ಬ್ರೇಕಿಂಗ್ ನ್ಯೂಸ್
19-04-25 04:24 pm Mangalore Correspondent ಕರಾವಳಿ
ಮಂಗಳೂರು, ಎ.19 : ಮಂಗಳೂರು ನಗರ ಪೊಲೀಸ್ ಸಂಚಾರಿ ವಿಭಾಗದ ಎಸಿಪಿ ನಜ್ಞಾ ಫಾರೂಕಿ ಅವರು ಶುಕ್ರವಾರ ಅಡ್ಯಾರಿನಲ್ಲಿ ನಡೆದ ವಕ್ಫ್ ವಿರೋಧಿ ಪ್ರತಿಭಟನೆಯ ಬಳಿಕ ಪ್ರತಿಭಟನಾಕಾರರನ್ನು ಸಾಗಿಸಲು ತಮ್ಮ ಸರಕಾರಿ ಕಾರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಅದಕ್ಕೆ ಸಂಬಂಧಿಸಿ ಸಣ್ಣ ವಿಡಿಯೋ ತುಣುಕೊಂದು ವೈರಲ್ ಆಗಿತ್ತು. ಪೊಲೀಸ್ ಸ್ಕಾರ್ಪಿಯೋ ಕಾರು ಸೈರನ್ ಹಾಕ್ಕೊಂಡು ಎದುರಿನಲ್ಲಿ ಪ್ರತಿಭಟನೆಗೆ ಬಂದಿದ್ದವರನ್ನು ಕೂರಿಸಿಕೊಂಡು ಹೋಗುವ ವಿಡಿಯೋ ಇದ್ದುದರಿಂದ ಎಸಿಪಿ ನಜ್ಞಾ ಫಾರೂಕಿ ಸ್ವಜಾತಿ ಪ್ರೇಮ ಮೆರೆದ್ರಾ ಎನ್ನುವ ಅನುಮಾನ ಮೂಡುವಂತೆ ಮಾಡಿತ್ತು.
ಈ ವಿಡಿಯೋ ಆಧರಿಸಿ ಪೊಲೀಸ್ ಅಧಿಕಾರಿ ತಮ್ಮ ಸರಕಾರಿ ಕಾರನ್ನು ದುರ್ಬಳಕೆ ಮಾಡಿದ್ದಾರೆಂದು ಟಿವಿ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದ್ದಂತೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ. ನಿನ್ನೆಯ ವಕ್ಫ್ ಪ್ರತಿಭಟನೆಯ ಬಳಿಕ ಜನರು ಸ್ಥಳದಿಂದ ಹಿಂದಕ್ಕೆ ತೆರಳುವ ಸಂದರ್ಭದಲ್ಲಿ ಟೆಂಪೋ ಟ್ರಾವೆಲರ್ ವಾಹನವೊಂದು 16 ವರ್ಷದ ಬಾಲಕನ ಪಾದದ ಮೇಲಿನಿಂದ ಚಲಿಸಿತ್ತು. ಅಪಘಾತದಿಂದ ಬಾಲಕ ಪಾದಕ್ಕೆ ತೀವ್ರ ಗಾಯಗೊಂಡಿದ್ದು ಜನರು ಸೇರುತ್ತಲೇ ಅಲ್ಲಿದ್ದ ಮಹಿಳಾ ಪೊಲೀಸರು ಬಾಲಕನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ.
ಇದೇ ವೇಳೆ, ಎಸಿಪಿ ನಜ್ಞಾ ಅವರಿದ್ದ ಸ್ಕಾರ್ಪಿಯೋ ಕಾರು ಬಂದಿದ್ದು, ತಾನು ಕಾರಿನಿಂದ ಇಳಿದು ಬಾಲಕನನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಬಾಲಕನ ಜೊತೆಗಿದ್ದವರು ಪೊಲೀಸ್ ವಾಹನದಲ್ಲಿ ಕುಳಿತಿದ್ದು ಕಾರಿನ ಚಾಲಕ ಸೈರನ್ ಹಾಕ್ಕೊಂಡು ಆಸ್ಪತ್ರೆ ಕಡೆಗೆ ಚಲಿಸಿದ್ದಾರೆ. ಆ ಬಾಲಕನನ್ನು ಅಡ್ಯಾರಿನಲ್ಲಿ ಜನಪ್ರಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಸಂದರ್ಭದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಒಯ್ಯುವುದು ಪೊಲೀಸರ ಕರ್ತವ್ಯವಾಗಿದ್ದು, ಅದೇ ರೀತಿ ಎಸಿಪಿಯವರು ತಮ್ಮ ಕರ್ತವ್ಯ ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ.
ಆದರೆ ಇದಕ್ಕೂ ಮೊದಲೇ ಸ್ವತಃ ಮುಸ್ಲಿಂ ಆಗಿರುವ ಪೊಲೀಸ್ ಅಧಿಕಾರಿ ನಜ್ಞಾ ಫಾರೂಕಿ ತಮ್ಮದೇ ಸಮುದಾಯದ ಜನರ ಪ್ರತಿಭಟನೆಯಾಗಿದ್ದರಿಂದ ಸ್ವಜಾತಿ ಪ್ರೇಮ ಮೆರೆದಿದ್ದಾರೆಂದು ಸುದ್ದಿಯಾಗಿತ್ತು. ತಪ್ಪಾಗಿ ಸುದ್ದಿ ಬಿತ್ತರಗೊಂಡಿದ್ದರಿಂದ ಪೊಲೀಸ್ ಕಮಿಷನರ್ ಸ್ಪಷ್ಟನೆ ನೀಡುವ ಮೂಲಕ ಸೂಕ್ತ ಸಮಜಾಯಿಷಿ ನೀಡಿದ್ದಾರೆ.
The recent Waqf protest in Mangalore has sparked controversy following allegations against Traffic ACP Najma Farooqi, who was accused of using a government vehicle to provide transportation to protesters. In a statement that has gained significant media traction, the allegation suggested that ACP Farooqi was seen dropping individuals off in her official vehicle during the protest. In response to these claims, Mangalore Commissioner Anupam Agarwal has issued a clarification, stating that ACP Farooqi's actions were misconstrued. According to Commissioner Agarwal, Farooqi did not transport protesters as alleged, but rather utilized the government vehicle to assist a minor boy who had sustained injuries after being struck by a van during the protests.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 09:24 pm
HK News Desk
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm