ಬ್ರೇಕಿಂಗ್ ನ್ಯೂಸ್
03-06-25 07:37 pm Mangalore Correspondent ಕರಾವಳಿ
ಮಂಗಳೂರು, ಜೂನ್.3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಸ್ಸೆಸ್ ಮತ್ತು ಸಂಘ ಪರಿವಾರದ ಪ್ರಮುಖರ ಮನೆಗಳಿಗೆ ನಡುರಾತ್ರಿಯಲ್ಲಿ ಪೊಲೀಸರು ಎಂಟ್ರಿ ಕೊಟ್ಟು ಜನಸಾಮಾನ್ಯರ ಖಾಸಗಿತನಕ್ಕೆ ಧಕ್ಕೆ ಮಾಡುತ್ತಿದ್ದಾರೆ, ಇದು ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆಯೆಂದು ಖ್ಯಾತ ವಕೀಲ ಗಿರೀಶ್ ಭಾರದ್ವಾಜ್ ಅವರು ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಎನ್.ಕೆ. ಸುಧೀಂದ್ರ ರಾವ್ ಅವರಿಗೆ ದೂರು ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಪೊಲೀಸ್ ವರಿಷ್ಠರ ಸೂಚನೆಯಂತೆ ಸಮಾಜದ ಗಣ್ಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಆರೆಸ್ಸೆಸ್ ಪ್ರಮುಖರ ಮನೆಗಳಿಗೆ ಪೊಲೀಸರು ರಾತ್ರಿ 11 ಗಂಟೆ ಬಳಿಕ ಭೇಟಿ ಕೊಟ್ಟು ಫೋಟೋ ತೆಗೆಯುವುದು, ಜಿಪಿಎಸ್ ಲೊಕೇಶನ್ ಶೇರ್ ಮಾಡುವುದನ್ನು ಮಾಡುತ್ತಿದ್ದಾರೆ. ಇದು ಪೂರ್ತಿಯಾಗಿ ವ್ಯಕ್ತಿಯ ಖಾಸಗಿತನ ಮತ್ತು ಬದುಕುವ ಹಕ್ಕಿನ ವಿರುದ್ಧವಾಗಿದೆ. ಈ ರೀತಿಯ ನಡೆ ಸಂವಿಧಾನದ ಕಲಂ 14, 17, 19 ಮತ್ತು 21ರ ಪ್ರಕಾರ ಕಾನೂನು ವಿರೋಧಿಯಾಗುತ್ತದೆ.
ಪೊಲೀಸರು ರಾತ್ರಿ ವೇಳೆ ಏಕಾಏಕಿ ಒಬ್ಬರ ಮನೆಗೆ ಭೇಟಿ ಕೊಡುವುದು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವುದು ಮಾತ್ರವಲ್ಲದೆ, ಸಮಾಜದಲ್ಲಿ ಆತನ ಮರ್ಯಾದೆಗೆ ಕುಂದು ತರುತ್ತದೆ ಮತ್ತು ಮಾನಸಿಕ ಅಶಾಂತಿಗೂ ಕಾರಣವಾಗುತ್ತದೆ. ಇವೆರಡೂ ಸಂವಿಧಾನದಲ್ಲಿ ವ್ಯಕ್ತಿಗೆ ಕೊಡಲಾಗಿರುವ ಮೂಲಭೂತ ಹಕ್ಕಾಗಿರುತ್ತದೆ. ಇದಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ತನ್ನ ನಡೆಯನ್ನು ಸಮರ್ಥಿಸಿಕೊಂಡು ಕೋಮುವಾದಿ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಮುಂದುವರಿಯುತ್ತದೆ ಮತ್ತು ಇವರ ಪರವಾಗಿ ಧ್ವನಿ ಎತ್ತುವವರೆಲ್ಲರ ಮೇಲೂ ಕೇಸು ಹಾಕಲಾಗುತ್ತದೆ ಎಂದಿದ್ದಾರೆ.
ಒಬ್ಬ ಎಸ್ಪಿ ಯಾವುದೇ ಸಂಘಟನೆಯನ್ನು ಕೋಮುವಾದಿ ಎನ್ನುವುದಕ್ಕಾಗಲೀ, ನ್ಯಾಯಾಂಗದ ರೀತಿ ವರ್ತಿಸುವುದಕ್ಕಾಗಲೀ ಅಧಿಕಾರ ಹೊಂದಿರುವುದಿಲ್ಲ. ಎಸ್ಪಿಯಾದವರು ಈ ರೀತಿ ಹೇಳುವುದು ಸಂವಿಧಾನ ವಿರೋಧಿ ಮಾತ್ರವಲ್ಲದೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಬೆದರಿಕೆಯೂ ಆಗಿರುತ್ತದೆ. ಹೀಗಾಗಿ ಪೊಲೀಸ್ ದೂರು ಪ್ರಾಧಿಕಾರವು ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿ, ರಾತ್ರಿ ವೇಳೆ ಯಾವುದೇ ಅಪರಾಧ ಹಿನ್ನೆಲೆಯಿರದ ವ್ಯಕ್ತಿಗಳ ಮನೆಗಳಿಗೆ ಹೋಗುವುದನ್ನು ನಿರ್ಬಂಧಿಸಬೇಕು. ಅಲ್ಲದೆ, ಕಳೆದ ಏಳು ದಿನಗಳಲ್ಲಿ ಎಸ್ಪಿ ಕೈಗೊಂಡ ಕ್ರಮಗಳು, ರಾತ್ರಿ ವೇಳೆ ಮನೆಗಳಿಗೆ ಪೊಲೀಸರನ್ನು ಕಳಿಸಿಕೊಟ್ಟ ಔಚಿತ್ಯದ ಬಗ್ಗೆ ವರದಿ ಪಡೆಯಬೇಕು. ಅಲ್ಲದೆ, ಆಗಿರುವ ಕಾನೂನು ಉಲ್ಲಂಘನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಯನ್ನೂ ನಡೆಸುವುದಕ್ಕೆ ಆದೇಶ ನೀಡಬೇಕು ಮತ್ತು ಪೊಲೀಸ್ ಪವರ್ ದುರುಪಯೋಗ ಆಗುವುದನ್ನು ತಪ್ಪಿಸಬೇಕು ಎಂದು ವಕೀಲ ಗಿರೀಶ್ ಭಾರದ್ವಾಜ್ ದೂರು ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಬರೆದ ಪತ್ರವನ್ನು ರಾಷ್ಟ್ರೀಯ ಮಾನವ ಹಕ್ಕು ಆಯೋಗ, ರಾಜ್ಯ ಮಾನವ ಹಕ್ಕು ಆಯೋಗ, ಕರ್ನಾಟಕ ಡಿಜಿಪಿ ಅವರಿಗೂ ಕಳುಹಿಸಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಗಮನ ಸೆಳೆಯಲಾಗಿದೆ. ವಕೀಲ ಗಿರೀಶ್ ಭಾರದ್ವಾಜ್ ಅವರು, ಇತ್ತೀಚೆಗೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ರಾಜ್ಯ ಸರಕಾರ ಆರೋಪಿಗಳ ಮೇಲಿನ ಕೇಸನ್ನು ಹಿಂಪಡೆದಿರುವುದನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿ ಸರ್ಕಾರದ ನಡೆಯ ವಿರುದ್ಧ ತಡೆ ತಂದಿದ್ದರು. ಅಲ್ಲದೆ, ಸರ್ಕಾರಕ್ಕೂ ಛೀಮಾರಿ ಹಾಕುವಂತೆ ಮಾಡಿ ಗಮನಸೆಳೆದಿದ್ದರು.
ವಕೀಲ ಭಾರದ್ವಾಜ್ ಬರೆದ ರೀತಿಯಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೂ ಬೆಂಗಳೂರಿನ ಪೊಲೀಸ್ ದೂರು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ಎಸ್ಪಿಯವರು ಕೈಗೊಂಡ ಕ್ರಮಗಳು ವ್ಯಕ್ತಿಯ ಖಾಸಗಿತನ ಹಕ್ಕನ್ನು ಉಲ್ಲಂಘಿಸುತ್ತಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ.
Mangalore Police Night Visits Violate Right to Privacy, Complaint Filed Against Dakshina Kannada SP to National Human Rights Commission.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm