Mangalore Rain, Flood, Pumpwell:‌ ಪಂಪ್ವೆಲ್ ಹೆದ್ದಾರಿಯಲ್ಲಿ ಪ್ರತಿ ಬಾರಿಯ ಸಂಕಷ್ಟ ; ಹೆದ್ದಾರಿಗೆ ನುಗ್ಗಿದ ಮಳೆನೀರು, ಪರದಾಡಿದ ವಾಹನ ಸವಾರರು ! ಕರಾವಳಿ ಉದ್ದಕ್ಕೂ ಜಡಿಮಳೆ 

25-05-25 04:19 pm       Mangalore Correspondent   ಕರಾವಳಿ

ಕರಾವಳಿ ಭಾಗದಲ್ಲಿ ಜಡಿಮಳೆ ಮುಂದುವರಿದಿದ್ದು ಈ ಬಾರಿಯೂ ಮಂಗಳೂರಿನ ಪಂಪ್ವೆಲ್ ಹೆದ್ದಾರಿ ಮೇಲ್ಸೇತುವೆಯ ಅಡಿಭಾಗದಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಯಲ್ಲೇ ಹರಿದಿದೆ. 

ಮಂಗಳೂರು, ಮೇ 25 : ಕರಾವಳಿ ಭಾಗದಲ್ಲಿ ಜಡಿಮಳೆ ಮುಂದುವರಿದಿದ್ದು ಈ ಬಾರಿಯೂ ಮಂಗಳೂರಿನ ಪಂಪ್ವೆಲ್ ಹೆದ್ದಾರಿ ಮೇಲ್ಸೇತುವೆಯ ಅಡಿಭಾಗದಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಯಲ್ಲೇ ಹರಿದಿದೆ. 

ಭಾನುವಾರ ಬೆಳಗ್ಗೆ 11 ಗಂಟೆ ವೇಳೆಗೆ ಸುರಿದ ಭಾರೀ ಗಾಳಿ ಮಳೆಗೆ ಕಾಲುವೆ ತುಂಬಿ ಹರಿದಿದೆ. ಈ ವೇಳೆ, ಫ್ಲೈಓವರ್ ಕೆಳಭಾಗದಲ್ಲಿ ಕೆಸರು ಬೆರೆತ ಕೆಂಪು ನೀರು ರಸ್ತೆಗೆ ನುಗ್ಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಪಂಪ್ವೆಲ್ ಹೆದ್ದಾರಿಯಲ್ಲಿ ಪ್ರತಿ ವರ್ಷವೂ ಮಳೆಗಾಲದಲ್ಲಿ ಈ ರೀತಿಯ ಸಮಸ್ಯೆ ಆಗುತ್ತಿದ್ದು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಟೋ ರಿಕ್ಷಾ, ದ್ವಿಚಕ್ರ ವಾಹನ‌ ಸವಾರರು ಕೆಲಹೊತ್ತು ಶೇಖರಣೆಯಾಗಿದ್ದ ನೀರಿನಲ್ಲೇ ವಾಹನಗಳನ್ನು ತಳ್ಳಿಕೊಂಡು ಸಾಗಿದ್ದಾರೆ. 

ಕರಾವಳಿಯಾದ್ಯಂತ ಮಂಗಳೂರು, ಕಾಸರಗೋಡು, ಉಡುಪಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಮುಂಗಾರು ಆಗಮನದಲ್ಲೇ ಅಬ್ಬರ ತೋರಿಸಿದೆ. ಹವಾಮಾನ ಇಲಾಖೆ ಮೇ 28ರ ವರೆಗೂ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಗಾಳಿ ಮಳೆಯ ಮುನ್ಸೂಚನೆ ನೀಡಲಾಗಿದೆ.

Repeated Woes on Pumpwell Highway, Rainwater Floods Road, Motorists Struggle Amid Heavy Rains Across coast in Mangalore