ಬ್ರೇಕಿಂಗ್ ನ್ಯೂಸ್
16-05-25 02:47 pm Mangalore Correspondent ಕರಾವಳಿ
ಮಂಗಳೂರು, ಮೇ 16 : ಪಾಕಿಸ್ತಾನ ವಿಷಯದಲ್ಲಿ ಸರ್ವ ಪಕ್ಷದ ಸಭೆ ಕರೆದು ಮೋದಿಯವರು ಜನರ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಮೋದಿ ಹೇಳಿದ್ದೆಲ್ಲ ವೇದ ವಾಕ್ಯ ಎಂದು ನಾವು ನಂಬಬೇಕಾ? ಇಡಿ ದೇಶದಲ್ಲಿ ಅತೀ ದೊಡ್ಡ ಸುಳ್ಳುಗಾರ ಮೋದಿ. ಸುಳ್ಳಿನ ಆಧಾರದಲ್ಲಿ ದಂತ ಕತೆ ಹೇಳೋದ್ರಲ್ಲಿ ಮೋದಿ ನಿಸ್ಸೀಮ. ಹೀಗೆಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಟುವಾಗಿ ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ಶಾಸಕರೇನೋ ಹೇಳುತ್ತಾರೆ ಆದ್ರೆ ಇವತ್ತು ಇಡೀ ದೇಶವೇ ಪ್ರಶ್ನೆ ಮಾಡುತ್ತಿದೆ. ದೇಶದ ಜನರು ಪಾಕ್ ವಿಷಯದಲ್ಲಿ ಸ್ಪಷ್ಟ ಉತ್ತರ ಬಯಸುತ್ತಿದ್ದಾರೆ. ಯುದ್ಧ ನಿಲ್ಲಿಸುವ ಬಗ್ಗೆ ಟ್ರಂಪ್ ಘೋಷಣೆ ಮಾಡಿದ್ದು ಸತ್ಯ, ಆನಂತರವೇ ಕದನ ವಿರಾಮ ಘೋಷಣೆ ಆದದ್ದೂ ಸತ್ಯ. ಟ್ರಂಪ್ ಹೇಳಿದ್ದು ಹಾಗಾದ್ರೆ ಸುಳ್ಳಾ? ಕದನ ವಿರಾಮ ಆಗಿದ್ದು ಪ್ರಪಂಚಕ್ಕೆ ಗೊತ್ತಾಗಿದ್ದು ಟ್ರಂಪ್ ಹೇಳಿದ ಮೇಲೆ. ನಂತರ ಪಾಕಿಸ್ತಾನ ಹಾಗೂ ನಮ್ಮ ದೇಶವೂ ಹೇಳಿತು. ಆದರೆ ಅವಾಗಲೇ ನಮ್ಮ ದೇಶದವರು ಹೇಳಬೇಕಿತ್ತು.
ಈ ಬಗ್ಗೆ ಪ್ರಧಾನಿ ಏನು ಹೇಳುತ್ತಾರೋ ಅದನ್ನು ನಾವು ಬಯಸುತ್ತಿದ್ದೇವೆ. ಟ್ರಂಪ್ ಅಂತ ಹೆಸರು ಹೇಳುವುದಕ್ಕೆ ಮೋದಿ ಭಯ ಪಡುತ್ತಾರೆ. 56 ಇಂಚು ಎದೆ ಇರುವ ಮೋದಿ ಟರ್ಕಿ, ಅಜರ್ ಬೈಜಾನ್ ಬಗ್ಗೆ ಟೀಕೆ ಮಾಡುತ್ತಾರೆ. ಆದರೆ ಚೀನಾ ವೆಪನ್ ಪಾಕಿಸ್ತಾನ ಯೂಸ್ ಮಾಡುತ್ತೆ, ಚೈನಾ ಬಗ್ಗೆ ಮಾತಾಡಲ್ಲ. ಅಜರ್ ಬೈಜಾನ್ ಹಾಗೂ ಟರ್ಕಿ ಜೊತೆ ವ್ಯಾಪಾರ ನಿಲ್ಲಿಸುತ್ತಾರೆನ್ನುವ ಮೋದಿ, ಚೀನಾ, ಅಮೆರಿಕ ಬಗ್ಗೆ ಮಾತಾಡಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ನವರೇನೂ ದೇಶದ ಸೈನ್ಯವನ್ನ ಟೀಕೆ ಮಾಡುತ್ತಿಲ್ಲ. ಬಿಜೆಪಿಯ ಮಂತ್ರಿಯೊಬ್ಬರು ಕರ್ನಲ್ ಸೋಫಿಯ ಖುರೇಷಿ ಬಗ್ಗೆ ಮಾತನಾಡಿದ್ದನ್ನ ನೋಡಿ. ಕೋರ್ಟ್ ನಿಂದ ಎಫ್ ಐ ಆರ್ ಆಗೋ ಸನ್ನಿವೇಶ ಬಂದಿದೆ. ಪಹಾಲ್ಗಮ್ ನಲ್ಲಿ ಗಂಡಂದಿರನ್ನ ಕಳೆದುಕೊಂಡವರೇ ಇದನ್ನ ಹಿಂದೂ ಮುಸ್ಲಿಂ ಮಾಡಬೇಡಿ ಎಂದಿದ್ದಾರೆ. ಬಿಜೆಪಿಯ ಕಾರ್ಯಕರ್ತರಿಗೆ ಕೇವಲ ಈ ಪ್ರಕರಣವನ್ನ ಹಿಂದೂ ಮುಸ್ಲಿಂ ಮಾಡಬೇಕು. ಬಿಜೆಪಿ ಕಾರ್ಯಕರ್ತರು ನಮ್ಮ ವಿದೇಶಾಂಗ ಕಾರ್ಯದರ್ಶಿ ಮಗಳಿಗೆ ಏನೆಲ್ಲ ಟೀಕೆ ಮಾಡಿದ್ರು.ಕದನ ವಿರಾಮ ಘೋಷಣೆ ಮಾಡಿದ ಪ್ರಧಾನಿಯನ್ನ ಟ್ರೋಲ್ ಮಾಡಬೇಕಿತ್ತು. ಪ್ರಧಾನಿಯವರ ಒಪ್ಪಿಗೆ ಇಲ್ಲದೆ ಕದನ ವಿರಾಮ ಘೋಷಣೆ ಮಾಡಲು ಸಾಧ್ಯವಿಲ್ಲ.
ಪಾಕಿಸ್ತಾನ ಜೊತೆಗಿನ ಕದನ ವಿರಾಮದ ಬಗ್ಗೆ ದೇಶಕ್ಕೆ ಸ್ಪಷ್ಟವಾದ ವಿಚಾರವನ್ನ ಮೋದಿಯವರು ಹೇಳಬೇಕು. ಪಾಕಿಸ್ತಾನದವರು ನಮ್ಮ 5 ಜೆಟ್ ಗಳನ್ನ ಹೊಡೆದು ಹಾಕಿದ್ದೇವೆ ಎಂದಿದ್ದಾರೆ. ಇದಕ್ಕೆ ಉತ್ತರ ಕೊಡೋದಕ್ಕೆ ಮೋದಿ ಯಾಕೆ ತಯಾರಿಲ್ಲ. ಪೆಹಾಲ್ಗಮ್ ನಲ್ಲಿ ನರಮೇಧ ಮಾಡಿದವರನ್ನ ಹುಡುಕಿ ಮಣ್ಣುಪಾಲು ಮಾಡುತ್ತೇವೆ ಎಂದ್ರು. ಹಾಗಾಗಿ ನಾವೆಲ್ಲಾ ಪ್ರಧಾನಿಗಳ ಜೊತೆ ನಿಂತುಕೊಂಡೆವು. ಇವರು ಸುಳ್ಳನ್ನೇ ಹೇಳಿಕೊಂಡು ಬಂದರು.
ಟ್ರಂಪ್ 20 ಸಲ ಮೀಡಿಯಾ ಮುಂದೆ ಬರುತ್ತಾರೆ, ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡುತ್ತಾರೆ. ಆದರೆ ನಮ್ಮ ಪ್ರಧಾನಿಗಳಿಗೆ ಯಾರು ಪ್ರಶ್ನೆಗಳನ್ನ ಕೇಳೋಕೆ ಆಗೋದಿಲ್ಲ. ಅವರಿಗೆ ಪತ್ರಕರ್ತರು ಎಂದರೆ ಕ್ಯಾರೇ ಇಲ್ಲ. ಗೋಧಿ ಮೀಡಿಯಾ ಬಗ್ಗೆ ಮೋದಿ ಕಿಂಚಿತ್ತೂ ಕ್ಯಾರೆ ಮಾಡೋಲ್ಲ. ನಮಗೆ ನಂಬಿಕೆ ಬರೋ ತರ ಉತ್ತರ ನೀಡಲಿ. ಅಧಿವೇಶನ ಕರೀಲಿ ಎಂದು ನಮ್ಮ ಮುಖಂಡರು ಹೇಳಿದ್ದಾರೆ, ಅದನ್ನ ಮೊದಲು ಮಾಡಲಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.
Mangalore Why Is Modi Silent on China and Trump While Criticizing Turkey ? Should We Accept Everything He Says as Gospel Truth.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
18-01-26 11:47 am
HK News Desk
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
18-01-26 12:58 pm
Mangalore Correspondent
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm