ಬ್ರೇಕಿಂಗ್ ನ್ಯೂಸ್
27-05-25 06:53 pm Mangalore Correspondent ಕರಾವಳಿ
ಮಂಗಳೂರು, ಮೇ.27: ಮಂಗಳೂರಿನಲ್ಲಿ ಕೋಮು ದ್ವೇಷದ ಗಲಾಟೆ, ಕೊಲೆ ಯಾಕೆ ಆಗ್ತಾ ಇದೆ. ನಮ್ಮದು ಪವಿತ್ರ, ಸೌಹಾರ್ದ, ಸಾಮರಸ್ಯ ಇರುವ ಜನರ ಊರು. ಅಮಾಯಕರು ಯಾಕೆ ಸಾಯುತ್ತಿದ್ದಾರೆ. ಸುಮ್ಮನೆ ಗಲಾಟೆ ಮಾಡಿ ಮನಶ್ಶಾಂತಿ ಕದಡುವ ಬದಲು ಎಲ್ಲರೂ ಒಟ್ಟಿಗೆ ಇರಬಹುದಲ್ವಾ.. ನಮ್ಮ ಈಶ್ವರ, ಅಲ್ಲಾ, ಏಸು ದೇವರುಗಳೇನು ಗಟ್ಟಿ ಇಲ್ವಾ.. ನಮ್ಮ ಜನರಿಗೆ ಯಾಕೆ ಬುದ್ಧಿ ಕೊಡ್ತಾ ಇಲ್ಲ. ಹೀಗಾದರೆ ಮುಂದಿನ ಜನಾಂಗದ ಸ್ಥಿತಿ ಕಷ್ಟ ಇದೆ. ಯಾರಿಗೋ ಓಟ್ ಹಾಕ್ತೀವಿ ಅಂತ ಇನ್ಯಾರೋ ಯಾಕೆ ಸಾಯಬೇಕು..
ಹೀಗೆಂದು ಕೋಮು ದ್ವೇಷದ ಗಲಾಟೆ ಬಗ್ಗೆ ನೊಂದು ಮಾತನಾಡಿದವರು ತುಳು ರಂಗಭೂಮಿ ಮತ್ತು ಚಿತ್ರರಂಗದ ಖ್ಯಾತ ಕಾಮೆಡಿ ನಟ ನವೀನ್ ಡಿ. ಪಡೀಲ್. ಮಂಗಳೂರು ಪ್ರೆಸ್ ಕ್ಲಬ್ ಹಮ್ಮಿಕೊಂಡ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ನವೀನ್ ಡಿ ಪಡೀಲ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಮಂಗಳೂರಿನ ಸೌಹಾರ್ದ ಉಳಿಯಬೇಕು, ಕೋಮು ದ್ವೇಷ ಅಳಿಯಬೇಕು ಎನ್ನುವ ನಿಟ್ಟಿನಲ್ಲಿ ನೆರೆಕರೆ ಎನ್ನುವ ಹೆಸರಲ್ಲಿ ಚಿತ್ರ ಮಾಡುತ್ತಿದ್ದೇವೆ. ಶಶಿರಾಜ್ ಕಾವೂರು ಕತೆ, ಸಂಭಾಷಣೆ ಬರೆದಿರುವ ಚಿತ್ರಕ್ಕೆ ನಾನೇ ನಿರ್ದೇಶನ ಮಾಡುತ್ತಿದ್ದೇನೆ. ಹಿಂದು- ಮುಸ್ಲಿಂ- ಕ್ರೈಸ್ತರು ಎಲ್ಲರೂ ಒಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಹೋಗೋಣ ಎಂದು ನವೀನ್ ಪಡೀಲ್ ಕಿವಿಮಾತು ಹೇಳಿದ್ದಾರೆ.
ಕೇವಲ ಹಿಂದುಗಳು ನೋಡುತ್ತಾರೆಂದು ಚಿತ್ರ ಮಾಡೋದಲ್ಲ. ಎಲ್ಲ ಮತೀಯರೂ ಥಿಯೇಟರ್ ಬರಬೇಕು. ತುಳು ಮಾತನಾಡುವ ಜನರೆಲ್ಲ ಸಿನಿಮಾ ನೋಡಬೇಕು. ತೆಲುಗಿನಲ್ಲಿ ಸಾವಿರ ಥಿಯೇಟರ್ ಇದೆ, ಅಲ್ಲಿನ ಜನರೆಲ್ಲ ಸಿನಿಮಾ ಚೆನ್ನಾಗಿದ್ಯಾ, ಇಲ್ಲವಾ ನೋಡಲ್ಲ. ಎಲ್ಲದಕ್ಕೂ ಥಿಯೇಟರ್ ಹೋಗಿ ನೋಡುತ್ತಾರೆ. ಹಾಗಾಗಿ ಅಲ್ಲಿ ಯಾವುದೇ ಸಿನಿಮಾ ಸೋಲುವುದಿಲ್ಲ ಎಂದು ನವೀನ್ ಪಡೀಲ್ ಹೇಳಿದರು.
ದೈವಾರಾಧನೆಯನ್ನು ಸಿನಿಮಾದಲ್ಲಿ ತೋರಿಸುವುದಕ್ಕೆ ಆಕ್ಷೇಪ ಬರುತ್ತಿದೆಯಲ್ವಾ.. ನಿಮ್ಮ ಅನಿಸಿಕೆ ಏನೆಂದು ಕೇಳಿದ ಪ್ರಶ್ನೆಗೆ, ದೈವಾರಾಧನೆಯನ್ನು ಅಷ್ಟಕ್ಕೇ ತೋರಿಸಿದ್ರೆ ತೊಂದರೆ ಇಲ್ಲ. ಅದನ್ನು ಬೇರೆ ರೀತಿ ತೋರಿಸಿದ್ರೆ, ಅಪಪ್ರಚಾರ ಮಾಡಿದರೆ ತೊಂದರೆ. ನಮ್ಮ ಆರಾಧನೆ ಕಲೆಯನ್ನು ಸಿನಿಮಾದಲ್ಲಿ ತೋರಿಸಿದರೆ ಬೇರೆಯವರಿಗೂ ಭಯ ಭಕ್ತಿ ಬರುತ್ತದೆ. ಯಕ್ಷಗಾನದಲ್ಲಿ ತೋರಿಸಲ್ವಾ.. ಆದರೆ ಈಗ ಸೋಶಿಯಲ್ ಮೀಡಿಯಾ ಬಂದಿರುವುದರಿಂದ ಟೀಕೆ, ಟಿಪ್ಪಣಿ ಬರ್ತದೆ ಎಂದರು.
ಕಾಲು ಸರ್ಜರಿ ಆದರೂ ನೋಡಲು ಬರಲಿಲ್ಲ..
ಕರಿಯಜ್ಜ ಕೊರಗಜ್ಜ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾಗಲೇ ನನಗೆ ಕಾಲಿಗೆ ತೊಂದರೆ ಆಗಿತ್ತು. ಮೊಣಕಾಲಿನ ಎಲುಬಿಗೆ ಪೆಟ್ಟು ಬಿದ್ದು ಮೂರು ತಿಂಗಳು ಆಸ್ಪತ್ರೆಗೆ ಸೇರಿದ್ದೆ. ಆ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದಾರೆ. ಭವ್ಯಾ, ಉಮಾಶ್ರೀಯವರು ಅಭಿನಯಿಸುತ್ತಿದ್ದಾರೆ. ಆಮೇಲೆ ಮನೆಯಲ್ಲಿ ಮೂರು ತಿಂಗಳು ಇದ್ದರೂ, ನಿರ್ಮಾಪಕರು ಅದೇ ಹೈವೇಯಲ್ಲಿ ಹೋಗುತ್ತಿದ್ದರೂ ಮನೆಗೆ ಬಂದಿಲ್ಲ. ಆಸ್ಪತ್ರೆಗೆ ಖರ್ಚಿಗೆಂದು 1.25 ಲಕ್ಷ ಕೊಟ್ಟಿದ್ದಾರೆ, ಮೂರು ಲಕ್ಷ ಆಸ್ಪತ್ರೆ ಬಿಲ್ ಆಗಿದೆ. ಕಲಾವಿದನಿಗೆ ನಟನೆ ಸಂದರ್ಭದಲ್ಲಿ ತೊಂದರೆಯಾದರೆ ಚಿತ್ರತಂಡವೇ ಭರಿಸಬೇಕೆಂದು ಕಾನೂನು ಇದೆ. ಹಾಗಂತ, ಕಾನೂನು ಕೇಳಿಕೊಂಡು ಹೋಗಿಲ್ಲ. ನನ್ನ ಗ್ರಹಗತಿ ಸರಿ ಇಲ್ಲದೆ ತೊಂದರೆ ಆಗಿರಬಹುದು. ಹಾಗಂತ, ನನಗೆ ದೇವರು ಕಡಿಮೆ ಮಾಡಿಲ್ಲ. ಅವಕಾಶ ಹೆಚ್ಚೇ ಕೊಟ್ಟಿದ್ದಾರೆ.
ಕಾಲು ಕುಂಟುತ್ತಾ ಹಿಂದೆ ಅಭಿನಯ ಮಾಡುತ್ತಿದ್ದೆ. ಈಗ ಕುಂಟುತ್ತಲೇ ನಡೆಯುತ್ತಿದ್ದೇನೆ. ವೈದ್ಯರು ಮತ್ತೊಂದು ಸರ್ಜರಿ ಮಾಡೋಕೆ ಹೇಳಿದ್ದಾರೆ. ಸರಿಯಾಗುವ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದ ನವೀನ್ ಪಡೀಲ್, ಸಬ್ಜೆಕ್ಟ್ ಮೇಲೆ ನನ್ನನ್ನು ಜನ ಸ್ವೀಕರಿಸಿದ್ದಾರೆ. ನಮ್ಮ ತುಳು ಸಿನಿಮಾದಲ್ಲಿ ಕಾಮೆಡಿ ಬೇಕು, ನಮ್ಮ ಸಿನಿಮಾವೂ ಅಷ್ಟಕ್ಕೇ ಇದೆ, ಅದರ ಮೇಲೆ ಹೋಗ್ತಾ ಇಲ್ಲ. ಜನರಿಗೆ ಕಾಮೆಡಿ ಬೇಕು ಅಂತ ಬೇರೇನೂ ಮಾಡ್ತಾ ಇಲ್ಲ. ಜನರು ಒಂದಷ್ಟು ದಿನ ನೋಡುತ್ತಾರೆ. ಆಮೇಲೆ ಚೇಂಜ್ ಬಯಸಬಹುದು. ಜೀಟಿಗೆ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಬಂತು. ಹಾಗಂತ, ಆ ಸಿನಿಮಾ ಥಿಯೇಟರಲ್ಲಿ ಓಡಲಿಲ್ಲ ಎಂದರು.
The Press Club Guest of Honour Award was presented to noted actor Naveen D Padil at a ceremony held at the Press Club here on Tuesday, May 27.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm