Belthangady, Head Constable Praveen, Cm Medal: ಎನ್ಐಎ ಸೇರಿ ಗಂಭೀರ ಅಪರಾಧ ಪತ್ತೆ ಪ್ರಕರಣಗಳಲ್ಲಿ ವಿಶೇಷ ಕರ್ತವ್ಯ ; ಹೆಡ್ ಕಾನ್ಸ್ ಟೇಬಲ್ ಪ್ರವೀಣ್ ಗೆ ಮುಖ್ಯಮಂತ್ರಿ ಪದಕ 

03-04-25 03:09 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಗಂಭೀರ ಪ್ರಕರಣ ನಡೆದರೂ ವಿಶೇಷ ಪೊಲೀಸ್ ತಂಡದ ಜೊತೆಗಿದ್ದು ಪ್ರಕರಣ ಭೇದಿಸುವಲ್ಲಿ ಕೊಡುಗೆ ನೀಡುತ್ತಿರುವ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಬೆಳ್ತಂಗಡಿ ತಾಲೂಕಿನ ಮೂರುಗೋಳಿ ಮೂಲದ ಪ್ರವೀಣ್ ಎಂ. ಇವರಿಗೆ ಈ ಬಾರಿ ಮುಖ್ಯಮಂತ್ರಿ ಪದಕ ಲಭಿಸಿದ್ದು, ಎ.2ರಂದು ಕರ್ನಾಟಕ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ಪ್ರದಾನ ಮಾಡಿದರು.

ಬೆಳ್ತಂಗಡಿ, ಎ.3 :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಗಂಭೀರ ಪ್ರಕರಣ ನಡೆದರೂ ವಿಶೇಷ ಪೊಲೀಸ್ ತಂಡದ ಜೊತೆಗಿದ್ದು ಪ್ರಕರಣ ಭೇದಿಸುವಲ್ಲಿ ಕೊಡುಗೆ ನೀಡುತ್ತಿರುವ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಬೆಳ್ತಂಗಡಿ ತಾಲೂಕಿನ ಮೂರುಗೋಳಿ ಮೂಲದ ಪ್ರವೀಣ್ ಎಂ. ಇವರಿಗೆ ಈ ಬಾರಿ ಮುಖ್ಯಮಂತ್ರಿ ಪದಕ ಲಭಿಸಿದ್ದು, ಎ.2ರಂದು ಕರ್ನಾಟಕ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ಪ್ರದಾನ ಮಾಡಿದರು.

ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಮೂರುಗೋಳಿ ನಿವಾಸಿ ಅಣ್ಣು ದೇವಾಡಿಗ ಮತ್ತು ಬೇಬಿ ದೇವಾಡಿಗರ ಪ್ರಥಮ ಪುತ್ರ ಪ್ರವೀಣ್ ಅವರು 2002 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಮೊದಲ ಕರ್ತವ್ಯವನ್ನು ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದು, ಬಳಿಕ ಬೆಳ್ತಂಗಡಿ ವೃತ್ತ ಕಚೇರಿ, ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳ(DCIB) , ಬಂಟ್ವಾಳ ಡಿವೈಎಸ್ಪಿ ವಿಶೇಷ ಅಪರಾಧ ದಳ, ವೇಣೂರು ಪೊಲೀಸ್ ಠಾಣೆ, ಸದ್ಯ ದಕ್ಷಿಣ ಕನ್ನಡ ಸೈಬರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಎನ್ಐಎ ಅಧಿಕಾರಿಗಳ ಜೊತೆ ಕರ್ತವ್ಯ 

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂದರ್ಭದಲ್ಲಿ NIA ತನಿಖಾ ತಂಡದೊಂದಿಗೆ 6 ತಿಂಗಳು ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಬಿಹಾರದಲ್ಲಿ ಮೋದಿ ಹತ್ಯೆ ಯತ್ನ ಪ್ರಕರಣದಲ್ಲಿ NIA ಜೊತೆ 3 ತಿಂಗಳು ಕರ್ತವ್ಯ ನಿರ್ವಹಿಸಿದ್ದಾರೆ.

ಹಲವು ಗಂಭೀರ ಪ್ರಕರಣದಲ್ಲಿ  ದಕ್ಷತೆಯಿಂದ ಸೇವೆ 

ಶರತ್ ಮಾಡಿವಾಳ ಹತ್ಯೆ ಪ್ರಕರಣ, ಫರಂಗಿಪೇಟೆ ಡಬಲ್ ಮರ್ಡರ್, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, 9 ದೇವಾಲಯ ಕಳವು ಪ್ರಕರಣ, ಬೆಳ್ತಂಗಡಿ ಬಂಗಾಡಿ ಬಸದಿ ಸೇರಿ 9 ದೇವಾಲಯ ಕಳ್ಳತನ ಪ್ರಕರಣ, ವಿಟ್ಲ ಕರ್ನಾಟಕ ಬ್ಯಾಂಕ್ ದರೋಡೆ, ಪುತ್ತೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದ ದರೋಡೆ, ವಗ್ಗ ಮನೆ ದರೋಡೆ ಪ್ರಕರಣ, ವಿಟ್ಲ ಸಿಂಗಾರಿ ಬೀಡಿ ನಕಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ, ಫರಂಗಿಪೇಟೆ ದಿಗಂತ್ ನಾಪತ್ತೆ ಪ್ರಕರಣ ಹಾಗೂ ಇನ್ನಿತರ ಗಂಭೀರ ಪ್ರಕರಣದಲ್ಲಿ ವಿಶೇಷ ತಂಡದ ಜೊತೆ ಪ್ರಮುಖ ಪಾತ್ರವನ್ನು ವಹಿಸಿ ಪ್ರಕರಣ ಭೇದಿಸಿ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪ್ರವೀಣ್ ಅಪರಾಧ ಪತ್ತೆ ಪ್ರಕರಣದ ಕರ್ತವ್ಯಕ್ಕೆ ಸುಮಾರು 57 ನಗದು ಪುರಸ್ಕಾರ ಬಹುಮಾನ ಹಾಗೂ ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

In a significant recognition of exemplary service, Head Constable Praveen from Belthangady has been awarded the prestigious Chief Minister's Medal for his outstanding contributions to serious crime investigations involving the National Investigation Agency (NIA).