ಬ್ರೇಕಿಂಗ್ ನ್ಯೂಸ್
09-05-25 03:24 pm Mangalore Correspondent ಕರಾವಳಿ
ಮಂಗಳೂರು, ಮೇ 9 : ದೇಶದೆಲ್ಲೆಡೆ ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿದ್ದಕ್ಕೆ ಶ್ಲಾಘನೆ ವ್ಯಕ್ತವಾಗಿದ್ದರೆ ಮಂಗಳೂರಿನ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ಆಪರೇಶನ್ ಧಿಕ್ಕಾರ ಹಾಕಿ ಇನ್ಸ್ ಟಾ ಗ್ರಾಮ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗ ಎಂಬಾಕೆ ಈ ರೀತಿಯ ಪೋಸ್ಟ್ ಹಾಕಿದ್ದು ಕವನದ ಮೂಲಕ ಸೇನಾ ಕಾರ್ಯಾಚರಣೆಯನ್ನು ವಿಡಂಬಿಸಿ ಬರೆದು dikkaraoperationsindura ಎಂದು ಪೋಸ್ಟ್ ಹಾಕಿದ್ದಾಳೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಸ್ನಾತಕ್ಕೋತ್ತರ ಪದವಿ ವಿದ್ಯಾರ್ಥಿನಿಯಾಗಿರುವ ರೇಷ್ಮಾ ದೇಶ ವಿರೋಧಿ ಪೋಸ್ಟ್ ಹಾಕಿದ್ದು ಭಾರೀ ವಿವಾದ ಸೃಷ್ಟಿಸುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿದ್ದಾಳೆ.
'ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ, ಅಲ್ಲಿ ನಂದಿ ಹೋಯಿತು ಬೆಳಕು. ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ... ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದ್ದು ಕತ್ತಲು... ಎಲ್ಲೆಲ್ಲೂ ಕತ್ತಲು...!' ಎಂದು ಬರೆದು #dikkaraoperationsindura ಎಂಬ ಹೆಸರಿನಲ್ಲಿ ಹ್ಯಾಷ್ ಟ್ಯಾಗ್ ಮಾಡಿದ್ದಾಳೆ. ತನ್ನ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ರೇಷ್ಮಾ ಮತ್ತೊಂದು ಪೋಸ್ಟ್ ಹಾಕಿದ್ದು ದೇಶ ಭಕ್ತಿಯನ್ನು ಸಮರ್ಥನೆ ಮಾಡಲು ಮುಂದಾಗಿದ್ದಾಳೆ.
'ಭಾರತ ದೇಶದ ಮೇಲೆ ಅಪಾರ ಪ್ರೀತಿ ಇದೆ, ಗೌರವ ನನಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ. 'ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ಹೆಮ್ಮೆ ಇದೆ, ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ. 'ಈ ದೇಶದ ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ.
'ಯಾವುದೇ ಯುದ್ಧ ಆದಾಗ ಮಡಿಯುವವರು ಒಂದೆಡೆಯಾದರೆ ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸುವಂತಾಗುತ್ತದೆ. ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ, ಸೌಹಾರ್ದ ನೆಲೆಸಲಿ. 'ಭಯೋತ್ಪಾದನೆ ನಿರ್ಮೂಲನೆಯಾಗಲಿ. ಸಾವು ನೋವು ಇಲ್ಲದಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ' ಎಂದು ರೇಷ್ಮಾ ಪೋಸ್ಟ್ ಮಾಡಿದ್ದಾಳೆ. ಸದ್ಯ ಆಕೆಯ ಇನ್ಸಾಗ್ರಾಂ ಅಕೌಂಟ್ ಎಲ್ಲವನ್ನೂ ತನಿಖಾ ಏಜನ್ಸಿಗೆ ರಿಪೋರ್ಟ್ ಮಾಡುವಂತೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ವಿದ್ಯಾರ್ಥಿನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
While the nation largely hailed the army's operations against Pakistan, a controversial Instagram post by a postgraduate student from Mangaluru has triggered widespread outrage on social media. Reshma N. Bariga, a resident of Belalu in Belthangady taluk, reportedly posted a poem mocking the military operation under the hashtag #DikkaraOperationSindhura (RejectOperationSindhura).
15-07-25 12:27 pm
Bangalore Correspondent
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:32 am
Mangalore Correspondent
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
15-07-25 11:38 am
Mangalore Correspondent
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am