ಬ್ರೇಕಿಂಗ್ ನ್ಯೂಸ್
04-06-25 10:43 pm Mangalore Correspondent ಕರಾವಳಿ
ಉಳ್ಳಾಲ, ಜೂ.4 : ಮೊನ್ನೆಯಷ್ಟೇ ಉಳ್ಳಾಲ ತಾಲೂಕಿನಾದ್ಯಂತ ಗರಿಷ್ಠ ಪ್ರಮಾಣದಲ್ಲಿ ಸುರಿದಿದ್ದ ಮಳೆಯಿಂದಾಗಿ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಅಂಬಿಕಾ ರೋಡ್ ಮೂರನೇ ಅಡ್ಡ ರಸ್ತೆಯ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ಸ್ಥಳೀಯ ಮನೆಗಳು ಪ್ರವಾಹದಿಂದ ಮುಳುಗಡೆಯಾಗಿದ್ದವು. ಬುಧವಾರ ಸಂಜೆ ರಾಜಕಾಲುವೆಯ ಕಿರು ಸೇತುವೆಯ ಅಡಿಭಾಗ ಕುಸಿದಿದ್ದು ಸೇತುವೆ ಕುಸಿದು ಬೀಳಲು ಕ್ಷಣಗಣನೆ ಆರಂಭವಾಗಿದೆ. ಸುರಕ್ಷತೆ ದೃಷ್ಟಿಯಿಂದ ಸೇತುವೆ ಸಂಚಾರವನ್ನ ಸೋಮೇಶ್ವರ ಪುರಸಭಾ ಅಧಿಕಾರಿಗಳು ನಿಷೇಧಗೊಳಿಸಿದ್ದು ಸ್ಥಳೀಯ ಅಂಬಿಕಾರೋಡ್ ಲೇ ಔಟ್ ನ ಸುಮಾರು ಎಪ್ಪತ್ತು ಮನೆಗಳ ಸಂಪರ್ಕ ಕಡಿತವಾಗಿ ನಿವಾಸಿಗಳು ಮನೆ ತಲುಪಲು ಬವಣೆ ಪಡುವಂತಾಗಿದೆ.
ಅಂಬಿಕಾರೋಡ್ ಮೂರನೇ ಅಡ್ಡ ರಸ್ತೆಯ ರಾಜ ಕಾಲುವೆಯ ಕಿರು ಸೇತುವೆ ಹಳೆಯದಾಗಿದ್ದು ಕಳೆದ ನಾಲ್ಕು ವರ್ಷದ ಹಿಂದಷ್ಟೆ ಸೋಮೇಶ್ವರ ಪುರಸಭೆ ಆಡಳಿತವು ಸೇತುವೆಯ ದುರಸ್ತಿ ಕಾರ್ಯ ನಡೆಸಿತ್ತು. ಸೇತುವೆಯ ಕಳಪೆ ದುರಸ್ತಿಯಿಂದಾಗಿ ಕಳೆದ ಗುರುವಾರ ಸುರಿದ ಭಾರೀ ಮಳೆಗೆ ಕಾಲುವೆಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಅಡಿಭಾಗವು ಕುಸಿತಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಕೆಲವರು ಸ್ಥಳೀಯ ಅಂಬಿಕಾರೋಡ್ ಲೇ ಔಟ್ ನಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ರಾಜಕಾಲುವೆಯ ಕಿರು ಸೇತುವೆಯ ಮೇಲೆ ದಿನ ನಿತ್ಯಲೂ ಕಲ್ಲು , ಮರಳು ಇತರ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಘನ ವಾಹನಗಳು ಚಲಿಸುತ್ತಿದ್ದ ಪರಿಣಾಮ ಹಳೆ ಸೇತುವೆ ಶಿಥಿಲಗೊಂಡು ಕುಸಿದಿರೋದಾಗಿ ಆರೋಪಿಸಿದ್ದಾರೆ.





ಮತ್ತೆ ಧಾರಾಕಾರವಾಗಿ ಮಳೆ ಸುರಿದರೆ ಸೇತುವೆ ಸಂಪೂರ್ಣ ಕುಸಿದು ಬಿದ್ದು ರಾಜ ಕಾಲುವೆಯಲ್ಲಿ ಹರಿಯುವ ಭಾರೀ ಪ್ರಮಾಣದ ನೀರು ಸ್ಥಳೀಯ ಅನೇಕ ಮನೆಗಳಿಗೆ ನುಗ್ಗಿ ಮತ್ತೆ ಅವಾಂತರ ಸೃಷ್ಟಿಸುವ ಭೀತಿ ಎದುರಾಗಿದೆ. ಸ್ಥಳಕ್ಕೆ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಮತ್ತು ಪ್ರಬಂಧಕರಾದ ಕೃಷ್ಣ, ಸ್ಥಳೀಯ ಪುರಸಭೆ ಸದಸ್ಯರಾದ ಪರ್ವೀನ್ ಅವರು ಭೇಟಿ ನೀಡಿದ್ದು ಪರಿಸ್ಥಿತಿ ಅವಲೋಕಿಸಿದ್ದಾರೆ. ಸದ್ಯಕ್ಕೆ ಕುಸಿದಿರುವ ಸೇತುವೆ ಬೀಳದಂತೆ ತಡೆಯುವುದೇ ಅಧಿಕಾರಿಗಳಿಗೆ ಸವಾಲಾಗಿದೆ.
ಅತ್ತ ಕುಂಪಲ ಮುಖ್ಯ ರಸ್ತೆಯಲ್ಲಿ ಪೈಪ್ ಲೈನ್ ಕಾಮಗಾರಿಯಿಂದ ಕೆಟ್ಟು ಹೋಗಿದ್ದು, ದುರಸ್ತಿ ಕಾಮಗಾರಿಗೆಂದು ಅಲ್ಲಿನ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ಕುಂಪಲ ಪ್ರದೇಶಕ್ಕೆ ತೆರಳುವವರೂ ಕೂಡ ಅಂಬಿಕಾ ರೋಡಿನ ಮೂರನೇ ಅಡ್ಡ ರಸ್ತೆಯನ್ನೇ ಪರ್ಯಾಯವಾಗಿ ನೆಚ್ಚಿಕೊಂಡಿದ್ದರು.
Mangalore Cracks in Someshwara Ambika Road Culvert Raise Flood Fears; Bridge Closed, 70 Homes Cut Off.
22-07-26 06:00 pm
HK News Staffer
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
22-07-26 02:32 pm
HK News Staffer
ನೀಟ್ ಅಕ್ರಮ; ಮೋದಿ ರಾಜಿನಾಮೆ ಒತ್ತಾಯಿಸಿ ಪ್ರಧಾನಿ ನ...
21-07-26 09:03 pm
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
22-07-26 09:18 pm
HK News Desk
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
22-07-26 10:24 pm
HK News Desk
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm
Mysuru Murder, Suicide: ನಾನಿಲ್ಲದೆ ನನ್ನ ಹೆಂಡತಿ...
22-07-26 04:21 pm
ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ವ್ಯಕ್ತಿಯಿಂದ ಕಳ್ಳತ...
22-07-26 10:55 am