ಬ್ರೇಕಿಂಗ್ ನ್ಯೂಸ್
04-04-25 11:07 pm Mangalore Correspondent ಕರಾವಳಿ
ಉಳ್ಳಾಲ, ಎ.4 : ತೊಕ್ಕೊಟ್ಟು ಹೃದಯ ಭಾಗದ ಫ್ಲೈಓವರ್ ಕೆಳಗಡೆ ಅನಧಿಕೃತ ಮಿನಿ ಮಾರ್ಕೆಟ್ ಒಂದು ತಲೆ ಎತ್ತಿ ಬಿರುಸಿನ ವಹಿವಾಟು ನಡೆಯುತ್ತಿದ್ದು, ಗ್ರಾಹಕರ ಜಂಗುಳಿಯಿಂದ ನಿತ್ಯವೂ ಇಲ್ಲಿ ಸಂಚಾರಕ್ಕೆ ತೊಡಕಾಗುತ್ತಿದ್ದರೂ ನಗರಾಡಳಿತದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಉಳ್ಳಾಲ ನಗರಸಭೆ ವತಿಯಿಂದ ಪ್ಲೈ ಓವರ್ ಕೆಳಗಡೆ ಅಳವಡಿಸಿರುವ "ಬೀದಿ ಬದಿ ವ್ಯಾಪಾರ ಇಲ್ಲಿ ನಿಷೇಧ" ಎಂಬ ಎಚ್ಚರಿಕೆಯ ಫಲಕಕ್ಕೆ ಕವಡೆ ಕಿಮ್ಮತ್ತಿಲ್ಲದೆ, ಬೆದರು ಬೊಂಬೆಯಂತಾಗಿದೆ.
ತೊಕ್ಕೊಟ್ಟು ಫ್ಲೈಓವರ್ ಕೆಳಗಿನ ಖಾಲಿ ಪ್ರದೇಶವು ಈಗ ಮಾರುಕಟ್ಟೆಯಾಗಿ ಬದಲಾಗಿದೆ. ವರುಷಗಳ ಹಿಂದೆ ಈ ಪ್ರದೇಶವನ್ನ ಸುಂದರೀಕರಣಗೊಳಿಸುವ ನಿಟ್ಟಿನಲ್ಲಿ ಖಾಸಗಿಯವರು ಫ್ಲೈಓವರ್ಗೆ ಸುಣ್ಣ- ಬಣ್ಣ ಬಳಿದು, ಬೇಲಿ ಅಳವಡಿಸಿ ಜನರು ಪ್ರವೇಶಿಸದಂತೆ ನಿರ್ಬಂಧಿಸಿದ್ದರು. ಕ್ರಮೇಣ ಖಾಸಗಿಯವರಿಗೆ ಫ್ಲೈಓವರ್ ಕೆಳ ಭಾಗದ ಸುಂದರೀಕರಣದ ಆಸಕ್ತಿ ಕುಂದಿದ ಪರಿಣಾಮ ಇದೀಗ ಈ ಪ್ರದೇಶವನ್ನ ಸಣ್ಣ ವ್ಯಾಪಾರಿಗಳು ಅತಿಕ್ರಮಿಸಿ ಅನಧಿಕೃತ ಮಾರುಕಟ್ಟೆಯೊಂದನ್ನ ಸೃಷ್ಟಿಸಿದ್ದಾರೆ. ಇಲ್ಲಿ ವ್ಯಾಪಾರಿಗಳು ಒಣ ಮೆಣಸು, ತರಕಾರಿ, ಹಣ್ಣು, ಬಟ್ಟೆಗಳನ್ನ ರಾಶಿ ಹಾಕಿ ಮಾರಾಟ ಮಾಡುವುದರಿಂದ ನಿತ್ಯವೂ ಈ ಪ್ರದೇಶದಲ್ಲಿ ಜನ ಜಂಗುಳಿಯೇ ಸೇರುತ್ತಿದ್ದು, ಗ್ರಾಹಕರು ಮೇಲ್ಸೇತುವೆಯ ಕೆಳಗಡೆ ವಾಹನಗಳನ್ನ ನಿಲ್ಲಿಸುವುದರಿಂದ ತೊಕ್ಕೊಟ್ಟಿನ ಕೇಂದ್ರ ಭಾಗದ ಸರ್ವಿಸ್ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ನಿತ್ಯವೂ ತೊಡಕುಂಟಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದ ಉಳ್ಳಾಲ ನಗರಸಭೆ ಅಧಿಕಾರಿಗಳು ಇಂತಹ ಸಣ್ಣ ಪುಟ್ಟ ವಿಚಾರಗಳನ್ನ ನಗರ ಸದಸ್ಯರು ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕೆಂದು ಅಸಹಾಯಕತೆ ಪ್ರದರ್ಶಿಸುತ್ತಿರುವುದು ಹಾಸ್ಯಾಸ್ಪದ.
ಫ್ಲೈಓವರ್ ಕೆಳಗಡೆ ನಗರಸಭೆ ವತಿಯಿಂದ ಎಚ್ಚರಿಕೆ ಫಲಕ ಅಳವಡಿಸಿದ್ದರೂ ಅದನ್ನ ಧಿಕ್ಕರಿಸಿ ಬೀದಿ ವ್ಯಾಪಾರವು ನಡೆಯುತ್ತಿದೆ. ಅನಧಿಕೃತವಾಗಿ ವ್ಯಾಪಾರ ನಡೆಸುವವರನ್ನ ನಿಗ್ರಹಿಸದ ಅಧಿಕಾರಿಗಳು ಯಾವ ಪುರುಷಾರ್ಥಕ್ಕೆ ಇಲ್ಲಿ ಎಚ್ಚರಿಕೆ ಫಲಕವನ್ನ ಹಾಕಿರೋದೆಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ.
ವಲಸೆ ಕಾರ್ಮಿಕರದ್ದೇ ಕಾರುಬಾರು
ತೊಕ್ಕೊಟ್ಟು ಫ್ಲೈಓವರ್ ಕೆಳಗಿನ ಪ್ರದೇಶವನ್ನ ಕಳೆದ ಕೆಲ ವರ್ಷಗಳಿಂದ ಹೊರ ಜಿಲ್ಲೆಗಳಿಂದ ಬಂದ ವಲಸೆ ಕಾರ್ಮಿಕರೇ ಆಕ್ರಮಿಸಿಕೊಂಡಿದ್ದಾರೆ. ಬೆಳಗ್ಗೆ ಹತ್ತು ಗಂಟೆಯವರೆಗೂ ಸೇತುವೆಯ ಕೆಳಗಡೆ ಕೆಲಸಕ್ಕೆ ತೆರಳಲು ಗುಂಪು ಸೇರುವ ಕಾರ್ಮಿಕರು ಸಾರ್ವಜನಿಕವಾಗಿ ಪಾನ್ ಬೀಡ, ಗುಟ್ಕಾ, ಬೀಡಿ ಸಿಗರೇಟು ಸೇದಿ ನಗರವನ್ನ ಗಬ್ಬು ನಾರಿಸುತ್ತಿದ್ದಾರೆ. ಕೆಲಸವಿಲ್ಲದ ಕೆಲ ಕಾರ್ಮಿಕರು ಹಾಡಹಗಲೇ ಕಂಠ ಪೂರ್ತಿ ಕುಡಿದು ಬೆತ್ತಲಾಗಿ ಇಲ್ಲೇ ಬಿದ್ದು ಹೊರಳಾಡುತ್ತಾರೆ. ವಲಸೆ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದೇಶದಲ್ಲಿ ಸಣ್ಣ ವ್ಯಾಪಾರಗಳನ್ನ ಆರಂಭಿಸಿ ಮಾರುಕಟ್ಟೆಯನ್ನೇ ನಿರ್ಮಿಸಿದ್ದಾರೆ. ಮುಂದಿನ ದಿವಸಗಳಲ್ಲಿ ಇಲ್ಲಿ ಮೀನು, ಕೋಳಿ, ಮಾಂಸ ಮಾರಾಟ ಆರಂಭವಾದರೂ ಕೇಳುವವರೇ ಇಲ್ಲದಂತಾಗಿದೆ.
ಫ್ಲೈಓವರ್ ಕೆಳಗಡೆ ಅನಧಿಕೃತ ಮಾರುಕಟ್ಟೆ ನಿರ್ಮಾಣವಾಗಿರುವುದರಿಂದ ಪಾದಚಾರಿಗಳು, ವಾಹನ ಸವಾರರಿಗೆ ಅನನುಕೂಲ ಸ್ಥಿತಿ ಎದುರಾಗಿದೆ. ಹೀಗೆ ಎಲ್ಲೆಂದರಲ್ಲಿ ಮನಸೋ ಇಚ್ಛೆ ವ್ಯಾಪಾರ ನಡೆಸೋದಾದರೆ ಅಧಿಕೃತ ಮಾರುಕಟ್ಟೆಗಳಲ್ಲಿ ಸ್ಥಳೀಯಾಡಳಿತಗಳಿಗೆ ಬಾಡಿಗೆ ಮತ್ತು ತೆರಿಗೆ ಕಟ್ಟುವ ವ್ಯಾಪಾರಿಗಳ ಪಾಡನ್ನ ಕೇಳುವವರಾರು. ಅನಧಿಕೃತ ಮಾರುಕಟ್ಟೆಯನ್ನ ತೆರವುಗೊಳಿಸಲು ನಗರಸಭೆ ಆಡಳಿತಕ್ಕೆ ಮನವಿ ಮಾಡಿದ್ದು, ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಪೌರಾಯುಕ್ತರಾದ ಮತ್ತಡಿ ತಿಳಿಸಿದ್ದಾರೆಂದು ತೊಕ್ಕೊಟ್ಟು ಭಗತ್ ಸಿಂಗ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟ್ಟು ತಿಳಿಸಿದ್ದಾರೆ.
ಫ್ಲೈಓವರ್ ಕೆಳಗಿನ ಅನಧಿಕೃತ ಮಾರುಕಟ್ಟೆ ಮತ್ತು ನಗರದಾದ್ಯಂತ ಅಳವಡಿಸಿರುವ ಪ್ಲಾಸ್ಟಿಕ್ ಫ್ಲೆಕ್ಸ್ ತೆರವಿನ ಕುರಿತಂತೆ ಪರ- ವಿರೋಧಗಳಿದ್ದು ಈ ಬಗ್ಗೆ ಎ.7 ರಂದು ನಡೆಯುವ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ಇಟ್ಟಿದ್ದೇವೆ. ಸಾಮಾನ್ಯ ಸಭೆಯ ನಿರ್ಣಯದ ಬಳಿಕ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುವುದೆಂದು ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ಮತ್ತಡಿ ತಿಳಿಸಿದ್ದಾರೆ.
Thokkottu Flyover Mini Market, Traffic Chaos as Street Trading Ban Remains Unenforced.
04-04-25 10:54 pm
HK News Desk
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
04-04-25 11:07 pm
Mangalore Correspondent
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm