ಬ್ರೇಕಿಂಗ್ ನ್ಯೂಸ್
06-05-25 12:32 pm Mangalore Correspondent ಕರಾವಳಿ
ಉಳ್ಳಾಲ, ಮೇ 6 : ಮಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಿದ್ದರೂ ಪೊಲೀಸರೇ ಅಘೋಷಿತ ಕರ್ಫ್ಯೂ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ರಾತ್ರಿ 9 ಗಂಟೆಗೆ ಪೊಲೀಸರು ಬಾರ್, ರೆಸ್ಟೋರೆಂಟ್ ಗಳಿಗೆ ನುಗ್ಗಿ ಗ್ರಾಹಕರನ್ನ ಓಡಿಸಿ ಬಲವಂತವಾಗಿ ಶಟರ್ ಎಳೆಸುತ್ತಿದ್ದಾರೆ. ಸುಗಮ ವ್ಯಾಪಾರ, ವಹಿವಾಟುಗಳನ್ನ ನಡೆಸಲು ರಕ್ಷಣೆ ನೀಡಬೇಕಾಗಿರುವ ಆರಕ್ಷಕರೇ ರಾತ್ರಿಯಾಗುತ್ತಿದ್ದಂತೆ ಜನ ಸಾಮಾನ್ಯರನ್ನ ಹೆದರಿಸುತ್ತಿರುವುದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಬಜ್ಪೆಯಲ್ಲಿ ನಡೆದಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕಗ್ಗೊಲೆಯನ್ನ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮರುದಿವಸವೇ ಬಂದ್ ಗೆ ಕರೆ ನೀಡಿತ್ತು. ಬಂದ್ ಗೆ ಕರೆ ನೀಡಿ ಅದರ ನೆಪದಲ್ಲಿ ಬಸ್ಸಿಗೆ ಕಲ್ಲೆಸೆದಿದ್ದಕ್ಕೆ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಈಗಾಗಲೇ ಪೊಲೀಸರು ಕೇಸು ಜಡಿದಿದ್ದಾರೆ. ಬಂದ್ ಗೆ ಕರೆ ನೀಡಿದ್ದರ ವಿರುದ್ಧ ಕೇಸು ಜಡಿದ ಪೊಲೀಸರೇ ಇದೀಗ ಯಾವುದೇ ಮುನ್ಸೂಚನೆ ನೀಡದೆ ನಗರವನ್ನ ತಮಗಿಷ್ಟ ಬಂದಂತೆ ಬಂದ್ ಮಾಡಿಸುತ್ತಿದ್ದಾರೆ. ಮಂಗಳೂರು ನಗರದ ಕೆಲವು ಕಡೆ ಮತ್ತು ಉಳ್ಳಾಲದಲ್ಲಿ ಭಾನುವಾರ ಮತ್ತು ಸೋಮವಾರ ರಾತ್ರಿ 9.30 ಗಂಟೆಗೆ ಬಾರ್, ರೆಸ್ಟೋರೆಂಟ್, ಫಾಸ್ಟ್ ಪುಡ್, ಹೊಟೇಲ್, ಇನ್ನಿತರ ಅಂಗಡಿಗಳನ್ನ ಪೊಲೀಸರು ಏಕಾಏಕಿ ಬಂದ್ ಮಾಡಿಸಿದ್ದಾರೆ.
ಬಾರ್, ರೆಸ್ಟೋರೆಂಟ್ ಗಳಿಗೆ ನುಗ್ಗಿದ ಪೊಲೀಸರು ಗ್ರಾಹಕರಲ್ಲಿ ಬೇಗ ಬೇಗ ಎದ್ದು ಮನೆಗೆ ಹೋಗಿ ಎನ್ನುತ್ತ ಶಟರ್ ಗಳನ್ನು ಎಳೆದು ಭಯ ಹುಟ್ಟಿಸಿದ್ದಾರೆ. ಭಯಭೀತರಾದ ಗ್ರಾಹಕರು ಏನೋ ಮತ್ತೊಂದು ಕೊಲೆ ಆಗಿರಬೇಕು ಎಂದುಕೊಂಡು ತರಿಸಿಟ್ಟ ಕಬಾಬ್, ಮದ್ಯವನ್ನ ಅರ್ಧಕ್ಕೆ ಬಿಟ್ಟು ಮನೆಗೆ ಓಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಇಲ್ಲದಿದ್ದರೂ ಮುಂಜಾಗ್ರತೆ ನೆಪದಲ್ಲಿ ರೆಸ್ಟೋರೆಂಟ್ ಗಳನ್ನ ಪೊಲೀಸರು 9 ಗಂಟೆಗೆ ಒಳನುಗ್ಗಿ ಬಂದ್ ಮಾಡಿಸುವುದು ಎಷ್ಟು ಸರಿ? ಮೊದಲೇ ಸೂಚನೆ ಕೊಟ್ಟಿದ್ದರೆ ಓಕೆ, ಯಾವುದೇ ಸೂಚನೆ ಇಲ್ಲದೆ ಹೊಟೇಲ್ ಬಂದ್ ಮಾಡಿಸಿದರೆ ಮಾಡಿಟ್ಟ ಊಟ, ತಿಂಡಿಗಳನ್ನು ಏನು ಮಾಡಬೇಕು ಎಂದು ಹೊಟೇಲ್ ಮಾಲಕರು ಪ್ರಶ್ನಿಸಿದ್ದಾರೆ.
ಡಿಸಿಎಂ ಡೆಡ್ ಸಿಟಿ ಹೇಳಿಕೆಗೆ ರಂಗು !
ಮಂಗಳೂರು ರಾತ್ರಿ 7 ಗಂಟೆಯಾಗುತ್ತಿದ್ದಂತೆ ಡೆಡ್ ಸಿಟಿ ಆಗುತ್ತಿದೆಯೆಂದು ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಅಸೆಂಬ್ಲಿಯಲ್ಲಿ ಪ್ರಸ್ತಾಪಿಸಿದ್ದರು. ಈಗ ಬಜಪೆಯಲ್ಲಿ ನಡೆದಿರುವ ಕೊಲೆಯನ್ನ ಮುಂದಿಟ್ಟು ಪೊಲೀಸರೇ ನಗರದಲ್ಲಿ ಜನಸಂಚಾರ ಇಲ್ಲದಂತೆ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ ಸಹ ಪೊಲೀಸರು ರಸ್ತೆಯುದ್ಧಕ್ಕೂ ಸೈರನ್ ಮೊಳಗಿಸಿ ಅತ್ತಿಂದಿತ್ತ ಓಡಾಡಿ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ಉಗಿದು ಬಂದ್ ಮಾಡಿಸಿದರೆ, ರೆಸ್ಟೋರೆಂಟ್ ಗಳಲ್ಲಿ ಒಳನುಗ್ಗಿ ಗ್ರಾಹಕರನ್ನೇ ಹೆದರಿಸಿ ಓಡಿಸುವ ಯತ್ನ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಲ್ಲಿ ಪ್ರಶ್ನಿಸಿದರೆ ನಮಗೆ ಮೇಲಿನ ಆದೇಶ ಇದೆಯೆಂದು ಸಬೂಬು ನೀಡುತ್ತಾರೆ.
ಬಸ್ಸುಗಳ ಸಂಚಾರವೂ 8-9 ಗಂಟೆಗೆ ಕ್ಲೋಸ್ ಆಗುವಂತೆ ಮಾಡುತ್ತಿದ್ದಾರೆ. ನಗರ ಸಂಚಾರಿ ಬಸ್ಸುಗಳನ್ನು ಬೇಗನೆ ನಿಲ್ಲಿಸಿದರೆ ಜನಸಾಮಾನ್ಯರ ಪಾಡೇನು. ಎಂದಿನಂತೆ ಕೆಲಸಕ್ಕೆ ಬಂದು ಹೋಗುವ ಜನರು ಬಸ್ ಸೌಕರ್ಯ ಇಲ್ಲದೆ ಹಿಡಿಶಾಪ ಹಾಕುವ ಸ್ಥಿತಿಯಾಗಿದೆ. ಅಹಿತಕರ ಘಟನೆ ಆಗುವ ಮೊದಲು ಎಚ್ಚತ್ತುಕೊಳ್ಳದ ಆರಕ್ಷಕರು, ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ವಾರ್ ಆಗುತ್ತಿರುವ ನೆಪದಲ್ಲಿ ಈಗೇನೋ ಆಗುತ್ತೆ ಎನ್ನುವಂತೆ ರಾತ್ರಿ ಸಂಚಾರವನ್ನು ಕಡಿತ ಮಾಡಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗಲಿ, ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿ. ಜನಸಾಮಾನ್ಯರಿಗೆ ರಕ್ಷಣೆ ನೀಡಲಿ. ಅದು ಬಿಟ್ಟು 9 ಗಂಟೆಗೆ ಸಂಚಾರ ಬಂದ್ ಆಗಬೇಕು ಎನ್ನುವುದು ಪರೋಕ್ಷವಾಗಿ ಕಿಡಿಗೇಡಿಗಳಿಗೆ ದುಷ್ಕೃತ್ಯ ಎಸಗಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ತೊಕ್ಕೊಟ್ಟಿನ ರೆಸ್ಟೋರೆಂಟ್ ಮಾಲಕ ಯಶವಂತ್ ರಾವ್ ಹೇಳುತ್ತಾರೆ.
ನಾವು ಚಿಕನ್ ಕಬಾಬ್ ಮಾಡಲು ಮಸಾಲ ತಯಾರಿಸಿಟ್ಟು ಬಾಣಲೆಯಲ್ಲಿ ಬಿಸಿ ಎಣ್ಣೆಯೂ ಸುಡುತ್ತಿರುವಾಗಲೇ ಪೊಲೀಸರು ಏಕಾಏಕಿ ಬಂದ್ ಮಾಡಿಸಿದರೆ ನಾವೇನು ಮಾಡುವುದು. ಹತ್ತು ನಿಮಿಷದಲ್ಲಿ ಬಂದ್ ಮಾಡದಿದ್ದರೆ ಪೊಲೀಸರು ನಮ್ಮ ಮೇಲೆರಗಲು ಬರುತ್ತಾರೆಂದು ತೊಕ್ಕೊಟ್ಟಿನ ಫಾಸ್ಟ್ ಫುಡ್ ವ್ಯಾಪಾರಿ ಅಳಲು ಹೇಳಿಕೊಂಡಿದ್ದಾರೆ.
Unannounced Curfew at 9 PM Citing Untoward Incident, Police Storm Hotels, Evict Customers, Pull Down Shutters in Mangalore.
06-05-25 01:35 pm
HK News Desk
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 04:02 pm
Mangalore Correspondent
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm