ಬ್ರೇಕಿಂಗ್ ನ್ಯೂಸ್
30-05-25 02:46 pm Mangaluru Correspondent ಕರಾವಳಿ
ಮಂಗಳೂರು, ಮೇ 30: ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಎತ್ತಂಗಡಿ ಆಗಿ ಹೋಗುವಾಗಲೂ ಹಾಗೇ ಹೋಗಿಲ್ಲ. ತನ್ನ ಅತ್ಯಾಪ್ತರನ್ನು ಕೊನೆಕ್ಷಣದಲ್ಲಿ ಬೇಕಾದ ಜಾಗಕ್ಕೆ ವರ್ಗಾವಣೆ ಕೊಡಿಸಿ ಎದ್ದು ಹೋಗಿದ್ದಾರೆಂಬ ಟೀಕೆ ಬಂದಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಕಮಿಷನರ್ ವರ್ಗಾವಣೆ ಆದೇಶ ಬಂದಿತ್ತು. ಆದರೆ 8 ಗಂಟೆ 11 ನಿಮಿಷಕ್ಕೆ ಏಳು ಮಂದಿ ಹೆಡ್ ಕಾನ್ಸ್ ಟೇಬಲ್ ಗಳನ್ನು ಮಂಗಳೂರು ನಗರದ ಠಾಣೆಗಳ ನಡುವೆ ವರ್ಗಾವಣೆ ಮಾಡಿಸಿ ಆದೇಶ ಮಾಡಿದ್ದಾರೆ.
ಕೊನೆಕ್ಷಣದಲ್ಲಿ ಈ ರೀತಿ ವರ್ಗಾವಣೆ ಮಾಡಿರುವುದು ಕಾಂಗ್ರೆಸ್ ಕಾರ್ಯಕರ್ತರ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತ ಸುನಿಲ್ ಬಜಿಲಕೇರಿ ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ವರ್ಗಾವಣೆಗೊಂಡು ತೆರಳುವ ಅಂತಿಮ ಕ್ಷಣದಲ್ಲಿ ಈ ರೀತಿ ವರ್ಗಾವಣೆ ಮಾಡಿದ್ದು ತಪ್ಪು. ಇದರ ಹಿಂದೆ ಬಿಜೆಪಿಗರ ಕೈವಾಡ ಮತ್ತು ಭ್ರಷ್ಟಾಚಾರದ ಸುಳಿವು ಇದೆ. ಇದನ್ನು ಹೊಸ ಕಮಿಷನರ್ ಬಂದ ಬಳಿಕ ತೆರವು ಮಾಡಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಅಂತಿಮ ಕ್ಷಣದಲ್ಲಿ ಹೊರಬಿದ್ದ ಆದೇಶದಲ್ಲಿ ಕಂಕನಾಡಿ ನಗರ ಠಾಣೆಯಲ್ಲಿದ್ದ ಪ್ರೀತೇಶ್ ಸಂಚಾರ ದಕ್ಷಿಣ ಠಾಣೆಗೆ ವರ್ಗಾವಣೆ ಆಗಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಗೆ ವರ್ಷದ ಹಿಂದೆ ಓಓಡಿ ಆಗಿ ವರ್ಗ ಆಗಿದ್ದರೂ ಕಂಕನಾಡಿ ಠಾಣೆಯಲ್ಲೇ ಉಳಿದುಕೊಂಡಿದ್ದ ರಾಜೇಶ್ ಮತ್ತೆ ಕಂಕನಾಡಿ ಠಾಣೆಗೆ ಭದ್ರ ಮಾಡಿಕೊಂಡಿದ್ದಾರೆ. ಇವರು ಆರು ವರ್ಷಗಳಿಂದ ಇದೇ ಠಾಣೆಯಲ್ಲಿದ್ದಾರಂತೆ. ಸೆನ್ ಠಾಣೆಯಲ್ಲಿದ್ದ ಸತೀಶ್ ಎಂ. ಮತ್ತು ರಾಜಾರಾಮ್ ಅವರನ್ನು ಮತ್ತೆ ಸಿಸಿಬಿಗೆ ವರ್ಗ ಮಾಡಿಸಲಾಗಿದೆ. ಸಂಚಾರ ದಕ್ಷಿಣ ಠಾಣೆಯಲ್ಲಿದ್ದ ನಾಗರಾಜ್ ಮಲ್ಲಿಕಟ್ಟಿ ಅವರನ್ನು ಸಂಚಾರ ಪೂರ್ವ ಠಾಣೆಗೆ ವರ್ಗಾಯಿಸಲಾಗಿದೆ. ಇದೇ ವೇಳೆ, ಸಿಸಿಬಿಯಲ್ಲಿದ್ದ ಸುಧೀರ್ ಕುಮಾರ್ ಮತ್ತು ಭೀಮಪ್ಪ ಸಿದ್ದಪ್ಪ ಉಪ್ಪಾರ್ ಅವರನ್ನು ಸೆನ್ ಠಾಣೆಗೆ ವರ್ಗ ಮಾಡಲಾಗಿದೆ.
ಮಂಗಳೂರಿನಲ್ಲಿ ಕಮಿಷನರ್ ಆಗಿ ಚೆನ್ನಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದು ಅನುಪಮ್ ಅಗರ್ವಾಲ್ ಅವರನ್ನು ಎರಡು ಕೋಮು ದ್ವೇಷದ ಕೊಲೆಯ ಬಳಿಕ ವರ್ಗಾವಣೆ ಮಾಡಲಾಗಿತ್ತು. ಆದರೆ ವರ್ಗಾವಣೆಗೊಂಡು ತೆರಳುವಾಗಲೇ ಕೆಲವರನ್ನು ಆಯಕಟ್ಟಿಗೆ ಪೋಸ್ಟ್ ಮಾಡಿಸಿರುವುದು ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.
Despite being transferred, the outgoing Police Commissioner issued last-minute posting orders to staff. The move has drawn criticism on social media, with many questioning the timing and intent behind the decisions.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
15-08-25 09:22 pm
Mangalore Correspondent
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm