ಬ್ರೇಕಿಂಗ್ ನ್ಯೂಸ್
18-06-25 06:38 pm Mangalore Correspondent ಕರಾವಳಿ
ಪುತ್ತೂರು, ಜೂನ್ 18 : ಸರಕು ಬಾಡಿಗೆ ಮಾಡಲೆಂದು ಕೊಂಡೊಯ್ದಿದ್ದ ಲಾರಿಯನ್ನು ಅದರ ಚಾಲಕನೇ ಅಡವಿಟ್ಟು ಮಾಲಕನಿಗೆ ಮೋಸಗೈದ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಈ ಬಗ್ಗೆ ವಿಚಾರಿಸಲು ಹೋದ ಮಾಲಕನಿಗೆ ಜೀವ ಬೆದರಿಕೆ ಹಾಕಿರುವುದಾಗಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ಫರ್ವೀಝ್ ಎಂ. ಎಂಬವರು ದೂರು ನೀಡಿದ್ದು, ಲಾರಿ ಚಾಲಕ ಅಸಾಸುದ್ದೀನ್ ಫೈರೋಝ್ ಮತ್ತು ಮಂಗಳೂರಿನ ನೀರುಮಾರ್ಗದ ನೆಸ್ಲೆ ಕಿರಣ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾರ್ಚ್ ತಿಂಗಳ ಕೊನೆಯಲ್ಲಿ ಲಾರಿಗೆ ಚಾಲಕನನ್ನು ನೇಮಿಸಿ ಸರಕು ಸಾಗಾಟ ಉದ್ದೇಶಕ್ಕಾಗಿ ಲಾರಿಯನ್ನು ನೀಡಿದ್ದರು. ಆಬಳಿಕ ತನ್ನ ಪಾಡಿಗಿದ್ದ ಚಾಲಕ ಫೈರೋಜ್, ಬಾಡಿಗೆ ಹಣವನ್ನು ಮಾಲೀಕರಿಗೆ ನೀಡದೆ ನೆಪ ಹೇಳಿ ಮುಂದೂಡುತ್ತಿದ್ದ. ಪ್ರಶ್ನೆ ಮಾಡಿದಾಗ, ಲಾರಿ ಕೆಟ್ಟು ಹೋಗಿದೆ, ರಿಪೇರಿ ಮಾಡಿಸುತ್ತಿದ್ದೇನೆಂದು ನೆಪ ಹೇಳಿದ್ದ. ಈ ಬಗ್ಗೆ ಮಾಲೀಕ ಪರ್ವೀಜ್, ಲಾರಿಯನ್ನು ಮರಳಿಸುವಂತೆ ಕೇಳಿದಾಗ ಲಾರಿಯನ್ನು ನೀಡಲ್ಲ ಎಂದು ಹೇಳಿ ದಬಾಯಿಸಿದ್ದಾನೆ. ಆಬಳಿಕ ಮತ್ತೆ ವಿಚಾರಿಸಿದಾಗ ಲಾರಿಯನ್ನು ಮಂಗಳೂರಿನ ನೀರುಮಾರ್ಗದ ನೆಸ್ಲೆ ಕಿರಣ್ ಎಂಬವರ ಬಳಿ ಅಡವಿಗೆ ಇಟ್ಟಿದ್ದೇನೆ. ಬೇಕಿದ್ದರೆ ನೀವೇ ಹೋಗಿ ಪಡೆದುಕೊಳ್ಳಿ ಎಂಬ ಹೇಳಿದ್ದ.
ಇದರಿಂದ ಬೇಸತ್ತ ಲಾರಿ ಮಾಲೀಕ ಮಹಿಳೆ, ಲಾರಿಗೆ ಸಾಲ ನೀಡಿದ್ದ ಸಂಸ್ಥೆಯ ಪ್ರತಿನಿಧಿಯ ಜೊತೆಗೂಡಿ ಮಂಗಳೂರಿನ ವ್ಯಕ್ತಿಯ ಬಳಿಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ, ಲಾರಿ ತನ್ನ ಬಳಿ ಇರೋದನ್ನು ಒಪ್ಪಿಕೊಂಡರೂ, ಲಾರಿಯನ್ನು ಮರಳಿಸಲು ನಿರಾಕರಿಸಿದ್ದಾನೆ. ಲಾರಿ ಕೇಳಿಕೊಂಡು ಬಂದರೆ ಪರಿಣಾಮ ನೆಟ್ಟಗಿರಲ್ಲ. ಮತ್ತೆ ಬಂದರೆ ಜೀವ ಸಹಿತ ಇಲ್ಲಿಂದ ಹೋಗಲ್ಲ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ಲಾರಿ ಮಾಲೀಕರು ತಾನು ನೇಮಿಸಿದ್ದ ಚಾಲಕ ಮತ್ತು ಲಾರಿಯನ್ನು ಇಟ್ಟುಕೊಂಡಿರುವ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ
A shocking case of cheating and criminal intimidation has come to light in Puttur, where a truck owner was allegedly deceived by her driver, who pledged the rented vehicle to a third party without consent. When the owner attempted to recover the truck, she was reportedly threatened with dire consequences. A formal complaint has been filed at the Puttur Town Police Station.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am