ಬ್ರೇಕಿಂಗ್ ನ್ಯೂಸ್
28-03-25 11:52 am Mangalore Correspondent ಕರಾವಳಿ
ಮಂಗಳೂರು, ಮಾ.28 : ಮೂಡುಬಿದ್ರೆ ಕಡೆಯಿಂದ ಕೈಕಂಬದತ್ತ ದನಗಳನ್ನು ಪಿಕಪ್ ವಾಹನದಲ್ಲಿ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ತರುತ್ತಿದ್ದ ವಾಹನವನ್ನು ಬಜರಂಗದಳ ಕಾರ್ಯಕರ್ತರು ಸೂರಲ್ಪಾಡಿ ಮಸೀದಿ ಬಳಿ ತಡೆದಿದ್ದು ಬಜ್ಪೆ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಶುಕ್ರವಾರ ಬೆಳಗ್ಗೆ 6 ಗಂಟೆ ವೇಳೆಗೆ ಹಂಡೇಲು ಕಡೆಯಿಂದ ಎಡಪದವು ದಾರಿಯಾಗಿ ಅತಿ ವೇಗದಲ್ಲಿ ಪಿಕಪ್ ವಾಹನ ಬಂದಿದ್ದು ರಸ್ತೆಯಲ್ಲಿ ಹೋಗುತ್ತಿದ್ದ ಇತರ ವಾಹನಗಳಿಗೆ ತಾಗಿಕೊಂಡು ಮುಂದೆ ಸಾಗಿದೆ. ಇದರಿಂದಾಗಿ ಅಲ್ಲಿದ್ದ ಯುವಕರು ಎಚ್ಚತ್ತುಕೊಂಡು ಪಿಕಪ್ ಒಳಗಡೆ ಏನೋ ಅಕ್ರಮ ಇರುವ ಬಗ್ಗೆ ಶಂಕೆಯಲ್ಲಿ ಬಜರಂಗದಳ ಕಾರ್ಯಕರ್ತರಿಗೆ ವಿಷಯ ಮುಟ್ಟಿಸಿದ್ದಾರೆ. ಆನಂತರ, ಕೆಲವು ಕಾರ್ಯಕರ್ತರು ಬೆನ್ನಟ್ಟಿ ಬಂದಿದ್ದು ಸೂರಲ್ಪಾಡಿ ಮಸೀದಿ ಬಳಿ ಅಡ್ಡ ಹಾಕಿದ್ದಾರೆ.




ಪಿಕಪ್ ವಾಹನದ ಹಿಂಬದಿಯಲ್ಲಿ ಬೊಲೆರೋ ಕೂಡ ಅತಿ ವೇಗವಾಗಿ ಬರುತ್ತಿದ್ದು ಎಸ್ಕಾರ್ಟ್ ನೀಡುವಂತೆ ಜೊತೆಗೆ ಬಂದಿತ್ತು. ಅದರಲ್ಲಿ ಇಬ್ಬರು ತಲೆಗೆ ಕೇಸರಿ ಶಾಲು ಸುತ್ತಿಕೊಂಡಿದ್ದರು. ಬಜರಂಗದಳ ಕಾರ್ಯಕರ್ತರು ಅಡ್ಡ ಹಾಕುತ್ತಿದ್ದಂತೆ ಹಿಂಬದಿ ವಾಹನದಲ್ಲಿದ್ದವರು ತಮ್ಮ ಕೈಲಿದ್ದ ಗನ್ ತೆಗೆದು ಶೂಟ್ ಮಾಡಲು ಯತ್ನಿಸಿದ್ದಾರೆ. ಗಾಳಿಯಲ್ಲಿ ಫೈರ್ ಆಗಿದ್ದನ್ನು ನೋಡಿದ್ದೇವೆ ಎಂದು ಬಜರಂಗದಳ ಜಿಲ್ಲಾ ಪ್ರಮುಖ್ ನವೀನ್ ಮೂಡುಶೆಡ್ಡೆ ತಿಳಿಸಿದ್ದಾರೆ.
ಪಿಕಪ್ ನಿಲ್ಲಿಸಿ ಅದರಲ್ಲಿದ್ದ ನಾಲ್ವರು ಹೊರಗಿಳಿದು ಮಸೀದಿ ಬಳಿಯಿಂದ ಪರಾರಿಯಾಗಿದ್ದಾರೆ. ವಾಹನದಲ್ಲಿ ನೋಡಿದಾಗ ಕೈ ಕಾಲನ್ನು ತಲೆ ಕೆಳಗಾಗಿಸಿ ದನ, ಕರುಗಳನ್ನು ಹಿಂಸಾತ್ಮಕ ರೀತಿ ಕಟ್ಟಿರುವುದು ಪತ್ತೆಯಾಗಿದೆ. ಒಟ್ಟು 23 ಗೋವುಗಳಿದ್ದು ಎಲ್ಲವೂ ನಿತ್ರಾಣಗೊಂಡಿತ್ತು. ಪೊಲೀಸರು ಬಂದು ಹಗ್ಗ ಬಿಚ್ಚುವಷ್ಟರಲ್ಲಿ ಎರಡು ದನಗಳು ಸತ್ತಿವೆ ಎಂದು ಬಜರಂಗದಳ ಕಾರ್ಯಕರ್ತರು ತಿಳಿಸಿದ್ದಾರೆ.
ಬಜ್ಪೆ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಹಿಂಸಾತ್ಮಕ ರೀತಿಯಲ್ಲಿ ಮತ್ತು ಅಕ್ರಮವಾಗಿ ಗೋವು ಸಾಗಾಟ ಮಾಡಿರುವುದು ಮತ್ತು ಗನ್ ಫೈರ್ ಮಾಡಿರುವ ಬಗ್ಗೆ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಿಂಬದಿ ವಾಹನದಲ್ಲಿದ್ದವರು ಹಿಂದು ಕಾರ್ಯಕರ್ತರ ರೀತಿ ತಲೆಗೆ ಕೇಸರಿ ಶಾಲು ಸುತ್ತಿಕೊಂಡಿದ್ದರು ಎನ್ನುವ ಮಾಹಿತಿಯನ್ನೂ ಪೊಲೀಸರಿಗೆ ನೀಡಿದ್ದಾರೆ.
In a dramatic incident near Kaikamba, Bajrang Dal activists intervened in a violent transport of cattle, rescuing 19 cows and calves while tensions flared, reportedly culminating in gunfire. The situation escalated as the activists, wearing saffron headgear, confronted the transporters, leading to a chaotic scene that left two cows dead.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm