ಬ್ರೇಕಿಂಗ್ ನ್ಯೂಸ್
17-04-25 11:06 pm Mangalore Correspondent ಕರಾವಳಿ
ಮಂಗಳೂರು, ಎ.17 : ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ, ನಡೆಯುತ್ತಲೇ ಇವೆ. ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದ್ದು ಬಿಟ್ಟರೆ ಬೇರಾವುದೇ ಕಡೆ ಹಿಂಸೆಯ ರೂಪ ಪಡೆದಿಲ್ಲ. ಆದರೆ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದ್ದು, ಕರಾವಳಿಯಿಂದ ದೊಡ್ಡ ಶಕ್ತಿ ಪ್ರದರ್ಶನ ಮಾಡಿಸಬೇಕೆಂದು ಮುಸ್ಲಿಂ ಸಂಘಟನೆಗಳು ಸಿದ್ಧತೆಯನ್ನೂ ಮಾಡಿವೆ. ಹೀಗಾಗಿ ಲಕ್ಷಕ್ಕೂ ಹೆಚ್ಚು ಜನ ಸೇರುವುದು ಒಂದೆಡೆಯಾದರೆ, ಅಹಿತಕರ ಘಟನೆ ಆಗದಂತೆ ಪೊಲೀಸರು ಕೂಡ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಪ್ರತಿಭಟನೆ ಆಯೋಜಿಸಿರುವ ಅಡ್ಯಾರ್ ಪ್ರದೇಶ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73ರ ಬದಿಯಲ್ಲೇ ಇರುವುದರಿಂದ ಸಹಜವಾಗಿಯೇ ಹೆದ್ದಾರಿ ಬಂದ್ ಆಗುವ ಸಾಧ್ಯತೆಯಿದೆ. ಇದನ್ನು ಗ್ರಹಿಸಿರುವ ಮಂಗಳೂರು ಪೊಲೀಸರು ಘನ ವಾಹನಗಳನ್ನು ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಎರಡು ದಿನ ಮೊದಲೇ ಸೂಚನೆ ನೀಡಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಮಾಡದಿದ್ದರೂ ಅಘೋಷಿತವಾಗಿ ಹೆದ್ದಾರಿ ಬಂದ್ ಆಗುವ ಸಾಧ್ಯತೆಯೇ ಹೆಚ್ಚಿದೆ. ಈ ಕಾರಣದಿಂದ ಪ್ರತಿಭಟನೆ ನಡೆಯುವ ಸ್ಥಳದಲ್ಲಿ ಕೆಎಸ್ಸಾರ್ಪಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ನೇತ್ರಾವತಿ ಸೇತುವೆ ಹೇಗೂ ಬಂದ್..
ಪ್ರತಿಭಟನೆ ಕಾರ್ಯಕ್ರಮದಲ್ಲಿ ಹಾಸನ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಿಂದಲೂ ಜನರು ಬರುತ್ತಾರೆಂದು ಹೇಳಲಾಗುತ್ತಿದ್ದು, ಹೀಗಾದಲ್ಲಿ ಎಲ್ಲ ಹೆದ್ದಾರಿಗಳೂ ಬಂದ್ ಆಗಲಿವೆ. ಇತ್ತ ಮಂಗಳೂರಿನಿಂದ ಕೇರಳಕ್ಕೆ ಸಂಪರ್ಕಿಸುವ ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ದುರಸ್ತಿ ನಡೆಯುತ್ತಿರುವುದರಿಂದ ಒಂದು ಸೇತುವೆಯಲ್ಲಿ ಸಂಚಾರ ನಿರ್ಬಂಧ ಇದೆ. ಏಕಮುಖ ಸೇತುವೆಯಲ್ಲೇ ಎರಡೂ ಕಡೆಯ ವಾಹನಗಳು ಸಂಚರಿಸುವುದರಿಂದ ಕಳೆದ 15 ದಿನಗಳಿಂದಲೂ ಪ್ರಯಾಣಿಕರು ಸಂಕಷ್ಟ ಪಡುತ್ತಿದ್ದಾರೆ. ಪಂಪ್ವೆಲ್ ಕಡೆಯಿಂದ ತೊಕ್ಕೊಟ್ಟು ತಲುಪಲು ಅರ್ಧ ಗಂಟೆ ಕಾಲ ಕಾಯಬೇಕಾದ ಸ್ಥಿತಿಯಿದೆ. ಹೀಗಿರಲು ಮಂಗಳೂರಿನಿಂದ ಬಿಸಿ ರೋಡ್ ಹೋಗುವ ಹೆದ್ದಾರಿಯೂ ಬಂದ್ ಆದಲ್ಲಿ ಪರಿಸ್ಥಿತಿ ಹೇಗಿರಬೇಡ.
ಬಿಸಿ ರೋಡಿನಿಂದ ಬರುವ ವಾಹನಗಳನ್ನು ಮೆಲ್ಕಾರ್ ಕೊಣಾಜೆ ಮೂಲಕ ತೊಕ್ಕೊಟ್ಟು ಮೂಲಕ ಮಂಗಳೂರಿಗೆ ಬರುವಂತೆ ಸೂಚಿಸಲಾಗಿದೆ. ಇದರಿಂದ ಉಳ್ಳಾಲದ ನೇತ್ರಾವತಿ ಸೇತುವೆಗೆ ಮತ್ತಷ್ಟು ಸಂಕಷ್ಟವಾಗಲಿದೆ. ಇತ್ತ ಮಂಗಳೂರಿನಿಂದ ಬಿಸಿ ರೋಡ್ ಕಡೆಗೆ ಹೋಗುವ ವಾಹನಗಳನ್ನು ಕದ್ರಿ ಏರ್ಪೋರ್ಟ್ ರಸ್ತೆ ಹಾಗೂ ಉಡುಪಿಯಿಂದ ಬರುವ ವಾಹನಗಳು ಕಿನ್ನಿಗೋಳಿ ಮೂಲಕ ಕೈಕಂಬ ಬಂದು ಪೊಳಲಿ ಬಿಸಿ ರೋಡ್ ತಲುಪಲು ಸೂಚಿಸಲಾಗಿದೆ. ಮೊದಲೇ ಕಿಕ್ಕಿರಿದು ತುಂಬಿಕೊಳ್ಳುವ ರಸ್ತೆಗಳು ಪ್ರತಿಭಟನೆ ನೆಪದಲ್ಲಿ ಹೆದ್ದಾರಿ ಬಂದ್ ಮಾಡಿದರೆ ಪರಿಸ್ಥಿತಿ ಶೋಚನೀಯ ಆಗಬಹುದು. ಇದಲ್ಲದೆ, ಅಡ್ಯಾರ್ ಮೈದಾನದಲ್ಲಿ ಲಕ್ಷ ಜನರು ಸೇರುವಷ್ಟು ಸ್ಥಳಾವಕಾಶವೂ ಇಲ್ಲ. ಹೀಗಾಗಿ ಹೆದ್ದಾರಿ ಬಂದ್ ಆಗುವುದು ಬಹುತೇಕ ಖಚಿತವಾಗಿದ್ದು ಜನರೇ ತಮ್ಮ ಪ್ರಯಾಣವನ್ನು ಕಡಿಮೆಗೊಳಿಸುವುದು ಉತ್ತಮ.
2019ರಲ್ಲಿ ಹಿಂಸಾರೂಪಕ್ಕೆ ತಿರುಗಿತ್ತು ಪ್ರತಿಭಟನೆ
ಇದಲ್ಲದೆ, ಕಳೆದ 2019ರಲ್ಲಿ ಸಿಎಎ ಕಾಯ್ದೆ ನೆಪದಲ್ಲಿ ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತದಲ್ಲಿ ಏರ್ಪಡಿಸಿದ್ದ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಆನಂತರ, ಪ್ರತಿಭಟನೆ, ಕಲ್ಲು ತೂರಾಟವನ್ನು ಹತ್ತಿಕ್ಕಲು ಪೊಲೀಸರು ಅಶ್ರುವಾಯು ಸಿಡಿಸಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇದರಿಂದ ಇಬ್ಬರು ಯುವಕರು ಪ್ರಾಣ ತೆರುವಂತಾಗಿತ್ತು. ಈ ಕಾರಣದಿಂದ ಮಂಗಳೂರಿನ ಮುಸ್ಲಿಮರ ಪ್ರತಿಭಟನೆ ಬಗ್ಗೆ ಪೊಲೀಸರು ಎರಡು ಬಾರಿ ಯೋಚಿಸಿಯೇ ಅವಕಾಶ ನೀಡುತ್ತಾರೆ. ಅದೇ ಕಾರಣಕ್ಕೆ ಈ ಸಲ ಮಂಗಳೂರು ನಗರ ಬಿಟ್ಟು ಹೊರಗಿನ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ದಾರೆ. ಆದರೂ ಹಿಂಸಾಚಾರ ಆಗದಂತೆ ನೋಡಿಕೊಳ್ಳಲು ಆಸುಪಾಸಿನ ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಸಲಾಗಿದೆ.
ಇದೇ ವೇಳೆ, ಕ್ರಿಸ್ತಿಯನ್ನರಿಗೆ ಎಪ್ರಿಲ್ 18ರ ಶುಕ್ರವಾರ ಗುಡ್ ಫ್ರೈಡೇ ಆಗಿರುವುದರಿಂದ ಅತ್ತಿತ್ತ ಸಂಚಾರ, ಸಡಗರದಲ್ಲಿ ಇರುತ್ತಾರೆ. ಕ್ರಿಸ್ತ ಮತ್ತೆ ಎದ್ದು ಬರುವ ದಿನವಾಗಿದ್ದರಿಂದ ಹಬ್ಬದ ಆಚರಣೆ ಇರುತ್ತದೆ. ಮಂಗಳೂರಿನಲ್ಲಿ ಮಾತ್ರ ಸಂಜೆಯ ಹೊತ್ತಿಗೆ ಎಲ್ಲ ಕಡೆ ಬಂದ್ ಆಗುವುದರಿಂದ ಕ್ರಿಸ್ತಿಯನ್ನರಿಗೂ ಈ ಬಾರಿ ತೊಂದರೆ ಎದುರಾಗಲಿದೆ. ಇತ್ತ ಹಿಂದುಗಳಿಗೂ ಬಹುತೇಕ ಕಡೆಗಳಲ್ಲಿ ಮದುವೆ ಸಮಾರಂಭಗಳಿದ್ದು, ಜನರು ಹೆಚ್ಚು ಸಂಚಾರದಲ್ಲಿರುತ್ತಾರೆ. ಇದೇ ಸಂದರ್ಭದಲ್ಲಿ ಹೈಕೋರ್ಟ್ ಪ್ರತಿಭಟನೆ ನೆಪದಲ್ಲಿ ರಸ್ತೆ, ಹೆದ್ದಾರಿ ಬಂದ್ ಮಾಡಬೇಡಿ, ಪ್ರತಿಭಟನೆಗೆ ಅವಕಾಶ ಕೊಟ್ಟ ಜಾಗದಲ್ಲಿ ಮಾತ್ರ ಮಾಡಿ ಎಂದು ಸೂಚಿಸಿದೆ. ಪೊಲೀಸರು ಇದೆಲ್ಲದರ ಮಧ್ಯೆ ಬಂದ್ ಆಗದಂತೆ ಎಷ್ಟರ ಮಟ್ಟಿಗೆ ನೋಡಿಕೊಳ್ತರೋ ನೋಡಬೇಕು.
Protests against the controversial Anti-Waqf Bill on April 18th will led to significant traffic disruptions in Mangalore, coinciding with the observance of Good Friday. Commuters will face considerable delays as major roads will be closed due to demonstrators rallying against the legislation, which they believe threatens the management and functioning of Waqf properties.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 10:51 am
Mangalore Correspondent
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm