ಜೋಗ ಒಂದರಲ್ಲೇ ಒಟ್ಟು 9 ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಜಲಪಾತವನ್ನು 18 ಬಾಕಿ ಹತ್ತಿಳಿದಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಪೈಕಿ 3 ಬಾರಿ ಶೂಟಿಂಗ್ ಉದ್ದೇಶಕ್ಕೆ ಹತ್ತಿದ್ದಾರಂತೆ. ಯಾರೇ ಬಿದ್ರೂ ನಮ್ಮ ತಂಗಿ, ತಮ್ಮ ಎಂದುಕೊಂಡು ಕಾಪಾಡಲು ಹೋಗ್ತೇನೆ. ಜೋಗದಲ್ಲಿ ಇಳಿದಾಗ ನಾನು ಉಳಿಯಲ್ಲ ಎಂದುಕೊಂಡಿದ್ದೆ. ದೇವರು ದೊಡ್ಡವನು, ಕಾಪಾಡಿದ ಎಂದು ಕೋತಿರಾಜ್ ಹೇಳಿದರು.
50ಕ್ಕೂ ಹೆಚ್ಚು ಯುವಕರಿಗೆ ಕೋತಿರಾಜ್ ತರಬೇತಿ ನೀಡಿದ್ದಾರೆ. ಇವರಿಂದ ತರಬೇತಿ ಪಡೆದ 20 ಮಂದಿ ಯುವಕರು ಸೇನೆ ಸೇರಿದ್ದಾರೆ. ಇಬ್ಬರು ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾರೆ. ಕರ್ನಾಟಕ ನನ್ನ ಉಸಿರು, ಹೆಸರು ನೀಡಿದ ದೇವತೆ, ಹಾಗಾಗಿ ನಾನು ಕರ್ನಾಟಕದಲ್ಲಿಯೇ ಬದುಕನ್ನು ಕಳೆಯಬೇಕು ಎಂಬ ಮಹದಾಸೆ ನನ್ನದು ಎಂದು ಹೇಳಿಕೊಂಡಿದ್ದಾರೆ.
ಮಂಗಳೂರಿನಲ್ಲಿ ದೊಡ್ಡ ಕಟ್ಟಡ ಹತ್ತುವ ಬಯಕೆ
ಕಳೆದ ವರ್ಷ ಬೆಳ್ತಂಗಡಿಯ ಗಡಾಯಿಕಲ್ಲು ಹತ್ತಿದ್ದೆ. ಹಾಗೆಯೇ ಉಡುಪಿ, ಮಂಗಳೂರಿನ ಬಹುಮಹಡಿಯ ಕಟ್ಟಡವನ್ನು ಹತ್ತಿದ್ದು,ಅದರಲ್ಲಿ ಬಂದ ಹಣದಿಂದ ರೋಪು, ಸೇಪ್ಟಿ ಜಾಕೆಟನ್ನು ಖರೀದಿಸಿದ್ದೇನೆ. ಮಲೆನಾಡು ತನಗೆ ಅತ್ಯಂತ ಇಷ್ಟದ ಊರು, ತಾನು ದೈವ, ದೇವರಲ್ಲಿ ನಂಬಿಕೆಯುಳ್ಳವನು. ಮಂಗಳೂರಿನಲ್ಲಿ ಅತ್ಯಂತ ದೊಡ್ಡ ಕಟ್ಟಡವನ್ನು ಹತ್ತಬೇಕೆಂಬ ಬಯಕೆ ಇದೆ ಎಂದರು.
Mangalore Jyotiraj Climbs Karijangeshwara Hill in Just Half an Hour, Achieving a Remarkable Milestone!. In an astounding display of endurance and determination, local climber Jyotiraj has successfully conquered the challenging Karijangeshwara Hill in just half an hour. This remarkable achievement has not only showcased his physical prowess but also set a new benchmark for adventurers and enthusiasts in the region.
25-03-25 11:25 am
Bangalore Correspondent
ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಸುಟ್ಟಿದ...
24-03-25 11:04 pm
BJP, Phone Tapping, Karnataka, Ashok: ಹನಿಟ್ರ್...
24-03-25 10:42 pm
Big boss Vinay Gowda, Rajat Arrest, Bangalore...
24-03-25 09:24 pm
DK Shivakumar, Muslim, BJP: ಮುಸ್ಲಿಮರಿಗೆ ಮೀಸಲು...
24-03-25 07:23 pm
25-03-25 04:06 pm
HK News Desk
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
24-03-25 03:56 pm
Mangalore Correspondent
Mangalore, Swimming pool, Death, Madikeri: ಚಿ...
24-03-25 01:35 pm
Mangalore Jyotiraj, Kotiraj: ಕಾರಿಂಜೇಶ್ವರ ಬೆಟ...
23-03-25 10:44 pm
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
25-03-25 04:40 pm
Bangalore Correspondent
Gokak Society Fraud Case, Sadashiv Hiremath S...
23-03-25 03:56 pm
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm