ಬ್ರೇಕಿಂಗ್ ನ್ಯೂಸ್
11-06-25 07:03 pm Mangalore Correspondent ಕರಾವಳಿ
ಮಂಗಳೂರು, ಜೂ 11 : ಸಾಲು ಸಾಲು ಕೊಲೆಗಳು, ಗಲಭೆ-ಘರ್ಷಣೆಗಳಿಂದ ಕರಾವಳಿ ನಗರಿ ಬೂದಿ ಮುಚ್ಚಿದ ಕೆಂಡದಂತಿದೆ. ಜಿಲ್ಲೆಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ನಾನಾ ಕ್ರಮಕೈಗೊಂಡಿದೆ. ಇತ್ತ ಪ್ರಚೋದನಕಾರಿ ಹೇಳಿಕೆ ನೀಡುವವರಿಗೆ ಪೊಲೀಸರು ಶಾಕ್ ಕೊಡ್ತಿದ್ದು, ಬಾಯಿಗೆ ಬ್ರೇಕ್ ಹಾಕುವ ಕೆಲಸ ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ಚಿಂತಕ ಹಾಗೂ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ ಎನ್ನಲಾಗ್ತಿದೆ.
ಚಕ್ರವರ್ತಿ ಸೂಲಿಬೆಲೆಗೆ ಕಾದಿದೆ ಶಾಕ್ !
ಇತ್ತೀಚಿಗಷ್ಟೇ ಪ್ರಚೋದಕಾರಿ ಹೇಳಿಕೆಗಳನ್ನು ನೀಡಿದ ಆರೋಪ ಮೇಲೆ RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಕೇಸ್ ದಾಖಲಾಗಿತ್ತು. ಇದೀಗ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ ಎನ್ನಲಾಗ್ತಿದೆ.
ಕಾನೂನು ಕ್ರಮಕ್ಕೆ ಖಾಕಿ ತಯಾರಿ;
ಚಿಂತಕ ಚಕ್ರವರ್ತಿ ಸೂಲಿಬೆಲೆ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿರು ಪೊಲೀಸ್ ಇಲಾಖೆ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಠಾಣೆಗಳಿಗೆ ಮಾಹಿತಿ ರವಾನೆ ಮಾಡಿದೆ. ರಾಜ್ಯ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷರ ಪತ್ರ ಉಲ್ಲೇಖಿಸಿ ಮಾಹಿತಿ ಕೇಳಿದ ಡಿಜಿ ಕಚೇರಿ ಪತ್ರ ಕೂಡ ವೈರಲ್ ಆಗಿದೆ.
ದೂರಿನ ಮಾಹಿತಿ ನೀಡಲು ಸೂಚನೆ
ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ 2022 ರಿಂದ 2025 ವರೆಗೆ ಇರುವ ಎಲ್ಲಾ ದೂರುಗಳ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ವಾಕಿಟಾಕಿಯಲ್ಲಿ ಈ ಬಗ್ಗೆ ನೀಡಿದ ಸಂದೇಶದ ಆಡಿಯೋ ವೈರಲ್ ಆಗಿದೆ.
ಯುವ ಬ್ರಿಗೇಡ್ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಮ್ಮ ಮಾತುಗಳಿಂದಲೇ ಅನೇಕ ಬಾರಿ ವಿವಾದ ಕಿಡಿ ಹೊತ್ತಿಸಿದ ಉದಾಹರಣೆ ಇದೆ. ತಮ್ಮ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕೆಲ ಕೇಸ್ಗಳು ಕೂಡ ದಾಖಲಾಗಿದ್ದು ಇದೆ. ಇದೀಗ ಪೊಲೀಸರು ಯಾವ ವಿಚಾರಕ್ಕೆ, ಹೇಗೆ ಕ್ರಮಕೈಗೊಳ್ಳಲಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಐ ಡೋಂಟ್ ಕೇರ್, ಐ ಡೋಂಟ್ ಮೈಂಡ್ ಎಂದ ಚಕ್ರವರ್ತಿ;
"ಹಿಂದೂ ಮುಖಂಡರು, ಕಾರ್ಯಕರ್ತರನ್ನ ರಾಜ್ಯ ಕಾಂಗ್ರೆಸ್ ಸರಕಾರ ಟಾರ್ಗೆಟ್ ಮಾಡುತ್ತಿದೆ' ಎಂದು ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ "ಕಾಂಗ್ರೆಸ್ ನನ್ನನ್ನ ಹೇಟ್ ಮಾಡುತ್ತದೆ. ನನ್ನನ್ನು ಕಂಡರೇ ಅವರಿಗೆ ಕೋಪ. ಐಜಿ- ಡಿಐಜಿಗಳು ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿ ಕೇಳಿದ್ದಾರೆ. 2022 ರಿಂದ 2025 ರ ಜೂನ್ ವರೆಗೆ ಯಾವ್ಯಾವ ಕೇಸ್ ಗಳು ಇವೆ ಎಂದು ಮಾಹಿತಿ ಕೇಳಿದ್ದಾರೆ.|ಹೇಗಾದರೂ ಮಾಡಿ, ಒಳಗೆ ಹಾಕಿ ಧ್ವನಿ ಅಡಗಿಸಲು ನೋಡುತ್ತಿದ್ದಾರೆ ಎಂದರು.
ನಾನು ಇದಕ್ಕೆಲ್ಲಾ ಹೆದರುವುದಿಲ್ಲ, ಐ ಡೋಂಟ್ ಕೇರ್, ಐ ಡೋಂಟ್ ಮೈಂಡ್. ನೀವು ನನ್ನ ಒಳಗೆ ಹಾಕಿದರೆ ತುಂಬಾ ದಿನದಿಂದ ಓದದೇ ಇರುವ 15-20 ಪುಸ್ತಕ ಇದ್ದಾವೆ. ಅದೆಲ್ಲವನ್ನೂ ಓದಿ ಮುಗಿಸಿ ಹೊರಗೆ ಬರುತ್ತೇನೆ” ಎಂದರು.
Noted thinker and social activist Chakravarthy Sulibele has come under the scanner of the Karnataka police, with reports suggesting that legal action is being considered against him for a series of provocative statements made in recent times.Noted thinker and social activist Chakravarthy Sulibele has come under the scanner of the Karnataka police, with reports suggesting that legal action is being considered against him for a series of provocative statements made in recent times.Noted thinker and social activist Chakravarthy Sulibele has come under the scanner of the Karnataka police, with reports suggesting that legal action is being considered against him for a series of provocative statements made in recent times.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm