ಬ್ರೇಕಿಂಗ್ ನ್ಯೂಸ್
05-05-25 07:15 pm Mangalore Correspondent ಕರಾವಳಿ
ಮಂಗಳೂರು, ಮೇ.5: ಸುಹಾಸ್ ಶೆಟ್ಟಿ ಕೊಲೆಯನ್ನು ಪೊಲೀಸರೇ ಮಾಡಿಸಿದ್ದಾರೆಂಬ ಅನುಮಾನ ಇದೆ. ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಲ್ಲ. ಮೊದಲೇ ಒಡಂಬಡಿಕೆ ಆದಂತೆ ಆರೋಪಿಗಳನ್ನು ಸರೆಂಡರ್ ಮಾಡಲಾಗಿದೆ. ಇದಕ್ಕಾಗಿ ವಿದೇಶದಿಂದ 50 ಲಕ್ಷ ಫಂಡಿಂಗ್ ಆಗಿದ್ದು, ಪೊಲೀಸ್ ಇಲಾಖೆಗೂ ಹೋಗಿದೆ ಎಂದು ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ನೇರ ಆರೋಪ ಮಾಡಿದ್ದಾರೆ.
ಸುಹಾಸ್ ಶೆಟ್ಟಿ ಕಾರನ್ನು ಅಡ್ಡಹಾಕಿ ವ್ಯವಸ್ಥಿತ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಈ ವೇಳೆ, ಸ್ಥಳೀಯರು ಕೋಟೆ ನಿರ್ಮಿಸಿದ ಸುತ್ತ ನಿಂತು ಆರೋಪಿಗಳು ಪರಾರಿಯಾಗಲು ಸಹಾಯ ಮಾಡಿದ್ದಾರೆ. ಈ ಕೃತ್ಯವನ್ನು ಪೊಲೀಸ್ ಕಮಿಷನರ್ ಮತ್ತು ಪೊಲೀಸರು ವ್ಯವಸ್ಥಿತ ರೀತಿಯಲ್ಲಿ ಮಾಡಿಸಿದ್ದಾರೆ. ಸ್ಥಳೀಯ ಪೊಲೀಸರ ಸಹಕಾರದಿಂದಲೇ ಕೊಲೆ ಘಟನೆಯಾಗಿದೆ.
ಸ್ಪೀಕರ್ ಯುಟಿ ಖಾದರ್ ಅವರು ಫಾಜಿಲ್ ಕೊಲೆಗೆ ಪ್ರತೀಕಾರಕ್ಕಾಗಿ ಮಾಡಿದ್ದಲ್ಲ. ಅವರ ಪಾತ್ರ ಇಲ್ಲ ಎಂದು ಹೇಳಿದ್ದರು. ಆದರೆ ಫಾಜಿಲ್ ಕೊಲೆ ಕಾರಣಕ್ಕಾಗಿಯೇ ಮಾಡಿದ್ದಾರೆ ಅಂತ ಕಮಿಷನರ್ ಹೇಳಿದ್ದಾರೆ. ಪೊಲೀಸರು ಎಷ್ಟು ನಿರ್ಲಕ್ಷ್ಯ ವಹಿಸಿದ್ದರಂದ್ರೆ, ಸುಹಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಮುಟ್ಟಲು ಹೋಗಿಲ್ಲ. ಸ್ಥಳೀಯರು ಆನಂತರ ಬೇರೆ ವಾಹನದಲ್ಲಿ ಹಾಕಿ ಆಸ್ಪತ್ರೆಗೆ ಕರೆತಂದಿದ್ದಾರೆ. ಮಂಗಳೂರಿನ ಪೊಲೀಸ್ ಇಲಾಖೆಯನ್ನು ಈ ಕಮಿಷನರ್ ದುಸ್ಥಿತಿಗೆ ತಳ್ಳಿದ್ದಾರೆ. ಇಂಥ ಕಮಿಷನರನ್ನು ನಾವು ಈತನಕ ನೋಡಿಲ್ಲ. ಇಸ್ಪೀಟ್, ಮರಳು ಮಾಫಿಯಾದಲ್ಲಿ ಪೊಲೀಸ್ ಪೇದೆಗಳೇ ಇಂತಿಷ್ಟು ಕೊಡಬೇಕೆಂದು ಹೇಳುತ್ತಾರೆ. ಅದರಲ್ಲಿ ಕಮಿಷನರಿಗೆ ಇಷ್ಟು, ಇಲಾಖೆಗೆ ಇಷ್ಟು ಎಂದೂ ಹೇಳುತ್ತಾರೆ. ಪೊಲೀಸರು ಇಷ್ಟು ಬರಗೆಟ್ಟ ಸ್ಥಿತಿಗೆ ಹೋಗಬಾರದು.
ಮೊನ್ನೆ ಮೂಡುಶೆಡ್ಡೆಯ ಪ್ರದೀಪ್ ಎಂಬ ಕಾರ್ಯಕರ್ತನ ಮನೆಗೆ ನಡುರಾತ್ರಿಯಲ್ಲಿ ಪೊಲೀಸರು ನುಗ್ಗಿ ತಲಾಶ್ ಮಾಡಿದ್ದಾರೆ. ಯಾವುದೇ ವಾರಂಟ್ ಇಲ್ಲದೆ ಮಹಿಳೆಯರಿದ್ದ ವೇಳೆ ಮನೆಗೆ ನುಗ್ಗಿ ಪೊಲೀಸರಿಗೆ ತಪಾಸಣೆ ನಡೆಸಲು ಅವಕಾಶ ಇದೆಯೇ ಎಂದು ಕೇಳಿದ ಕೋಟ್ಯಾನ್, ಪೊಲೀಸರು ಎಷ್ಟು ಜನ ಮುಸ್ಲಿಮರ ಮನೆಗೆ ಹೋಗಿದ್ದೀರಿ, ತಪಾಸಣೆ ಮಾಡಿದ್ದೀರಾ ಅಂತ ಪ್ರಶ್ನೆ ಮಾಡಿದರು.
ಬಜ್ಪೆಯ ಕಿನ್ನಿಪದವು ಎಂಬಲ್ಲಿ ಲೈಕೋರಿಸ್ ಹೆಸರಿನ ಫ್ಲಾಟ್ ಇದೆ. ಅದರಲ್ಲಿ ಪ್ರಶಾಂತ ಪೂಜಾರಿ, ಸುಖಾನಂದ ಶೆಟ್ಟಿ ಹತ್ಯೆ ಮಾಡಿದವರು ನೆಲೆಸಿದ್ದಾರೆ. ಸುಹಾಸ್ ಶೆಟ್ಟಿ ಕೊಲೆ ಕೃತ್ಯದಲ್ಲಿ ಇವರದ್ದೂ ಪಾತ್ರ ಇದೆ. ಪೊಲೀಸರು ಇವರ ಮನೆಗೆ ಹೋಗಿ ತಪಾಸಣೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಗೃಹ ಸಚಿವರು ಮೊನ್ನೆ ಮುಸ್ಲಿಂ ಮುಖಂಡರನ್ನು ಮಾತ್ರ ಮಾತನಾಡಿಸಿದ್ದಾರೆ. ಯಾಕೆ ಜನಪ್ರತಿನಿಧಿಗಳನ್ನು ಕರೆದು ಏನು ವಿಷಯ ಅಂತ ಕೇಳಲಿಲ್ಲ. ನಮಗೆ ಜಿಲ್ಲೆಯ ಪೊಲೀಸರ ಒಂದು ನೂಲಿನಷ್ಟು ವಿಶ್ವಾಸವೂ ಇಲ್ಲ. ಹೀಗಾಗಿ ಒಟ್ಟು ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಕಮಿಷನರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಉಮಾನಾಥ ಕೋಟ್ಯಾನ್, ರೌಡಿಶೀಟರ್ ಅಂತ ಹೇಳಿ ಸಮಜಾಯಿಷಿ ಕೊಡುತ್ತಿದ್ದಾರೆ. ಇವರು ರೌಡಿಯನ್ನು ಕೊಲ್ಲಲು ಬೇರೆ ರೌಡಿಗಳನ್ನು ಬಿಟ್ಟಿದ್ದಾ.. ನಿಮಗೆ ದುಡ್ಡು ಕೊಟ್ಟಿಲ್ಲ ಅಂತ ಯಾರೊಬ್ಬರ ಮೇಲೂ ರೌಡಿಶೀಟರ್ ಮಾಡ್ತೀರಾ.. ಹಿಂದುಗಳಲ್ಲಿ ಮಾತ್ರ ರೌಡಿಶೀಟರ್ ಇರೋದಾ ಎಂದು ಪ್ರಶ್ನಿಸಿದರು. ಕೊಲೆ ಪ್ರಕರಣದ ವಿಡಿಯೋದಲ್ಲಿ ಮುಸುಕುಧಾರಿ ಮಹಿಳೆಯೊಬ್ಬರು ಆರೋಪಿಗಳು ಪರಾರಿಯಾಗಲು ಸಕರಿಸುತ್ತಾರೆ. ಅವರನ್ನು ಯಾಕೆ ಬಂಧಿಸಿಲ್ಲ. ಸರಕಾರ ಯಾರದ್ದಿದ್ದರೂ ಅಧಿಕಾರಿಗಳು ಯಾರದ್ದೂ ಮುಲಾಜಿನಲ್ಲಿ ಕೆಲಸ ಮಾಡಬಾರದು. ಕಾಂಗ್ರೆಸ್ ಸರಕಾರ ಅಂತ ಯಾರೋ ಪುಢಾರಿಗಳ ಮಾತು ಕೇಳಿಕೊಂಡು ಕೆಲಸ ಮಾಡೋದಲ್ಲ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಎಂಎಲ್ಸಿ ಕಿಶೋರ್ ಕುಮಾರ್, ಈಶ್ವರ್ ಕಟೀಲು ಮತ್ತಿತರರಿದ್ದರು.
Mangalore Suhas Shetty murder was planned by police, accused have surrendered by giving money slams BJP Umanath Kotian.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm