ಬ್ರೇಕಿಂಗ್ ನ್ಯೂಸ್
17-04-25 10:27 pm Mangalore Correspondent ಕರಾವಳಿ
ಮಂಗಳೂರು, ಎ.17 : ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಡ್ಯಾರ್ ಷಾ ಮೈದಾನದಲ್ಲಿ ಏರ್ಪಡಿಸಲಾದ ಪ್ರತಿಭಟನೆ ನೆಪದಲ್ಲಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ -73 ಬಂದ್ ಮಾಡಲು ಸೂಚಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶವನ್ನು ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಪ್ರತಿಭಟನೆ ವಿಚಾರಕ್ಕೆ ಹೆದ್ದಾರಿಯಲ್ಲಿ ವಾಹನ ನಿರ್ಬಂಧ ಮಾಡುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಎಪ್ರಿಲ್ 18ರ ಶುಕ್ರವಾರ ಮಧ್ಯಾಹ್ನ ಮಂಗಳೂರು ಹೊರವಲಯದ ಅಡ್ಯಾರ್ ಶಾ ಮೈದಾನದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಪ್ರತಿಭಟನೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಸೇರುತ್ತಾರೆಂಬ ನೆಲೆಯಲ್ಲಿ ಹೆದ್ದಾರಿಯನ್ನು ಬಂದ್ ಮಾಡಿ ಪರ್ಯಾಯ ರಸ್ತೆ ಬಳಸುವಂತೆ ವಾಹನ ಪ್ರಯಾಣಿಕರಿಗೆ ಪೊಲೀಸ್ ಕಮಿಷನರ್ ಸೂಚಿಸಿದ್ದರು. ಇದಲ್ಲದೆ, ಟ್ಯಾಂಕರ್ ಇನ್ನಿತರ ಘನ ವಾಹನಗಳನ್ನು ಈ ಸಂದರ್ಭದಲ್ಲಿ ಓಡಿಸದೆ ಪರ್ಯಾಯ ರಸ್ತೆಗಳನ್ನು ಬಳಸಿ ಅಥವಾ ಸಂಚಾರ ನಿರ್ಬಂಧಿಸುವಂತೆ ಟ್ರಾಫಿಕ್ ಎಸಿಪಿ ಮೂಲಕ ಕೈಗಾರಿಕಾ ಘಟಕಗಳಿಗೂ ಸೂಚನೆ ನೀಡಲಾಗಿತ್ತು. ಆದರೆ ಈ ರೀತಿಯ ಸಂಚಾರ ನಿರ್ಬಂಧದಿಂದ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾಗುತ್ತಾರೆಂದು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗಿತ್ತು.
ಈ ಬಗ್ಗೆ ಎಪ್ರಿಲ್ 17ರಂದು ತುರ್ತಾಗಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ರಿಟ್ ಅರ್ಜಿ ಸಲ್ಲಿಸಿದ್ದಲ್ಲದೆ, ಪೊಲೀಸ್ ಕಮಿಷನರ್ ಹೊರಡಿಸಿದ್ದ ಸಂಚಾರ ನಿರ್ಬಂಧ ಆದೇಶವನ್ನು ಪ್ರಶ್ನಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಧೀಶ ನಾಗಪ್ರಸನ್ನ, ಈಗಾಗಲೇ ವಕ್ಫ್ ತಿದ್ದುಪಡಿ ಕಾಯ್ದೆ ವಿಚಾರ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯಲ್ಲಿದೆ. ಇಂತಹ ಸಂದರ್ಭದಲ್ಲಿ ಪ್ರತಿಭಟನೆ ಸಲ್ಲಿಸುವುದಕ್ಕೆ ಸರಕಾರಗಳು ಅವಕಾಶ ನೀಡಬಾರದು. ಹಾಗಿದ್ದರೂ ಪ್ರತಿಭಟನೆ ಮಾಡುವುದಿದ್ದರೆ ಸರಕಾರ ಸೂಚಿಸಿದ ಸ್ಥಳದಲ್ಲಿ ಮಾತ್ರ ಇರಬೇಕು. ಅದರ ನೆಪದಲ್ಲಿ ಹೆದ್ದಾರಿ ಬಂದ್ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು. ಅಲ್ಲದೆ, ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಸರಕಾರಗಳು ಪರಿಗಣಿಸಬೇಕು. ಅಲ್ಲದೆ, ಸರಕಾರ ಅವಕಾಶ ನೀಡಿದ್ದರೆ ಮಾತ್ರ ಪ್ರತಿಭಟನೆ ಸಲ್ಲಿಸಬಹುದು. ಅವಕಾಶ ನೀಡದೇ ಇದ್ದರೆ ಪ್ರತಿಭಟನೆ ನಡೆಸುವಂತಿಲ್ಲ. ಹಾಗಂತ, ರಸ್ತೆಗಳನ್ನು ಬ್ಲಾಕ್ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ನ್ಯಾಯಾಧೀಶರು ಈ ಕುರಿತು ನೀಡಿರುವ ಮಧ್ಯಂತರ ಆದೇಶದಲ್ಲಿ ತಿಳಿಸಿದ್ದಾರೆ. ಪೊಲೀಸ್ ಕಮಿಷನರ್ ಹೆದ್ದಾರಿ ಬಂದ್ ಮಾಡುವುದನ್ನು ಪ್ರಶ್ನಿಸಿ ಅರ್ಕುಳ ನಿವಾಸಿ ರಾಜೇಶ್ ಎಂಬವರು ವಕೀಲರ ಮೂಲಕ ಹೈಕೋರ್ಟಿಗೆ ರಿಟ್ ಹಾಕಿದ್ದರು. ಎಪ್ರಿಲ್ 18ರಂದು ಮಧ್ಯಾಹ್ನ 12ರಿಂದ ರಾತ್ರಿ 9 ಗಂಟೆ ವರೆಗೆ ಖಾಸಗಿ ಮತ್ತು ಸರಕಾರಿ ಸಾರಿಗೆ ಬಸ್ ಗಳನ್ನು ನಿರ್ಬಂಧಿಸಿರುವ ಕ್ರಮವನ್ನು ಪ್ರಶ್ನೆ ಮಾಡಿದ್ದರು. ಅಲ್ಲದೆ, ವಕ್ಫ್ ಪ್ರತಿಭಟನೆ ನೆಪದಲ್ಲಿ ಸಾರಿಗೆ ವಾಹನಗಳಿಗೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ಸೂಚಿಸಿದ್ದನ್ನು ಪ್ರಶ್ನೆ ಮಾಡಲಾಗಿತ್ತು.
ಹೈಕೋರ್ಟಿನಲ್ಲಿ ಸರಕಾರದ ಪರ ಹಾಜರಿದ್ದ ವಕೀಲರು, ಪ್ರತಿಭಟನೆ ಸಂದರ್ಭ ಹೆದ್ದಾರಿಯಲ್ಲಿ ಸಂಚಾರ ತೊಂದರೆ ಆಗುವುದರಿಂದ ಘನ ವಾಹನಗಳಿಗೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಹಾಗೆಂದು ಹೆದ್ದಾರಿಯನ್ನು ಪೂರ್ತಿ ಬಂದ್ ಮಾಡುವುದಿಲ್ಲ. ವಾಹನ ಸಂಚಾರಕ್ಕೆ ಅವಕಾಶ ಇರುತ್ತದೆ ಎಂದು ತಿಳಿಸಿದ್ದಾರೆ. ಕೋರ್ಟ್ ಈ ಕುರಿತ ಮುಂದಿನ ವಿಚಾರಣೆಯನ್ನು ಎಪ್ರಿಲ್ 23ಕ್ಕೆ ಮುಂದೂಡಿದೆ. ಅರ್ಜಿದಾರರ ಪರವಾಗಿ ವಕೀಲರಾದ ಹೇಮಂತ್ ರಾವ್ ಮತ್ತು ಲೀಲೇಶ್ ಕೃಷ್ಣ ವಾದ ಮಂಡಿಸಿದ್ದಾರೆ.
Karnataka High Court pulls up State for allowing anti Waqf law protest in Mangalore at Adyar over closing of highway. Justice M Nagaprasanna remarked that the government should not have granted permission for such protests.It ordered the Karnataka government to ensure roads are not blocked during such protests and that demonstrations are held only with permission and at designated spots.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm