ಬ್ರೇಕಿಂಗ್ ನ್ಯೂಸ್
08-04-25 03:00 pm Mangalore Correspondent ಕರಾವಳಿ
ಮಂಗಳೂರು, ಎ.8 : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಎಂದಿನಂತೆ ರಾಜ್ಯದಲ್ಲಿ ಉಡುಪಿ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ ಸಿಕ್ಕಿದೆ. ಯಾದಗಿರಿ ಜಿಲ್ಲೆ ಶೇ.45 ಫಲಿತಾಂಶದೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಒಟ್ಟು 6,88,678 ವಿದ್ಯಾರ್ಥಿಗಳು ಹಾಜರಾಗಿದ್ದು, 4,76,256 ಮಂದಿ ಪಾಸಾಗಿದ್ದಾರೆ.
ಉಡುಪಿ – 93.90 ಶೇ., ದಕ್ಷಿಣ ಕನ್ನಡ- 93.57, ಬೆಂಗಳೂರು ದಕ್ಷಿಣ 85.36, ಕೊಡಗು 83.84, ಬೆಂಗಳೂರು ಉತ್ತರ 83.31, ಉತ್ತರ ಕನ್ನಡ 82 ಶೇಕಡಾ ಫಲಿತಾಂಶ ಬಂದಿದೆ. ಎಂದಿನಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಫಲಿತಾಂಶ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ. ಕನ್ನಡ ಪರೀಕ್ಷೆಯಲ್ಲಿ 5414 ಮಂದಿ ನೂರು ಶೇಕಡಾ ಫಲಿತಾಂಶ ಪಡೆದಿದ್ದರೆ, ಸಂಸ್ಕೃತದಲ್ಲಿ 2536, ಗಣಿತ ಶಾಸ್ತ್ರದಲ್ಲಿ 4038, ಜೀವಶಾಸ್ತ್ರ- 2346, ಗಣಕ ವಿಜ್ಞಾನ – 1137, ವ್ಯವಹಾರ ಅಧ್ಯಯನದಲ್ಲಿ 1482 ಮಂದಿ ನೂರು ಶೇಕಡಾ ಫಲಿತಾಂಶ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ 53.29 ಶೇ., ವಾಣಿಜ್ಯ 76.07, ವಿಜ್ಞಾನ 82.54 ಶೇ., ಒಟ್ಟು ರಾಜ್ಯದಲ್ಲಿ 73.45 ಶೇಕಡಾ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಸೈನ್ಸ್ ನಲ್ಲಿ ಅಮೂಲ್ಯ ಪ್ರಥಮ ಸ್ಥಾನಿ
ಸೈನ್ಸ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್ ಮತ್ತು ತೀರ್ಥಹಳ್ಳಿ ವಾಗ್ದೇವಿ ಪಿಯು ಕಾಲೇಜಿನ ದೀಕ್ಷಾ ಇವರು 600ರಲ್ಲಿ 599 ಅಂಕದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಆಳ್ವಾಸ್ ಮೂಡುಬಿದ್ರೆಯ ಬಿಂದು ನವಾಳೆ, ರಾಜಾ ಯದುವಂಶಿ ಯಾದವ್, ವಿಜೇತ್ ಜಿ. ಗೌಡ – 598 ಸಮಾನ ಅಂಕ ಪಡೆದು ಸಾಧನೆ ಮಾಡಿದ್ದಾರೆ. ಅದಿತಿ ವೀರೇಶ್ ಅಂಗಡಿ- ಸರ್ ಎಂ.ವಿ ಪಿಯು ಕಾಲೇಜು ದಾವಣಗೆರೆ, ಅಕ್ಷಯ್ ಎಂ. ಹೆಗ್ಡೆ ಆಳ್ವಾಸ್ ಪಿಯು ಕಾಲೇಜು ಮೂಡುಬಿದ್ರೆ, ಕ್ಷಮಾ ಸಿ.ಪಿ.- ಕಣ್ಣೂರು ವಿದ್ಯಾನಿಕೇತನ ಕಾಲೇಜು ಹಾವೇರಿ, ಪ್ರಣಜಿ ಎನ್.ಜೆ – ಮಾಸ್ಟರ್ಸ್ ಪಿಯು ಕಾಲೇಜು ಹಾಸನ, ಪ್ರೇಕ್ಷಾ ಎಂ.ಎಸ್- ಆಳ್ವಾಸ್ ಪಿಯು ಕಾಲೇಜು ಮೂಡುಬಿದ್ರೆ, ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ ಶ್ರೇಯಸ್ ಇವರು ಸೈನ್ಸ್ ವಿಭಾಗದಲ್ಲಿ ಸಮಾನ 597 ಅಂಕ ಗಳಿಸಿದ್ದಾರೆ.
ಅಸ್ಥಿ ಎಸ್. ಶೆಟ್ಟಿ -ಕಾರ್ಕಳ ಜ್ಞಾನಸುಧಾ ಕಾಲೇಜು, ಚೈತನ್ಯ ಗಣೇಶ್ ಭಟ್ – ಆರ್.ಎನ್.ಎಸ್ ಪಿಯು ಕಾಲೇಜು ಚನ್ನಸಂದ್ರ, ಚೆರಿತಾ ಕೈವಾರ್-ಆರ್ ವಿ ಪಿಯು ಕಾಲೇಜು ಬೆಂಗಳೂರು, ಆಳ್ವಾಸ್ ಮೂಡುಬಿದ್ರೆಯ ಪದ್ಮಾವತಿ ಮಲ್ಲೇಶಪ್ಪ ಬಾದಗಿ, ಪ್ರಮುಖ್ ತುಲುಪುಲೆ- ಎಕ್ಸಲೆಂಟ್ ಪಿಯು ಕಾಲೇಜು ಮೂಡುಬಿದ್ರೆ, ಸಾನ್ವಿ ರವೀಂದ್ರ ಬಾಸ್ರಿ- ಆರ್.ವಿ ಪಿಯು ಕಾಲೇಜು ಬೆಂಗಳೂರು, ಶಾದ್ಜಯ್ ಎ.ಪಿ- ಎಕ್ಸ್ ಪರ್ಟ್ ಮಂಗಳೂರು, ಯಮುನಾ ಪಿ.ವೈ- ಮದರ್ ತೆರೆಸಾ ಪಿಯು ಕಾಲೇಜು ಬೆಂಗಳೂರು, ಯಶಸ್ ಗೌಡ – ಬಿಜಿಎನ್ ಎಸ್- ಬಿಜಿಎನ್ನೆಸ್ ಚಿಕ್ಕಬಳ್ಳಾಪುರ ಇವರು ಕೂಡ ಸೈನ್ಸ್ ವಿಭಾಗದಲ್ಲಿ 596 ಅಂಕ ಪಡೆದಿದ್ದಾರೆ.
ಕಾಮರ್ಸ್ ನಲ್ಲಿ ದೀಪಶ್ರೀ ಪ್ರಥಮ
ಕಾಮರ್ಸ್ ವಿಭಾಗದಲ್ಲಿ ಮಂಗಳೂರಿನ ಕೆನರಾ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ ಎಸ್. 599 ಅಂಕದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ತೇಜಸ್ವಿನಿ ಎಂ.ಎ- ಭಾರತ್ ಮಾತಾ ಪಿಯು ಕಾಲೇಜು ಕೊಪ್ಪ ಇವರು 598 ಅಂಕದೊಂದಿಗೆ ಎರಡನೇ ಸ್ಥಾನ ಗಳಿಸಿದ್ದಾರೆ. ಎಚ್.ಬಿ. ಭಾರ್ಗವಿ – ಮಹಿಳಾ ಸಮಾಜ ಪಿಯು ಕಾಲೇಜು ಕೋಲಾರ, ಪ್ರಣವ್ ಬಾಳಾಸಾಹೇಬ್ ಆಳಗೌಡ- ಆಳ್ವಾಸ್ ಕಾಲೇಜು ಮೂಡುಬಿದ್ರೆ, ಪ್ರತೀಕ್ಷಾ ಪಿ.- ಎಎಸ್ ಸಿ ಪಿಯು ಕಾಲೇಜು ರಾಜಾಜಿನಗರ, ತನ್ವಿ ಹೇಮಂತ್ ಪಾಟೀಲ್ – ಗಾಗ್ಟೆ ಪಿಯು ಕಾಲೇಜ್ ಆಫ್ ಕಾಮರ್ಸ್ ತಿಲಕವಾಡಿ ಬೆಳಗಾವಿ, ವೈಷ್ಣವಿ ಪ್ರಸಾದ್ ಭಟ್ – ಆಳ್ವಾಸ್ ಪಿಯು ಕಾಲೇಜು ಮೂಡುಬಿದ್ರೆ, ಅಮೃತವರ್ಷಿಣಿ ಎಸ್.- ಜೈನ್ ಪಿಯು ಕಾಲೇಜು ಜಯನಗರ, ಅನೂಪ್ ಶಾನ್ ಗೋಮ್ಸ್ – ಎಕ್ಸಲೆಂಟ್ ಪಿಯು ಕಾಲೇಜು ಮೂಡುಬಿದ್ರೆ, ಧಾತ್ರಿ ಜಿ.- ಸದ್ವಿದ್ಯಾ ಸೆಮಿ ರೆಸಿಡೆಂಟ್ ಪಿಯು ಕಾಲೇಜು ಮೈಸೂರು ಇವರು ಕಾಮರ್ಸ್ ವಿಭಾಗದಲ್ಲಿ 596 ಸಮಾನ ಅಂಕ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಸಂಜನಾಬಾಯಿ ಪ್ರಥಮ
ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಪಿಯು ಕಾಲೇಜಿನ ಸಂಜನಾಬಾಯಿ ಎನ್ನುವ ಬಡ ಕುಟುಂಬದ ಹುಡುಗಿ 597 ಅಂಕ ಪಡೆದು ಮೊದಲ ಸ್ಥಾನಿಯಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಪಂಚಮಶಾಲಿ ಪಿಯು ಕಾಲೇಜು ಇಟಗಿಯ ಕೆ.ನಿರ್ಮಲಾ – 596, ಕೆ.ಆರ್ ಶ್ರೀ ಜಯ ದರ್ಶಿನಿ- ಮಹಾರಾಜ ಮಹಿಳಾ ಕಾಲೇಜು ಬೆಂಗಳೂರು- 595 ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಆಳ್ವಾಸ್ ಮೂಡುಬಿದ್ರಿಯ ಪ್ರಕೃತಿ ಎನ್.- 591 ಅಂಕ ಪಡೆದಿದ್ದಾರೆ.
PUC results for 2025 have been announced, showcasing remarkable performances from students across Udupi and Dakshina Kannada districts. In a standout display of academic excellence, Mangalore’s very own Amulya Kamath and Deepashree have emerged as the top scorers in the Commerce and Science streams, respectively.
16-04-25 11:03 pm
Bangalore Correspondent
ಒಂದನೇ ತರಗತಿಗೆ ಪ್ರವೇಶ ; ಈ ವರ್ಷಕ್ಕೆ ಮಾತ್ರ ಮಕ್ಕಳ...
16-04-25 09:07 pm
Bigg Boss Kannada, Rajath arrested: ರೀಲ್ಸ್ ಶೋ...
16-04-25 06:42 pm
CM Siddaramaiah, Lokayukta, Muda: ಸಿಎಂ ಸಿದ್ದರ...
15-04-25 08:44 pm
Kannada Journalist S K Shyamsundar Death: ಹಿರ...
15-04-25 12:51 pm
16-04-25 03:54 pm
HK News Desk
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
16-04-25 10:58 pm
Mangalore Correspondent
Mangalore Traffic diversion, Anti Waqf bill p...
16-04-25 08:22 pm
Asif Apatbandava, Rauf Bengre Honey Trap, Man...
16-04-25 02:02 pm
Panambur Bike Accident, Mangalore: ಪಣಂಬೂರಿನಲ್...
16-04-25 01:29 pm
NIA, Praveen Nettaru: ಪ್ರವೀಣ್ ನೆಟ್ಟಾರು ಕೊಲೆ ಪ...
15-04-25 09:57 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm