ಬ್ರೇಕಿಂಗ್ ನ್ಯೂಸ್
21-06-25 01:59 pm Udupi Staff ಕರಾವಳಿ
ಉಡುಪಿ, ಜೂ 21: ಅವನು ಓದಿನಲ್ಲಿ ಸೋಂಬೇರಿ...ಆದರೆ, ಮಹಾನ್ ಚಾಲಾಕಿ. ಮನೆಯಲ್ಲಿ ಹೆತ್ತವರ ಆಸೆಯಂತೆ ರಾಷ್ಟ್ರಮಟ್ಟದ ವೈದ್ಯಕೀಯ ಪರೀಕ್ಷೆ (ನೀಟ್) ಬರೆದಿದ್ದ. ಆದರೆ, ಅದರಲ್ಲಿ ಫೇಲಾಗಿದ್ದ. ಆದರೆ, ಅದನ್ನು ಮುಚ್ಚಿಟ್ಟು, ಒಂದು ನಕಲಿ ನೀಟ್ ಅಂಕಪಟ್ಟಿಯನ್ನು ತಯಾರಿಸಿ, ಅದರಲ್ಲಿ ಇಡೀ ಉಡುಪಿ ಜಿಲ್ಲೆಗೆ ತಾನೇ ಟಾಪರ್ ಎಂದು ಬಿಂಬಿಸಿದ್ದ. ಆದರೆ, ಕೆಲವೇ ದಿನಗಳಲ್ಲಿ ಆತನ ಮುಖವಾಡ ಕಳಚಿ ಬಿದ್ದಿದೆ.
ಹೀಗೆ ನೀಟ್ ಅಂಕಪಟ್ಟಿಯನ್ನು ಬದಲು ಮಾಡಿರುವ ಹೆಸರು ರೋನಕ್ ಶೆಟ್ಟಿ. ಆತನ ತಾಯಿ ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ. ಅವರ ತಂದೆ ಯುವಜನ ಮತ್ತು ಕ್ರೀಡಾ ಇಲಾಖೆಯಲ್ಲಿ ಅಧಿಕಾರಿ. ಆದರೆ, ಹೆತ್ತವರಿಗೆ ಈತನ ಕುಕೃತ್ಯದ ಬಗ್ಗೆ ಗೊತ್ತೇ ಇರಲಿಲ್ಲ. ಈಗ ಆತನ ಮೇಲೆ ಕೇಸು ದಾಖಲಾದಾಗ ಅಪ್ಪ-ಅಮ್ಮ ಕಂಗಾಲಾಗಿದ್ದಾರೆ. ಈತ ಮಾಡಿದ್ದಿಷ್ಟೇ. ನೀಟ್ ಪರೀಕ್ಷೆಯಲ್ಲಿ ತಾನು ಉತ್ತೀರ್ಣನಾಗದೇ ಇದ್ದಿದನ್ನು ಗಮನಿಸಿ, ಥೇಟ್ ನೀಟ್ ಅಂಕಪಟ್ಟಿಯನ್ನೇ ಹೋಲುವಂಥ ಅಂಕಪಟ್ಟಿಯನ್ನು ತಯಾರಿಸಿ ತನ್ನ ತಂದೆ - ತಾಯಿಯನ್ನು ಯಾಮಾರಿಸೋಣ ಎಂದು ತಿಳಿದಿದ್ದಾನೆ. ಮುಂದಿನದ್ದು ಮುಂದೆ ನೋಡಿಕೊಂಡರಾಯಿತು, ಸದ್ಯಕ್ಕೆ ಬೀಸೋ ದೊಣ್ಣೆ ತಪ್ಪಿಸಿಕೊಂಡರಾಯ್ತು ಎಂದು ತಿಳಿದಿದ್ದ. ಅದೇ ವೇಳೆ, ಆತ ಯುಟ್ಯೂಬ್ ಚಾನೆಲ್ ಒಂದರಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸುವ ಬಗ್ಗೆ ಯುಟ್ಯೂಟ್ ಚಾನೆಲ್ ಒಂದರಲ್ಲಿ ಮಾಹಿತಿ ನೋಡಿದ್ದ. ಎಡಿಟಿಂಗ್ ಮಾಸ್ಟರ್ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಆ ಮಾಹಿತಿ ಬಂದಿದ್ದು, ಆ ಚಾನೆಲ್ ಹೊಂದಿರುವ ವಿಷ್ಣು ಕುಮಾರ್ ಎಂಬಾತನನ್ನು ಸಂಪರ್ಕಿಸಿದ್ದಾನೆ. ಆತನ ಸಹಾಯದಿಂದ ನಕಲಿ ನೀಟ್ ಅಂಕಪಟ್ಟಿಯನ್ನು ಪಡೆದು ಅದನ್ನು ಹೆತ್ತವರಿಗೆ ತೋರಿಸಿ, ನೆರೆಹೊರೆಯವರಿಗೆ, ಸ್ನೇಹಿತರಿಗೆ ತೋರಿಸಿದ್ದಾನೆ. ಒಡನೆಯೇ ಇದು ವೈರಲ್ ಆಗಿದೆ. ಉಡುಪಿ ಜಿಲ್ಲೆಯ ಯುವಕ ನೀಟ್ ನಲ್ಲಿ ಪ್ರಥಮ ಆಗಿದ್ದಾನೆ ಎಂಬ ವದಂತಿ ಹರಡಿದೆ. ಕೆಲವರು ಇದನ್ನು ಪರೀಕ್ಷಿಸಿದಾಗ ಅಸಲಿ ವಿಚಾರ ಬಯಲಾಗಿದೆ.
ಪೊಲೀಸರಿಗೆ ದೂರು;
ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಯ ತಂದೆ ರೋಶನ್ ಕುಮಾರ್ ಶೆಟ್ಟಿ ದೂರು ದಾಖಲಿಸಿದ್ದಾರೆ. ಆರೋಪಿ ವಿಷ್ಣು ಕುಮಾರ್ ಎಂಬಾತ ‘ಎಡಿಟಿಂಗ್ ಮಾಸ್ಟರ್’ ಯೂಟ್ಯೂಬ್ ಚಾನೆಲ್ ಒಂದರ ಮೂಲಕ ನಕಲಿ ಅಂಕಪಟ್ಟಿ ಸೃಷ್ಟಿಸಿ ವಂಚಿಸಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ನೀಟ್ ಪರೀಕ್ಷೆಗೆ ತಯಾರಿ ನಡೆಸುವಾಗ ಶೈಕ್ಷಣಿಕ ಒತ್ತಡದಿಂದಾಗಿ ಯೂಟ್ಯೂಬ್ ಚಾನೆಲ್ನಲ್ಲಿ ಜೆಇಇ ಹಾಗೂ ಸಿಬಿಎಸ್ಇ ಪರೀಕ್ಷೆಯ ಅಂಕಪಟ್ಟಿಗಳನ್ನು ನಕಲಿ ಮಾಡುವ ‘ಎಡಿಟಿಂಗ್ ಮಾಸ್ಟರ್’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಸಂಪರ್ಕಿಸಿದ್ದ. ‘ಎಡಿಟಿಂಗ್ ಮಾಸ್ಟರ್’ ಯೂಟ್ಯೂಬ್ ಚಾನೆಲ್ ವಿಷ್ಣು ಕುಮಾರ್ ಎಂಬಾತ 17 ಸಾವಿರ ರೂ. ವರ್ಗಾಯಿಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟು ವಂಚನೆ ಎಸಗಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಏ. 29ರಿಂದ ಜೂ.18ರವರೆಗೆ ಆರೋಪಿ ವಿಷ್ಣು ಕುಮಾರ್ ಹಾಗೂ ರೊನಾಕ್ ಆರ್.ಶೆಟ್ಟಿ ನಡುವೆ ಹಣಕಾಸು ವಹಿವಾಟು ನಡೆದಿದ್ದು, ಹಂತಹಂತವಾಗಿ ಒಟ್ಟು 17 ಸಾವಿರ ರೂ.ವನ್ನು ವಿಷ್ಣು ಕುಮಾರ್ ಎಂಬಾತನ ಖಾತೆಗೆ ವರ್ಗಾವಣೆಗೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
He was a poor student—but a master of deception. A youth from Udupi district, who failed the National Eligibility cum Entrance Test (NEET), allegedly created a fake scorecard and claimed to be the district topper, fooling his parents, friends, and neighbors. However, his elaborate lie was short-lived, as the truth came out within days, exposing the fraud.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm